ಚೀನಾದಲ್ಲಿ ರೂಪಾಂತರಿ ಡೆಲ್ಟಾ ಪ್ಲಸ್ನಿಂದ ಸೋಂಕಿತರಾದರೆ ಮನೆಯಿಂದ ಹೊರಬಾರದಂತೆ ಗೃಹಬಂಧನ!
ವಿಷಯ ಅದಲ್ಲ. ಸೋಂಕಿತ ಒಳಗಡೆ ಹೋದ ನಂತರ ಅಧಿಕಾರಿಗಳು ಏನು ಮಾಡುತ್ತಿದ್ದಾರೆ ಅಂತ ಸ್ವಲ್ಪ ನೋಡಿ. ಅವನ ಮನೆ ಬಾಗಿಲಿಗೆ ಕಬ್ಬಿಣದ ಸರಳುಗಳನ್ನು ಜಡಿದು ಮನೆಯನ್ನು ಜೈಲಾಗಿ ಪರಿವರ್ತಿಸುತ್ತಿದ್ದಾರೆ!
ವಿಡಿಯೋನಲ್ಲಿ ಮೊಬೈಲ್ ಹಿಡಿದಿಕೊಂಡು ಕುಣಿಯುತ್ತಿರುವ ಒಬ್ಬ ವ್ಯಕ್ತಿ ನಿಮಗೆ ಕಾಣುತ್ತಿದ್ದಾನೆ. ಅವನ ಒಂದು ಕೈಯಲ್ಲಿ ಮೊಬೈಲ್ ಇದೆ ಮತ್ತೊಂದರಲ್ಲಿ ಮಾಸ್ಕ್. ಇದು ಚೀನಾ ದೇಶದ ಯಾವುದೋ ಒಂದು ಭಾಗದಲ್ಲಿ ಮೊಬೈಲ್ ಫೋನಿನಲ್ಲಿ ಸೆರೆಹಿಡಿದಿರುವ ದೃಶ್ಯ. ಓಕೆ, ಅವನು ಹತಾಷೆಯಲ್ಲಿ ಹಾಗೆ ಡ್ಯಾನ್ಸ್ ಮಾಡುತ್ತಿದ್ದಾನೆಂದರೆ ನೀವು ನಂಬುತ್ತೀರಾ? ಕುಣಿಯಲು ಪ್ರೇರೇಪಿಸುವಂಥ ಹತಾಷೆ ಹೇಗಿರುತ್ತೆ ಅನ್ನೋದು ನಿಮ್ಮ ಪ್ರಶ್ನೆಯಾಗಿರಬಹುದು. ಅಸಲಿಗೆ ಹತಾಷೆಯೇನೆಂದರೆ, ಅವನಿಗೆ ಕೋವಿಡ್ ಸೋಂಕು ತಾಕಿದೆ. ಮಾಮೂಲಿ ಸಾರ್ಸ್-ಕೊವ್-2 ಸೋಂಕಿನಿಂದ ಅವನು ಬಳಲುತ್ತಿಲ್ಲ, ಅದರ ಅಪಾಯಕಾರಿ ರೂಪಾಂತರಿ ಡೆಲ್ಟಾ ಪ್ಲಸ್ನಿಂದ ಪೀಡಿತನಾಗಿದ್ದಾನೆ.
ಸದರಿ ಪ್ರಾಂತ್ಯದ ಸ್ಥಳೀಯ ಆಡಳಿತ ಅವನಿಗೆ ಮನೆಬಿಟ್ಟು ಹೊರಬಾರದಂತೆ ತಾಕೀತು ಮಾಡಿತ್ತು, ಅವನಿಗದು ಸಾಧ್ಯವಾಗಿಲ್ಲ. ಮನೆಯಿಂದ ಆಚೆ ಬಂದು ತನ್ನ ಬೇಸರ ನೀಗಿಸಿಕೊಳ್ಳಲೋ ಅಥವಾ ಹತಾಷೆಯಿಂದಲೂ ಕುಣಿಯಲಾರಂಭಿಸಿದ್ದಾನೆ. ಆದರೆ ಅಧಿಕಾರಿಗಳು ಆದನ್ನು ಗಮನಿಸಿಬಿಟ್ಟಿದ್ದಾರೆ. ಮನೆಯೊಳಗೆ ಹೋಗು ಅಂತ ಗದರಿದರೂ ಏನನ್ನೋ ಹೇಳುವ ಪ್ರಯತ್ನ ಮಾಡಿದ್ದಾನೆ. ಅವರು ಸೋಂಕಿತನ ಹತ್ತಿರ ಹೋಗಿ ಮನೆಯೊಳಗೆ ನೂಕುವಂತೆಯೂ ಇಲ್ಲ! ಅದು ಅವನಿಗೂ ಗೊತ್ತಿದೆ. ಹಾಗಾಗಿ, ಅವರಿಗೆ ಆಟವಾಡಿಸುತ್ತಿದ್ದಾನೆ. ಅಂತಿಮವಾಗಿ, ಅಧಿಕಾರಿಗಳು ಅವನನ್ನು ಮನೆಯೊಳಗೆ ಕಳಿಸುವಲ್ಲಿ ಸಫಲರಾಗಿದ್ದಾರೆ.
ವಿಷಯ ಅದಲ್ಲ. ಸೋಂಕಿತ ಒಳಗಡೆ ಹೋದ ನಂತರ ಅಧಿಕಾರಿಗಳು ಏನು ಮಾಡುತ್ತಿದ್ದಾರೆ ಅಂತ ಸ್ವಲ್ಪ ನೋಡಿ. ಅವನ ಮನೆ ಬಾಗಿಲಿಗೆ ಕಬ್ಬಿಣದ ಸರಳುಗಳನ್ನು ಜಡಿದು ಮನೆಯನ್ನು ಜೈಲಾಗಿ ಪರಿವರ್ತಿಸುತ್ತಿದ್ದಾರೆ! ಸೋಂಕಿತ ಸಂಪೂರ್ಣವಾಗಿ ಚೇತರಿಸಿಕೊಳ್ಳದ ಹೊರತು ಮನೆಯಿಂದ ಹೊರಬರುವಂತಿಲ್ಲ.
ಮೂರನೇ ಆಲೆ ವಿರುದ್ಧ ಚೀನಾ ಮತ್ತು ಇತರ ದೇಶಗಳಲ್ಲಿ ಇಂಥ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ನಮ್ಮಲ್ಲೂ ಇಂಥ ಶಿಸ್ತು ಜಾರಿಗೆ ಬಂದರೆ ಮೂರನೇ ಅಲೆಯ ಪ್ರಭಾವವನ್ನು ಕಡಿಮೆ ಮಾಡಬಹುದು.
ಇದನ್ನೂ ಓದಿ: ಆಜಾದಿ ಕಾ ಅಮೃತ್ ಮಹೋತ್ಸವದಲ್ಲಿ ಭಾಗಿಯಾಗಲು ತಯಾರಾಗಿದ್ದೀರಾ? ಎಲ್ಲಿ ನೀವು ಹಾಡಿರುವ ರಾಷ್ಟ್ರಗೀತೆ ವಿಡಿಯೋ?