ದೇವರ ದರ್ಶನಕ್ಕೆ ಪೊಲೀಸ್ ಎಂಬ ಕಾರಣಕ್ಕಾಗಿ ಸರತಿ ಸಾಲು ಬಿಟ್ಟು ಮುನ್ನುಗ್ಗಿದವನನ್ನು ಲೇಡಿ ಕಾನ್​ಸ್ಟೇಬಲ್ ತಡೆದರು!

ಅರುಣ್​ ಕುಮಾರ್​ ಬೆಳ್ಳಿ

Updated on: Feb 27, 2025 | 8:07 PM

ತಮ್ಮ ಠಾಣೆಯ ಲೇಡಿ ಕಾನ್​ಸ್ಟೇಬಲ್​ರನ್ನು ಸಾರ್ವಜನಿಕವಾಗಿ ಬೈದಿದ್ದಕ್ಕೆ ಸಹಜವಾಗೇ ಇನ್ಸ್​ಪೆಕ್ಟರ್​ಗೆ ಕೋಪ ಬಂದಿದೆ. ಜೈರಾಮ್ ತಾನೂ ಇಲಾಖೆಯವನೇ ಅಂತ ವಿನಂತಿಸಿಕೊಂಡಿದ್ದರೆ ಪ್ರಾಯಶಃ ಕಾನ್​ಸ್ಟೇಬಲ್ ಮತ್ತು ಇನ್ಸ್​ಪೆಕ್ಟರ್ ಗುಡಿಯೊಳಗೆ ಹೋಗುವ ಅವಕಾಶ ಮಾಡಿಕೊಡುತ್ತಿದ್ದರೇನೋ? ಆದರೆ ಮಹಿಳಾ ಕಾನ್​ಸ್ಟೇಬಲ್ ಮೇಲೆ ಜೋರು ಮಾಡಿದ ಹೆಡ್ ಕಾನ್​ಸ್ಟೇಬಲ್ ಅದಕ್ಕೆ ಬೆಲೆ ತೆತ್ತಿದ್ದಾರೆ.

ಕಾರವಾರ, ಫೆ 27: ಜನಜಂಗುಳಿಯ ನಡುವೆ ಪೊಲೀಸರೇ ಕಾದಾಟಕ್ಕೆ ನಿಂತರೆ ಹೇಗೆ ಸ್ವಾಮಿ? ಉತ್ತ್ತರ ಕನ್ನಡ ಜಿಲ್ಲೆ ಕುಮಟಾ ತಾಲೂಕಿನ ಗೋಕರ್ಣದಲ್ಲಿರು ಮಹಾಬಲೇಶ್ವರ ದೇವಸ್ಥಾನಕ್ಕೆ (Mahabaleshwara temple) ಪೂಜೆಗೆಂದು ಪ್ರಾಯಶಃ ಪತ್ನಿ ಜೊತೆ ಬಂದಿದ್ದ ಭಟ್ಕಳ ಪೊಲೀಸ್ ಠಾಣೆಯ ಹೆಡ್ ಕಾನ್​ಸ್ಟೇಬಲ್ ಜೈರಾಮ್ ಹೊಸ್ಕಟ್ಟಾ ಗುಡಿಯ ಒಳಗೆ ಹೋಗಲು ಉಳಿದವರಂತೆ ಸಾಲಲ್ಲಿ ಹೋಗೋದು ಬಿಟ್ಟು ಮುಂದೆ ನುಗ್ಗುವ ಪ್ರಯತ್ನ ಮಾಡಿದ್ದಾರೆ. ಜನರನ್ನು ನಿಯಂತ್ರಿಸಲು ನಿಯೋಜನೆಯಲ್ಲಿದ್ದ ಒಬ್ಬ ಲೇಡಿ ಕಾನ್​ಸ್ಟೇಬಲ್ ಸಾಲಲ್ಲಿ ಬನ್ನಿ ಅಂದಾಗ ಅವರ ಮೇಲೆ ಕೂಗಾಡಿದ್ದಾರೆ. ಕೂಡಲೇ ಲೇಡಿ ಕಾನ್​ಸ್ಟೇಬಲ್ ಸ್ವಲ್ಪ ದೂರದಲ್ಲಿ ಕರ್ತವ್ಯ ನಿರತರಾಗಿದ್ದ ಇನ್ಸ್​ಪೆಕ್ಟರ್ ಖಾದರ್ ಪಾಷಾಗೆ ವಿಷಯ ತಿಳಿಸಿದ್ದಾರೆ. ಖಾದರ್ ಅಲ್ಲಿಗೆ ಬಂದು ಸಾಲಲ್ಲಿ ಬಂದರೆ ಮಾತ್ರ ಒಳಗೆ ಬಿಡೋದಾಗಿ ಖಡಾಖಂಡಿತವಾಗಿ ಹೇಳಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಮಹಿಳಾ ಪೊಲೀಸ್​ ಸಿಬ್ಬಂದಿ ಮೇಲೆ ಹಲ್ಲೆ ಆರೋಪ: ಶಾಸಕಿ ಸೌಮ್ಯಾ ರೆಡ್ಡಿ ವಿರುದ್ಧ ಎಫ್​ಐಆರ್ ದಾಖಲು

Published on: Feb 27, 2025 07:56 PM
Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.