Modi Road Show: ನಮೋ ನೋಡಲು ವೀಲ್ ಚೇರ್ನಲ್ಲೇ ರಸ್ತೆಗೆ ಬಂದ ಅಭಿಮಾನಿ
ಇಂದು (ಮೇ 07) ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರಿನಲ್ಲಿ ಎರಡನೇ ಹಂತದ ರೋಡ್ ಶೋ ಆರಂಭಿಸಿದ್ದಾರೆ. ಮಳೆಯನ್ನು ಲೆಕ್ಕಿಸದೇ ಅಭಿಮಾನಿಗಳು ಮೋದಿ ನೋಡಲು ರಸ್ತೆ ಬದಿಯಲ್ಲಿ ನಿಂತಿದ್ದಾರೆ. ಅದರಂತೆ ಅಭಿಮಾನಿಯಫರ್ವ ವೀಲ್ ಚೇರ್ನಲ್ಲಿ ಮೋದಿಯವರನ್ನು ನೋಡಲು ರಸ್ತೆಗೆ ಬಂದಿದ್ದಾರೆ.
ಬೆಂಗಳೂರು: ವಿಧಾನಸಭೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯದ ಮೂಲೆ ಮೂಲೆಗಳಲ್ಲಿ ಭರ್ಜರಿ ಪ್ರಚಾರ ಮಾಡುತ್ತಿದ್ದಾರೆ. ಅದರಂತೆ ನಿನ್ನೆ(ಮೇ 06) ಬೆಂಗಳೂರಿನಲ್ಲಿ ಮೊದಲ ಹಂತದಲ್ಲಿ ಹಲವು ಏರಿಯಾಗಳಲ್ಲಿ ರೋಡ್ ಶೋ ಮಾಡಿದ್ದು, ಇದೀಗ ಇಂದು (ಮೇ 07) ಎರಡನೇ ಹಂತದ ರೋಡ್ ಶೋ ಆರಂಭಿಸಿದ್ದಾರೆ. ತಿಪ್ಪೇಸಂಧ್ರದಿಂದ ಟ್ರಿನಿಟ್ ಸರ್ಕಲ್ ವರೆಗೆ ರೋಡ್ ಸಾಗಲಿದ್ದು, ಮಳೆಯನ್ನು ಲೆಕ್ಕಿಸದೇ ಅಭಿಮಾನಿಗಳು ಮೋದಿ ನೋಡಲು ರಸ್ತೆ ಬದಿಯಲ್ಲಿ ನಿಂತಿದ್ದಾರೆ. ಅದರಂತೆ ಅಭಿಮಾನಿಯೋರ್ವ ವೀಲ್ ಚೇರ್ನಲ್ಲಿ ಮೋದಿಯವರನ್ನು ನೋಡಲು ರಸ್ತೆಗೆ ಬಂದಿದ್ದಾರೆ.
Latest Videos