ಆಜಾದಿ ಕಾ ಅಮೃತ್ ಮಹೋತ್ಸವದಲ್ಲಿ ಭಾಗಿಯಾಗಲು ತಯಾರಾಗಿದ್ದೀರಾ? ಎಲ್ಲಿ ನೀವು ಹಾಡಿರುವ ರಾಷ್ಟ್ರಗೀತೆ ವಿಡಿಯೋ?
ರಾಷ್ಟ್ರಗೀತೆಯನ್ನು ಏಕಾಂಗಿ ಇಲ್ಲವೇ ಗುಂಪಾಗಿ ಹಾಡಬಹುದು. ವಿಡಿಯೋ ಅಪ್ಲೋಡ್ ಮಾಡುವ ಮೊದಲು ಸದರಿ ಪೋರ್ಟಲ್ನಲ್ಲಿ ಹೆಸರು ಮತ್ತು ವಿವರಗಳನ್ನು ನೋಂದಣಿ ಮಾಡಿಕೊಳ್ಳಬೇಕು.
ಒಂದು ನೂರ ಮೂವತ್ತು ಕೋಟಿ ಭಾರತೀಯರು ರವಿವಾರಂದು ದೇಶದ ಅತಿ ದೊಡ್ಡ ಸಂಭ್ರಮದಲ್ಲಿ ಭಾಗಿಯಾಗಲಿದ್ದಾರೆ. ಭಾರತ ತನ್ನ 75ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ (ಅಮೃತ ಮಹೋತ್ಸವ) ಅದ್ದೂರಿ ಮತ್ತು ವಿಜೃಂಭಣೆಯಿಂದ ಆಚರಿಸಲು ಸಿದ್ಧತೆಗಳು ಭರದಿಂದ ಸಾಗಿವೆ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು 2022 ರೊಳಗೆ ಭಾರತವನ್ನು ಆತ್ಮನಿರ್ಭರ ಮಾಡುವ ಬಗ್ಗೆ ಯಾವಾಗಲೂ ಹೇಳುತ್ತಿರುತ್ತಾರೆ ಮತ್ತು ಅದನ್ನು ಸಾಧಿಸುವೆಡೆ ತಮ್ಮ ಸರ್ಕಾರ ಮತ್ತು ಅಧಿಕಾರಿ ವರ್ಗದೊಂದಿಗೆ ಪ್ರಯತ್ನಶೀಲರೂ ಆಗಿದ್ದಾರೆ. ಭಾರತ ಸ್ವಾತಂತ್ರ್ಯೋತ್ಸವ 75 ನೇ ವಾರ್ಷಿಕೋತ್ಸವ ಆಚರಿಸುತ್ತಿರುವ ಈ ಸಂದರ್ಭದಲ್ಲಿ ಆತ್ಮನಿರ್ಭರ್ ಭಾರತದ ಕಲ್ಪನೆ ಹೆಚ್ಚು ಮಹತ್ವ ಪಡೆದುಕೊಳ್ಳುತ್ತದೆ.
ಸರಿ, ಆಜಾದಿ ಕಾ ಅಮೃತ್ ಮಹೋತ್ಸವದ ಬಗ್ಗೆ ಮಾತಾಡೋಣ. ದೇಶದ ಪ್ರತಿಯೊಬ್ಬ ನಾಗರಿಕ ಸ್ವಾತಂತ್ರ್ಯದ ಮಹತ್ವ ಮತ್ತು ಅದಕ್ಕಾಗಿ ನಡೆದ ಹೋರಾಟ ಮತ್ತು ಕೋಟ್ಯಾಂತರ ಬಲಿದಾನಗಳ ಮಹತ್ವ ತಿಳಿದುಕೊಂಡು ಆಜಾದಿ ಕಾ ಅಮೃತ್ ಮಹೋತ್ಸವ ಅಭಿಯಾನದಲ್ಲಿ ಹೆಚ್ಚಿನ ಗ್ರಹಿಕೆ ಮತ್ತು ಸ್ಪಷ್ಟತೆಯೊಂದಿಗೆ ಭಾಗಿಯಾಗಲು ಸಾಧ್ಯವಾಗುವಂತೆ ರಾಷ್ಟ್ರಗೀತೆಯನ್ನು ಹಾಡಿ ಅದರ ವಿಡಿಯೋ ಮಾಡಿ https://raashtragaan.in ಈ ಪೋರ್ಟಲ್ಗೆ ಅಪ್ಲೋಡ್ ಮಾಡಬೇಕೆಂದು ಕೇಂದ್ರ ಸರ್ಕಾರ ಹೇಳಿದೆ.
ರಾಷ್ಟ್ರಗೀತೆಯನ್ನು ಏಕಾಂಗಿ ಇಲ್ಲವೇ ಗುಂಪಾಗಿ ಹಾಡಬಹುದು. ವಿಡಿಯೋ ಅಪ್ಲೋಡ್ ಮಾಡುವ ಮೊದಲು ಸದರಿ ಪೋರ್ಟಲ್ನಲ್ಲಿ ನಿಮ್ಮ ಹೆಸರು ಮತ್ತು ವಿವರಗಳನ್ನು ನೋಂದಣಿ ಮಾಡಿಕೊಳ್ಳಬೇಕು.
ಅತ್ಯುತ್ತಮವೆನಿಸುವ 100 ವಿಡಿಯೋಗಳನ್ನು ಟಿವಿ ಚ್ಯಾನೆಲ್ಗಳಲ್ಲಿ ಎಲ್ಲ ಸಾಮಾಜಿಕ ಜಾಲತಾಣಗಳಲ್ಲಿ 15 ನೇ ಆಗಸ್ಟ್ನಂದು ಬಿತ್ತರಿಸಲಾಗುತ್ತದೆ. ಇದು ಜನರ ಆಂದೋಳನ ಅನಿಸಲಿದೆ ಎಂದು ಸರ್ಕಾರ ಹೇಳಿದೆ.
ಇದನ್ನೂ ಓದಿ: ‘ಆಜಾದಿ ಕಾ ಅಮೃತ್ ಮಹೋತ್ಸವ’ದಲ್ಲಿ ರಾಷ್ಟ್ರಗೀತೆ ಹಾಡುವ ಮೂಲಕ ದಾಖಲೆ ನಿರ್ಮಿಸೋಣ: ಕೇಂದ್ರ ಸಚಿವ ಕಿಶನ್ ರೆಡ್ಡಿ