Crime News: ಸ್ವಿಫ್ಟ್ ಕಾರಿನಲ್ಲಿ ಗೋಮಾಂಸ ಸಾಗಾಟ ಮಾಡುತ್ತಿದ್ದ ಇಬ್ಬರ ಬಂಧನ
Crime News: ಹಾನಗಲ್ ಮೂಲದ ಮೌಲಾನಾ ತೋಟದ್ ಮತ್ತು ಮಂಜುನಾಥ್ ಓಲೇಕಾರ್ ಬಂಧಿತ ಆರೋಪಿಗಳಾಗಿದ್ದಾರೆ. ಮಾರುತಿ ಸ್ವಿಫ್ಟ್ ಕಾರಿನಲ್ಲಿ 170 ಕೆ.ಜಿ. ಮಾಂಸ ಸಾಗಾಟ ಮಾಡುತ್ತಿದ್ದರು ಎಂದು ಮಾಹಿತಿ ಲಭ್ಯವಾಗಿದೆ. ಹೊನ್ನಾವರ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಕಾರವಾರ: ಅಕ್ರಮವಾಗಿ ಗೋಮಾಂಸ ಸಾಗಾಟ ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸಲಾಗಿದೆ. ವಾಹನ ಸಮೇತ ಇಬ್ಬರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಉತ್ತರಕನ್ನಡ ಜಿಲ್ಲೆಯ ಹೊನ್ನಾವರದ ಗೇರುಸೊಪ್ಪ ಸರ್ಕಲ್ ಬಳಿ ಪೊಲೀಸರಿಂದ ದಾಳಿ ನಡೆಸಲಾಗಿದೆ. ಹಾನಗಲ್ನಿಂದ ಮುರುಡೇಶ್ವರ ಕಡೆ ಹೊರಟ ಆರೋಪಿಗಳು ಹೊನ್ನಾವರ ಗೇರುಸೊಪ್ಪ ಸರ್ಕಲ್ ಬಳಿಯಿಂದ ಪರಾರಿಯಾಗಲು ಯತ್ನಿಸಿದ್ದರು. ಬಳಿಕ ಹೊನ್ನಾವರ ಪಟ್ಟಣದಲ್ಲಿ ಸಿಕ್ಕಿಬಿದ್ದಿದ್ದಾರೆ. ಆರೋಪಿಗಳನ್ನು ಹಾನಗಲ್ ಮೂಲದವರು ಎಂದು ಹೇಳಲಾಗಿದೆ.
ಹಾನಗಲ್ ಮೂಲದ ಮೌಲಾನಾ ತೋಟದ್ ಮತ್ತು ಮಂಜುನಾಥ್ ಓಲೇಕಾರ್ ಬಂಧಿತ ಆರೋಪಿಗಳಾಗಿದ್ದಾರೆ. ಮಾರುತಿ ಸ್ವಿಫ್ಟ್ ಕಾರಿನಲ್ಲಿ 170 ಕೆ.ಜಿ. ಗೋಮಾಂಸ ಸಾಗಾಟ ಮಾಡುತ್ತಿದ್ದರು ಎಂದು ಮಾಹಿತಿ ಲಭ್ಯವಾಗಿದೆ. ಹೊನ್ನಾವರ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಬೆಂಗಳೂರು: ನಗರದಲ್ಲಿ ಹೆಚ್ಚಾದ ಪುಡಿ ರೌಡಿಗಳ ಉಪಟಳ ಬೆಂಗಳೂರು ನಗರದಲ್ಲಿ ಪುಡಿ ರೌಡಿಗಳ ಉಪಟಳ ಅಧಿಕವಾಗಿದೆ. ಇಂದು (ಆಗಸ್ಟ್ 29) ಮಾರಕಾಸ್ತ್ರಗಳನ್ನ ಹಿಡಿದು ಬಾರ್ಗೆ ನುಗ್ಗಿ ರೌಡಿಗಳು ಗಲಾಟೆ ನಡೆಸಿದ್ದಾರೆ. ಸುಬ್ರಹ್ಮಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಜೆ ಸುಮಾರು 7.30 ರ ಹೊತ್ತಿಗೆ ಪ್ರಕರಣ ನಡೆದಿದೆ. ಇಟ್ಟಮಡು ಬಳಿ ಎಸ್ಎಲ್ವಿ ಬಾರ್ಗೆ ನುಗ್ಗಿ ರೌಡಿಗಳು ಉಪಟಳ ನಡೆಸಿದ್ದಾರೆ. ಬಾರ್ಗೆ ನುಗ್ಗಿ ಗ್ಲಾಸ್ಗಳನ್ನ ಒಡೆದು ಹಾಕಿ ಪರಾರಿಯಾಗಿದ್ದಾರೆ.
ಪ್ಲಾಸ್ಟಿಕ್ ಗೋದಾಮಿನಲ್ಲಿ ಅಗ್ನಿ ಅವಘಡ ಬೆಂಗಳೂರಿನಲ್ಲಿ ಪ್ಲಾಸ್ಟಿಕ್ ಗೋದಾಮಿನಲ್ಲಿ ಅಗ್ನಿ ಅವಘಡ ಸಂಭವಿಸಿದ ಘಟನೆ ನಡೆದಿದೆ. ಹೊರಮಾವು ಬಳಿ ಇರುವ ರಾಜಣ್ಣ ಲೇಔಟ್ನಲ್ಲಿ ದುರ್ಘಟನೆ ಸಂಭವಿಸಿದ್ದು ಯಾವುದೇ ಪ್ರಾಣಾಪಾಯ ಆಗಿಲ್ಲ ಎಂದು ತಿಳಿದುಬಂದಿದೆ. ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಹೊತ್ತಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕಾಗಮಿಸಿ ಬೆಂಕಿ ನಂದಿಸಿದ್ದಾರೆ.
ಹಾವೇರಿ: ಮೀನು ಹಿಡಿಯಲು ನದಿಗೆ ಇಳಿದವರು ನೀರುಪಾಲು ಮೀನು ಹಿಡಿಯಲು ನದಿಗೆ ಇಳಿದಿದ್ದ ಯುವಕರು ನೀರುಪಾಲು ಆದ ಘಟನೆ ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಚೌಡಯ್ಯದಾನಪುರ ಬಳಿಯ ತುಂಗಭದ್ರಾ ನದಿಯಲ್ಲಿ ನಡೆದಿದೆ. ಫಕಿರೇಶ್ ಮಣ್ಣೂರ (23) ಮತ್ತು ಯಲ್ಲಪ್ಪ ಕುಂಬಾರ (34) ನೀರುಪಾಲು ಆದ ದುರ್ದೈವಿಗಳು. ನೀರುಪಾಲಾದವರು ಹಾವೇರಿ ತಾಲೂಕಿನ ಗುತ್ತಲ ನಿವಾಸಿಗಳು ಎಂದು ಗುರುತಿಸಲಾಗಿದೆ. ಇಬ್ಬರಿಗಾಗಿ ಪೊಲೀಸರು, ಅಗ್ನಿಶಾಮಕ ದಳದಿಂದ ಶೋಧಕಾರ್ಯ ನಡೆಸುತ್ತಿದ್ದಾರೆ. ರಾಣೆಬೆನ್ನೂರು ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಟ್ರಕ್‌ನಲ್ಲಿ ಸಾಗಿಸುತ್ತಿದ್ದ 3,400 ಕೆಜಿ ಗಾಂಜಾ ಜಪ್ತಿ; 21 ಕೋಟಿ ರೂ. ಮೌಲ್ಯದ ಅಮಲು ಪದಾರ್ಥ ವಶಕ್ಕೆ
ಸಿಂದಗಿ ಅತ್ಯಾಚಾರ ಆರೋಪಿ ಪೊಲೀಸ್ ಠಾಣೆಯಲ್ಲಿ ನೇಣು ಪ್ರಕರಣ ಸಿಐಡಿ ತನಿಖೆಗೆ: ಗೃಹ ಸಚಿವ ಆರಗ ಜ್ಞಾನೇಂದ್ರ