AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Crime News: ಕಾರಿಗೆ ಮೂತ್ರ ಮಾಡಿದ ನಾಯಿಯನ್ನು ಕಟ್ಟಿ ಹಾಕಿ ಎಂದವನಿಗೆ ಹಿಗ್ಗಾಮುಗ್ಗ ಥಳಿಸಿದ ಮಾಲೀಕರು!

ಕಾರಿಗೆ ಮೇಲೆ ಮೂತ್ರ ವಿಸರ್ಜನೆ ಮಾಡಿದ ನಾಯಿಯನ್ನು ನೋಡಿ ಕೋಪಗೊಂಡ 32 ವರ್ಷದ ವ್ಯಕ್ತಿ ಪಕ್ಕದ ಮನೆಯ ಬಾಗಿಲಿಗೆ ಹೋಗಿ ನಿಮ್ಮ ಮನೆಯ ನಾಯಿಯನ್ನು ಮನೆಯೊಳಗೆ ಕಟ್ಟಿಕೊಳ್ಳಿ ಎಂದು ಹೇಳಿದ್ದ.

Crime News: ಕಾರಿಗೆ ಮೂತ್ರ ಮಾಡಿದ ನಾಯಿಯನ್ನು ಕಟ್ಟಿ ಹಾಕಿ ಎಂದವನಿಗೆ ಹಿಗ್ಗಾಮುಗ್ಗ ಥಳಿಸಿದ ಮಾಲೀಕರು!
ಸಾಂದರ್ಭಿಕ ಚಿತ್ರ
TV9 Web
| Updated By: ಸುಷ್ಮಾ ಚಕ್ರೆ|

Updated on: Aug 28, 2021 | 9:23 PM

Share

ಅಹಮದಾಬಾದ್: ಕೆಲವೊಮ್ಮೆ ಸಣ್ಣಪುಟ್ಟ ಘಟನೆಗಳೇ ದೊಡ್ಡ ಗಲಾಟೆಯಾಗಿ ಬಿಡುತ್ತವೆ. ಅಕ್ಕಪಕ್ಕದ ಮನೆಗಳೆಂದ ಮೇಲೆ ಆಗಾಗ ಜಗಳಗಳು ಇದ್ದೇ ಇರುತ್ತವೆ. ಆದರೆ, ಅಹಮದಾಬಾದ್​ನಲ್ಲಿ ನಾಯಿಯ ವಿಚಾರಕ್ಕೆ ದೊಡ್ಡ ಜಗಳವೇ ನಡೆದು, ವ್ಯಕ್ತಿಯೊಬ್ಬನನ್ನು ರಸ್ತೆಯಲ್ಲಿ ಕೆಡವಿ ಥಳಿಸಲಾಗಿದೆ. ಪಕ್ಕದ ಮನೆಯ ನಾಯಿಯೊಂದು ಹೊರಗೆ ನಿಲ್ಲಿಸಿದ್ದ ತನ್ನ ಕಾರಿನ ಚಕ್ರಕ್ಕೆ ಮೂತ್ರ ಮಾಡಿತು ಎಂಬ ಕಾರಣಕ್ಕೆ ಆ ನಾಯಿಯ ಮಾಲೀಕರಿಗೆ ನಾಯಿಯನ್ನು ಮನೆಯೊಳಗೆ ಕಟ್ಟಿಕೊಳ್ಳಲು ಹೇಳಿದ್ದೇ ದೊಡ್ಡ ತಪ್ಪಾಗಿದೆ.

ಕಾರಿಗೆ ಮೇಲೆ ಮೂತ್ರ ವಿಸರ್ಜನೆ ಮಾಡಿದ ನಾಯಿಯನ್ನು ನೋಡಿ ಕೋಪಗೊಂಡ 32 ವರ್ಷದ ವ್ಯಕ್ತಿ ಪಕ್ಕದ ಮನೆಯ ಬಾಗಿಲಿಗೆ ಹೋಗಿ ನಿಮ್ಮ ಮನೆಯ ನಾಯಿಯನ್ನು ಮನೆಯೊಳಗೆ ಕಟ್ಟಿಕೊಳ್ಳಿ ಎಂದು ಹೇಳಿದ್ದ. ಇದರಿಂದ ಕೋಪಗೊಂಡ ನೆರೆ ಮನೆಯವರು ನಮ್ಮ ನಾಯಿಗೆ ಹೊಡೆಯಲು ನೀನು ಯಾರು? ಎಂದು ಆತನಿಗೆ ಮನಬಂದಂತೆ ಥಳಿಸಿ, ರಸ್ತೆಯಲ್ಲಿ ಕೆಡವಿ ಹಲ್ಲೆ ನಡೆಸಿದ್ದಾರೆ. ಪಕ್ಕದ ಮನೆಯ ತಂದೆ-ಮಗನ ವಿರುದ್ಧ ಚಾಂದ್​​ಖೇಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

32 ವರ್ಷದ ಕರ್ನೇಲ್ ಕಟೋಚ್ ಎಂಬುವವರು ಕಾರನ್ನು ತೊಳೆದು ಮನೆಯಿಂದ ಹೊರಗೆ ನಿಲ್ಲಿಸಿದ್ದರು. ಆ ವೇಳೆ ಪಕ್ಕದ ಮನೆಯ ನಾಯಿ ಬಂದು ಕಾರಿಗೆ ಮೂತ್ರ ಮಾಡಿದೆ. ಇದರಿಂದ ಕೋಪಗೊಂಡು ಕಟೋಚ್ ಪಕ್ಕದ ಮನೆಗೆ ಹೋಗಿ ನಾಯಿಯ ಮಾಲೀಕರಿಗೆ ಜೋರು ಮಾಡಿದ್ದಾರೆ. ಇದರಿಂದ ಪಕ್ಕದ ಮನೆಯ ಚಿರಾಗ್ ಮಲ್ಹೋತ್ರ ಮತ್ತು ಸನ್ನಿ ಮಲ್ಹೋತ್ರ ಆತನನ್ನು ಥಳಿಸಿದ್ದಾರೆ.

ಆ ಹೌಸಿಂಗ್ ಸೊಸೈಟಿಯಲ್ಲಿ ವಾಸಿಸುತ್ತಿರುವ ಅನೇಕರು ಚಿರಾಗ್​ನ ಮನೆಯ ನಾಯಿಯ ಬಗ್ಗೆ ಹಲವು ಬಾರಿ ದೂರಿದ್ದರೂ ಅವರು ನಾಯಿಯನ್ನು ಬೇಕಾಬಿಟ್ಟಿ ಹೊರಗೆ ಓಡಾಡಲು ಬಿಟ್ಟು ಬೇರೆಯವರಿಗೆ ಹಿಂಸೆ ನೀಡುತ್ತಿದ್ದರು ಎನ್ನಲಾಗಿದೆ. ನಾಯಿ ಮೂತ್ರ ಮಾಡಿ ಕಾರನ್ನು ಗಲೀಜು ಮಾಡಿದ್ದನ್ನು ಪ್ರಶ್ನಿಸಿದ್ದಕ್ಕೆ ಕಟೋಚ್ ತಲೆಗೆ ಹೊಡೆದು, ಹಲ್ಲೆ ಮಾಡಿದ್ದಾರೆ.

ಇದನ್ನೂ ಓದಿ: Crime News: ಅಕ್ರಮ ಸಂಬಂಧದ ಶಂಕೆ; ಹೆಂಡತಿಯ ಗುಪ್ತಾಂಗಕ್ಕೆ ಹೊಲಿಗೆ ಹಾಕಿ ಮುಚ್ಚಿದ ಪತಿರಾಯ!

Crime News: ತ್ರಿಶೂಲದಿಂದ ಇರಿದು ಅರ್ಚಕನ ಬರ್ಬರ ಹತ್ಯೆ; ದೇವಸ್ಥಾನದಲ್ಲಿ ಅರೆ ಸುಟ್ಟ ಶವ ಪತ್ತೆ

(Crime News: Ahmedabad Man brutally thrashed by Neighbours after he Argued to dog peeing on car)