ಲಸಿಕೆಗೆ ಹೆದರಿ ಮನೆಯ ಮಾಳಿಗೆ ಏರಿದ ವ್ಯಕ್ತಿ; ಅಧಿಕಾರಿಗಳು ಕೊನೆಗೂ ಲಸಿಕೆ ನೀಡಿದ್ದೇಗೆ?

| Updated By: sandhya thejappa

Updated on: Nov 28, 2021 | 12:57 PM

ರಾಜ್ಯದಲ್ಲಿ ಕೊರೊನಾ (Coronavirus) ಮೂರನೇ ಆತಂಕ ಶುರುವಾಗಿದೆ. ಈ ನಡುವೆ ಕೊರೊನಾ ಲಸಿಕೆ ಪಡೆಯಲು ಜನ ನಿರಾಕರಿಸುತ್ತಿದ್ದಾರೆ. ಕೊಪ್ಪಳದಲ್ಲಿ ಅಧಿಕಾರಿಗಳು ಕೊರೊನಾ ಲಸಿಕೆ ಹಾಕಲು ಹೋಗುತ್ತಿದ್ದಂತೆ ವ್ಯಕ್ತಿಯೊಬ್ಬ ದೇವರು ಬಂದಂತೆ ವಿಲಕ್ಷಣ ವರ್ತನೆ ತೋರಿದ್ದಾರೆ. ಇನ್ನೊಂದು ಕಡೆ ನಾನು ಸತ್ತರೆ ಇವತ್ತೆ ಸಾಯುತ್ತೀನಿ. ಆದರೆ ಲಸಿಕೆ ಮಾತ್ರ ಹಾಕಿಸಿಕೊಳ್ಳಲ್ಲ ಅಂತ ವೃದ್ಧೆ ಪಟ್ಟು ಬಿದ್ದಿದ್ದಾರೆ. ಅಲ್ಲದೆ ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಬೂದಗುಂಪಾದಲ್ಲಿ ಹುಚ್ಚಪ್ಪ ಛಲವಾದಿ ಎಂಬ ವ್ಯಕ್ತಿ ಲಸಿಕೆಗೆ ಹೆದರಿ ಮನೆಯ ಮೇಲೆ ಏರಿದ್ದಾರೆ. ಆರೋಗ್ಯ […]

ರಾಜ್ಯದಲ್ಲಿ ಕೊರೊನಾ (Coronavirus) ಮೂರನೇ ಆತಂಕ ಶುರುವಾಗಿದೆ. ಈ ನಡುವೆ ಕೊರೊನಾ ಲಸಿಕೆ ಪಡೆಯಲು ಜನ ನಿರಾಕರಿಸುತ್ತಿದ್ದಾರೆ. ಕೊಪ್ಪಳದಲ್ಲಿ ಅಧಿಕಾರಿಗಳು ಕೊರೊನಾ ಲಸಿಕೆ ಹಾಕಲು ಹೋಗುತ್ತಿದ್ದಂತೆ ವ್ಯಕ್ತಿಯೊಬ್ಬ ದೇವರು ಬಂದಂತೆ ವಿಲಕ್ಷಣ ವರ್ತನೆ ತೋರಿದ್ದಾರೆ. ಇನ್ನೊಂದು ಕಡೆ ನಾನು ಸತ್ತರೆ ಇವತ್ತೆ ಸಾಯುತ್ತೀನಿ. ಆದರೆ ಲಸಿಕೆ ಮಾತ್ರ ಹಾಕಿಸಿಕೊಳ್ಳಲ್ಲ ಅಂತ ವೃದ್ಧೆ ಪಟ್ಟು ಬಿದ್ದಿದ್ದಾರೆ. ಅಲ್ಲದೆ ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಬೂದಗುಂಪಾದಲ್ಲಿ ಹುಚ್ಚಪ್ಪ ಛಲವಾದಿ ಎಂಬ ವ್ಯಕ್ತಿ ಲಸಿಕೆಗೆ ಹೆದರಿ ಮನೆಯ ಮೇಲೆ ಏರಿದ್ದಾರೆ. ಆರೋಗ್ಯ ಇಲಾಖೆಯವರು ಮನೆ ಮನೆಗೆ ಹೋಗಿ ಲಸಿಕೆ ಹಾಕುವ ಅಭಿಯಾನ ನಡೆಸುತ್ತಿದ್ದಾರೆ. ಆದರೆ ಲಸಿಕೆ ಹಾಕಿಸಿಕೊಳ್ಳಲು ಹಿಂದೆ ಸರಿಯುತ್ತಿದ್ದಾರೆ. ಲಸಿಕೆ ಪಡೆಯಲು ನಿರಾಕರಿಸಿ ಮಾಳಿಗೆ ಏರಿದ ಹುಚ್ಚಪ್ಪನನ್ನು ಮನವೊಲಿಸಲು ಆರೋಗ್ಯ ಇಲಾಖೆಯವರು ಸಹ ಮನೆ ಮಾಳಿಗೆ ಏರಿದ್ದಾರೆ. ನಂತರ ಸಿಬ್ಬಂದಿಗಳ ಮನವೊಲಿಕೆಯಿಂದ ಹುಚ್ಚಪ್ಪ ಲಸಿಕೆ ಹಾಕಿಸಿಕೊಂಡಿದ್ದಾರೆ.