ನಮ್ಮ ಮಗಳನ್ನು ಯೂಟ್ಯೂಬರ್ ಮುಕಳೆಪ್ಪನಿಂದ ಕಾಪಾಡಿ; ಯುವತಿಯ ಪೋಷಕರ ಅಳಲು
ಲವ್ ಜಿಹಾದ್ ಆರೋಪ ಮಾಡಿರುವ ಕಾರ್ಯಕರ್ತರು, ಮುಕಳೆಪ್ಪ ಸುಳ್ಳು ದಾಖಲೆ ನೀಡಿ ಹಿಂದೂ ಯುವತಿಯನ್ನ ಮದುವೆಯಾಗಿದ್ದಾರೆ ಎಂದು ಆರೋಪಿಸಿದ್ದಾರೆ. ಮುಕಳೆಪ್ಪ ಇಸ್ಲಾಂ ಧರ್ಮಕ್ಕೆ ಸೇರಿದವರಾಗಿದ್ದು, ನಕಲಿ ದಾಖಲೆ ಕೊಟ್ಟು ಹಿಂದೂ ಯುವತಿಯನ್ನ ವಿವಾಹವಾಗಿದ್ದಾರೆ. ಹಿಂದೂ ಯುವತಿಯನ್ನು ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ರಿಜಿಸ್ಟರ್ ಮಾಡಿಕೊಳ್ಳುವ ಮೂಲಕ ಮುಕಳೆಪ್ಪ ವಿವಾಹವಾಗಿದ್ದಾನೆ ಎಂದು ಆರೋಪಿಸಿದ್ದಾರೆ. ಆ ಯುವತಿಯ ಅಪ್ಪ-ಅಮ್ಮ ಕೂಡ ಪೊಲೀಸರೆದುರು ಅಳಲು ತೋಡಿಕೊಂಡಿದ್ದು, ತಂಗಿ ಎಂದು ಹೇಳುತ್ತಾ ನನ್ನ ಮಗಳನ್ನು ಮರುಳು ಮಾಡಿ ಮದುವೆಯಾಗಿಬಿಟ್ಟ. ಆಕೆಯನ್ನು ವಾಪಾಸ್ ಕರೆಸಿಕೊಡಿ, ಹೂವಿನಂತೆ ನೋಡಿಕೊಳ್ಳುತ್ತೇವೆ ಎಂದಿದ್ದಾರೆ.
ಧಾರವಾಡ, ಸೆಪ್ಟೆಂಬರ್ 20: ಕನ್ನಡದ ಜಯಪ್ರಿಯ ಯೂಟ್ಯೂಬರ್ ಮುಕಳೆಪ್ಪ ನಕಲಿ ದಾಖಲೆ ನೀಡಿ ಹಿಂದೂ ಯುವತಿಯನ್ನು ಮದುವೆಯಾಗಿದ್ದಾರೆ. ಈ ಪ್ರಕರಣದ ವಿರುದ್ಧ ಬಜರಂಗದಳ ಕಾರ್ಯಕರ್ತರು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಲವ್ ಜಿಹಾದ್ (Love Jihad) ಆರೋಪ ಮಾಡಿರುವ ಕಾರ್ಯಕರ್ತರು, ಮುಕಳೆಪ್ಪ ಸುಳ್ಳು ದಾಖಲೆ ನೀಡಿ ಹಿಂದೂ ಯುವತಿಯನ್ನ ಮದುವೆಯಾಗಿದ್ದಾರೆ ಎಂದು ಆರೋಪಿಸಿದ್ದಾರೆ. ಮುಕಳೆಪ್ಪ ಇಸ್ಲಾಂ ಧರ್ಮಕ್ಕೆ ಸೇರಿದವರಾಗಿದ್ದು, ನಕಲಿ ದಾಖಲೆ ಕೊಟ್ಟು ಹಿಂದೂ ಯುವತಿಯನ್ನ ವಿವಾಹವಾಗಿದ್ದಾರೆ. ಹಿಂದೂ ಯುವತಿಯನ್ನು ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ರಿಜಿಸ್ಟರ್ ಮಾಡಿಕೊಳ್ಳುವ ಮೂಲಕ ಮುಕಳೆಪ್ಪ ವಿವಾಹವಾಗಿದ್ದಾನೆ ಎಂದು ಆರೋಪಿಸಿದ್ದಾರೆ. ಆ ಯುವತಿಯ ಅಪ್ಪ-ಅಮ್ಮ ಕೂಡ ಪೊಲೀಸರೆದುರು ಅಳಲು ತೋಡಿಕೊಂಡಿದ್ದು, ತಂಗಿ ಎಂದು ಹೇಳುತ್ತಾ ನನ್ನ ಮಗಳನ್ನು ಮರುಳು ಮಾಡಿ ಮದುವೆಯಾಗಿಬಿಟ್ಟ. ಆಕೆಯನ್ನು ವಾಪಾಸ್ ಕರೆಸಿಕೊಡಿ, ಹೂವಿನಂತೆ ನೋಡಿಕೊಳ್ಳುತ್ತೇವೆ ಎಂದಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

