ಕೊಪ್ಪಳ: ಅಕ್ರಮವಾಗಿ ಸಾಗಿಸುತ್ತಿದ್ದ 340 ಕ್ವಿಂಟಾಲ್ ಪಡಿತರ ಅಕ್ಕಿ ಜಪ್ತಿ; ಲಾರಿ ವಶ

ಆಹಾರ ಇಲಾಖೆ ನಿರೀಕ್ಷಕ ನಿತಿನ್ ಅಗ್ನಿ ನೇತೃತ್ವದಲ್ಲಿ ದಾಳಿ ನಡೆಸಿದ್ದು, 340 ಕ್ವಿಂಟಾಲ್ ಅನ್ನಭಾಗ್ಯ ಅಕ್ಕಿ ವಶಕ್ಕೆ ಪಡೆಯಲಾಗಿದೆ. ಗಂಗಾವತಿಯಿಂದ ಗುಜರಾತ್​ಗೆ ಹೊರಟಿದ್ದ ಲಾರಿ ವಶಕ್ಕೆ ಪಡೆದಿದ್ದು, ಸುಮಾರು 8.10 ಲಕ್ಷ ರೂಪಾಯಿ ಅಕ್ಕಿ ವಶಕ್ಕೆ ಪಡೆಯಲಾಗಿದೆ.

ಕೊಪ್ಪಳ: ಅಕ್ರಮವಾಗಿ ಸಾಗಿಸುತ್ತಿದ್ದ 340 ಕ್ವಿಂಟಾಲ್ ಪಡಿತರ ಅಕ್ಕಿ ಜಪ್ತಿ; ಲಾರಿ ವಶ
ಗಂಗಾವತಿಯಿಂದ ಗುಜರಾತ್​ಗೆ ಹೊರಟಿದ್ದ ಲಾರಿ ವಶಕ್ಕೆ

ಕೊಪ್ಪಳ: ಅಕ್ರಮವಾಗಿ ಸಾಗಿಸುತ್ತಿದ್ದ 340 ಕ್ವಿಂಟಾಲ್ ಪಡಿತರ ಅಕ್ಕಿ ಜಪ್ತಿ ಮಾಡಿದ ಘಟನೆ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಬೋದೂರಿನ ಟೋಲ್ ಪ್ಲಾಜಾ ಬಳಿ ನಡೆದಿದೆ. ಆಹಾರ ಇಲಾಖೆ ನಿರೀಕ್ಷಕ ನಿತಿನ್ ಅಗ್ನಿ ನೇತೃತ್ವದಲ್ಲಿ ದಾಳಿ ನಡೆಸಿದ್ದು, 340 ಕ್ವಿಂಟಾಲ್ ಅನ್ನಭಾಗ್ಯ ಅಕ್ಕಿ ವಶಕ್ಕೆ ಪಡೆಯಲಾಗಿದೆ.

ಗಂಗಾವತಿಯಿಂದ ಗುಜರಾತ್​ಗೆ ಹೊರಟಿದ್ದ ಲಾರಿ ವಶಕ್ಕೆ ಪಡೆದಿದ್ದು, ಸುಮಾರು 8.10 ಲಕ್ಷ ರೂಪಾಯಿ ಅಕ್ಕಿ ವಶಕ್ಕೆ ಪಡೆಯಲಾಗಿದೆ. ಸದ್ಯ ಪಡಿತರ ಅಕ್ಕಿ ಸಾಗಿಸುತ್ತಿದ್ದ ಲಾರಿ ಚಾಲಕ ಮದನಲಾಲ್​ನನ್ನು ಬಂಧಿಸಲಾಗಿದ್ದು, ಗಂಗಾವತಿಯ ಅಭಿಜಿತ್ ಟ್ರೇಡರ್ ವಿರುದ್ಧ ಕುಷ್ಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೊಪ್ಪಳ: ಅಕ್ರಮವಾಗಿ ಮರಳು ಸಾಗಿಸ್ತಿದ್ದ ಟ್ರ್ಯಾಕ್ಟರ್ ಪಲ್ಟಿ; ರೈತ ಸಾವು
ಅಕ್ರಮವಾಗಿ ಮರಳು ಸಾಗಿಸ್ತಿದ್ದ ಟ್ರ್ಯಾಕ್ಟರ್ ಪಲ್ಟಿಯಾಗಿ ರೈತ ಸಾವನ್ನಪ್ಪಿದ ಘಟನೆ ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಬೂದಗುಂಪಾ ಗ್ರಾಮದಲ್ಲಿ ನಡೆದಿದೆ. ರೈತ ದೊಡ್ಡಬಸಪ್ಪ ಹಾಲಸಮುದ್ರ(40) ಮೃತ ದುರ್ದೈವಿ. ರೈತ ದೊಡ್ಡಬಸಪ್ಪ ಹೊಲಕ್ಕೆ ಮೇವು ತರಲು ತೆರಳಿದ್ದರು. ಅದೇ ಮಾರ್ಗದಲ್ಲಿ ಬಂದ ಟ್ರ್ಯಾಕ್ಟರ್‌ನಲ್ಲಿ ವಾಪಸಾಗುತ್ತಿದ್ರು, ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ಟ್ರ್ಯಾಕ್ಟರ್ ಪಲ್ಟಿಯಾಗಿದೆ. ಅಪಘಾತದ ಬಳಿಕ ಟ್ರ್ಯಾಕ್ಟರ್ ಬಿಟ್ಟು ಚಾಲಕ ಪರಾರಿಯಾಗಿದ್ದಾನೆ. ಕಾರಟಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

ಬಾಗಲಗುಂಟೆಯಲ್ಲಿ ಜೂಜಾಡುತ್ತಿದ್ದ 14 ಜನರ ಬಂಧನ
ಬೃಹತ್ ಮಟ್ಟದ ಜೂಜು ಅಡ್ಡೆ ಮೇಲೆ ಪೊಲೀಸರು ದಾಳಿ ನಡೆಸಿದ್ದು, 14 ಜನರನ್ನು ವಶಕ್ಕೆ ಪಡೆದಿದ್ದಾರೆ. ಬೆಂಗಳೂರಿನ ಪೀಣ್ಯ 8ನೇ ಮೈಲಿ ಬಳಿಯ ಕೆಂಪೇಗೌಡ ನಗರದಲ್ಲಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಜೂಜು ಅಡ್ಡೆಗೊಸ್ಕರವೇ ಶೆಡ್ ಬಾಡಿಗೆ ಪಡೆದು ಆಡಲಾಗುತ್ತಿತ್ತು. ಅಲ್ಲದೇ ಎಂಟ್ರಿ ಫೀಜ್ 500 ಕೊಟ್ಟರೆ ಮಾತ್ರ ಅಡ್ಡೆಗೆ ಪ್ರವೇಶ ಎಂಬುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ. ದಾಳಿ ವೇಳೆ ಪೊಲೀಸರು 4 ಲಕ್ಷ ರೂಪಾಯಿ ನಗದು, ಕಾರು, 3 ಮೊಬೈಲ್ ಫೋನ್ ಮತ್ತು ಚೆಕ್​ಗಳನ್ನು ಜಪ್ತಿ ಮಾಡಿದ್ದಾರೆ.

ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ. ಸುಭಾಷ್, ಅನಿಸ್, ರಂಗನಾಥ, ಚಂದ್ರಶೇಖರ್ ಸೇರಿದಂತೆ 14 ಜನರ ವಿರುದ್ಧ ಕೇಸ್ ದಾಖಲಿಸಲಾಗಿದೆ.

ಮೈಸೂರು: ನರಸೀಪುರ ಪೊಲೀಸರ ಭರ್ಜರಿ ಕಾರ್ಯಾಚರಣೆ
ಹಲವು ದಿನಗಳಿಂದ ತಾಲ್ಲೂಕಿನಾದ್ಯಂತ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿಗಳನ್ನು ಮೈಸೂರು ಜಿಲ್ಲೆಯ ನರಸೀಪುರ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳ ಪತ್ತೆಗೆ ಎಸ್​ಪಿ ಚೇತನ್ ತಂಡ ರಚನೆ ಮಾಡಿದ್ದರು. ನಂಜನಗೂಡು ಡಿವೈಎಸ್​ಪಿ ಗೋವಿಂದರಾಜು, ಸರ್ಕಲ್ ಇನ್ಸ್ಪೆಕ್ಟರ್ ಕೃಷ್ಣಪ್ಪ, ಪಿಎಸ್ಐ ಮಂಜು ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ.

ಪ್ರಕರಣ ನಡೆದ ಕೆಲವೇ ದಿನಗಳಲ್ಲಿ ಆರೋಪಿಗಳನ್ನು ಬಂಧಿಸುವಲ್ಲಿ ನರಸೀಪುರ ಪೊಲೀಸ್ ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ. ಆರೋಪಿಗಳಿಂದ 2 ಟಾಟಾ ಏಸ್ ವಾಹನ, ಒಂದು ಬೈಕ್ ಹಾಗೂ ಪೈಪ್​ಗಳು ವಶಕ್ಕೆ ಪಡೆಯಲಾಗಿದೆ. ನಾಗೇಂದ್ರ, ರಾಜು, ಅಬ್ದುಲ್ಲಾ, ಯಾಸಿರ್, ತಬ್ರೆಷ್ ಬಂಧಿತ ಆರೋಪಿಗಳು.

ಇದನ್ನೂ ಓದಿ:

ಶಿವಮೊಗ್ಗ: ಅಕ್ರಮವಾಗಿ ಸಾಗಿಸುತ್ತಿದ್ದ 32 ಕೋಣಗಳ ರಕ್ಷಣೆ; ಮೂರು ಮಂದಿ ಹಾಗೂ ಲಾರಿ ವಶಕ್ಕೆ

ಐಪಿಎಲ್​ ಬೆಟ್ಟಿಂಗ್​ನಲ್ಲಿ ತೊಡಗಿದ್ದ ಇಬ್ಬರ ಬಂಧನ; 16 ಸಾವಿರ ನಗದು, 2 ಮೊಬೈಲ್ ಜಪ್ತಿ

Read Full Article

Click on your DTH Provider to Add TV9 Kannada