AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗದಗ: 9ನೇ ಕ್ಲಾಸ್‌ ವಿದ್ಯಾರ್ಥಿನಿ ಆತ್ಮಹತ್ಯೆ, ಲವ್‌ ಜಿಹಾದ್‌ ಆರೋಪ..!

ಆಕೆ ಹೆತ್ತವರ ಮುದ್ದಿನ ಮಗಳಾಗಿದ್ಲು. ಮುದ್ದಿನ ಮಗಳ‌ ಬಗ್ಗೆ ಪಾಲಕರು ಹತ್ತಾರು ಕನಸು ಕಂಡಿದ್ರು. ಆದ್ರೆ, ಹೆತ್ತವರ ಕನಸಿಗೆ ಅಪ್ರಾಪ್ತ ಯುವಕರು ಕೊಳ್ಳಿ ಇಟ್ಟಿದ್ದಾರೆ. ಹೌದು..ಶಾಲೆಯಲ್ಲಿ ಓದುತ್ತಿದ್ದ ಇಬ್ಬರು ಬಾಲಕರ ಕಿರುಕುಳಕ್ಕೆ ಬೇಸತ್ತು ಬಾಳಿ ಬದುಕು ಬೇಕಿದ್ದ 9ನೇ ಕ್ಲಾಸ್ ವಿದ್ಯಾರ್ಥಿನಿ ಪ್ರಾಣ ಕಳೆದುಕೊಂಡಿದ್ದು, ಮುದ್ದಾಗಿ ಬೆಳೆಸಿದ್ದ ಮಗಳನ್ನು ಕಳೆದುಕೊಂಡ ಹೆತ್ತವರ ಆಕ್ರಂದನ ಮುಗಿಲು ಮುಟ್ಟಿದೆ. ಇನ್ನು ವಿದ್ಯಾರ್ಥಿನಿ ಲವ್​ ಜಿಹಾದ್​ಗೆ ಬಲಿಯಾದ್ದಾಳೆಂಬ ಆರೋಪ ಕೇಳಿಬಂದಿದೆ.

ಗದಗ: 9ನೇ ಕ್ಲಾಸ್‌ ವಿದ್ಯಾರ್ಥಿನಿ ಆತ್ಮಹತ್ಯೆ, ಲವ್‌ ಜಿಹಾದ್‌ ಆರೋಪ..!
ಸಂಜೀವ ಕುಮಾರ್​ ಪಾಂಡ್ರೆ, ಗದಗ
| Updated By: ರಮೇಶ್ ಬಿ. ಜವಳಗೇರಾ|

Updated on: Jan 16, 2025 | 8:02 PM

Share

ಗದಗ, (ಜನವರಿ 16): ಹತ್ತಾರು ಕನಸು ಕಂಡಿದ್ದ 9ನೇ ತರಗತಿ ವಿದ್ಯಾರ್ಥಿನಿ ನೇಣಿಗೆ ಶರಣಾಗಿರುವ ಘಟನೆ ಗದಗ ಜಿಲ್ಲೆ ಗಜೇಂದ್ರಗಡದ ಬಣಗಾರ ಕಾಲೋನಿಯಲ್ಲಿ ನಡೆದಿದೆ. ಅಪ್ರಾಪ್ತ ಬಾಲಕರ ಕಿರುಕುಳಕ್ಕೆ 9ನೇ ತರಗಿತಿ ಖುಷಿ ಪ್ರಾಣ ಕಳೆದುಕೊಂಡಿದ್ದಾಳೆ. ಖುಷಿ.. ಖುಷಿ ಖುಷಿಯಿಂದಾನೆ ದಿನಾಲು ಶಾಲೆಗೆ ಹೋಗುತ್ತಿದ್ದಳು. ಆದ್ರೆ, ಅಪ್ರಾಪ್ತ ಬಾಲಕರು ಖುಷಿಗೆ ಮಾರಕವಾಗಿದ್ದಾರೆ. ಹೌದು… ಅಪ್ರಾಪ್ತ ಬಾಲಕರ ಕಿರುಕುಳಕ್ಕೆ ಬೇಸತ್ತು ಖುಷಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದುಬಂದಿದೆ. ಮುದ್ದಿನ ಮಗಳ ಸಾವು ಕಂಡು ಹೆತ್ತವರ ಆಕ್ರಂದನ ಮುಗಿಲು ಮುಟ್ಟಿದೆ.

ಬಣಕಾರ ಓಣಿಯ ನಿವಾಸಿ 15 ವರ್ಷದ ಖುಷಿ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಳು. ದಿನಾಲು ಖುಷಿ ಖುಷಿಯಿಂದ ಅಮ್ಮ ಅಪ್ಪ ಶಾಲೆಗೆ ಹೋಗಿ ಬರುತ್ತೇನೆ ಎಂದು ಹೇಳಿ ಹೋಗುತ್ತಿದ್ದಳು. ಅಮ್ಮ ನಾನು ಚನ್ನಾಗಿ ಓದಿ ಜೀವನದಲ್ಲಿ ಸಾಧನೆ ಮಾಡುತ್ತೇನ ಅಂತಿದ್ಲು. ಆದ್ರೆ ಖುಷಿ ಬಾಳಲ್ಲಿ ವಿಧಿಯಾಟವೇ ಬೇರೆಯಾಗಿತ್ತು. ಇಬ್ಬರು ಬಾಲಕರು ಕಿರುಕುಳಕ್ಕೆ ಬೇಸತ್ತ ಖುಷಿ ಮನೆಯಲ್ಲಿ ಯಾರು ಇಲ್ಲದನ್ನು ನೋಡಿ ನೇಣು ಹಾಕಿಕೊಂಡಿದ್ದಾಳೆ.

ಇದನ್ನೂ ಓದಿ: ಪ್ರೇಯಸಿ ಸಿಟ್ಟುಮಾಡಿಕೊಂಡು ಹೋಗಿದ್ದಕ್ಕೆ ಗೆಳೆಯನ ಮನೆಯಲ್ಲೇ ಪ್ರಿಯಕರ ದುರಂತ ಸಾವು

ಓದುತ್ತಿದ್ದ ಶಾಲೆಯಲ್ಲಿ ಇಬ್ಬರು ಅಪ್ರಾಪ್ತ ಬಾಲಕರು ದಿನ ನಿತ್ಯ ಮಾನಸಿಕವಾಗಿ ಕಿರುಕುಳ ಕೊಡುತ್ತಿದ್ದರೆಂದು ಖುಷಿಯ ಹೆತ್ತವರು ಆರೋಪಿಸಿದ್ದು, ಮುದ್ದಾಗಿ ಸಾಕಿದ್ದ ಮಗಳ ಕಳೆದುಕೊಂಡ ಕುಟುಂಬಸ್ಥರು ಮಗಳ ಕಳೆದುಕೊಂಡು ಕಣ್ಣೀರು ಹಾಕುತ್ತಿದ್ದಾರೆ..

ಲವ್ ಜಿಹಾದ್ ಆರೋಪ..!

ಇಬ್ಬರು ಅಪ್ರಾಪ್ತ ಬಾಲಕರ ಕಿರುಕುಳಕ್ಕೆ ಖುಷಿ ಆತ್ಮಹತ್ಯೆ ಮಾಡಿಕೊಂಡ ವಿಷಯ ಎಸ್ ಎಸ್ ಕೆ ಸಮಾಜದ ಆಕ್ರೋಶಕ್ಕೆ ಕಾರಣವಾಗಿದೆ. ಬಾಲಕಿ ಸಾವು ಖಂಡಿಸಿ ಇಡೀ ಸಮಾಜ ವ್ಯಾಪಾರ ವಹಿವಾಟು ಬಂದ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಖುಷಿ ಅನುಮಾನಾಸ್ಪದವಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಲವ್ ಜಿಹಾದ್​ಗೆ ಬಲಿಯಾಗಿರುವ ಸಂಶಯವಿದೆ ಎಂದು ಆರೋಪಿಸಿದ್ದು, ಈ ಬಗ್ಗೆ ಸೂಕ್ತ ತನಿಖೆ ನಡೆಸಬೇಕೆಂದು ತಹಶೀಲ್ದಾರರಿಗೆ ಆಗ್ರಹಿಸಿದ್ದಾರೆ. ಇನ್ನು ಈ ಕುರಿತು ಗಜೇಂದ್ರಗಡ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.