Afghanistan: ತಾಲಿಬಾನ್ ವಶದಲ್ಲಿದೆ ಆಧುನಿಕ ಶಸ್ತ್ರಾಸ್ತ್ರಗಳು; ಅವುಗಳು ಯಾವುವು? ಬಳಕೆ ಹೇಗೆ? ಭಾರತಕ್ಕೆ ಏನು ಹಾನಿ?

TV9 Kannada Digital Exclusive: ತಾಲಿಬಾನ್ ಉಗ್ರರ ವಶವಾಗಿರುವ ಶಸ್ತ್ರಾಸ್ತ್ರಗಳು ಯಾವ್ಯಾವು? ಅವುಗಳನ್ನ ಯಾವ ಯಾವ ಉದ್ದೇಶಕ್ಕೆ ಬಳಸಬಹುದು? ಈ ಶಸ್ತ್ರಾಸ್ತ್ರಗಳಿಂದ ಭಾರತದ ಭದ್ರತೆಗೆ ಇರುವ ಅಪಾಯಗಳೇನು? ಎನ್ನುವುದರ ವಿವರ ಇಲ್ಲಿದೆ.

Afghanistan: ತಾಲಿಬಾನ್ ವಶದಲ್ಲಿದೆ ಆಧುನಿಕ ಶಸ್ತ್ರಾಸ್ತ್ರಗಳು; ಅವುಗಳು ಯಾವುವು? ಬಳಕೆ ಹೇಗೆ? ಭಾರತಕ್ಕೆ ಏನು ಹಾನಿ?
ಪ್ರಾತಿನಿಧಿಕ ಚಿತ್ರ
Follow us
S Chandramohan
| Updated By: ganapathi bhat

Updated on: Aug 28, 2021 | 6:03 PM

ಅಮೆರಿಕಾ ಹಾಗೂ ನ್ಯಾಟೋ ಪಡೆಗಳು ಆಗಸ್ಟ್ 31 ರ ಒಳಗೆ ಅಫ್ಘಾನಿಸ್ತಾನ ದೇಶವನ್ನು ಖಾಲಿ ಮಾಡಿ ಹೋಗುತ್ತಿವೆ. ಅಮೆರಿಕಾ ಮಿಲಿಟರಿಯು ಅಫ್ಘಾನಿಸ್ತಾನದ ಮಿಲಿಟರಿಗೆ ನೀಡಿದ್ದ ಅತ್ಯಾಧುನಿಕ ಶಸ್ತ್ರಾಸ್ತ್ರಗಳು ಈಗ ತಾಲಿಬಾನ್ ವಶವಾಗಿವೆ. ಹೆಲಿಕಾಪ್ಟರ್​ನಿಂದ ಹಿಡಿದು ಯುದ್ಧ ವಿಮಾನಗಳು, ಲೇಸರ್ ಗೈಡೆಡ್ ಬಾಂಬ್​ಗಳು, ಯುದ್ಧ ಟ್ಯಾಂಕ್​ಗಳು, ಆರ್ಟಿಲರಿ ಗನ್​ಗಳು ಸೇರಿದಂತೆ ಎಲ್ಲವೂ ಈಗ ತಾಲಿಬಾನ್ ವಶವಾಗಿವೆ. ಈಗ ತಾಲಿಬಾನ್ ಬತ್ತಳಿಕೆಗೆ ಸೇರಿರುವ ಅತ್ಯಾಧುನಿಕ ಶಸ್ತ್ರಾಸ್ತ್ರಗಳು ಯಾವ್ಯಾವು, ಅವುಗಳನ್ನು ಯಾವ್ಯಾವ ಉದ್ದೇಶಕ್ಕೆ ಬಳಕೆ ಮಾಡಬಹುದು ಎನ್ನುವುದರ ಸಂಪೂರ್ಣ ವಿವರ ಇಲ್ಲಿದೆ.

ಅಫ್ಘಾನಿಸ್ತಾನದಿಂದ ಆಮೆರಿಕಾ ತನ್ನ ಸೇನೆಯನ್ನು ಹಿಂದಕ್ಕೆ ಕರೆಸಿಕೊಂಡಿದೆ. ಆದರೆ, ಕಳೆದ 20 ವರ್ಷಗಳಿಂದ ಅಫ್ಘಾನಿಸ್ತಾನದಲ್ಲಿ ತಾನು ಬಳಸುತ್ತಿದ್ದ ಶಸ್ತ್ರಾಸ್ತ್ರಗಳನ್ನು ಅಫ್ಘಾನಿಸ್ತಾನದ ಸೇನೆಗೆ ಉಡುಗೊರೆ ರೂಪದಲ್ಲಿ ನೀಡಿ ಆಮೆರಿಕಾ ವಾಪಸ್ ಹೋಗಿತ್ತು. ಆದರೆ, ದುರಾದೃಷ್ಟವಶಾತ್ ಅಫ್ಘಾನಿಸ್ತಾನ ಸೇನೆಗೆ ತಾಲಿಬಾನ್ ಭಯೋತ್ಪಾದನಾ ಸಂಘಟನೆಯನ್ನು ಹಿಮ್ಮೆಟ್ಟಿಸಲು ಸಾಧ್ಯವಾಗಿಲ್ಲ. ಅಫ್ಘನ್ ಸೇನೆ ತಾಲಿಬಾನ್ ವಿರುದ್ಧ ಸೋತು ಶರಣಾಗಿದೆ. ಅಫ್ಘಾನಿಸ್ತಾನದಲ್ಲಿ ಆಮೆರಿಕಾ ಬಿಟ್ಟು ಹೋಗಿರುವ ಶಸ್ತ್ರಾಸ್ತ್ರ, ಯುದ್ಧ ಟ್ಯಾಂಕ್, ಅತ್ಯಾಧುನಿಕ ಹೆಲಿಕಾಪ್ಟರ್​ಗಳು, ವಿಮಾನಗಳು ಸೇರಿದಂತೆ ಎಲ್ಲವೂ ಈಗ ತಾಲಿಬಾನ್ ಉಗ್ರಗಾಮಿ ಸಂಘಟನೆಯ ವಶವಾಗಿವೆ. ಹೀಗೆ ತಾಲಿಬಾನ್ ಉಗ್ರರ ವಶವಾಗಿರುವ ಶಸ್ತ್ರಾಸ್ತ್ರಗಳು ಯಾವ್ಯಾವು? ಅವುಗಳನ್ನ ಯಾವ ಯಾವ ಉದ್ದೇಶಕ್ಕೆ ಬಳಸಬಹುದು? ಈ ಶಸ್ತ್ರಾಸ್ತ್ರಗಳಿಂದ ಭಾರತದ ಭದ್ರತೆಗೆ ಇರುವ ಅಪಾಯಗಳೇನು? ಎನ್ನುವುದರ ವಿವರ ಇಲ್ಲಿದೆ. ಮೊದಲಿಗೆ ತಾಲಿಬಾನ್ ಬತ್ತಳಿಕೆ ಸೇರಿರುವ ಆಮೆರಿಕಾದ ಶಸ್ತ್ರಾಸ್ತ್ರಗಳ ವಿವರ ಇಲ್ಲಿ ನೀಡಲಾಗಿದೆ.

ಅಮೆರಿಕಾ ಬಿಟ್ಟು ಹೋದ ಶಸ್ತ್ರಾಸ್ತ್ರ ಈಗ ತಾಲಿಬಾನ್ ಬತ್ತಳಿಕೆಗೆ 1- ಲೈಟ್ ಅಟ್ಯಾಕ್ ವಿಮಾನಗಳು, ಇವುಗಳು EMB-314 ಟೈಪ್‌ನ ಸೂಪರ್ ಟುಕನೋ ವಿಮಾನಗಳು. ಈ ವಿಮಾನಗಳನ್ನು ಬಳಸಿ ಕಡಿಮೆ ಎತ್ತರದ ಏರ್ ಸ್ಟ್ರೈಕ್ ಮಾಡಬಹುದು. 2- ಲೇಸರ್ ಗೈಡೆಡ್ ಬಾಂಬ್ ಗಳು. ಇವುಗಳನ್ನು ಶತ್ರುಗಳ ಮೇಲೆ ದಾಳಿಗೆ ಬಳಕೆ ಮಾಡಲಾಗುತ್ತೆ. 3- 6 ಹೆವಿ ಅಟ್ಯಾಕ್ ಹೆಲಿಕಾಪ್ಟರ್ ಗಳು, MI-24 ಹೆಲಿಕಾಪ್ಟರ್ ಗಳು. ಈ ಹೆಲಿಕಾಪ್ಟರ್ ಬಳಸಿ ಕಡಿಮೆ ಎತ್ತರದ ಅಟ್ಯಾಕ್ ಮಾಡಬಹುದು. ಈ ಹೆಲಿಕಾಪ್ಟರ್ ಗಳನ್ನ ಭಾರತವು ಅಫ್ಘಾನಿಸ್ತಾನದ ಸೇನೆಗೆ ಗಿಫ್ಟ್ ರೂಪದಲ್ಲಿ ನೀಡಿತ್ತು. ಆದರೆ, ಈಗ ಈ ಹೆಲಿಕಾಪ್ಟರ್ ಗಳು ತಾಲಿಬಾನ್ ಬತ್ತಳಿಕೆ ಸೇರಿವೆ. 4- 11 ಲೈಟ್ ಅಟ್ಯಾಕ್ ಹೆಲಿಕಾಪ್ಟರ್ ಗಳು. MD-530F ಮಾಡೆಲ್ ಹೆಲಿಕಾಪ್ಟರ್ ಗಳು. ಈ ಹೆಲಿಕಾಪ್ಟರ್ ಬಳಸಿ ಸ್ಪೆಷಲ್ ಅಪರೇಷನ್ ಅಟ್ಯಾಕ್ ಮಾಡಬಹುದು. ಇವು ಆಮೆರಿಕಾದ ಹೆಲಿಕಾಪ್ಟರ್ ಗಳು. 5- ಆಮೆರಿಕಾದ 35 ಯುದ್ದ ಹೆಲಿಕಾಪ್ಟರ್ ಗಳು. UH-60 ಬ್ಲಾಕ್ ಹ್ಯಾಕ್ ಹೆಲಿಕಾಪ್ಟರ್ ಗಳು. ಸೈನಿಕರ ಸಾಗಾಟ, ಸ್ಪೆಷಲ್ ಆಪರೇಷನ್ ಗೆ ಈ ಹೆಲಿಕಾಪ್ಟರ್ ಗಳ ಬಳಕೆ ಮಾಡಲಾಗುತ್ತೆ. ತಾಲಿಬಾನ್ ಸಂಘಟನೆ ಬಳಿ ಈ ಹೆಲಿಕಾಪ್ಟರ್ ಹಾರಿಸುವ ಪೈಲಟ್ ಗಳೇ ಇಲ್ಲ. ಹೀಗಾಗಿ ಬ್ಲಾಕ್ ಹಾಕ್ ಹೆಲಿಕಾಪ್ಟರ್ ಗಳನ್ನು ನೆಲದಲ್ಲೇ ಹಾರಾಟ ನಡೆಸಿ, ಪೈಲಟ್ ತರಬೇತಿ ಪಡೆಯುತ್ತಿರುವ ವಿಡಿಯೋ ಬಿಡುಗಡೆಯಾಗಿತ್ತು. 6- ರಷ್ಯಾದ 76 ಯುಟಿಲಿಟಿ ಹೆಲಿಕಾಪ್ಟರ್ ಗಳು. MI-17 ಹೆಲಿಕಾಪ್ಟರ್ ಗಳು. ಮಲ್ಟಿ ಮಿಷನ್ ಗೆ ಈ ಹೆಲಿಕಾಪ್ಟರ್ ಗಳನ್ನು ಬಳಕೆ ಮಾಡಲಾಗುತ್ತೆ. ಬಹಳ ಕಠಿಣ ಪರಿಸ್ಥಿತಿಯಲ್ಲಿ ಈ ಹೆಲಿಕಾಪ್ಟರ್ ಬಳಕೆ ಮಾಡಬಹುದು. 7- ಸ್ಪೆಷಲ್ ಮಿಷನ್ ನ 12 ಏರ್ ಕ್ರಾಫ್ಟ್ ಗಳು. ಇಂಟಲಿಜೆನ್ಸ್ ಮಾಹಿತಿ ಸಂಗ್ರಹಿಸಲು ಈ ಹೆಲಿಕಾಪ್ಟರ್ ಗಳನ್ನು ಬಳಕೆ ಮಾಡಲಾಗುತ್ತೆ. 8- ಮಧ್ಯಮ ಗಾತ್ರದ 4 ಸರಕು ಸಾಗಾಟದ ವಿಮಾನ, ಸಿ-130ಜೆ ಹರ್ಕ್ಯುಲಸ್ ವಿಮಾನಗಳು. ಇವುಗಳನ್ನ ಸೈನಿಕರು ಹಾಗೂ ಸರಕು ಸಾಗಾಟಕ್ಕೆ ಬಳಸಲಾಗುತ್ತೆ 9- ಸೆಸ್ನಾ ಕಂಬ್ಯಾಟ್ ಕಾರವಾನ್ ಐದು ಇಂಟಲಿಜೆನ್ಸ್ ವಿಮಾನಗಳು. ಇವುಗಳನ್ನು ಅಡ್ವಾನ್ಸ್ ಇಂಟಲಿಜೆನ್ಸ್ ಮಾಹಿತಿ ಸಂಗ್ರಹಕ್ಕೆ ಬಳಕೆ ಮಾಡಲಾಗುತ್ತೆ. 10- ಬರೋಬ್ಬರಿ 44 ಯುದ್ಧ ಟ್ಯಾಂಕ್ ಗಳು ತಾಲಿಬಾನ್ ವಶವಾಗಿವೆ. ಟಿ-62, ಟಿ-55 ಯುದ್ಧ ಟ್ಯಾಂಕ್ ಗಳು ಈಗ ತಾಲಿಬಾನ್ ವಶವಾಗಿವೆ. 11- ಅಫ್ಘನ್ ಸೇನೆ, ಆಮೆರಿಕಾ ಸೇನೆಯಲ್ಲಿದ್ದ 1,013 ಮಿಲಿಟರಿ ವಾಹನಗಳು ಈಗ ತಾಲಿಬಾನ್ ವಶವಾಗಿವೆ. ಹಮ್ ವೀ, ಇತರೆ ವಾಹನಗಳು ಈಗ ತಾಲಿಬಾನ್ ವಶವಾಗಿವೆ. ಹಮ್ ವೀ ವಾಹನಗಳು ನೆಲಬಾಂಬ್ ಸ್ಪೋಟದಿಂದ ರಕ್ಷಣೆ ನೀಡುತ್ತಾವೆ. 12- ಬರೋಬ್ಬರಿ 775 ಆರ್ಟಿಲರಿ ಗನ್ ಗಳು ಈಗ ತಾಲಿಬಾನ್ ಬತ್ತಳಿಕೆ ಸೇರಿವೆ. M114A1 ಮಾಡೆಲ್ ಆರ್ಟಿಲರಿ ಗನ್ ಗಳು ತಾಲಿಬಾನ್ ವಶವಾಗಿವೆ. 13- ಆರು ಲಕ್ಷಕ್ಕೂ ಹೆಚ್ಚು ಸಣ್ಣ ಶಸ್ತ್ರಾಸ್ತ್ರಗಳು ತಾಲಿಬಾನ್ ವಶವಾಗಿವೆ. M-16, M249 SAW, ಎಂ-4, M24 ಸ್ನೈಪರ್ ಸಿಸ್ಟಮ್ , 50 ಕ್ಯಾಲಿಬರ್ಸ್ ತಾಲಿಬಾನ್ ವಶವಾಗಿವೆ. 14- ಬರೋಬ್ಬರಿ 1,394 M 203 ಮಾಡೆಲ್ ಗ್ರೇನೇಡ್ ಲಾಂಚರ್ ಗಳು ತಾಲಿಬಾನ್ ಬತ್ತಳಿಕೆ ಸೇರಿವೆ. 15- 20 ಎಂಎಂ ಗನ್ , ಶಸ್ತ್ರಾಸ್ತ್ರ ತಾಲಿಬಾನ್ ವಶವಾಗಿವೆ. 16- ಬರೋಬ್ಬರಿ 61 ಸಾವಿರ M203 ರೌಂಡ್, 20,040 ಗ್ರೇನೇಡ್ ಗಳು ತಾಲಿಬಾನ್ ವಶವಾಗಿವೆ. 17- ಹೌಟ್ಜಿರ್ ಗನ್ ಗಳು ತಾಲಿಬಾನ್ ಬಳಿ ಇವೆ 18- ಒಂದು ಸಾವಿರಕ್ಕೂ ಹೆಚ್ಚು ರೌಂಡ್ಸ್ ಮೋರ್ಟಾರ್ ಶೆಲ್ ಗಳು ತಾಲಿಬಾನ್ ಬಳಿ ಇವೆ. 19- ಬರೋಬ್ಬರಿ 16 ಸಾವಿರಕ್ಕೂ ಹೆಚ್ಚು ನೈಟ್ ವಿಷನ್ ಕನ್ನಡಕಗಳು ಈಗ ತಾಲಿಬಾನ್ ಬತ್ತಳಿಕೆ ಸೇರಿವೆ. ಇವುಗಳನ್ನ ಬಳಸಿ ರಾತ್ರಿ ವೇಳೆಯೂ ತಾಲಿಬಾನ್ ಉಗ್ರರು ದಾಳಿ ನಡೆಸಬಹುದು. 20- ಏರ್ ಟು ಗ್ರೌಂಡ್ ರಾಕೆಟ್ ಗಳು, 2,520 ಬಾಂಬ್ ಗಳು ತಾಲಿಬಾನ್ ವಶದಲ್ಲಿವೆ. 21- ಸ್ಕ್ಯಾನ್ ಈಗಲ್ ಮಿಲಿಟರಿ ಡ್ರೋನ್ 22- ಒಟ್ಟಾರೆ 208 ಯುದ್ದ ವಿಮಾನಗಳು ಈಗ ತಾಲಿಬಾನ್ ವಶದಲ್ಲಿವೆ.

ಶಸ್ತ್ರಾಸ್ತ್ರಗಳು ಪಾಕಿಸ್ತಾನಕ್ಕೆ ಮಾರಾಟ ಈ ಶಸ್ತ್ರಾಸ್ತ್ರಗಳಲ್ಲಿ ಬಹಳಷ್ಟು ಶಸ್ತ್ರಾಸ್ತ್ರಗಳನ್ನು ಬಳಕೆ ಮಾಡುವ ಪರಿಣತಿ ತಾಲಿಬಾನ್ ಉಗ್ರರಿಗೆ ಇಲ್ಲ. ಯುದ್ದ ವಿಮಾನ, ಹೆಲಿಕಾಪ್ಟರ್ ಚಲಾಯಿಸುವ ಪೈಲಟ್ ಗಳು ತಾಲಿಬಾನ್ ಬಳಿ ಇಲ್ಲ. ಹೀಗಾಗಿ ಅಫ್ಘನ್ ಸೇನೆಯಲ್ಲಿದ್ದ ಪೈಲಟ್ ಗಳನ್ನೇ ವಾಪಸ್ ಕರ್ತವ್ಯಕ್ಕೆ ಬನ್ನಿ ಎಂದು ತಾಲಿಬಾನ್ ಕರೆ ಕೊಟ್ಟಿದೆ. ಇನ್ನು ತಮ್ಮ ಬಳಿ ಅಪಾರ ಪ್ರಮಾಣದ ಗನ್, ಬಾಂಬ್ ಗಳನ್ನು ಈಗ ತಾಲಿಬಾನ್ ಪಾಕಿಸ್ತಾನಕ್ಕೆ ಮಾರಾಟ ಕೂಡ ಮಾಡುತ್ತಿದೆ. ತಾಲಿಬಾನ್ ಬಳಿ ಇರುವ ಶಸ್ತ್ರಾಸ್ತ್ರಗಳು ಪಾಕ್ ನಲ್ಲಿರುವ ಭಯೋತ್ಪಾದನಾ ಸಂಘಟನೆಗಳ ಕೈ ಸೇರುವ ಭೀತಿ ಕೂಡ ಇದೆ.

ಮುಲ್ಲಾ ಅಬ್ದುಲ್ ಘನಿ ಬಾರದರ್ ಭೇಟಿಯಾದ ಮಸೂದ್ ಅಜರ್ ಪಾಕ್ ಉಗ್ರರು ತಾಲಿಬಾನ್ ಜೊತೆ ಕೈ ಜೋಡಿಸಬಹುದು ಎಂಬ ಬಲವಾದ ಅಭಿಪ್ರಾಯ ಭಾರತದ ರಕ್ಷಣಾ ತಜ್ಞರಲ್ಲಿತ್ತು. ಅದು ಈಗ ನಿಜವಾಗಿದೆ. ಆಗಸ್ಟ್ 3ನೇ ವಾರದಲ್ಲಿ ಪಾಕಿಸ್ತಾನದ ಜೈಷ್ ಇ ಮೊಹಮ್ಮದ್ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್ ಕಂದಹಾರ್ ಗೆ ಹೋಗಿ ತಾಲಿಬಾನ್ ರಾಜಕೀಯ ವ್ಯವಹಾರಗಳ ಮುಖ್ಯಸ್ಥ ಮುಲ್ಲಾ ಅಬ್ದುಲ್ ಘನಿ ಬಾರದರ್ ನನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾನೆ. ಕಾಶ್ಮೀರದಲ್ಲಿ ಜೈಷ್ ಇ ಮೊಹಮ್ಮದ್ ಸಂಘಟನೆ ಭಾರತದ ವಿರುದ್ಧ ಹೋರಾಡಲು ತಾಲಿಬಾನ್ ನೆರವು ನೀಡುವಂತೆ ಕೇಳಿದ್ದಾನೆ. ತಾಲಿಬಾನ್ ನಿಂದ ಶಸ್ತ್ರಾಸ್ತ್ರ ಸೇರಿದಂತೆ ಇನ್ನಿತರ ನೆರವು ನೀಡುವಂತೆ ಕೋರಿದ್ದಾನೆ. ತಾಲಿಬಾನ್ ಜಿಹಾದಿಗಳನ್ನು ಪಾಕ್ ಪರ ಕಾಶ್ಮೀರಕ್ಕೆ ಕಳಿಸಿ ಎಂದು ಕೂಡ ಕೇಳಿದ್ದಾನೆ.

ತಾಲಿಬಾನ್ ಶಸ್ತ್ರಾಸ್ತ್ರ ಮೊದಲು ಪಾಕ್ ನಲ್ಲಿ ಬಳಕೆ ತಾಲಿಬಾನ್ ಬಳಿ ಇರುವ ಅಪಾರ ಪ್ರಮಾಣದ ಶಸ್ತ್ರಾಸ್ತ್ರ ಮೊದಲು ಪಾಕಿಸ್ತಾನದಲ್ಲೇ ಬಳಕೆಯಾಗುತ್ತವೆ. ಐಎಸ್ಐ ಪೋಷಿಸುತ್ತಿರುವ ಭಯೋತ್ಪಾದನಾ ಸಂಘಟನೆಗಳು ಈ ಶಸ್ತ್ರಾಸ್ತ್ರ ಬಳಕೆ ಮಾಡುತ್ತವೆ. ಬಳಿಕ ಅವುಗಳನ್ನ ಭಾರತದ ವಿರುದ್ಧ ಕಾಶ್ಮೀರದ ಗಡಿಯಲ್ಲಿ ಬಳಕೆ ಮಾಡುತ್ತವೆ ಎಂದು ಭಾರತದ ರಕ್ಷಣಾ ತಜ್ಞರು ಹೇಳಿದ್ದಾರೆ. ತಾಲಿಬಾನ್ ಶಸ್ತ್ರಾಸ್ತ್ರಗಳನ್ನು ಭಾರತದ ವಿರುದ್ಧ ಬಳಸಿದರೆ, ಅದನ್ನು ಎದುರಿಸಲು ಭಾರತ ಈಗಾಗಲೇ ಸಂಪೂರ್ಣ ಸಿದ್ದವಾಗಿದೆ ಎಂದು ಭಾರತೀಯ ಸೇನೆಯ ಅಧಿಕಾರಿಗಳು ಹೇಳಿದ್ದಾರೆ.

ಅಮೆರಿಕಾದ ಸಣ್ಣ ಶಸ್ತ್ರಾಸ್ತ್ರಗಳನ್ನು ಪಾಕಿಸ್ತಾನಕ್ಕೆ ಕಳಿಸಲಾಗಿದೆ. ಈ ಶಸ್ತ್ರಾಸ್ತ್ರಗಳನ್ನು ಮೊದಲಿಗೆ ಪಾಕಿಸ್ತಾನದಲ್ಲೇ ಹಿಂಸಾಚಾರಕ್ಕೆ ಬಳಸಬಹುದು ಎಂದು ಭಾರತದ ಮಿಲಿಟರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಎಂ-4, ಎಂ-16 ಸೇರಿದಂತೆ ಸಾಕಷ್ಟು ಆಸಲ್ಟ್ ರೈಫಲ್ ಗಳನ್ನು ಆಮೆರಿಕಾ ಕಳೆದ 20 ವರ್ಷಗಳಲ್ಲಿ ಅಫ್ಘಾನಿಸ್ತಾನಕ್ಕೆ ನೀಡಿದೆ. ಇವೆಲ್ಲಾ ಈಗ ತಾಲಿಬಾನ್ ವಶದಲ್ಲಿವೆ. ಆಮೆರಿಕಾ ಅಫ್ಘನ್ ಸೇನೆಗೆ ನೀಡಿದ್ದ ಕಮ್ಯೂನಿಕೇಷನ್ ಸಿಸ್ಟಮ್ ಕೂಡ ತಾಲಿಬಾನ್ ವಶವಾಗಿವೆ. ಬುಲೆಟ್ ಪ್ರೂಫ್ ಜಾಕೆಟ್, ನೈಟ್ ವಿಷನ್ ಕನ್ನಡಕಗಳು ತಾಲಿಬಾನ್ ವಶದಲ್ಲಿವೆ. ಇವುಗಳಲ್ಲಿ ಬಹಳಷ್ಟು ಶಸ್ತ್ರಾಸ್ತ್ರಗಳು ಪಾಕಿಸ್ತಾನದ ಸೇನೆಯ ಪಾಲಾಗಬಹುದು.

ಪಾಕ್ ಭಯೋತ್ಪಾದಕರು ಎಷ್ಟೇ ಅತ್ಯಾಧುನಿಕ ಶಸ್ತ್ರಾಸ್ತ್ರಗಳೊಂದಿಗೆ ದಾಳಿ ನಡೆಸಿದರೂ ಅದನ್ನು ಎದುರಿಸಲು ಸಿದ್ದವಾಗಿದ್ದೇವೆ ಎಂದು ಭಾರತದ ಸೇನೆ ಹೇಳಿದೆ. ಕಾಶ್ಮೀರದ ಗಡಿಯಲ್ಲಿ ಭಯೋತ್ಪಾದನಾ ನಿಗ್ರಹ ವ್ಯವಸ್ಥೆ ಪ್ರಬಲವಾಗಿದೆ. ಭಾರತದ ಸೇನೆಯು 1990 ರಲ್ಲಿ ಅಫ್ಘನ್ ಉಗ್ರಗಾಮಿಗಳನ್ನು ಎದುರಿಸಿದ ಅನುಭವ ಹೊಂದಿದೆ. ಕಾಶ್ಮೀರದಲ್ಲಿ ಅಫ್ಘನ್ ರನ್ನು ಗುರುತಿಸುವುದು ಸುಲಭ, ಸ್ಥಳೀಯರು ಕೂಡ ಅಫ್ಘನ್ ರನ್ನು ಕಂಡರೆ ಹೆದರಿಕೊಳ್ಳುತ್ತಾರೆ. ಮಹಿಳೆಯರು, ಮಕ್ಕಳ ಮೇಲೆ ಅಫ್ಘನ್ ತಾಲಿಬಾನ್ ಉಗ್ರರು ದೌರ್ಜನ್ಯ ನಡೆಸುವುದರಿಂದ ಅಂಥವರನ್ನು ಕಂಡರೇ ಸ್ಥಳೀಯ ಜನರು ಹೆದರಿಕೊಳ್ಳುತ್ತಾರೆ. ಹೀಗಾಗಿ ಸ್ಥಳೀಯರು ಅಫ್ಘನ್ ಜನರ ಬಗ್ಗೆ ಮಿಲಿಟರಿಗೆ ಮಾಹಿತಿ ನೀಡುತ್ತಾರೆ. ಕಾಶ್ಮೀರದಲ್ಲಿ ಭಯೋತ್ಪಾದನೆ ಆರಂಭವಾದ ಪ್ರಾರಂಭದಲ್ಲಿ ಪಾಕಿಸ್ತಾನವು ಅಫ್ಘನ್ ಉಗ್ರರನ್ನು ಭಾರತದ ವಿರುದ್ಧ ಬಳಸಿದೆ. ಆಗ ಭಾರತವು ಅಫ್ಘನ್ ಉಗ್ರರನ್ನು ಹೊಡೆದುರುಳಿಸಿದೆ. ಈಗಲೂ ಅಂಥದ್ದೇ ಪರಿಸ್ಥಿತಿ ಪುನಾರಾವರ್ತನೆಯಾದರೂ, ಅದನ್ನು ಎದುರಿಸುವ ಅನುಭವ, ಸಾಮರ್ಥ್ಯ ಭಾರತದ ಸೇನೆಗೆ ಇದೆ ಎಂದು ಭಾರತದ ಸೇನೆಯ ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಆದರೇ, ತಾಲಿಬಾನ್ ಉಗ್ರಗಾಮಿ ಸಂಘಟನೆ ಹಾಗೂ ಅದರ ಉಗ್ರರು ಭಾರತದ ಭದ್ರತೆಗೆ ಧಕ್ಕೆ ತರುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಸದ್ಯದಲ್ಲೇ ಅಲ್ಲದಿದ್ದರೂ, ದೀರ್ಘಕಾಲದಲ್ಲಿ ತಾಲಿಬಾನ್ ಉಗ್ರಗಾಮಿ ಸಂಘಟನೆಯು ನೆರೆಹೊರೆಯ ದೇಶಗಳಿಗೂ ಅಪಾಯಕಾರಿಯಾಗುತ್ತೆ.

ವಿಶೇಷ ವರದಿ: ಎಸ್. ಚಂದ್ರಮೋಹನ್, ನ್ಯಾಷನಲ್ ಬ್ಯುರೋ ಮುಖ್ಯಸ್ಥರು, ಟಿವಿ9 ಕನ್ನಡ

ಇದನ್ನೂ ಓದಿ: ಶಸ್ತ್ರಾಸ್ತ್ರ, ಮದ್ದುಗುಂಡು, ಸೇನಾ ವಾಹನವನ್ನು ಹಸ್ತಾಂತರಿಸದಿದ್ದರೆ ಕಠಿಣ ಶಿಕ್ಷೆ ಕೊಡುತ್ತೇವೆ: ಆಫ್ಘನ್​ ಸೇನೆಗೆ ತಾಲಿಬಾನ್​ ಎಚ್ಚರಿಕೆ

ಅಮರುಲ್ಲಾ ಸಲೇಹ್: ಅಫ್ಘಾನಿಸ್ತಾನ ಪ್ರತಿರೋಧ ಹೋರಾಟದ ಕೊನೆಯ ಆಸರೆ, ತಾಲಿಬಾನ್-ಪಾಕಿಸ್ತಾನವನ್ನು ಎಂದಿಗೂ ಒಪ್ಪದ ನಾಯಕನೀತ

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್