ಮಗು ಹಾರುತಿದೆ ನೋಡಿದಿರಾ? ಮಗು ಹಾರುವ ವಿಡಿಯೋ ವೈರಲ್, ಅರ್ಧಕೋಟಿಗೂ ಹೆಚ್ಚು ಜನರ ವೀಕ್ಷಣೆ!

ಮಗು ಹಾರುತಿದೆ ನೋಡಿದಿರಾ? ಮಗು ಹಾರುವ ವಿಡಿಯೋ ವೈರಲ್, ಅರ್ಧಕೋಟಿಗೂ ಹೆಚ್ಚು ಜನರ ವೀಕ್ಷಣೆ!

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Aug 11, 2021 | 12:21 AM

ಪತಿಯ ಹಾಸ್ಯ ಪ್ರಜ್ಞೆಯನ್ನು ಕೆಲವರು ಮೆಚ್ಚಿ ಕಾಮೆಂಟ್ ಮಾಡಿದರೆ ಇನ್ನೂ ಕೆಲವರು ಇದು ಅತಿಯಾಯಿತು, ಮಗುವಿನ ತಾಯಿ ಎಷ್ಟು ಗಾಬರಿಯಾಗಿದ್ದಾಳೆ ಅಂತ ಸ್ವಲ್ಪ ನೋಡಿ, ಅಂತ ಹೇಳಿದ್ದಾರೆ.

ಗಂಡಹೆಂಡಿರ ನಡುವೆ ತಮಾಷೆ, ಆಟ-ತುಂಟಾಟ, ತಾಪ-ಮನಸ್ತಾಪ, ಮುನಿಸು, ಜಗಳ, ಪರಸ್ಪರ ಕಾಲೆಳೆಯುವುದು ಮೊದಲಾದವೆಲ್ಲ ನಡೆಯುತ್ತಿರುತ್ತವೆ. ಇವೆಲ್ಲ ಇಲ್ಲದಿದ್ದರೆ ಅವರಿಗೆ ಬದುಕು ನೀರಸವೆನಿಸುತ್ತದೆ. ಗಂಡ ಹೆಂಡತಿಯನ್ನು ಗೋಳು ಹೊಯ್ದುಕೊಳ್ಳುವುದು ಮತ್ತು ಹೆಂಡತಿ ಗಂಡನನ್ನು-ಜೀವನ ರಂಗುರಂಗಾಗಿಸುವ ಅಂಶಗಳು ಇವೇ. ಈ ವಿಡಿಯೋ ನೋಡಿ. ಹೆಂಡತಿಯನ್ನು ಕೀಟಲೆ ಮಾಡಿ ಗಾಬರಿಗೊಳಿಸುವ ಭರದಲ್ಲಿ ಗಂಡನೊಬ್ಬ ಆಕೆಯ ಜೀವವೇ ಬಾಯಿಗೆ ಬರುವಂತೆ ಮಾಡಿದ್ದಾನೆ. ಈ ವಿಡಿಯೋ ಯಾವ ದೇಶದ್ದು ಅನ್ನೋದು ಗೊತ್ತಾಗಿಲ್ಲವಾದರೂ ವಿಶ್ವದಾದ್ಯಂತ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವ 50 ಲಕ್ಷಕ್ಕೂ ಹೆಚ್ಚು ಜನ ಇದನ್ನು ವೀಕ್ಷಿಸಿ, ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾರೆ.

ಪತಿಯ ಹಾಸ್ಯ ಪ್ರಜ್ಞೆಯನ್ನು ಕೆಲವರು ಮೆಚ್ಚಿ ಕಾಮೆಂಟ್ ಮಾಡಿದರೆ ಇನ್ನೂ ಕೆಲವರು ಇದು ಅತಿಯಾಯಿತು, ಮಗುವಿನ ತಾಯಿ ಎಷ್ಟು ಗಾಬರಿಯಾಗಿದ್ದಾಳೆ ಅಂತ ಸ್ವಲ್ಪ ನೋಡಿ, ಅಂತ ಹೇಳಿದ್ದಾರೆ.
ವಿಡಿಯೋನಲ್ಲಿ ಒಂದು ವರ್ಷದ ಪಾಪು ಬೆನ್ನಿಗೆ ಬಲೂನುಗಳನ್ನು ಕಟ್ಟಿಕೊಂಡು ಗಾಳಿಯಲ್ಲಿ ಮೇಲಕ್ಕೆ ಹೋಗುತ್ತಿರುವುದು ಕಾಣುತ್ತಿದೆ.

ಅದನ್ನು ಕಂಡು ಗಾಬರಿಯಾಗುವ ಮಗುವಿನ ತಾಯಿ, ‘ಎಮರ್ಸನ್! ಓ ದೇವರೇ, ಬೇಬಿ ಹಾರುತ್ತಿದೆ, ಹಿಡಿ ಅದನ್ನ,’ ಅಂತ ಅರಚುತ್ತಾ ಮಗುವನ್ನು ಹಿಡಿಯಲು ಓಡುತ್ತಾಳೆ. ಅಷ್ಟರಲ್ಲಿ ಮರೆಯಲ್ಲಿ ನಿಂತು ಮಗು ಗಾಳಿಯಲ್ಲಿ ಮೇಲಕ್ಕೆ ಹೋಗುತ್ತಿರುವ ಹಾಗೆ ನಿಧಾನಕ್ಕೆ ಮೇಲಕ್ಕೆತ್ತುತ್ತಿದ್ದ ಆಕೆಯ ಪತಿರಾಯ (ಹೆಸರು ಎಮರ್ಸನ್ ಅಂತ ಕಾಣುತ್ತೆ) ಆಚೆ ಬರುತ್ತಾನೆ. ವಿಷಯ ಅರ್ಥ ಮಾಡಿಕೊಂಡ ಆಕೆ ನಿರಾಳಳಾಗಿ ನಗಲಾರಂಭಿಸುತ್ತಾಳೆ.

ಗಮನಿಸಬೇಕಾದ ಅಂಶವೆಂದರೆ, ಮಗುವಿಗೆ ಏನಾಗುತ್ತಿದೆ ಅನ್ನವುದರ ಪರಿವೆಯೇ ಇಲ್ಲ, ತನ್ನ ಪಾಡಿಗೆ ತಾನು ಮುಗಳ್ನಗುತ್ತಿದೆ!

ಈ ವಿಡಿಯೋ ಕೇವಲ 8 ಸೆಕೆಂಡ್ ಅವಧಿಯದ್ದು ಮಾತ್ರ. ಆದರೆ, ಅದು ಸೃಷ್ಟಿಸಿರುವ ಹವಾ ಎಣಿಕೆಗೆ ನಿಲುಕದ್ದು.

ref_src=twsrc%5Etfw%7Ctwcamp%5Etweetembed%7Ctwterm%5E1423741633196085250%7Ctwgr%5E%7Ctwcon%5Es1_c10&ref_url=https%3A%2F%2Findianexpress.com%2Farticle%2Ftrending%2Ftrending-globally%2Fwomans-hilarious-reaction-to-flying-baby-has-netizens-amused-7444161%2F

ಇದನ್ನೂ ಓದಿ: ಆಜಾದಿ ಕಾ ಅಮೃತ್ ಮಹೋತ್ಸವದಲ್ಲಿ ಭಾಗಿಯಾಗಲು ತಯಾರಾಗಿದ್ದೀರಾ? ಎಲ್ಲಿ ನೀವು ಹಾಡಿರುವ ರಾಷ್ಟ್ರಗೀತೆ ವಿಡಿಯೋ?