ಠಾಣೆಯಿಂದಲೇ ಕಾಣೆಯಾದ ವ್ಯಕ್ತಿ; ಪೋಲಿಸರ ವಿರುದ್ದ ಪೋಷಕರ ಆಕ್ರೋಶ

|

Updated on: Jun 13, 2023 | 10:03 AM

ಕುಡಿದು ಲಾರಿ ಚಾಲನೆ ಹಿನ್ನೆಲೆ ‌‌ಜೂನ್ 4ರಂದು ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ಪೊಲೀಸ್ ಠಾಣೆ ಪೊಲೀಸರು ಲಾರಿ ಜಪ್ತಿ ಮಾಡಿ, ಆತನನ್ನ ವಶಕ್ಕೆ ಪಡೆದಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ವಶದಲ್ಲಿದ್ದ ಕಟ್ಟಿಗೆಹಳ್ಳಿಯ ಲಾರಿ ಚಾಲಕ ಕೆ.ಬಿ.ಬಸವಂತಕುಮಾರ್(36), ಪೊಲೀಸರ ಕಣ್ಣೆದುರೆ ನಾಪತ್ತೆಯಾಗಿದ್ದಾನೆ.

ಚಿತ್ರದುರ್ಗ: ಕುಡಿದು ಲಾರಿ ಚಾಲನೆ ಹಿನ್ನೆಲೆ ‌‌ಜೂನ್ 4ರಂದು ಚಿತ್ರದುರ್ಗ(Chitradurga)ಜಿಲ್ಲೆಯ ಹೊಳಲ್ಕೆರೆ ಪೊಲೀಸ್ ಠಾಣೆ ಪೊಲೀಸರು ಲಾರಿ ಜಪ್ತಿ ಮಾಡಿ, ಆತನನ್ನ ವಶಕ್ಕೆ ಪಡೆದಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ವಶದಲ್ಲಿದ್ದ ಕಟ್ಟಿಗೆಹಳ್ಳಿಯ ಲಾರಿ ಚಾಲಕ ಕೆ.ಬಿ.ಬಸವಂತಕುಮಾರ್(36), ಪೊಲೀಸರ ಕಣ್ಣೆದುರೆ ನಾಪತ್ತೆಯಾಗಿದ್ದಾನೆ. ಜೂ.4ರ ರಾತ್ರಿ ಲಾರಿ ಜಪ್ತಿ ಮಾಡಿ ಠಾಣೆಗೆ ಪೊಲೀಸರು ತಂದಿದ್ದರು. ದಂಡ ಕಟ್ಟಲು ಹಣವಿಲ್ಲದೆ ರಾತ್ರಿಯಿಡೀ ಚಾಲಕ ಲಾರಿಯಲ್ಲಿದ್ದ. ಜೂ.5ರ ಬೆಳಗ್ಗೆ 2ಸಲ ಠಾಣೆಯೊಳಗೆ ಬಂದಿದ್ದ ಚಾಲಕ, ಬೆಳಗ್ಗೆ 9ಗಂಟೆಗೆ ತಿಂಡಿ ಸೇವನೆಗೆಂದು ಹೋಗಿದ್ದವ ನಾಪತ್ತೆಯಾಗಿದ್ದಾನೆ. ಈ ವಿಷಯ ತಿಳಿದು ಬಸವಂತಕುಮಾರ್ ಪೋಷಕರಲ್ಲಿ ಆತಂಕ ಮೂಡಿದ್ದು, ಚಾಲಕ ನಾಪತ್ತೆಗೆ ಹೊಳಲ್ಕೆರೆ ಪೊಲೀಸರೇ ಕಾರಣ ಎಂದು ಕಿಡಿಕಾರಿದ್ದಾರೆ. ಈ ಕುರಿತು ಪರಿಶೀಲನೆ ನಡೆಸಿ ಸೂಕ್ತ ಕ್ರಮ ಜರುಗಿಸುತ್ತೇವೆ ಎಂದು ಎಸ್ಪಿ ಕೆ.ಪರಶುರಾಮ್ ಮಾಹಿತಿ ನೀಡಿದ್ದಾರೆ.

ಇನ್ನಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ