ಕೇವಲ ಹತ್ತೇ ಹತ್ತು ಸಾವಿರಕ್ಕೆ ವೃದ್ಧೆಯನ್ನ ಹೊರಗೆ ಹಾಕಿ ಮನೆ ಸೀಜ್ ಮಾಡಿದ ಮೌಲಾಸಾಬ್

Edited By:

Updated on: Feb 04, 2025 | 2:56 PM

ಮಧ್ಯೆ ಮೈಕ್ರೋ ಫೈನಾನ್ಸ್ ಉಪಟಳ, ಕಿರುಕುಳ ಮುಂದುವರೆದಿದ್ದು, ಆತ್ಮಹತ್ಯೆ ಸರಣಿ ಸಹ ಮುಂದುವರೆದಿವೆ. ಇನ್ನು ಇದರ ಮಧ್ಯ ಬಡ್ಡಿದಂಧೆಕೋರರ ಹಾವಳಿ ಶುರುವಾಗಿದೆ. ಕೇವಲ ಹತ್ತೇ ಹತ್ತು ಸಾವಿರ ರೂಪಾಯಿ ಸಾಲಕ್ಕೆ ಮನೆಗೆ ಬೀಗ ಹಾಕಿದ್ದಾನೆ. ವೃದ್ಧೆ ಎಂದು ಸ್ವಲ್ಪ ಕನಿಕರ ತೋರದೇ ಮನೆಯಿಂದ ಹೊರಗೆ ಹಾಕಿ ಬೀಗ ಹಾಕಿದ್ದಾನೆ.

ಗದಗ, (ಫೆಬ್ರವರಿ 04): ಮೈಕ್ರೋ ಫೈನಾನ್ಸ್​ ಹಾವಳಿ ಮಧ್ಯ ಬಡ್ಡಿದಂಧೆಕೋರರ ಉಪಟಳ ಶುರುವಾಗಿದೆ. ಸಹೋರದನ  ಚಿಕಿತ್ಸೆಗಾಗಿ ವೃದ್ಧೆಯೊಬ್ಬರು 10 ಸಾವಿರ ಸಾಲ ಪಡೆದಿದ್ದು, ಅದನ್ನು ಮರುಪಾವತಿಸದಕ್ಕೆ ಆಕೆಯನ್ನು ಮನೆಯಿಂದ ಆಚೆ ಹಾಕಿರುವ ಘಟನೆ ಗದಗ ಜಿಲ್ಲೆಯ ರೋಣ ಪಟ್ಟಣದಲ್ಲಿ ನಡೆದಿದೆ. ವೃದ್ಧೆ ಉಷಾದೇವಿ ಎನ್ನುವರು ಸಹೋದರನ ಚಿಕಿತ್ಸೆಗೆಂದು ಮೌಲಾಸಾಬ್ ಬಳಿ ಬಡ್ಡಿಗೆಂದು 10 ಸಾವಿರ ರೂಪಾಯಿ ಸಾಲ ಪಡೆದುಕೊಂಡಿದ್ದಳು. ಈಗ ಬಡ್ಡಿ ದಂಧೆಕೋರ ಮೌಲಾಸಾಬ್ 10 ಸಾವಿರ ರೂಪಾಯಿ ಸಾಲಕ್ಕೆ ವೃದ್ಧೆ ಉಷಾದೇವಿ ಮನೆಗೆ ಬೀಗ ಹಾಕಿದ್ದಾನೆ. ಸ್ವಲ್ಪ ದಿನ ಕಾಲಾವಕಾಶ ಕೇಳಿದರೂ ಸಹ ಕೇಳದ ಮೌಲಾಸಾಬ್, ವೃದ್ಧೆ ಉಷಾದೇವಿಯನ್ನು ಹೊರಗೆ ಹಾಕಿ ಮನೆಗೆ ಬೀಗ ಹಾಕಿದ್ದಾನೆ. ಕೇವಲ ಹತ್ತೇ ಹತ್ತು ಸಾವಿರ ರೂಪಾಯಿ ವೃದ್ಧೆಯನ್ನು ಈ ಸ್ಥಿತಿ ತಂದಿಟ್ಟಿರುವುದು ದುರಂತವೇ ಸರಿ.

Loading...
Unable to load recommendations.
Follow Us
ಸಂಜೀವ ಕುಮಾರ್​ ಪಾಂಡ್ರೆ, ಗದಗ

ಸಂಜೀವಕುಮಾರ. ರಾ. ಪಾಂಡ್ರೆ, ಮೂಲತಃ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಅಗರಖೇಡ ಗ್ರಾಮದವರು. ಸಧ್ಯ ಟಿರ್ವಿ ವಾಹಿನಿಯ ಗದಗ ಜಿಲ್ಲಾ ಹಿರಿಯ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬಿಎ., ಡಿಪ್ಲೋಮಾ ಇನ್ ಜರ್ನಲಿಸಮ್ ಹಾಗೂ ಅಪ್ಟೇಕ್ ನಲ್ಲಿ ಕಂಪ್ಯೂಟರ್ (HDSE) ಓದಿರುವ ಇವರು. ವಿಜಯಪುರದ‌‌ ಪಿಡಿಜೆ ಹೈಸ್ಕೂಲ್ ನಲ್ಲಿ ಎರಡು ವರ್ಷ ಕಂಪ್ಯೂಟರ್ ಶಿಕ್ಷಕನಾಗಿ ಕಾರ್ಯ ನಿರ್ವಹಿಸಿದ್ದಾರೆ. 20 ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯವಾಗಿದ್ದು, 2004ರಲ್ಲಿ ಮುದ್ರಣ ಮಾಧ್ಯಮದ‌ ಮೂಲಕ ಪತ್ರಿಕೋದ್ಯಮ ವೃತ್ತಿ ಆರಂಭಿಸಿದ್ದು, ನಂತರ 2007ರಿಂದ ಎಲೇಕ್ಟ್ರಾನಿಕ್‌ ಮಾಧ್ಯಮದಲ್ಲಿ ಸೇವೆ ಆರಂಭಿಸಿದ್ದಾರೆ. ಟಿರ್ವಿ ವಾಹಿನಿಯಲ್ಲಿ ಬಾಗಲಕೋಟೆ, ವಿಜಯಪುರ ನಂತರ ಗದಗ ಜಿಲ್ಲೆಯ ವರದಿಗಾರರಾಗಿ 15 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಕ್ರೀಡೆ, ಸಂಗೀತ ಹವ್ಯಾಸವಾಗಿದೆ...

Read More