Daily Devotional: ಪಿತೃಪಕ್ಷದ ಮಹತ್ವ ಹಾಗೂ ಆಚರಣೆಯ ವಿಧಾನ ತಿಳಿಯಿರಿ

Updated on: Sep 21, 2025 | 6:54 AM

ಪಿತೃಪಕ್ಷವು ವರ್ಷದಲ್ಲಿ ಒಮ್ಮೆ ಬರುವ ಪವಿತ್ರ ಅವಧಿ. ಈ ಅವಧಿಯಲ್ಲಿ ಪಿತೃಗಳನ್ನು ಸ್ಮರಿಸುವುದು ಮತ್ತು ಅವರಿಗೆ ಶ್ರಾದ್ಧ, ತರ್ಪಣಾದಿಗಳನ್ನು ಮಾಡುವುದು ಪರಂಪರಾಗತವಾಗಿದೆ. ಹಿಂದಿನ ಮೂರು ತಲೆಮಾರಿನ ಪಿತೃಗಳ ಸಂತೃಪ್ತಿಗಾಗಿ ಮತ್ತು ಮುಂದಿನ ತಲೆಮಾರಿನ ಕ್ಷೇಮಕ್ಕಾಗಿ ಈ ಆಚರಣೆಗಳನ್ನು ಮಾಡಲಾಗುತ್ತದೆ. ಕಾಗೆಗಳಿಗೆ ನೈವೇದ್ಯ ಅರ್ಪಿಸುವುದು ಇದರ ಒಂದು ಮುಖ್ಯ ಭಾಗವಾಗಿದೆ.

ಬೆಂಗಳೂರು, ಸೆಪ್ಟೆಂಬರ್​ 21: ಪಿತೃಪಕ್ಷವು ಹಿಂದೂ ಧರ್ಮದಲ್ಲಿ ಅತ್ಯಂತ ಮಹತ್ವದ ಸಂಪ್ರದಾಯವಾಗಿದೆ. ಈ 15 ದಿನಗಳ ಪವಿತ್ರ ಅವಧಿಯಲ್ಲಿ, ಪಿತೃಗಳನ್ನು ಸ್ಮರಿಸಿ, ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಗುತ್ತದೆ. ಪಿತೃ ಋಣ ತೀರಿಸುವುದು ಜೀವನದ ಐದು ಋಣಗಳಲ್ಲಿ ಒಂದಾಗಿದೆ. ಪಿತೃಪಕ್ಷದಲ್ಲಿ, ಮರಣಿಸಿದ ಪೂರ್ವಜರ ಆತ್ಮಗಳಿಗೆ ಶಾಂತಿ ದೊರೆಯುವಂತೆ ವಿವಿಧ ಪೂಜೆಗಳು ಮತ್ತು ಶ್ರಾದ್ಧಗಳನ್ನು ನಡೆಸಲಾಗುತ್ತದೆ. ಪಂಚಾಂಗದ ಪ್ರಕಾರ, ಈ 15 ದಿನಗಳಲ್ಲಿ ಯಾವ ತಿಥಿಯಲ್ಲಿ ಮರಣಿಸಿದ್ದಾರೋ ಅವರಿಗೆ ಅಂದು ಶ್ರಾದ್ಧ ಮಾಡಲಾಗುತ್ತದೆ. ಮಹಾಲಯ ಅಮಾವಾಸ್ಯೆಯಂದು ಸರ್ವ ಪಿತೃಗಳಿಗೆ ಶ್ರಾದ್ಧ ಮಾಡುವುದು ವಾಡಿಕೆ.