AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Manish Maheshwari ಟ್ವಿಟರ್ ಇಂಡಿಯಾ ಮುಖ್ಯಸ್ಥ ಮನೀಶ್ ಮಹೇಶ್ವರಿಗೆ ಅಮೆರಿಕದಲ್ಲಿ ಉನ್ನತ ಹುದ್ದೆಯ ಜವಾಬ್ದಾರಿ

Twitter: ಕಳೆದ 2+ ವರ್ಷಗಳಲ್ಲಿ ನಮ್ಮ ಭಾರತೀಯ ವ್ಯವಹಾರದ ನಿಮ್ಮ ನಾಯಕತ್ವಕ್ಕಾಗಿ ಮನೀಶ್ ಮಹೇಶ್ವರಿ ಅವರಿಗೆ ಧನ್ಯವಾದಗಳು. ವಿಶ್ವಾದ್ಯಂತದ ಹೊಸ ಮಾರುಕಟ್ಟೆಗಳಿಗೆ ಆದಾಯ ತಂತ್ರ ಮತ್ತು ಕಾರ್ಯಾಚರಣೆಗಳ ಉಸ್ತುವಾರಿಯಲ್ಲಿ ನಿಮ್ಮ ಹೊಸ ಅಮೆರಿಕ ಮೂಲದ ಜವಾಬ್ದಾರಿಗೆ ಅಭಿನಂದನೆಗಳು

Manish Maheshwari ಟ್ವಿಟರ್ ಇಂಡಿಯಾ ಮುಖ್ಯಸ್ಥ ಮನೀಶ್ ಮಹೇಶ್ವರಿಗೆ ಅಮೆರಿಕದಲ್ಲಿ ಉನ್ನತ ಹುದ್ದೆಯ ಜವಾಬ್ದಾರಿ
ಮನೀಶ್​ ಮಹೇಶ್ವರಿ
TV9 Web
| Updated By: ರಶ್ಮಿ ಕಲ್ಲಕಟ್ಟ|

Updated on:Aug 13, 2021 | 6:37 PM

Share

ದೆಹಲಿ: ಟ್ವಿಟರ್ ಇಂಡಿಯಾ  (Twitter India) ಮುಖ್ಯಸ್ಥ ಮನೀಶ್ ಮಹೇಶ್ವರಿಗೆ (Manish Maheshwari) ಅಮೆರಿಕದಲ್ಲಿ ಉನ್ನತ ಹುದ್ದೆಯ ಜವಾಬ್ದಾರಿ ನೀಡಲಾಗಿದೆ ಎಂದು ಹಿರಿಯ ಕಂಪನಿ ಕಾರ್ಯನಿರ್ವಾಹಕರು ಶುಕ್ರವಾರ ಘೋಷಿಸಿದರು. ಟ್ವಿಟರ್ ಕಂಪನಿಯು ಭಾರತ ಸರ್ಕಾರದೊಂದಿಗೆ ಘರ್ಷಣೆಯ ನಡುವೆ ಮತ್ತು ಇತ್ತೀಚೆಗೆ ವಿರೋಧಗಳ ನಡುವೆಯೇ ಈ ಸುದ್ದಿ ಬಂದಿದೆ. ಕಳೆದ 2+ ವರ್ಷಗಳಲ್ಲಿ ನಮ್ಮ ಭಾರತೀಯ ವ್ಯವಹಾರದ ನಿಮ್ಮ ನಾಯಕತ್ವಕ್ಕಾಗಿ ಮನೀಶ್ ಮಹೇಶ್ವರಿ ಅವರಿಗೆ ಧನ್ಯವಾದಗಳು. ವಿಶ್ವಾದ್ಯಂತದ ಹೊಸ ಮಾರುಕಟ್ಟೆಗಳಿಗೆ ಆದಾಯ ತಂತ್ರ ಮತ್ತು ಕಾರ್ಯಾಚರಣೆಗಳ ಉಸ್ತುವಾರಿಯಲ್ಲಿ ನಿಮ್ಮ ಹೊಸ ಅಮೆರಿಕ ಮೂಲದ ಜವಾಬ್ದಾರಿಗೆ ಅಭಿನಂದನೆಗಳು. ಟ್ವಿಟರ್‌ಗಾಗಿ ಈ ಪ್ರಮುಖ ಬೆಳವಣಿಗೆಯ ಅವಕಾಶವನ್ನು ನೀವು ಮುನ್ನಡೆಸುತ್ತಿರುವುದನ್ನು ನೋಡಿ ಉತ್ಸುಕನಾಗಿದ್ದೇನೆ “ಎಂದು ಟ್ವಿಟರ್‌ನ ಜಪಾನ್, ದಕ್ಷಿಣ ಕೊರಿಯಾ ಮತ್ತು ಏಷ್ಯಾ ಪೆಸಿಫಿಕ್ ವಿಭಾಗದ ಉಪಾಧ್ಯಕ್ಷ ಯು ಸಸಮೊಟೊ ಟ್ವೀಟ್ ಮಾಡಿದ್ದಾರೆ.

ಟ್ವಿಟರ್ ಇಂಡಿಯಾ ಮುಖ್ಯಸ್ಥ ಮನೀಶ್ ಮಹೇಶ್ವರಿ ಹೊಸ ಮಾರುಕಟ್ಟೆಗಳ ಮೇಲೆ ಕೇಂದ್ರೀಕರಿಸಿರುವ ಕಂದಾಯ ಕಾರ್ಯತಂತ್ರ ಮತ್ತು ಕಾರ್ಯಾಚರಣೆಯ  ಹಿರಿಯ ನಿರ್ದೇಶಕರ ಪಾತ್ರದಲ್ಲಿ ಅಮೆರಿಕಗೆ  ತೆರಳುತ್ತಿದ್ದಾರೆ. ಅವರು ಟ್ವಿಟರ್‌ನಲ್ಲಿ ಗ್ಲೋಬಲ್ ಸ್ಟ್ರಾಟಜಿ ಮತ್ತು ಆಪರೇಷನ್ಸ್‌ನ ಹಿರಿಯ ನಿರ್ದೇಶಕರಾದ ಡಯೆಟ್ರಾ ಮರಾ ಅವರಿಗೆ ವರದಿ ಮಾಡಲಿದ್ದಾರೆ ಎಂದು ಮನಿಕಂಟ್ರೋಲ್ ವರದಿ ಮಾಡಿದೆ.

ಮನೀಶ್ ಅವರ ಹೊಸ ಜವಾಬ್ದಾರಿ ಬಗ್ಗೆ ಇಮೇಲ್​​ನ  ಪ್ರತಿ ಮನಿ ಕಂಟ್ರೋಲ್ ಗೆ ಲಭಿಸಿದ್ದು ಅದರ ಪ್ರಕಾರ “ನಮ್ಮ ಭಾರತ ದೇಶದ ನಿರ್ದೇಶಕರಾಗಿ ಮತ್ತು ಭಾರತದ ಮುಖ್ಯಸ್ಥರಾಗಿ 2 ವರ್ಷಗಳಿಗಿಂತಲೂ ಹೆಚ್ಚು ಕಾಲ ತಂಡವನ್ನು ಬೆಂಬಲಿಸಿದ ನಂತರ, ಮನೀಶ್ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಹಿರಿಯ ನಿರ್ದೇಶಕರಾಗಿ ಹೊಸ ಪಾತ್ರವನ್ನು ವಹಿಸಲಿದ್ದಾರೆ, ಕಂದಾಯ ಕಾರ್ಯತಂತ್ರ ಮತ್ತು ಕಾರ್ಯಾಚರಣೆಗಳು ಹೊಸ ಮಾರುಕಟ್ಟೆ ಪ್ರವೇಶದ ಮೇಲೆ ಕೇಂದ್ರೀಕರಿಸುತ್ತವೆ. ಅವರು ಡಯೆಟ್ರಾ ಮರಾ ಅವರ ನೇತೃತ್ವದ ಅಡಿಯಲ್ಲಿ  ಕಾರ್ಯ ನಿರ್ವಹಿಸಲಿದ್ದಾರೆ ಎಂದಿದೆ.

ಇಮೇಲ್ ಪ್ರಕಾರ ಟ್ವಿಟರ್‌ನಲ್ಲಿ ಪ್ರಸ್ತುತ ಮಾರಾಟ ವಿಭಾಗದ ಮುಖ್ಯಸ್ಥ ಕನಿಕಾ ಮಿತ್ತಲ್ ಮತ್ತು ಟ್ವಿಟರ್‌ನ ಪ್ರಸ್ತುತ ಬಿಸಿನೆಸ್ ಹೆಡ್ ನೇಹಾ ಶರ್ಮಾ ಕತ್ಯಾಲ್ ಅವರು ಜಂಟಿಯಾಗಿ ಭಾರತದ ಟ್ವಿಟರ್ ಸಂಸ್ಥೆಯನ್ನು-ಮುನ್ನಡೆಸಲಿದ್ದಾರೆ. ಇವರಿಬ್ಬರು Twitter JAPAC / ಟ್ವಿಟರ್ ಜಪಾನ್‌ನ ಯು ಸಸಮೊಟೊಗೆ ವರದಿ ಮಾಡಲಿದ್ದಾರೆ.

ಅಂದಹಾಗೆ  ಈ ಹಠಾತ್ ವರ್ಗಾವಣೆಗೆ ಕಾರಣವೇನು ಎಂಬುದು ಸ್ಪಷ್ಟವಾಗಿಲ್ಲ. ಆದಾಗ್ಯೂ ಇತ್ತೀಚಿನ ದಿನಗಳಲ್ಲಿ ಹೊಸ ಐಟಿ ನಿಯಮಗಳ ಅನುಸರಣೆಗೆ ಸಂಬಂಧಿಸಿದಂತೆ ಸರ್ಕಾರ ಮತ್ತು ಟ್ವಿಟರ್ ನಡುವಿನ ತರ್ಕ ಆಗಿರಬಹುದೇ ಎಂಬುದು ಸದ್ಯದ ಊಹೆ.

ಇದನ್ನೂ ಓದಿ: ಟ್ವಿಟರ್ ಇಂಡಿಯಾ ಎಂಡಿ ಮನೀಶ್​ ಮಹೇಶ್ವರಿಗೆ ಕರ್ನಾಟಕ ಹೈಕೋರ್ಟ್‌ನಿಂದ ರಿಲೀಫ್

ಇದನ್ನೂ ಓದಿ: Twitter India: ಹಿಂದುಗಳ ಧಾರ್ಮಿಕ ಭಾವನೆಗೆ ಅವಮಾನದ ಆರೋಪ; ಟ್ವಿಟರ್ ಇಂಡಿಯಾ ಮುಖ್ಯಸ್ಥ ಮನೀಶ್​ ಮಹೇಶ್ವರಿ ವಿರುದ್ಧ ದೂರು

(Twitter India chief Manish Maheshwari Gets new US based role)

Published On - 6:18 pm, Fri, 13 August 21

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ