ಅಕ್ರಮ ದನದ ಮಾಂಸ ಸಂಸ್ಕರಿಸಿದ್ದ ಗೋದಾಮಿನ ಮೇಲೆ ದಾಳಿ, ಟನ್ ಗಟ್ಟಲೇ ಮಾಂಸ ಪತ್ತೆ ಮಾಡಿದ ಅಧಿಕಾರಿಗಳು

TV9 Digital Desk

| Edited By: Ayesha Banu

Updated on: Sep 02, 2021 | 7:39 AM

ಕಲಬುರಗಿ ನಗರದ ಹೀರಾಪೂರ ಕ್ರಾಸ್ ಬಳಿಯ ಮಿರ್ಚಿ ಗೋದಾಮ್ ಮತ್ತು ನಂದೂರ ಇಂಡಸ್ಟ್ರಿಯಲ್ ಪ್ರದೇಶದಲ್ಲಿ ಮತ್ತೊಂದು ಗೋದಾಮಿನ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ರು. ಕಲಬುರಗಿಯ ಆರ್.ಜಿ.ನಗರ ಮತ್ತು ವಿ.ವಿ ಪೊಲೀಸರು ಕಾರ್ಯಾಚರಣೆ ನಡೆಸಿ ಎರಡೂ ಗೋದಾಮುಗಳಲ್ಲಿ ಟನ್ ಗಟ್ಟಲೇ ಸಂಸ್ಕರಿಸಿದ್ದ ದನದ ಮಾಂಸ ಪತ್ತೆ ಹಚ್ಚಿದ್ದಾರೆ.

ಅಕ್ರಮ ದನದ ಮಾಂಸ ಸಂಸ್ಕರಿಸಿದ್ದ ಗೋದಾಮಿನ ಮೇಲೆ ದಾಳಿ, ಟನ್ ಗಟ್ಟಲೇ ಮಾಂಸ ಪತ್ತೆ ಮಾಡಿದ ಅಧಿಕಾರಿಗಳು
ಟನ್ ಗಟ್ಟಲೇ ಮಾಂಸ ಪತ್ತೆ ಮಾಡಿದ ಅಧಿಕಾರಿಗಳು

ಕಲಬುರಗಿ: ಅಕ್ರಮವಾಗಿ ದನದ ಮಾಂಸ ಮಾರಾಟ ಮಾಡಿದ ಆರೋಪ ಹಿನ್ನೆಲೆಯಲ್ಲಿ ನಗರದ ಹೀರಾಪೂರ ಬಳಿ ರಿಂಗ ರಸ್ತೆಗೆ ಹೊಂದಿಕೊಂಡಿರುವ ಮಿರ್ಚಿ ಗೋದಾಮಿನ ಮೇಲೆ ದಾಳಿ ಮಾಡಲಾಗಿದೆ. ಮುಂಬೈ ಮೂಲದ ಎನ್.ಜಿ.ಓ ನೀಡಿದ ಮಾಹಿತಿ‌ ಆಧರಿಸಿ ಕಲಬುರಗಿ ಆಹಾರ ಸುರಕ್ಷಿತ ಅಧಿಕಾರಿಗಳು ಮತ್ತು ಪೊಲೀಸರು ದಾಳಿ ನಡೆಸಿ ಕಾರ್ಯಾಚರಣೆ ಕೈಗೊಂಡಿದ್ದಾರೆ.

ಇನ್ನು ಕಲಬುರಗಿ ನಗರದ ಹೀರಾಪೂರ ಕ್ರಾಸ್ ಬಳಿಯ ಮಿರ್ಚಿ ಗೋದಾಮ್ ಮತ್ತು ನಂದೂರ ಇಂಡಸ್ಟ್ರಿಯಲ್ ಪ್ರದೇಶದಲ್ಲಿ ಮತ್ತೊಂದು ಗೋದಾಮಿನ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ರು. ಕಲಬುರಗಿಯ ಆರ್.ಜಿ.ನಗರ ಮತ್ತು ವಿ.ವಿ ಪೊಲೀಸರು ಕಾರ್ಯಾಚರಣೆ ನಡೆಸಿ ಎರಡೂ ಗೋದಾಮುಗಳಲ್ಲಿ ಟನ್ ಗಟ್ಟಲೇ ಸಂಸ್ಕರಿಸಿದ್ದ ದನದ ಮಾಂಸ ಪತ್ತೆ ಹಚ್ಚಿದ್ದಾರೆ.

ಮುಂಬೈ, ಹೈದರಾಬಾದ್ ಅಷ್ಟೇ ಅಲ್ಲದೇ ಹೊರದೇಶಗಳಿಗೂ ಇಲ್ಲಿಂದ ಮಾಂಸ ರಫ್ತು ಆಗುವ ಶಂಕೆ ವ್ಯಕ್ತವಾಗಿದೆ. ಅಕ್ರಮವಾಗಿ ದನಗಳ ವಧೆ ಮಾತ್ರವಲ್ಲದೇ ವ್ಯವಸ್ಥಿತ ಸಂಸ್ಕರಣಾ ಘಟಕಗಳು ಪತ್ತೆಯಾಗಿವೆ. ಇದು AIMIM ಮುಖಂಡ ಇಲಿಯಾಸ್ ಸೇಠ ಭಾಗವಾನ್ ಒಡೆತನದ ಮಿರ್ಚಿ ಗೋದಾಮು. ಸದ್ಯ ಈ ಬಗ್ಗೆ ಕಲಬುರಗಿಯ ಆರ್.ಜಿ.ನಗರ ಮತ್ತು ವಿವಿ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.

Beef raid

ದನದ ಮಾಂಸ

ಇದನ್ನೂ ಓದಿ: Crime News: ಸ್ವಿಫ್ಟ್ ಕಾರಿನಲ್ಲಿ ಗೋಮಾಂಸ ಸಾಗಾಟ ಮಾಡುತ್ತಿದ್ದ ಇಬ್ಬರ ಬಂಧನ

ಅಸ್ಸಾಂನಲ್ಲಿ ಇನ್ಮುಂದೆ ಹಿಂದು ಧಾರ್ಮಿಕ ಪ್ರದೇಶಗಳ 5 ಕಿ.ಮೀ.ವ್ಯಾಪ್ತಿಯಲ್ಲಿ ಗೋಮಾಂಸ ಮಾರಾಟ, ಖರೀದಿ ಮಾಡುವಂತಿಲ್ಲ

(Officials and police raid on warehouse and found illegal beef in kalaburagi)

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada