ಬೆಂಗಳೂರಿನ ಬಿಜೆಪಿ ಕಚೇರಿಗೆ ನಾಗಾಸಾಧುಗಳ ದಿಢೀರ್ ಭೇಟಿ, ಸಿಬ್ಬಂದಿಯಿಂದ ಉಪಚಾರ

|

Updated on: Oct 28, 2023 | 7:24 PM

ಕಚೇರಿ ಸಿಬ್ಬಂದಿ ಮತ್ತು ಸೆಕ್ಯುರಿಟಿ ಗಾರ್ಡ್ ಗಳಿಗೆ ಹಿಂದಿ ಭಾಷೆ ಗೊತ್ತಿದ್ದ ಕಾರಣ ಸಾಧುಗಳನ್ನು ಉಪಚರಿಸುವುದು ತೊಂದರೆಯಾಗಲಿಲ್ಲ. ಸಾಮಾನ್ಯವಾಗಿ ನಾಗಾ ಸಾಧುಗಳು ಬಟ್ಟೆ ಧರಿಸುವುದಿಲ್ಲ. ಇವರು ಬೇರ ಪಂಗಡದವರಾಗಿರಬಹುದು. ಸಿಬ್ಬಂದಿ ಸಾಧುಗಳಿಗೆ ಕುಡಿಯಲು ನೀರು ನೀಡಿ ಉಪಚರಿಸಿದ ಬಳಿಕ ಒಂದು ಲಕೋಟೆಯನ್ನು ನೀಡುತ್ತಾರೆ, ಪ್ರಾಯಶಃ ಅದರಲ್ಲಿ ಹಣವಿದ್ದರಬೇಕು.

ಬೆಂಗಳೂರು: ನಾಗಾಸಾಧುಗಳು (Naga Sadhus) ನಗರದಲ್ಲಿ ಅಪರೂಪಕ್ಕೊಮ್ಮೆ ಕಾಣಿಸಿಕೊಳ್ಳುತ್ತಾರೆ ಅವರ ಓಡಾಟವೇನಿದ್ದರೂ ಉತ್ತರ ಭಾರತದಲ್ಲೇ (North India). ಆದರೆ, 5 ಸದಸ್ಯರ ನಾಗಾ ಸಾಧುಗಳ ಗುಂಪೊಂದು ಇವತ್ತು ನಗರದ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಗೆ (BJP office) ಆಗಮಿಸಿತು. ಅವರು ಬಂದ ಉದ್ದೇಶ ಏನಾಗಿತ್ತು ಅನ್ನೋದು ಗೊತ್ತಾಗಿಲ್ಲ. ಕಚೇರಿಯಲ್ಲಿ ಬಿಜೆಪಿ ನಾಯಕರು ಇರಲಿಲ್ಲ. ಕಚೇರಿಯ ಕೆಲ ಸಿಬ್ಬಂದಿ ವರ್ಗ ಅವರೊಂದಿಗೆ ಮಾತಾಡುವುದನ್ನು ದೃಶ್ಯಗಳಲ್ಲಿ ನೋಡಬಹುದು. ಸಾಧುಗಳಿಗೆ ಹಿಂದಿ ಭಾಷೆ ಬಿಟ್ಟರೆ ಬೇರೆ ಭಾಷೆ ಮಾತಾಡಲಾಗದು. ಕಚೇರಿ ಸಿಬ್ಬಂದಿ ಮತ್ತು ಸೆಕ್ಯುರಿಟಿ ಗಾರ್ಡ್ ಗಳಿಗೆ ಹಿಂದಿ ಭಾಷೆ ಗೊತ್ತಿದ್ದ ಕಾರಣ ಸಾಧುಗಳನ್ನು ಉಪಚರಿಸುವುದು ತೊಂದರೆಯಾಗಲಿಲ್ಲ. ಸಾಮಾನ್ಯವಾಗಿ ನಾಗಾ ಸಾಧುಗಳು ಬಟ್ಟೆ ಧರಿಸುವುದಿಲ್ಲ. ಇವರು ಬೇರ ಪಂಗಡದವರಾಗಿರಬಹುದು. ಸಿಬ್ಬಂದಿ ಸಾಧುಗಳಿಗೆ ಕುಡಿಯಲು ನೀರು ನೀಡಿ ಉಪಚರಿಸಿದ ಬಳಿಕ ಒಂದು ಲಕೋಟೆಯನ್ನು ನೀಡುತ್ತಾರೆ, ಪ್ರಾಯಶಃ ಅದರಲ್ಲಿ ಹಣವಿದ್ದರಬೇಕು. ಸಿಬ್ಬಂದಿಯಲ್ಲಿ ಕೆಲವರು ಸಾಧುಗಳ ಕಾಲಿಗೆ ನಮಸ್ಕರಿಸುವುದನ್ನು ನೋಡಬಹುದು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Oct 28, 2023 07:20 PM