ಸಿದ್ದರಾಮಯ್ಯ ಮೇಲೆ ನಾವು ಕೇಸ್ ಹಾಕಿದ್ರೆ, ಜೈಲಿಗೆ ಹೋಗ್ತಿದ್ರು; ನಳಿನ್​ ಕುಮಾರ್​ ಕಟೀಲ್​

ಸಿದ್ದರಾಮಯ್ಯ ಮೇಲೆ ನಾವು ಕೇಸ್ ಹಾಕಿದ್ರೆ, ಜೈಲಿಗೆ ಹೋಗ್ತಿದ್ರು; ನಳಿನ್​ ಕುಮಾರ್​ ಕಟೀಲ್​

ಅಶೋಕ್​ ಪೂಜಾರಿ, ಮಂಗಳೂರು
| Updated By: ಕಿರಣ್ ಹನುಮಂತ್​ ಮಾದಾರ್

Updated on: Oct 28, 2023 | 8:19 PM

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜನರ ಪರ ಧ್ವನಿ ಎತ್ತಿದ ಶಾಸಕರ ಮೇಲೂ ಪ್ರಕರಣ ದಾಖಲಾಗಿದೆ. ಹಾಗೆ ನೋಡುವುದಾದರೆ, ಸಿದ್ದರಾಮಯ್ಯನವರು ದೇಶದ ಪ್ರಧಾನಿ ವಿರುದ್ದ ನೀಡಿದ ಹೇಳಿಕೆಯ ಮೇಲೆ ನಾವು ದೂರು ದಾಖಲಿಸಿದರೆ, ಅವರು ಜೈಲಿನಲ್ಲಿ ಇರಬೇಕಾಗಿತ್ತು ಎಂದು ನಳಿನ್​ ಕುಮಾರ್​ ಕಟೀಲ್​ ವಾಗ್ದಾಳಿ ನಡೆಸಿದರು.

ದಕ್ಷಿಣ ಕನ್ನಡ, ಅ.28: ಕರ್ನಾಟಕದಲ್ಲಿ ದ್ವೇಷದ ರಾಜಕಾರಣ ನಡೆಯುತ್ತಿದೆ ಎಂದು ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ನಳಿನ್​ ಕುಮಾರ್​ ಕಟೀಲ್​(Nalin Kumar Kateel) ಹೇಳಿದರು. ಮಂಗಳೂರಿನಲ್ಲಿ ಮಾತನಾಡಿದ ಅವರು ‘ನಮ್ಮ ಪಕ್ಷದ ಕಾರ್ಯಕರ್ತರ ಮೇಲೆ ಕೇಸ್​, ಹಿಂದೂ ಸಂಘಟನೆ ಕಾರ್ಯಕರ್ತರ ಮೇಲೂ ಕೇಸ್, ಜನಪ್ರತಿನಿಧಿಗಳ ಮೇಲೂ ಕೇಸ್ ಹಾಕಿ ಅವರ ಹಕ್ಕು ಕಸಿಯಲಾಗುತ್ತಿದೆ. ಕೋಲಾರ ಸಂಸದ ಮುನಿಸ್ವಾಮಿ ಮೇಲೆ ಪೊಲೀಸರು ಹಲ್ಲೆ ಮಾಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜನರ ಪರ ಧ್ವನಿ ಎತ್ತಿದ ಶಾಸಕರ ಮೇಲೂ ಪ್ರಕರಣ ದಾಖಲಾಗಿದೆ. ಹಾಗೆ ನೋಡುವುದಾದರೆ, ಸಿದ್ದರಾಮಯ್ಯನವರು ದೇಶದ ಪ್ರಧಾನಿ ವಿರುದ್ದ ನೀಡಿದ ಹೇಳಿಕೆಯ ಮೇಲೆ ನಾವು ದೂರು ದಾಖಲಿಸಿದರೆ, ಅವರು ಜೈಲಿನಲ್ಲಿ ಇರಬೇಕಾಗಿತ್ತು ಎಂದು ವಾಗ್ದಾಳಿ ನಡೆಸಿದರು.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ