ಕೋಲಾರ: ಅಪ್ಪನ ನೌಕರಿ ತನಗೆ ನೀಡಲು ಕಂಪನಿ ನಿರಾಕರಿಸಿದ ಕಾರಣ ಆದರ ಆವರಣದಲ್ಲೇ ವ್ಯಕ್ತಿಯೊಬ್ಬ ಆತ್ಮಹತ್ಯೆಗೆ ಪ್ರಯತ್ನಿಸಿದ
ಕಳೆದ ಡಿಸೆಂಬರ್ ನಲ್ಲಿ ಅವರು ತೀರಿಕೊಂಡ ಕಾರಣ ಅವರು ಮಾಡುತ್ತಿದ್ದ ನೌಕರಿಯನ್ನು ತನಗೆ ನೀಡುವಂತೆ ಶಿವರಾಜ್ ಕೇಳಿದಾಗ ಕಂಪನಿ ನಿರಾಕರಿಸಿದೆ. ಹತಾಷನಾದ ಶಿವರಾಜ್ ಶುಕ್ರವಾರ ಕಂಪನಿ ಅವರಣದಲ್ಲಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾನೆ
ಕೋಲಾರದ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿರುವ (Narasapur Industrial Area) ಬಹುದೇಶೀಯ ಕಂಪನಿಯೊಂದರ (MNC) ಆವರಣದಲ್ಲಿ ವ್ಯಕ್ತಿಯೊಬ್ಬ ವಿಷಸೇವಿಸಿ ಅತ್ಮಹತ್ಯೆಗೆ ಪ್ರಯತ್ನಿಸಿದ್ದು ಕೂಡಲೇ ಅಂಬ್ಯಲೆನ್ಸ್ ಒಂದರಲ್ಲಿ ಕೋಲಾರ ಜಿಲ್ಲಾಸ್ಪತ್ರೆಗೆ (district hospital) ರವಾನಿಸಲಾಗಿದೆ. ವ್ಯಕ್ತಿಯನ್ನು ಅಪ್ಪಸಂದ್ರ ಗ್ರಾಮದ ಶಿವರಾಜ್ ಎಂದು ಗುರುತಿಸಲಾಗಿದ್ದು ಅವನ ತಂದೆ ಮೋಟಪ್ಪ ಇದೇ ಕಂಪನಿಯಲ್ಲಿ ಗಾರ್ಡನ್ ಅಡ್ಮಿನ್ ಆಗಿ ಕೆಲಸ ಮಾಡುತ್ತಿದ್ದರಂತೆ. ಕಳೆದ ಡಿಸೆಂಬರ್ ನಲ್ಲಿ ಅವರು ತೀರಿಕೊಂಡ ಕಾರಣ ಅವರು ಮಾಡುತ್ತಿದ್ದ ನೌಕರಿಯನ್ನು ತನಗೆ ನೀಡುವಂತೆ ಶಿವರಾಜ್ ಕೇಳಿದಾಗ ಕಂಪನಿ ನಿರಾಕರಿಸಿದೆ. ಹತಾಷನಾದ ಶಿವರಾಜ್ ಶುಕ್ರವಾರ ಕಂಪನಿ ಅವರಣದಲ್ಲಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾನೆ. ಕೆಂಪು ಬಣ್ಣದ ಅಂಗಿತೊಟ್ಟು ಆವರಣದಲ್ಲಿ ಓಡಾಡುತ್ತಿರುವವನೇ ಶಿವರಾಜ್.
ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.