ಅಸ್ಸಾಂನಲ್ಲಿ ಇನ್ಮುಂದೆ ಹಿಂದು ಧಾರ್ಮಿಕ ಪ್ರದೇಶಗಳ 5 ಕಿ.ಮೀ.ವ್ಯಾಪ್ತಿಯಲ್ಲಿ ಗೋಮಾಂಸ ಮಾರಾಟ, ಖರೀದಿ ಮಾಡುವಂತಿಲ್ಲ

Cattle Preservation Bill: ಸೂದೆ ಅಂಗೀಕಾರದ ಬಳಿಕ ಮಾತನಾಡಿದ ಅಸ್ಸಾಂ ಮುಖ್ಯಮಂತ್ರಿ ಹಿಮಂತ್​ ಬಿಸ್ವಾ ಶರ್ಮಾ, ನಾವು ವಿಧಾನಸಭೆ ಅಧಿವೇಶನದ ಮೊದಲನೇ ದಿನವೇ ಈ ಹಸುಗಳ ಸಂರಕ್ಷಣಾ ಮಸೂದೆಯನ್ನು ಮಂಡಿಸಿದ್ದೆವು. ಅದಾಗಿ ಸುಮಾರು 30 ದಿನಗಳ ನಂತರ ಅಂಗೀಕರಿಸಲ್ಪಟ್ಟಿದೆ ಎಂದಿದ್ದಾರೆ.

ಅಸ್ಸಾಂನಲ್ಲಿ ಇನ್ಮುಂದೆ ಹಿಂದು ಧಾರ್ಮಿಕ ಪ್ರದೇಶಗಳ 5 ಕಿ.ಮೀ.ವ್ಯಾಪ್ತಿಯಲ್ಲಿ ಗೋಮಾಂಸ ಮಾರಾಟ, ಖರೀದಿ ಮಾಡುವಂತಿಲ್ಲ
ಮುಖ್ಯಮಂತ್ರಿ ಹಿಮಂತ್​ ಬಿಸ್ವಾ ಶರ್ಮಾ

ಗುವಾಹಟಿ: ಅಸ್ಸಾಂ ವಿಧಾನಸಭೆ (Assam Assembly) ಶುಕ್ರವಾರ ಹಸುಗಳ ಸಂರಕ್ಷಣಾ ಮಸೂದೆ (Cattle Preservation Bill)ಯನ್ನು ಅಂಗೀಕರಿಸಿದೆ. ಈ ಮಸೂದೆಯ ಅನ್ವಯ, ಮಾನ್ಯ ದಾಖಲೆಗಳಿಲ್ಲದೆ ಅಸ್ಸಾಂನಿಂದ ಹಸುಗಳನ್ನು ಬೇರೆ ರಾಜ್ಯಕ್ಕೆ ಸಾಗಿಸುವಂತಿಲ್ಲ. ಅಲ್ಲದೆ, ಅಸ್ಸಾಂನ ಯಾವುದೇ ಹಿಂದೂ ಧಾರ್ಮಿಕ ಪ್ರದೇಶಗಳು (Hindu religious places) ದೇವಾಲಯಗಳ 5 ಕಿಮೀ ವ್ಯಾಪ್ತಿಯಲ್ಲಿ ದನದ ಮಾಂಸಗಳ ಮಾರಾಟ ಮತ್ತು ಖರೀದಿ ಮಾಡುವಂತಿಲ್ಲ. ನಿನ್ನೆ ವಿಧಾನಸಭೆ ( Assam Assembly) ಯಲ್ಲಿ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ (Himanta Biswa Sarma) ಹಸುಗಳ ಸಂರಕ್ಷಣೆ ಮಸೂದೆಯನ್ನು ಮಂಡಿಸಿದರು. ಹಾಗೇ, ರಾಜ್ಯದ ಗಡಿ ಭಾಗಗಳಲ್ಲಿ ನಡೆಯುತ್ತಿರುವ ಗೋಮಾಂಸ ಸಾಗಣೆ ನಿಷೇಧಕ್ಕೆ ಹೆಚ್ಚಿನ ಒತ್ತು ನೀಡಲಾಗುವುದು ಎಂದು ತಿಳಿಸಿದ್ದಾರೆ.

ಮಸೂದೆ ಅಂಗೀಕಾರದ ಬಳಿಕ ಮಾತನಾಡಿದ ಅಸ್ಸಾಂ ಮುಖ್ಯಮಂತ್ರಿ ಹಿಮಂತ್​ ಬಿಸ್ವಾ ಶರ್ಮಾ, ನಾವು ವಿಧಾನಸಭೆ ಅಧಿವೇಶನದ ಮೊದಲನೇ ದಿನವೇ ಈ ಹಸುಗಳ ಸಂರಕ್ಷಣಾ ಮಸೂದೆಯನ್ನು ಮಂಡಿಸಿದ್ದೆವು. ಅದಾಗಿ ಸುಮಾರು 30 ದಿನಗಳ ನಂತರ ಅಂಗೀಕರಿಸಲ್ಪಟ್ಟಿದೆ. ಈ ಮಸೂದೆಗೆ ಸಂಬಂಧಪಟ್ಟಂತೆ ಎಲ್ಲ ರೀತಿಯ ತಿದ್ದುಪಡಿಗಳನ್ನೂ ಪರಿಗಣಿಸಲು ನಾವು ಸಿದ್ಧರಿದ್ದೆವು. ಆದರೆ ಪ್ರಸ್ತುತ ಮಸೂದೆ ಬಗ್ಗೆ ವಿರೋಧ ಪಕ್ಷಗಳು ತಮ್ಮ ವಿಚಾರಗಳನ್ನು ಸರಿಯಾಗಿ ಮಂಡಿಸಲಿಲ್ಲ ಎಂದಿದ್ದಾರೆ. ಈಗ ಅಂಗೀಕರಿಸಲ್ಪಟ್ಟಿರುವ ದನಗಳ ಸಂರಕ್ಷಣಾ ಬಿಲ್​ ಹೊಸದಾಗಿ ರೂಪಿಸಿದ್ದಲ್ಲ. 1950ರಲ್ಲಿ ಇದ್ದ ಕಾಂಗ್ರೆಸ್ ಸರ್ಕಾರ ರೂಪಿಸಿದ್ದ ಮಸೂದೆಯ ಸುಧಾರಣೆ ಅಷ್ಟೇ. ಮಹಾತ್ಮ ಗಾಂಧಿಯವರ ವಿಚಾರಧಾರೆಗಳಿಂದ ಸ್ಫೂರ್ತಿ ಪಡೆದು ಮಸೂದೆಯನ್ನು ಸುಧಾರಣೆ ಮಾಡಲಾಗಿದೆ ಎಂದೂ ಮುಖ್ಯಮಂತ್ರಿ ಹೇಳಿದ್ದಾರೆ. ಅಲ್ಲದೆ, ಈಗ ಅಂಗೀಕರಿಸಲಾದ ದನಗಳ ಸಂರಕ್ಷಣೆ ಕಾಯ್ದೆಯಿಂದ, ಗೋಮಾಂಸ ಸೇವನೆ ವಿಚಾರದಲ್ಲಿ ಉಂಟಾಗುವ ಕೋಮು ಸಂಘರ್ಷವೂ ರಾಜ್ಯದಲ್ಲಿ ನಿಯಂತ್ರಣವಾಗುತ್ತದೆ ಎಂದಿದ್ದಾರೆ.

ಮಸೂದೆ ಅಂಗೀಕಾರದ ವೇಳೆ ಏನಾಯಿತು?
ಅಸ್ಸಾಂ ವಿಧಾನಸಭೆ ಅಧಿವೇಶನ ಜುಲೈನಲ್ಲಿಯೇ ಪ್ರಾರಂಭವಾಗಿದೆ. ಅಧಿವೇಶನ ಶುರುವಾದ ಮೊದಲ ದಿನವೇ ಮುಖ್ಯಮಂತ್ರಿ ಹಿಮಂತ್​ ಬಿಸ್ವಾ ಶರ್ಮಾ ಮಸೂದೆಯನ್ನು ಮಂಡಿಸಿದ್ದರು. ಗೋವಧೆ, ಗೋಮಾಂಸ ಸೇವನೆ ಮತ್ತು ಹಸುಗಳ ಸಾಗಣೆಗೆ ಕಡಿವಾಣ ಹಾಕುವ ಮಸೂದೆ ಇದಾಗಿದೆ. ನಿನ್ನೆ (ಆಗಸ್ಟ್​ 13) ಇದು ಅಂಗೀಕಾರ ಆಗುವ ವೇಳೆ ಪ್ರತಿಪಕ್ಷಗಳು ವಿರೋಧಿಸಿದವು. ಮಸೂದೆಯನ್ನು ಆಯ್ಕೆ ಸಮಿತಿಗೆ ರವಾನಿಸಬೇಕು ಎಂದು ಒತ್ತಾಯಿಸಿದವು. ಆದರೆ ಅಸ್ಸಾಂ ಸರ್ಕಾರ ಇದನ್ನು ನಿರಾಕರಿಸಿತು. ಪ್ರತಿಪಕ್ಷಗಳು ಹೊರನಡೆದವು, ಇತ್ತ ಸ್ಪೀಕರ್​ ಬಿಸ್ವಜಿತ್​ ಡೈಮರಿ, ಅಸ್ಸಾಂ ದನಗಳ ಸಂರಕ್ಷಣಾ ಮಸೂದೆ-2021 ಅಂಗೀಕಾರವಾಗಿದೆ ಎಂದು ಘೋಷಿಸಿದರು.

ಇದನ್ನೂ ಓದಿ:  4 ಟ್ರಕ್​ಗಳನ್ನು ಧ್ವಂಸಗೊಳಿಸಿ, ಮೊಟ್ಟೆಗಳನ್ನು ಒಡೆದು ದಾಂಧಲೆ; ಅಸ್ಸಾಂ-ಮಿಜೋರಾಂ ಗಡಿ ಮತ್ತೆ ಉದ್ವಿಗ್ನ

ಇನ್ನು 3 ತಿಂಗಳಲ್ಲಿ ಪ್ರಧಾನಿ ಮೋದಿ ಹೃದಯಕ್ಕೆ ಹತ್ತಿರವಾದ ‘ಕಾಶಿ ವಿಶ್ವನಾಥ್ ಧಾಮ ಪ್ರಾಜೆಕ್ಟ್’ ತಲೆಯೆತ್ತಲಿದೆ! ವಿವರ ಇಲ್ಲಿದೆ

Click on your DTH Provider to Add TV9 Kannada