Video: 54 ವರ್ಷಗಳ ಹಿಂದೆ ಬೇರ್ಪಟ್ಟಿದ್ದ ದಂಪತಿ, ತಾನಿಲ್ಲದೆ ಬದುಕು ಕಟ್ಟಿಕೊಂಡವನ ಮುಂದೆ ಕುಸಿದು ಬಿದ್ದ ಪತ್ನಿ

Updated on: Dec 18, 2025 | 8:32 AM

ತಾವು ಪ್ರೀತಿಸುವವರು ಬೇರೊಬ್ಬಳನ್ನು ಮದುವೆಯಾಗುವುದನ್ನು ಕಲ್ಪಿಸಿಕೊಳ್ಳುವುದು ಕೂಡ ಕಷ್ಟ. ಎರಡನೇ ಮಹಾಯುದ್ಧದ ಸಮಯದಲ್ಲಿ ತನ್ನ ಗಂಡನಿಂದ ಬೇರ್ಪಟ್ಟ ದಶಕಗಳ ನಂತರ ಆತ ಕಣ್ಮುಂದೆ ಬಂದಾಗ ಒಮ್ಮೆ ಖುಷಿಯಾಗಿದ್ದಂತೂ ಹೌದು, ಹಾಗೆಯೇ ತಾನಿಲ್ಲದೆ ಆತ ಬದುಕು ಕಟ್ಟಿಕೊಂಡಿದ್ದ, ಬೇರೆ ಮದುವೆಯಾಗಿ ಮಕ್ಕಳು ಕೂಡ ಇದ್ದಾರೆ ಎಂಬುದನ್ನು ಕೇಳಿ ಆಕೆ ಗಂಡನ ಎದುರೇ ಕುಸಿದುಬಿದ್ದಿದ್ದಾಳೆ. ಆದರೆ ಇಷ್ಟು ವರ್ಷವಾದರೂ ಆಕೆ ಬೇರೆ ಮದುವೆಯಾಗಿಲ್ಲ, ಗಂಡನ ಬರುವಿಕೆಗಾಗಿಯೇ ಕಾದು ಕುಳಿತಿದ್ದಳು.

54 ವರ್ಷಗಳ ಬಳಿಕ ಇಬ್ಬರು ಮತ್ತೆ ಒಂದಾಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಈ ವಿಡಿಯೋದಲ್ಲಿ ಭಾವನಾತ್ಮಕ ಪುನರ್ಮಿಲನವನ್ನು ಕಾಣಬಹುದು. ತಾನು ಯಾರಿಗಾಗಿ ಕಾಯುತ್ತಿದ್ದಳೋ ಆತ ಬೇರೆ ಮದುವೆಯಾಗಿ, ಮಕ್ಕಳು, ಮೊಮ್ಮಕ್ಕಳು ಇದ್ದಾರೆ ಎಂದು ತಿಳಿದು ಆಕೆ ಜರ್ಜರಿತಳಾಗಿದ್ದಾಳೆ. ಗಂಡನ ಕಂಡಾಕ್ಷಣ ಆತನನ್ನು ಗದರಿಸುವುದು ಜತೆಗೆ ಪ್ರೀತಿಯಿಂದ ಅಪ್ಪಿಕೊಳ್ಳುವುದನ್ನು ಕಾಣಬಹುದು.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ