ಕಾನ್ಪುರ ಹಲ್ಲೆ ಪ್ರಕರಣ: ವ್ಯಕ್ತಿಯೊಬ್ಬರಲ್ಲಿ ಜೈ ಶ್ರೀರಾಮ್ ಎಂದು ಘೋಷಣೆ ಕೂಗುವಂತೆ ಒತ್ತಾಯಿಸಿದ ಆರೋಪಿಗಳಿಗೆ ಜಾಮೀನು
ಒಂದು ವಿಡಿಯೊದಲ್ಲಿ ಕೇಸರಿ ಸ್ಕಾರ್ಫ್ ಧರಿಸಿದ ಕೆಲವು ಪುರುಷರು ಇ-ರಿಕ್ಷಾ ಚಾಲಕ ಅಹ್ಮದ್ ಮೇಲೆ ಹಲ್ಲೆ ಮಾಡುತ್ತಿದ್ದು, ಆತ ದೇಶ ವಿರೋಧಿ ಘೋಷಣೆಗಳನ್ನು ಎತ್ತಿದ್ದಾನೆ ಎಂದು ಆರೋಪಿಸಿದ್ದಾರೆ.
ಕಾನ್ಪುರ: ಕಾನ್ಪುರದಲ್ಲಿ ವ್ಯಕ್ತಿಯ ಮೇಲೆ ಹಲ್ಲೆ ಮಾಡಿ, ‘ಜೈ ಶ್ರೀ ರಾಮ್’ ಎಂದು ಕೂಗುವಂತೆ ಒತ್ತಾಯಿಸಿದ ಪ್ರಕರಣದಲ್ಲಿ ಬಂಧಿತರಾಗಿದ್ದ ಮೂವರನ್ನು ಸ್ಥಳೀಯ ನ್ಯಾಯಾಲಯವು ಜಾಮೀನಿನ ಮೇಲೆ ಬಿಡುಗಡೆ ಮಾಡಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ. ಅಫ್ಸರ್ ಅಹ್ಮದ್ ಮೇಲೆ ಹಲ್ಲೆ ನಡೆದಾಗ ಅವರ ಐದು ವರ್ಷದ ಮಗಳು ತನ್ನ ತಂದೆಯನ್ನು ಬಿಟ್ಟುಬಿಡುವಂತೆ ಜನರಲ್ಲಿ ಮನವಿ ಮಾಡುವ ವಿಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದವು. ಒಂದು ವಿಡಿಯೊದಲ್ಲಿ ಕೇಸರಿ ಸ್ಕಾರ್ಫ್ ಧರಿಸಿದ ಕೆಲವು ಪುರುಷರು ಇ-ರಿಕ್ಷಾ ಚಾಲಕ ಅಹ್ಮದ್ ಮೇಲೆ ಹಲ್ಲೆ ಮಾಡುತ್ತಿದ್ದು, ಆತ ದೇಶ ವಿರೋಧಿ ಘೋಷಣೆಗಳನ್ನು ಎತ್ತಿದ್ದಾನೆ ಎಂದು ಆರೋಪಿಸಿದ್ದಾರೆ. ಅಹ್ಮದ್ ತನ್ನ ಯಾವುದೇ ಘೋಷಣೆಯನ್ನು ಕೂಗಿಲ್ಲ ಎಂದು ಪದೇ ಪದೇ ಹೇಳುತ್ತಿದ್ದನು. ಆತನ ಮಗಳು ಆತನನ್ನು ಬಿಟ್ಟುಬಿಡುವಂತೆ ಮನವಿ ಮಾಡಿದ್ದಾಳೆ. ತದನಂತರ ಪೊಲೀಸರು ಅಹ್ಮದ್ ನನ್ನು ರಕ್ಷಿಸಿ ಆತನನ್ನು ಮತ್ತು ಆತನ ಮಗಳನ್ನು ಪೊಲೀಸ್ ಠಾಣೆಗೆ ಕರೆದೊಯ್ದಿದ್ದರು.
“ಆರೋಪಿಗಳು ಏಳು ವರ್ಷಗಳಿಗಿಂತ ಕಡಿಮೆ ಶಿಕ್ಷೆ ಹೊಂದಿರುವ ಐಪಿಸಿ ಸೆಕ್ಷನ್ ಅಡಿಯಲ್ಲಿ ದಾಖಲಿಸಲಾಗಿದೆ ಮತ್ತು ನ್ಯಾಯಾಲಯದ ಮಾರ್ಗಸೂಚಿಗಳ ಪ್ರಕಾರ, ಅಂತಹ ಸೆಕ್ಷನ್ ಅಡಿಯಲ್ಲಿ ಆರೋಪಿತರಾದವರಿಗೆ ಜಾಮೀನು ನೀಡಬೇಕು. ಸ್ಥಳೀಯ ನ್ಯಾಯಾಲಯವು ಜಾಮೀನು ನೀಡಿದೆ ಮತ್ತು ಆದೇಶಗಳನ್ನು ಸ್ವೀಕರಿಸಿದ ನಂತರ ನಾವು ಅವರನ್ನು ಬಿಡುಗಡೆ ಮಾಡಿದ್ದೇವೆ ಎಂದು ಗೋವಿಂದನಗರ ಎಸಿಪಿ ವಿಕಾಸ್ ಕುಮಾರ್ ಪಾಂಡೆ ಹೇಳಿದ್ದಾರೆ.
ಗುರುವಾರ ಘಟನೆಗೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಲಾಗಿದೆ. ಅವರನ್ನು ಅಜಯ್ ರಾಜೇಶ್ “ಬ್ಯಾಂಡ್ ವಾಲಾ” ಅಮನ್ ಗುಪ್ತಾ ಮತ್ತು ರಾಹುಲ್ ಕುಮಾರ್ ಎಂದು ಗುರುತಿಸಲಾಗಿದೆ.
ಮೂವರು ಆರೋಪಿಗಳು ಮತ್ತು 10 ಅಪರಿಚಿತ ವ್ಯಕ್ತಿಗಳ ವಿರುದ್ಧ ಐಪಿಸಿ ಸೆಕ್ಷನ್ 147 (ಗಲಭೆ), 323 (ಸ್ವಯಂಪ್ರೇರಣೆಯಿಂದ ನೋವನ್ನು ಉಂಟುಮಾಡುವುದು), 504 (ಶಾಂತಿ ಉಲ್ಲಂಘನೆಗೆ ಪ್ರಚೋದಿಸುವ ಉದ್ದೇಶದಿಂದ ಅವಮಾನ) ಮತ್ತು 506 (ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ಬಂಧಿತರನ್ನು ಬಿಡುಗಡೆಗೆ ಆಗ್ರಹಿಸಿ ಬಜರಂಗದಳದ ಸದಸ್ಯರು ಸ್ಥಳೀಯ ಡಿಸಿಪಿ ಕಚೇರಿ ಎದುರು ಗುರುವಾರ ತಡರಾತ್ರಿ ಪ್ರತಿಭಟನೆ ನಡೆಸಿದ್ದರು. ಪ್ರತಿಭಟನೆಯ ಸಮಯದಲ್ಲಿ, ‘ಜೈ ಶ್ರೀ ರಾಮ್’ ಮತ್ತು ‘ವಂದೇ ಮಾತರಂ’ ಘೋಷಣೆಗಳನ್ನೂ ಕೂಗಲಾಗಿದೆ.
ಡಿಸಿಪಿ (ದಕ್ಷಿಣ) ರವೀನಾ ತ್ಯಾಗಿ ಗುರುವಾರ ಅಹ್ಮದ್ ಕುಟುಂಬವನ್ನು ಭೇಟಿ ಮಾಡಿದ್ದಾರೆ. ಅಹ್ಮದ್ ಮೇಲೆ ನಡೆದ ಹಲ್ಲೆಯು ಸ್ಲಂನಲ್ಲಿ ವಾಸಿಸುವ ವಿವಿಧ ಸಮುದಾಯಗಳಿಗೆ ಸೇರಿದ ಎರಡು ಕುಟುಂಬಗಳ ನಡುವೆ ಒಂದು ತಿಂಗಳ ಹಿಂದೆ ನಡೆದ ವಿವಾದಕ್ಕೆ ಸಂಬಂಧಿಸಿದೆ ಎಂದು ಪೊಲೀಸರು ಈ ಹಿಂದೆ ಹೇಳಿದ್ದರು.
ಇದನ್ನೂ ಓದಿ: ಚೀನಾದಲ್ಲಿ ರೂಪಾಂತರಿ ಡೆಲ್ಟಾ ಪ್ಲಸ್ನಿಂದ ಸೋಂಕಿತರಾದರೆ ಮನೆಯಿಂದ ಹೊರಬಾರದಂತೆ ಗೃಹಬಂಧನ!
ಇದನ್ನೂ ಓದಿ: ತಮಿಳುನಾಡಿನಲ್ಲಿ ಲೀಟರ್ ಪೆಟ್ರೋಲ್ ಬೆಲೆ ₹3 ಇಳಿಕೆ: ರಾಜ್ಯ ಬಜೆಟ್ನಲ್ಲಿ ಹಣಕಾಸು ಸಚಿವ ತ್ಯಾಗರಾಜನ್ ಘೋಷಣೆ
(Assaulting a man in Kanpur and forcing him to chant Jai Shri Ram Three accused get bail)