AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟ್ರಕ್‌ನಲ್ಲಿ ಸಾಗಿಸುತ್ತಿದ್ದ 3,400 ಕೆಜಿ ಗಾಂಜಾ ಜಪ್ತಿ; 21 ಕೋಟಿ ರೂ. ಮೌಲ್ಯದ ಅಮಲು ಪದಾರ್ಥ ವಶಕ್ಕೆ

ಬರೋಬ್ಬರಿ 141 ಗೋಣಿ ಚೀಲಗಳಲ್ಲಿ ಹೈಟೆಕ್ ಗಾಂಜಾ ತುಂಬಿಸಿಡಲಾಗಿತ್ತು. ಮಹಾರಾಷ್ಟ್ರ ನೊಂದಣಿಯ ಟ್ರಕ್​ನಲ್ಲಿ ಗಾಂಜಾ ಸಾಗಿಸಾಗುತ್ತಿತ್ತು. ವಿವಿಧ ರಾಜ್ಯಗಳ ಪಾರ್ಟಿಗಳು, ಕಾಲೇಜು ವಿದ್ಯಾರ್ಥಿಗಳಿಗೆ ಸರಬರಾಜು ಮಾಡಲು ಉದ್ದೇಶಿಸಲಾಗಿತ್ತು ಎಂದು ಮಾಹಿತಿ ಲಭ್ಯವಾಗಿದೆ.

ಟ್ರಕ್‌ನಲ್ಲಿ ಸಾಗಿಸುತ್ತಿದ್ದ 3,400 ಕೆಜಿ ಗಾಂಜಾ ಜಪ್ತಿ; 21 ಕೋಟಿ ರೂ. ಮೌಲ್ಯದ ಅಮಲು ಪದಾರ್ಥ ವಶಕ್ಕೆ
ಗಾಂಜಾ (ಸಾಂದರ್ಭಿಕ ಚಿತ್ರ)
TV9 Web
| Edited By: |

Updated on:Aug 29, 2021 | 4:00 PM

Share

ಬೆಂಗಳೂರು: ಟ್ರಕ್‌ನಲ್ಲಿ ಸಾಗಿಸುತ್ತಿದ್ದ ಬರೋಬ್ಬರಿ 3,400 ಕೆಜಿ ಗಾಂಜಾ ಜಪ್ತಿ ಮಾಡಲಾಗಿದೆ. ಸುಮಾರು 21 ಕೋಟಿ ರೂಪಾಯಿ ಮೌಲ್ಯದ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಹೈದರಾಬಾದ್‌ನ ರಿಂಗ್ ರಸ್ತೆಯಲ್ಲಿ ಗಾಂಜಾ ಸೀಜ್ ಮಾಡಲಾಗಿದ್ದು, ಎನ್‌ಸಿಬಿ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಬೆಂಗಳೂರು, ಹೈದರಾಬಾದ್ ಎನ್‌ಸಿಬಿ ಅಧಿಕಾರಿಗಳು ನಡೆಸಿದ ಕಾರ್ಯಾಚಾರಣೆಯಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದ ಅಮಲು ಪದಾರ್ಥ ವಶಪಡಿಸಿಕೊಳ್ಳಲಾಗಿದೆ.

ಬರೋಬ್ಬರಿ 141 ಗೋಣಿ ಚೀಲಗಳಲ್ಲಿ ಹೈಟೆಕ್ ಗಾಂಜಾ ತುಂಬಿಸಿಡಲಾಗಿತ್ತು. ಮಹಾರಾಷ್ಟ್ರ ನೊಂದಣಿಯ ಟ್ರಕ್​ನಲ್ಲಿ ಗಾಂಜಾ ಸಾಗಿಸಾಗುತ್ತಿತ್ತು. ವಿವಿಧ ರಾಜ್ಯಗಳ ಪಾರ್ಟಿಗಳು, ಕಾಲೇಜು ವಿದ್ಯಾರ್ಥಿಗಳಿಗೆ ಸರಬರಾಜು ಮಾಡಲು ಉದ್ದೇಶಿಸಲಾಗಿತ್ತು ಎಂದು ಮಾಹಿತಿ ಲಭ್ಯವಾಗಿದೆ. ಹೈದರಾಬಾದ್ ರಿಂಗ್ ರೋಡ್ ಟೋಲ್ ಪ್ಲಾಜಾ ಬಳಿ ದಾಳಿ ನಡೆಸಿದ್ದ ಎನ್‌.ಸಿ.ಬಿ ತಂಡ ಬೃಹತ್ ಪ್ರಮಾಣದ ಗಾಂಜಾ ವಶಪಡಿಸಿಕೊಂಡಿದೆ. ಟ್ರಕ್​ನಲ್ಲಿದ್ದ ಮೂವರು ಆರೋಪಿಗಳ ಸಹಿತ ಗಾಂಜಾ ಜಫ್ತಿ ಮಾಡಲಾಗಿದೆ. ಮಹಾರಾಷ್ಟ್ರ ಮೂಲದ ಕಿಂಗ್ ಪಿನ್​ಗಾಗಿ ಶೋಧಕಾರ್ಯ ಮುಂದುವರಿದಿದೆ. ಶಿಂಧೆ, ಕಾಂಬ್ಲೇ, ಜೋಗ್ದಂದ್ ಎಂಬ ಮೂವರನ್ನು ಸದ್ಯ ಬಂಧಿಸಲಾಗಿದೆ.

ಬೆಂಗಳೂರಿನಲ್ಲಿ ಅಪ್ರಾಪ್ತೆಗೆ ಕಿರುಕುಳ ನೀಡಿದ್ದ ಯುವಕನ ಬಂಧನ ಬೆಂಗಳೂರಿನಲ್ಲಿ ಅಪ್ರಾಪ್ತೆಗೆ ಕಿರುಕುಳ ನೀಡುವ ವಿಡಿಯೋ ವೈರಲ್ ಆಗಿತ್ತು. ಇದೀಗ ಅಪ್ರಾಪ್ತೆಗೆ ಕಿರುಕುಳ ನೀಡಿದ್ದ ಯುವಕನನ್ನು ಬಂಧಿಸಲಾಗಿದೆ. ಪೀಣ್ಯ ಪೊಲೀಸರು ಪ್ರಕರಣ ದಾಖಲಿಸಿ ಆರೋಪಿಯನ್ನ ಬಂಧಿಸಿದ್ದಾರೆ. ಅಪ್ರಾಪ್ತ ಬಾಲಕಿ ವಾಸಿಸುವ ಏರಿಯಾದಲ್ಲೇ ಇದ್ದ ಆಟೋ ಚಾಲಕನ ಸೆರೆಯಾಗಿದೆ.

ಚಿಕ್ಕಬಳ್ಳಾಪುರ: ಶ್ರೀನಿವಾಸ ಸಾಗರದಲ್ಲಿ ಕೊರೊನಾ ನಿಯಮ ಮರೆತು ಜನರ ಮೋಜು ಮಸ್ತಿ ಚಿಕ್ಕಬಳ್ಳಾಪುರ ತಾಲೂಕಿನ ಶ್ರೀನಿವಾಸ ಸಾಗರದಲ್ಲಿ ಜನರು ಕೊವಿಡ್ ನಿಯಮ ಉಲ್ಲಂಘನೆ ಮಾಡಿರುವುದು ಕಂಡುಬಂದಿದೆ. ಪ್ರವಾಸಿಗರು ಕೊವಿಡ್ ನಿಯಮ ಉಲ್ಲಂಘಿಸಿ ಫಾಲ್ಸ್‌ನಲ್ಲಿ ಮೋಜುಮಸ್ತಿ ಮಾಡಿದ್ದಾರೆ. ಮಾಸ್ಕ್, ದೈಹಿಕ ಅಂತರ ಸಂಪೂರ್ಣ ಮಾಯವಾಗಿದೆ. ಶ್ರೀನಿವಾಸ ಸಾಗರ ಜಲಾಶಯ ಪ್ರವಾಸಿಗರ ಮನ ಸೆಳೆಯುತ್ತಿದೆ. ಹೀಗಾಗಿ ಜಲಾಶಯದ ನೀರು ನೋಡಲು ಸಾವಿರಾರು ಜನರ ಆಗಮಿಸುತ್ತಿದ್ದಾರೆ. 80 ಅಡಿಗಳ ಮೇಲಿನಿಂದ ನೀರು ಹರಿಯುತ್ತಿರುವ ಹಿನ್ನಲೆ, ಮೇಲಿನಿಂದ ಧುಮುಕುವ ನೀರಿನಲ್ಲಿ ಜನರು ಮಿಂದು ಸಂಭ್ರಮಿಸುತ್ತಿದ್ದಾರೆ. ಆದರೆ, ಈ ವೇಳೆ ಕೊರೊನಾ ನಿಯಮಗಳನ್ನು ‌ಗಾಳಿಗೆ ತೂರಿದ್ದಾರೆ. ದೈಹಿಕ ಅಂತರ. ಮಾಸ್ಕ್ ಧರಿಸದೆ ನೀರಿನಲ್ಲಿ ಆಟವಾಡುತ್ತಿದ್ದಾರೆ. ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ.

ಇದನ್ನೂ ಓದಿ: ಶಿವಮೊಗ್ಗ: ಅರಣ್ಯ ಇಲಾಖೆ ಅಧಿಕಾರಿಗಳ ಭರ್ಜರಿ ಬೇಟೆ; 7 ಲಕ್ಷ ರೂಪಾಯಿ ಮೌಲ್ಯದ ಶ್ರೀಗಂಧ ವಶ

Afghanistan: ತಾಲಿಬಾನ್ ವಶದಲ್ಲಿದೆ ಆಧುನಿಕ ಶಸ್ತ್ರಾಸ್ತ್ರಗಳು; ಅವುಗಳು ಯಾವುವು? ಬಳಕೆ ಹೇಗೆ? ಭಾರತಕ್ಕೆ ಏನು ಹಾನಿ?

Published On - 3:48 pm, Sun, 29 August 21

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ