Himachal Pradesh Landside: ಹಿಮಾಚಲ ಪ್ರದೇಶದಲ್ಲಿ ಭೂಕುಸಿತ; ಸಾವನ್ನಪ್ಪಿದವರ ಸಂಖ್ಯೆ 16ಕ್ಕೆ ಏರಿಕೆ
Kinnaur Landslide | ಕಿನೌರ್ ಭೂಕುಸಿತದ ಸ್ಥಳದಲ್ಲಿ ಈಗಾಗಲೇ ಒಟ್ಟು 16 ಶವಗಳನ್ನು ಹೊರಗೆ ತೆಗೆಯಲಾಗಿದೆ, 10 ಜನರನ್ನು ರಕ್ಷಣೆ ಮಾಡಲಾಗಿದೆ. ಇನ್ನೂ 35ಕ್ಕೂ ಹೆಚ್ಚು ಜನರು ಸಿಲುಕಿಕೊಂಡಿದ್ದಾರೆ.
ಹಿಮಾಚಲ ಪ್ರದೇಶ: ಹಿಮಾಚಲ ಪ್ರದೇಶದ ಕಿನೌರ್ (Kinnaur Landslide) ಪ್ರದೇಶದಲ್ಲಿ ಉಂಟಾಗಿರುವ ಭಾರೀ ಭೂಕುಸಿತದ ಸಾವಿನ ಸಂಖ್ಯೆ 16ಕ್ಕೆ ಏರಿಕೆಯಾಗಿದೆ. ಬುಧವಾರ ಮಧ್ಯಾಹ್ನ ಈ ಭೂಕುಸಿತ ಸಂಭವಿಸಿದ್ದು, ಇಂದು ಸಂಜೆ ಮತ್ತೊಂದು ಶವವನ್ನು ಹೊರತೆಗೆಯಲಾಗಿದೆ. ಇನ್ನೂ 35ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದು, ಅವರು ಬದುಕಿರುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ. ರಕ್ಷಣಾ ಕಾರ್ಯಾಚರಣೆ ಮುಂದುವರೆದಿದ್ದು, ನಿನ್ನೆ ರಾತ್ರಿ ಕಲ್ಲುಗಳ ಸ್ಫೋಟದಿಂದ ಸ್ಥಗಿತಗೊಳಿಸಲಾಗಿದ್ದ ಕಾರ್ಯಾಚರಣೆಯನ್ನು ಇಂದು ಬೆಳಗ್ಗೆ ಮತ್ತೆ ಆರಂಭಿಸಲಾಗಿತ್ತು.
ಬುಧವಾರ ಇದ್ದಕ್ಕಿದ್ದಂತೆ ಗುಡ್ಡ ಹಾಗೂ ಕಲ್ಲು ಬಂಡೆಗಳು ಕುಸಿದ ಕಾರಣ ರಸ್ತೆಯಲ್ಲಿ ಸಾಗುತ್ತಿದ್ದ ಬಸ್, ಟ್ರಕ್ ಕೂಡ ಅವಶೇಷಗಳಡಿ ಸಿಲುಕಿತ್ತು. ಈ ವಾಹನಗಳಲ್ಲಿದ್ದ ಸುಮಾರು 50ಕ್ಕೂ ಹೆಚ್ಚು ಜನರು ಮಣ್ಣಿನಡಿ ಸಿಲುಕಿದ್ದರು. ಈಗಾಗಲೇ ಒಟ್ಟು 16 ಶವಗಳನ್ನು ಹೊರಗೆ ತೆಗೆಯಲಾಗಿದೆ, 10 ಜನರನ್ನು ರಕ್ಷಣೆ ಮಾಡಲಾಗಿದೆ. ಇನ್ನೂ 35ಕ್ಕೂ ಹೆಚ್ಚು ಜನರು ಸಿಲುಕಿಕೊಂಡಿದ್ದಾರೆ. ಅವರಿಗಾಗಿ ಶೋಧ ಕಾರ್ಯಾಚರಣೆ ಮುಂದುವರೆದಿದೆ.
Kinnaur landslide: Search and rescue operations resumed at 4 am today after it was halted yesterday due to shooting stones.
Two more bodies retrieved from the rubbles this morning. A total of 15 bodies recovered by the search and rescue operations till now. #HimachalPradesh pic.twitter.com/FzCREi4z0B
— ANI (@ANI) August 13, 2021
ಕಿನೌರ್ನಲ್ಲಿ ಬುಧವಾರ ಮಧ್ಯಾಹ್ನ 12.45ಕ್ಕೆ ಈ ಭೂಕುಸಿತ ಸಂಭವಿಸಿದ್ದು, ರಸ್ತೆಯಲ್ಲಿ ಹಿಮಾಚಲ ಪ್ರದೇಶದ ಸಾರಿಗೆ ಬಸ್ ಸಂಚರಿಸುತ್ತಿದ್ದಾಗಲೇ ಭೂಕುಸಿತ ಉಂಟಾಗಿತ್ತು. ಇದರಿಂದ ಬಸ್ ಹಾಗೂ ಅದರ ಹಿಂದೆ ಮುಂದೆ ಬರುತ್ತಿದ್ದ ಕೆಲವು ವಾಹನಗಳು ಕೂಡ ಮಣ್ಣಿನಡಿ ಮುಚ್ಚಿಹೋಗಿತ್ತು. ಆ ಬಸ್ನಲ್ಲಿದ್ದ 35ಕ್ಕೂ ಹೆಚ್ಚು ಜನರು ಇನ್ನೂ ಪತ್ತೆಯಾಗಿಲ್ಲ. ಇದರ ಜೊತೆ ಟ್ರಕ್ ಹಾಗೂ ಕಾರುಗಳಲ್ಲಿದ್ದ ಜನರು ಕೂಡ ಮಣ್ಣಿನಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ.
Another landslide! Location: #Kinnaur, Himachal. A bus carrying people has been trapped in it. ITBP has reached the site. Praying for the safety of ppl trapped! ?pic.twitter.com/cmtwLAgVn6
— Levina?? (@LevinaNeythiri) August 11, 2021
ಎನ್ಡಿಆರ್ಎಫ್, ಐಟಿಬಿಪಿ ಸಿಬ್ಬಂದಿಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಹಿಮಾಚಲ ಪ್ರದೇಶದ ಹಲವೆಡೆ ಇನ್ನೂ ಭೂಕುಸಿತ ಉಂಟಾಗುತ್ತಿದೆ.
ಇದನ್ನೂ ಓದಿ: Himachal Pradesh Landslide: ಹಿಮಾಚಲ ಪ್ರದೇಶದಲ್ಲಿ ಭಾರೀ ಭೂಕುಸಿತ; ಮಣ್ಣಿನಡಿ ಸಿಲುಕಿದ 40ಕ್ಕೂ ಹೆಚ್ಚು ಜನ