ಶಿವಮೊಗ್ಗ: ಅಕ್ರಮವಾಗಿ ಸಾಗಿಸುತ್ತಿದ್ದ 32 ಕೋಣಗಳ ರಕ್ಷಣೆ; ಮೂರು ಮಂದಿ ಹಾಗೂ ಲಾರಿ ವಶಕ್ಕೆ

Shivamogga News: ಕೋಣಗಳನ್ನು ತುಂಬಿದ ಲಾರಿಯು ಶಿವಮೊಗ್ಗ ಕಡೆಯಿಂದ ಹುಲಿಕಲ್ ಮಾರ್ಗವಾಗಿ ಉಡುಪಿ-ಮಂಗಳೂರು ಕಡೆಗೆ ಸಾಗುತ್ತಿತ್ತು ಎಂದು ತಿಳಿದುಬಂದಿದೆ.

ಶಿವಮೊಗ್ಗ: ಅಕ್ರಮವಾಗಿ ಸಾಗಿಸುತ್ತಿದ್ದ 32 ಕೋಣಗಳ ರಕ್ಷಣೆ; ಮೂರು ಮಂದಿ ಹಾಗೂ ಲಾರಿ ವಶಕ್ಕೆ
ಅಕ್ರಮವಾಗಿ ಸಾಗಿಸುತ್ತಿದ್ದ 32 ಕೋಣಗಳ ರಕ್ಷಣೆ

ಶಿವಮೊಗ್ಗ: ನಗರ ಪೊಲೀಸರ ಕಾರ್ಯಾಚರಣೆಯಲ್ಲಿ ಒಟ್ಟು 32 ಕೋಣಗಳ ರಕ್ಷಣೆ ಮಾಡಲಾಗಿದೆ. ಶಿವಮೊಗ್ಗದಿಂದ ಮಂಗಳೂರಿಗೆ ಅಕ್ರಮ ಸಾಗಾಟ ಮಾಡಲಾಗುತ್ತಿದ್ದ ಘಟನೆಯನ್ನು ಪತ್ತೆ ಹಚ್ಚಲಾಗಿದೆ. ಆ ಬಳಿಕ, ಕೃತ್ಯ ಎಸಗುತ್ತಿದ್ದದ್ದನ್ನು ಗಮನಿಸಿ 32 ಕೋಣಗಳನ್ನು ರಕ್ಷಣೆ ಮಾಡಲಾಗಿದೆ. ಸುಮಾರು 32 ಕೋಣಗಳನ್ನು ಕಂಟೇನರ್ ಲಾರಿಯಲ್ಲಿ ತುಂಬಿ ಹಿಂಸಾತ್ಮಕವಾಗಿ ಅಕ್ರಮವಾಗಿ ಕಳ್ಳ ಸಾಗಾಣೆ ಮಾಡಲಾಗುತ್ತಿತ್ತು. ಈ ಘಟನೆಯನ್ನು ಪತ್ತೆಹಚ್ಚಿ ಮೂವರನ್ನು ವಶಕ್ಕೆ ಪಡೆಯಲಾಗಿದೆ.

ಹೊಸನಗರ ತಾಲ್ಲೂಕಿನ ಹುಲಿಕಲ್ ಘಾಟಿಯ ಮೇಲಿನಪೇಟೆಯ ಹಳೆಯ‌ ಹೆಂಚಿನ ಕಾರ್ಖಾನೆ ಹತ್ತಿರದ ಭಾಸ್ಕರ್ ಶೆಟ್ಟಿಯವರ ಹೋಟೆಲ್ ಮುಂದಿನ ಟಾರ್ ರಸ್ತೆಯಲ್ಲಿ ನಗರ ಠಾಣೆ ಎಎಸ್ಐ ಬಿ.ಎಸ್. ಪಾಟೀಲ್ ಮತ್ತು ಸಿಬ್ಬಂದಿಗಳು ವೇಗವಾಗಿ ಬರುತ್ತಿದ್ದ ಅಶೋಕ ಲೇಲ್ಯಾಂಡ್ ಕಂಟೇನರ್ ಲಾರಿಯನ್ನು ತಡೆದು ನಿಲ್ಲಿಸಿದ್ದಾರೆ. ಆಗ ಅದರಲ್ಲಿ ಒಟ್ಟು 32 ಕೋಣಗಳು ಇರುವುದು ಪತ್ತೆಯಾಗಿದೆ. ಕೋಣಗಳ ಕಾಲು ಕಟ್ಟಿ ಹಿಂಸಾತ್ಮಕವಾಗಿ ಬೇಕಾಬಿಟ್ಟಿಯಾಗಿ ತುಂಬಲಾಗಿತ್ತು ಎನ್ನಲಾಗಿದೆ. ಕೋಣಗಳನ್ನು ತುಂಬಿದ ಲಾರಿಯು ಶಿವಮೊಗ್ಗ ಕಡೆಯಿಂದ ಹುಲಿಕಲ್ ಮಾರ್ಗವಾಗಿ ಉಡುಪಿ-ಮಂಗಳೂರು ಕಡೆಗೆ ಸಾಗುತ್ತಿತ್ತು ಎಂದು ತಿಳಿದುಬಂದಿದೆ.

ಈ ಘಟನೆಯಲ್ಲಿ ಚಾಲಕ ಇಮ್ರಾನ್, ಮಹಮ್ಮದ್ ಗೌಸ್ ಹಾಗೂ ಮೆಹಬೂಬ್ ಎಂಬುವವರನ್ನು ನಗರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಒಟ್ಟು 3,20,000 ರೂಪಾಯಿ ಮೌಲ್ಯದ 32 ಕೋಣಗಳನ್ನು ಹಾಗೂ ಕೃತ್ಯಕ್ಕೆ ಬಳಸಿದ 8 ಲಕ್ಷ ರೂಪಾಯಿ ಮೌಲ್ಯದ ಲಾರಿಯನ್ನು ವಶ ಪಡಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Crime News: ಸ್ವಿಫ್ಟ್ ಕಾರಿನಲ್ಲಿ ಗೋಮಾಂಸ ಸಾಗಾಟ ಮಾಡುತ್ತಿದ್ದ ಇಬ್ಬರ ಬಂಧನ

ಇದನ್ನೂ ಓದಿ: ಅಕ್ರಮ ದನದ ಮಾಂಸ ಸಂಸ್ಕರಿಸಿದ್ದ ಗೋದಾಮಿನ ಮೇಲೆ ದಾಳಿ, ಟನ್ ಗಟ್ಟಲೇ ಮಾಂಸ ಪತ್ತೆ ಮಾಡಿದ ಅಧಿಕಾರಿಗಳು

Click on your DTH Provider to Add TV9 Kannada