AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇನ್ನು 3 ತಿಂಗಳಲ್ಲಿ ಪ್ರಧಾನಿ ಮೋದಿ ಹೃದಯಕ್ಕೆ ಹತ್ತಿರವಾದ ‘ಕಾಶಿ ವಿಶ್ವನಾಥ್ ಧಾಮ ಪ್ರಾಜೆಕ್ಟ್’ ತಲೆಯೆತ್ತಲಿದೆ! ವಿವರ ಇಲ್ಲಿದೆ

ಉತ್ತರ ಪ್ರದೇಶದ ಅಯೋಧ್ಯೆಯ ರಾಮಮಂದಿರ ನಿರ್ಮಾಣ ವಿಳಂಬವಾಗಬಹುದು. ಆದರೆ ಪ್ರಧಾನಿ ಮೋದಿ ಹೃದಯಕ್ಕೆ ಹತ್ತಿರವಾದ ಕಾಶಿ ವಿಶ್ವನಾಥ್ ಧಾಮ ಪ್ರಾಜೆಕ್ಟ್ ಕಾಮಗಾರಿ ಈ ವರ್ಷದ ನವಂಬರ್ ವೇಳೆಗೆ ಮುಗಿಯಲಿದೆ. ಪ್ರಧಾನಿ ಮೋದಿ ಸ್ವಕ್ಷೇತ್ರ ವಾರಾಣಾಸಿಯ ಕಾಶಿ ವಿಶ್ವನಾಥ್ ಧಾಮ ಪ್ರಾಜೆಕ್ಟ್ ಕಾಮಗಾರಿಗಳು ಭರದಿಂದ ಸಾಗುತ್ತಿವೆ. ಈ ವರ್ಷದ ನವಂಬರ್ ಗೆ ಕಾಶೀ ವಿಶ್ವನಾಥ್ ಧಾಮ ಪ್ರಾಜೆಕ್ಟ್ ಕಾಮಗಾರಿ ಪೂರ್ಣ ಅಯೋಧ್ಯೆ, ಕಾಶೀ, ಮಥುರಾ ಈ ಮೂರೂ ಸ್ಥಳಗಳು ಬಿಜೆಪಿ ಹಾಗೂ ಸಂಘ ಪರಿವಾರದ ಅಜೆಂಡಾದಲ್ಲಿರುವ ಸ್ಥಳಗಳು. ಈಗಾಗಲೇ […]

ಇನ್ನು 3 ತಿಂಗಳಲ್ಲಿ ಪ್ರಧಾನಿ ಮೋದಿ ಹೃದಯಕ್ಕೆ ಹತ್ತಿರವಾದ ‘ಕಾಶಿ ವಿಶ್ವನಾಥ್ ಧಾಮ ಪ್ರಾಜೆಕ್ಟ್’ ತಲೆಯೆತ್ತಲಿದೆ! ವಿವರ ಇಲ್ಲಿದೆ
ಇನ್ನು 3 ತಿಂಗಳಲ್ಲಿ ಪ್ರಧಾನಿ ಮೋದಿ ಹೃದಯಕ್ಕೆ ಹತ್ತಿರವಾದ ‘ಕಾಶಿ ವಿಶ್ವನಾಥ್ ಧಾಮ ಪ್ರಾಜೆಕ್ಟ್’ ತಲೆಯೆತ್ತಲಿದೆ! ವಿವರ ಇಲ್ಲಿದೆ
TV9 Web
| Updated By: sandhya thejappa|

Updated on: Aug 14, 2021 | 10:57 AM

Share

ಉತ್ತರ ಪ್ರದೇಶದ ಅಯೋಧ್ಯೆಯ ರಾಮಮಂದಿರ ನಿರ್ಮಾಣ ವಿಳಂಬವಾಗಬಹುದು. ಆದರೆ ಪ್ರಧಾನಿ ಮೋದಿ ಹೃದಯಕ್ಕೆ ಹತ್ತಿರವಾದ ಕಾಶಿ ವಿಶ್ವನಾಥ್ ಧಾಮ ಪ್ರಾಜೆಕ್ಟ್ ಕಾಮಗಾರಿ ಈ ವರ್ಷದ ನವಂಬರ್ ವೇಳೆಗೆ ಮುಗಿಯಲಿದೆ. ಪ್ರಧಾನಿ ಮೋದಿ ಸ್ವಕ್ಷೇತ್ರ ವಾರಾಣಾಸಿಯ ಕಾಶಿ ವಿಶ್ವನಾಥ್ ಧಾಮ ಪ್ರಾಜೆಕ್ಟ್ ಕಾಮಗಾರಿಗಳು ಭರದಿಂದ ಸಾಗುತ್ತಿವೆ.

ಈ ವರ್ಷದ ನವಂಬರ್ ಗೆ ಕಾಶೀ ವಿಶ್ವನಾಥ್ ಧಾಮ ಪ್ರಾಜೆಕ್ಟ್ ಕಾಮಗಾರಿ ಪೂರ್ಣ ಅಯೋಧ್ಯೆ, ಕಾಶೀ, ಮಥುರಾ ಈ ಮೂರೂ ಸ್ಥಳಗಳು ಬಿಜೆಪಿ ಹಾಗೂ ಸಂಘ ಪರಿವಾರದ ಅಜೆಂಡಾದಲ್ಲಿರುವ ಸ್ಥಳಗಳು. ಈಗಾಗಲೇ ಅಯೋಧ್ಯೆಯಲ್ಲಿ ಸಂಘ ಪರಿವಾರ ಹಾಗೂ ದೇಶದ ಜನರ ಆಶಯದಂತೆ ಭವ್ಯ ರಾಮಮಂದಿರ ನಿರ್ಮಾಣವಾಗುತ್ತಿದೆ. 2023ರ ಅಂತ್ಯದ ವೇಳೆಗೆ ಭವ್ಯ ರಾಮಮಂದಿರ ನಿರ್ಮಾಣವಾಗಲಿದೆ. 2024ರ ಲೋಕಸಭಾ ಚುನಾವಣೆಗೂ ಮುನ್ನ ರಾಮಮಂದಿರವನ್ನು ದೇಶದ ಜನರ ಮುಂದಿಡಲಾಗುತ್ತೆ.  ಮತ್ತೊಂದೆಡೆ ಕಾಶೀ ವಿಶ್ವನಾಥ್ ಕ್ಷೇತ್ರವಾದ ವಾರಾಣಾಸಿಯಿಂದಲೇ ನರೇಂದ್ರ ಮೋದಿ ಲೋಕಸಭೆಗೆ ಆಯ್ಕೆಯಾಗಿದ್ದಾರೆ. ಪ್ರಧಾನಿ ಮೋದಿ 2018ರ ಮಾರ್ಚ್ ತಿಂಗಳಿನಲ್ಲಿ ಕಾಶೀ ವಿಶ್ವನಾಥ್ ದೇವಾಲಯದ ಕಾರಿಡಾರ್ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದರು.

ದೇವಾಲಯದಿಂದ ಹಿಡಿದು ಗಂಗಾ ನದಿಯವರೆಗೂ ಕಾರಿಡಾರ್ ನಿರ್ಮಿಸಿ ಸಕಲ ಸೌಲಭ್ಯಗಳನ್ನು ನೀಡುವುದು ಈ ಪ್ರಾಜೆಕ್ಟ್ ನ ಉದ್ದೇಶ (kashi vishwanath dham, Varanasi). 400 ಕೋಟಿ ರೂಪಾಯಿ ವೆಚ್ಚದಲ್ಲಿ ಯೋಜನೆಗೆ ಚಾಲನೆ ನೀಡಲಾಗಿತ್ತು. ಯೋಜನೆಯಡಿ ಹೆರಿಟೇಜ್ ಕಟ್ಟಡಗಳನ್ನು ಉಳಿಸಿಕೊಳ್ಳಲಾಗುತ್ತೆ. ದೇವಾಲಯದ ಕಾಂಪ್ಲೆಕ್ಸ್ ನಲ್ಲಿ ಹೊಸ ಸೌಲಭ್ಯಗಳನ್ನು ನೀಡಿ, ಪಿಪಿಪಿ ಮಾಡೆಲ್ ನಲ್ಲಿ ಅಭಿವೃದ್ದಿಪಡಿಸಲಾಗುತ್ತೆ. ದೇವಾಲಯದ ಸುತ್ತ ಟ್ರಾಫಿಕ್ ಜಾಮ್ ಕಡಿಮೆ ಮಾಡಿ, ದೇವಾಲಯದ ಸುತ್ತ ಸರಾಗವಾಗಿ ಭಕ್ತರು ಓಡಾಡುವಂತೆ ಮಾಡಲಾಗುತ್ತೆ. ದೇವಾಲಯದಿಂದ ಗಂಗಾ ನದಿಯ ತಟದಲ್ಲಿರುವ ಮಣಿಕಾರ್ಣಿಕಾ ಘಾಟ್ ನೇರವಾಗಿ ಕಾಣುವಂತೆ ಸಂಪರ್ಕ ಏರ್ಪಡಿಸಲಾಗುತ್ತೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ನೆನ್ನೆ ಕಾಶಿ ವಿಶ್ವನಾಥ್ ಮಂದಿರದ ಕಾರಿಡಾರ್ ನಿರ್ಮಾಣದ ಬಗ್ಗೆ ಪರಿಶೀಲನೆ ನಡೆಸಿದ್ದಾರೆ. ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಆಗಸ್ಟ್ 1 ರಂದು ವಾರಾಣಾಸಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕಾಶಿ ವಿಶ್ವನಾಥ್ ವಿಶಿಷ್ಟ ಕ್ಷೇತ್ರ ವಿಕಾಸ್ ಬೋರ್ಡ್ ಗುರುವಾರ ಯೋಜನೆಯ ಪ್ಲ್ಯಾನಿಂಗ್, ಜಾರಿಯ ಬಗ್ಗೆ ಖಾಸಗಿ ಕನ್ಸಲ್ಟೆಂಟ್ ನೇಮಕಕ್ಕೆ ಬಿಡ್ ಕರೆದಿದೆ. ಜನರಿಗೆ ಸ್ಮರಣೀಯ ಪುಣ್ಯಕ್ಷೇತ್ರದ ಅನುಭವ ಸಿಗುವಂತೆ ಕಾಶೀ ವಿಶ್ವನಾಥ್ ಕಾರಿಡಾರ್ ಅಭಿವೃದ್ದಿಪಡಿಸಲಾಗುತ್ತಿದೆ. ಈಗಾಗಲೇ ಬಹುತೇಕ ಕಾಮಗಾರಿಗಳು ಮುಕ್ತಾಯದ ಹಂತದಲ್ಲಿವೆ. ಮುಂದಿನ ವರ್ಷ ನಡೆಯುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೂ ಮುನ್ನವೇ ಅಂದರೇ,  2021ರ ನವಂಬರ್ ವೇಳೆಗೆ ಎಲ್ಲ ಕಾಮಗಾರಿಗಳು ಮುಗಿಯಲಿವೆ. ಹೀಗಾಗಿ ವಿಕಾಸ್ ಬೋರ್ಡ್ ಈಗ ಯೋಜನೆಯ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಖಾಸಗಿ ಕನ್ಸಲ್ಟೆಂಟ್ ಅನ್ನು ನೇಮಕ ಮಾಡುತ್ತಿದೆ.

ಕಾಶಿ ವಿಶ್ವನಾಥ ಕಾರಿಡಾರ್ ನಲ್ಲಿ ಏನೇನಿರುತ್ತೆ?

ಕಾಶಿ ವಿಶ್ವನಾಥ್ ಕಾರಿಡಾರ್ ನಲ್ಲಿ ಯಾತ್ರಾರ್ಥಿಗಳಿಗೆ ಅನೇಕ ಸೌಲಭ್ಯಗಳನ್ನು ನೀಡಲಾಗುತ್ತೆ. ಯಾತ್ರಿ ಸುವಿಧಾ ಕೇಂದ್ರ, ಗೆಸ್ಟ್ ಹೌಸ್, ಆಸ್ಪತ್ರೆ, ಲೈಬ್ರರಿ, ಮ್ಯೂಸಿಯಂ ಸೇರಿದಂತೆ ಅನೇಕ ಸೌಲಭ್ಯಗಳು ಇರಲಿವೆ. ಸಾರ್ವಜನಿಕರ ಅನುಕೂಲಕ್ಕಾಗಿ ಹೆಚ್ಚಿನ ಸಂಖ್ಯೆಯಲ್ಲಿ ಶೌಚಾಲಯಗಳನ್ನು ನಿರ್ಮಾಣ ಮಾಡಲಾಗುತ್ತೆ. ಕಾಶಿ ವಿಶ್ವನಾಥ್ ಮಂದಿರಕ್ಕೆ ಏಕಕಾಲಕ್ಕೆ ಸಾವಿರಾರು ಮಂದಿ ಯಾತ್ರಾರ್ಥಿಗಳು ಭೇಟಿ ನೀಡುತ್ತಾರೆ.

ಹೀಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಶೌಚಾಲಯ  ನಿರ್ಮಾಣ ಮಾಡಲಾಗುತ್ತಿದೆ. ಭದ್ರತೆಗಾಗಿ ವಿಶೇಷ ಪ್ಲ್ಯಾನ್ ಮಾಡಲಾಗಿದೆ. ಭದ್ರತಾ ಸಿಬ್ಬಂದಿಗೆ ಪ್ರತೇಕ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ. ತುರ್ತಾಗಿ ವಾಹನಗಳು, ಅಂಬ್ಯುಲೆನ್ಸ್ ದೇವಾಲಯ ಪ್ರವೇಶಿಸಲು ಅನುಕೂಲವಾಗುವಂತೆ ವಿಶಾಲವಾದ ರಸ್ತೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ವಾರಾಣಾಸಿಯ ರಸ್ತೆಗಳು ಮೊದಲೇ ಕಿರಿದಾದ ರಸ್ತೆಗಳು. ಈ ರಸ್ತೆಗಳನ್ನ  ದೇವಾಲಯದ ಸುತ್ತ ಅಗಲೀಕರಣ ಕೂಡ ಮಾಡಲಾಗುತ್ತಿದೆ.

ಕಾಶಿ ವಿಶ್ವನಾಥ್ ಕಾರಿಡಾರ್ ನಲ್ಲಿ ಗಂಗಾ ವ್ಯೂ ಕೆಫೆ ನಿರ್ಮಿಸಲಾಗುತ್ತಿದೆ. ಮಂದಿರ ಚೌಕ್, ಫುಡ್ ಕೋರ್ಟ್, ಅಂಗಡಿಗಳು, ಆಧ್ಯಾತ್ಮ ಬುಕ್ ಸ್ಟೋರ್, ವಿಐಪಿ ಗೆಸ್ಟ್ ಹೌಸ್, ಮುಮ್ ಕ್ಷು ಭವನ್, ವೇದಿಕ್ ಕೇಂದ್ರ, ಭೋಗಶಾಲಾ, ಟೂರಿಸ್ಟ್ ಕೇಂದ್ರ, ಮೂರು ಯಾತ್ರಿ ಸುವಿಧಾ ಕೇಂದ್ರ, ಟಾಯ್ಲೆಟ್ ಬ್ಲಾಕ್, ಸಿಟಿ ಮ್ಯೂಸಿಯಂ, ವಾರಾಣಾಸಿ ಗ್ಯಾಲರಿ ಸೇರಿದಂತೆ ಎರಡು ಮ್ಯೂಸಿಯಂ ನಿರ್ಮಾಣ ಮಾಡಲಾಗುತ್ತೆ.  ಈ ಎಲ್ಲವನ್ನೂ ಕಾಶಿ  ವಿಶ್ವನಾಥ್ ವಿಶಿಷ್ಟ ಕ್ಷೇತ್ರ ವಿಕಾಸ್ ಬೋರ್ಡ್, ಖಾಸಗಿ ವಲಯದ ಸಹಭಾಗಿತ್ವದೊಂದಿಗೆ ನಿರ್ಮಾಣ ಮಾಡಲಾಗುತ್ತೆ.

ಈಗ ನೇಮಕಗೊಳ್ಳುವ ಕನ್ಸಲ್ಟೆಂಟ್ ಮುಖ್ಯವಾಗಿ ವಿನೂತನ ಐಡಿಯಾಗಳ ಮೂಲಕ, ಸಮಸ್ಯೆಗಳಿಗೆ ಪರಿಹಾರ ನೀಡಿ ಯಾತ್ರಾರ್ಥಿಗಳಿಗೆ ಉತ್ತಮ ಅನುಭವವಾಗುವಂತೆ ಕಾರಿಡಾರ್ ಅನ್ನು ಅಭಿವೃದ್ದಿಪಡಿಸಬೇಕು. ಇರುವ ಸ್ಥಳವನ್ನೇ ಉತ್ತಮವಾಗಿ ಬಳಕೆ ಮಾಡಿಕೊಳ್ಳಬೇಕು. ದೇವಾಲಯಕ್ಕೆ ಯಾತ್ರಾರ್ಥಿಗಳು ಪಾದಚಾರಿ ಮಾರ್ಗದ ಮೂಲಕ ಬರುತ್ತಾರೆ. ಹೆಚ್ಚು ಸಮಯ ಕಾಯದೇ, ದೇವರ ದರ್ಶನ ಪಡೆಯುವಂತೆ ವ್ಯವಸ್ಥೆ ಮಾಡಬೇಕು. ಜನದಟ್ಟಣೆ ನಿರ್ವಹಣೆ, ತುರ್ತು ಸಂದರ್ಭಗಳಲ್ಲಿ ಪರಿಸ್ಥಿತಿಯ ನಿರ್ವಹಣೆ ಸೇರಿದಂತೆ ಕೆಲ ಸಮಸ್ಯೆಗಳಿಗೆ ಖಾಸಗಿ ಕನ್ಸಲ್ಟೆಂಟ್ ಪರಿಹಾರ ನೀಡಬೇಕು. ಯಾತ್ರಾರ್ಥಿಗಳು ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸುವಾಗ ಉತ್ತಮ ಅನುಭವ ಸಿಗುವ ವ್ಯವಸ್ಥೆ ಮಾಡಬೇಕು.

ಮಹಾಶಿವರಾತ್ರಿ, ಶ್ರಾವಣ ಮೇಳದಲ್ಲಿ ಹೆಚ್ಚಿನ ಭಕ್ತರು ದೇವಾಲಯಕ್ಕೆ ಬರುತ್ತಾರೆ. ಆಗ ಎಲ್ಲರಿಗೂ ದೇವರ ದರ್ಶನ ಸಿಗುವಂತೆ ವ್ಯವಸ್ಥೆ, ಪ್ಲ್ಯಾನಿಂಗ್ ಮಾಡಬೇಕು. ಸ್ಥಳೀಯ ಪಂಡಿತರ ಕೌಶಲ್ಯ ವೃದ್ದಿಗೂ ಕಾರ್ಯಕ್ರಮ ಮಾಡಬೇಕು. ಫ್ರಿ ವೈ ಫೈ ಜೋನ್ ನಿರ್ಮಾಣ ಮಾಡಬೇಕು. ಸ್ಥಳೀಯ ಸಂಘಟನೆ, ಸಂಘ ಸಂಸ್ಥೆಗಳು, ಕಾರ್ಪೋರೇಟ್, ದಾನಿಗಳು, ಟೆಲಿಕಾಂ ಕಂಪನಿಗಳು, ಶಿಕ್ಷಣ ಸಂಸ್ಥೆಗಳ ಸಹಭಾಗಿತ್ವದಲ್ಲಿ ಕಾಶಿ ವಿಶ್ವನಾಥ್ ಕಾರಿಡಾರ್ ಅನ್ನು ಮತ್ತಷ್ಟು ಅಭಿವೃದ್ದಿಪಡಿಸಬೇಕು.

ಉದಾಹರಣೆಗೆ ಗೂಗಲ್ ಮ್ಯಾಪ್ ಜೊತೆ ಸೇರಿ ದೇವಾಲಯಕ್ಕೆ ಬರುವ ಮಾರ್ಗದ ವಿವರ ಗೂಗಲ್ ಮ್ಯಾಪ್ ನಲ್ಲಿ ಸರಿಯಾಗಿ ಲಭ್ಯವಾಗುವಂತೆ ಮಾಡಬೇಕು. ಒಳಾಡಳಿತ ಕಂಪನಿಗಳ ಜೊತೆ ಸೇರಿ ಗಂಗಾ ನದಿಯ ಜಲಸಾರಿಗೆಯನ್ನು ಅಭಿವೃದ್ದಿಪಡಿಸಬೇಕು. ಅಕ್ಕಪಕ್ಕದ ರಾಜ್ಯಗಳಿಂದ ಗಂಗಾ ನದಿಯ ಮೂಲಕವೇ ದೇವಾಲಯಕ್ಕೆ ಭೇಟಿ ನೀಡುವಂತೆ ಮಾಡಬಹುದು. ವೈ ಫೈ ಸರ್ವೀಸ್ ನೀಡುವ ಕಂಪನಿಗಳ ಸಹಭಾಗಿತ್ವದಲ್ಲಿ ದೇವಾಲಯದ ಆವರಣದಲ್ಲಿ ಉಚಿತ ವೈ ಫೈ ವ್ಯವಸ್ಥೆ ಮಾಡಬಹುದು. ಆರ್‌ಓ ವಾಟರ್ ಕಂಪನಿಗಳ ಜೊತೆ ಸೇರಿ ದೇವಾಲಯದ ಆವರಣದಲ್ಲಿ ಶುದ್ದ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ಹೀಗೆ ಕಂಪನಿಗಳು, ಸಂಘಸಂಸ್ಥೆಗಳ ಜೊತೆಗೂಡಿ ಸಾಕಷ್ಟು ಸೇವೆಗಳನ್ನ ನೀಡಲು ಸಾಧ್ಯವಿದೆ. ಇವೆಲ್ಲವನ್ನೂ ಈಗ ನೇಮಕವಾಗುವ ಖಾಸಗಿ ಕನ್ಸಲ್ಟೆಂಟ್ ಕಂಪನಿಯು ನಿರ್ವಹಿಸಬೇಕು ಎಂದು ಖಾಸಗಿ ಕನ್ಸಲ್ಟೆಂಟ್ ನೇಮಕಕ್ಕೆ ಬಿಡ್ ಕರೆಯಲಾಗಿದೆ.

(pm narendra modi pet project kashi vishwanath dham project to be develeoped in ayodhya uttar Pradesh)

ಅಧಿಕಾರ ಯಾವತ್ತಿಗೂ ಶಾಶ್ವತವಲ್ಲ, ನಿರೀಕ್ಷಿಸಿದ್ದೆಲ್ಲ ನಡೆಯಲ್ಲ: ತನ್ವೀರ್
ಅಧಿಕಾರ ಯಾವತ್ತಿಗೂ ಶಾಶ್ವತವಲ್ಲ, ನಿರೀಕ್ಷಿಸಿದ್ದೆಲ್ಲ ನಡೆಯಲ್ಲ: ತನ್ವೀರ್
ಬಲಾಬಲ ಪ್ರದರ್ಶಿಸುವ ಅವಶ್ಯಕತೆ ಡಿಕೆ ಶಿವಕುಮಾರ್ ಅವರಿಗಿಲ್ಲ: ಡಿಕೆ ಸುರೇಶ್
ಬಲಾಬಲ ಪ್ರದರ್ಶಿಸುವ ಅವಶ್ಯಕತೆ ಡಿಕೆ ಶಿವಕುಮಾರ್ ಅವರಿಗಿಲ್ಲ: ಡಿಕೆ ಸುರೇಶ್
ಪೊಲಾರ್ಡ್, ಪೂರನ್ ಸಿಡಿಲಬ್ಬರ: ಫೈನಲ್​ಗೆ MI ಪಡೆ
ಪೊಲಾರ್ಡ್, ಪೂರನ್ ಸಿಡಿಲಬ್ಬರ: ಫೈನಲ್​ಗೆ MI ಪಡೆ
ಶಿವಣ್ಣನಿಗೆ ವಿಶ್ ಮಾಡಲು ಚಿಕ್ಕಮಗಳೂರಿನಿಂದ ಬಂದ ಕಾಫಿ ನಾಡು ಚಂದು
ಶಿವಣ್ಣನಿಗೆ ವಿಶ್ ಮಾಡಲು ಚಿಕ್ಕಮಗಳೂರಿನಿಂದ ಬಂದ ಕಾಫಿ ನಾಡು ಚಂದು
ಆರೋಗ್ಯವಂತ ಬಾಣಂತಿಯರ ಹಾಲನ್ನು ಮಾತ್ರ ಸಂಗ್ರಹಿಸಲಾಗುತ್ತದೆ: ವೈದ್ಯಾಧಿಕಾರಿ
ಆರೋಗ್ಯವಂತ ಬಾಣಂತಿಯರ ಹಾಲನ್ನು ಮಾತ್ರ ಸಂಗ್ರಹಿಸಲಾಗುತ್ತದೆ: ವೈದ್ಯಾಧಿಕಾರಿ
Wimbledon 2025: ನೊವಾಕ್ ನಾಗಾಲೋಟಕ್ಕೆ ಸಿನ್ನರ್ ಬ್ರೇಕ್
Wimbledon 2025: ನೊವಾಕ್ ನಾಗಾಲೋಟಕ್ಕೆ ಸಿನ್ನರ್ ಬ್ರೇಕ್
ಕೇಂದ್ರ ನೀಡುವ 5 ಕೇಜಿ ಅಕ್ಕಿ ಹಂಚುವ ಯೋಗ್ಯತೆ ರಾಜ್ಯ ಸರ್ಕಾರಕ್ಕಿಲ್ಲ: ಜೋಶಿ
ಕೇಂದ್ರ ನೀಡುವ 5 ಕೇಜಿ ಅಕ್ಕಿ ಹಂಚುವ ಯೋಗ್ಯತೆ ರಾಜ್ಯ ಸರ್ಕಾರಕ್ಕಿಲ್ಲ: ಜೋಶಿ
ಪತಿಯನ್ನು ನದಿಗೆ ತಳ್ಳಿದ ಪತ್ನಿ, ಆಮೇಲೆ ನಡೆಯಿತು ಯಾರೂ ಊಹಿಸದ ಘಟನೆ!
ಪತಿಯನ್ನು ನದಿಗೆ ತಳ್ಳಿದ ಪತ್ನಿ, ಆಮೇಲೆ ನಡೆಯಿತು ಯಾರೂ ಊಹಿಸದ ಘಟನೆ!
ಶಿವರಾಜ್​ಕುಮಾರ್ ಜನ್ಮದಿನ; ಮಧ್ಯರಾತ್ರಿ ಅಭಿಮಾನಿಗಳ ಜೊತೆ ಕೇಕ್ ಕಟ್
ಶಿವರಾಜ್​ಕುಮಾರ್ ಜನ್ಮದಿನ; ಮಧ್ಯರಾತ್ರಿ ಅಭಿಮಾನಿಗಳ ಜೊತೆ ಕೇಕ್ ಕಟ್
ವಕ್ರ ಶನಿಯ ಪ್ರಭಾವ ಯಾವ ರಾಶಿಗಳ ಮೇಲೆ ಆಗಲಿದೆ? ಇಲ್ಲಿದೆ ಜ್ಯೋತಿಷ್ಯ ವಿವರಣೆ
ವಕ್ರ ಶನಿಯ ಪ್ರಭಾವ ಯಾವ ರಾಶಿಗಳ ಮೇಲೆ ಆಗಲಿದೆ? ಇಲ್ಲಿದೆ ಜ್ಯೋತಿಷ್ಯ ವಿವರಣೆ