ಟ್ವಿಟರ್ ಇಂಡಿಯಾ ಎಂಡಿ ಮನೀಶ್ ಮಹೇಶ್ವರಿಗೆ ಕರ್ನಾಟಕ ಹೈಕೋರ್ಟ್‌ನಿಂದ ರಿಲೀಫ್
Manish Maheshwari: ಟ್ವಿಟರ್ ಇಂಡಿಯಾ ಎಂಡಿಗೆ ಕರ್ನಾಟಕ ಹೈಕೋರ್ಟ್‌ನಿಂದ ರಿಲೀಫ್ ದೊರೆತಿದೆ.
ಬೆಂಗಳೂರು: ಟ್ವಿಟರ್ ಇಂಡಿಯಾ ಎಂಡಿಗೆ ಕರ್ನಾಟಕ ಹೈಕೋರ್ಟ್‌ನಿಂದ ರಿಲೀಫ್ ದೊರೆತಿದೆ. ಯುಪಿ ಪೊಲೀಸರ ನೋಟಿಸ್ ಮಾರ್ಪಡಿಸಿದ ರಾಜ್ಯ ಹೈಕೋರ್ಟ್, ಸಿಆರ್‌ಪಿಸಿ 41A ನೋಟಿಸ್ ಅನ್ನು ಸಿಆರ್‌ಪಿಸಿ 160ಗೆ ಮಾರ್ಪಾಡು ಮಾಡಿ ಆದೇಶಿಸಿದೆ. ಇದರೊಂದಿಗೆ ಉತ್ತರ ಪ್ರದೇಶ ಪೊಲೀಸರಿಂದ ಬಂಧನ ಭೀತಿ ಎದುರಿಸುತ್ತಿದ್ದ ಬೆಂಗಳೂರು ನಿವಾಸಿ ಮನೀಶ್ ಅವರಿಗೆ ನೆಮ್ಮದಿ ಸಿಕ್ಕಂತೆ ಆಗಿದೆ.
ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ: ಟ್ವಿಟರ್ ಸಂಸ್ಥೆಗೆ ಮನೀಶ್ ಮಹೇಶ್ವರಿ ಮುಖ್ಯಸ್ಥರಲ್ಲ. ಪ್ರಕರಣದಲ್ಲಿ ಅವರನ್ನು ಆರೋಪಿ ಎಂದು ಹೆಸರಿಸಿಲ್ಲ. ಟ್ವಿಟರ್‌ನ ಆಡಳಿತದಲ್ಲಿ ಮನೀಶ್ ಮಹೇಶ್ವರಿ ಪಾತ್ರವಿಲ್ಲ. ಟ್ವಿಟರ್ ಕಂಟೆಂಟ್ ಮೇಲೆ ಮನೀಶ್‌ಗೆ ನಿಯಂತ್ರಣವಿಲ್ಲ. ಹೀಗಾಗಿ ತನಿಖೆ ನೆಪದಲ್ಲಿ ಕಿರುಕುಳವಾಗಬಾರದು ಎಂದು ನ್ಯಾ. ಜಿ. ನರೇಂದರ್ ಅವರ ಏಕ ಸದಸ್ಯ ಪೀಠ ಆದೇಶ ನೀಡಿದೆ. ಗಾಜಿಯಾಬಾದ್ ಪೊಲೀಸರು ಸಮನ್ಸ್ ಜಾರಿ ಮಾಡಿದ ನಂತರ ಜೂನ್ 23ರಂದು ಕರ್ನಾಟಕ ಹೈಕೋರ್ಟ್ನಲ್ಲಿ ಈ ಸಂಬಂಧ ಅರ್ಜಿ ದಾಖಲಾಗಿತ್ತು.
ಏನಿದು ಪ್ರಕರಣ: ಗಾಜಿಯಾಬಾದ್ ಹಲ್ಲೆ ಪ್ರಕರಣದಲ್ಲಿ ಉತ್ತರ ಪ್ರದೇಶ ಪೊಲೀಸರು ಸಮನ್ಸ್ ಜಾರಿ ಮಾಡಿರುವ ಟ್ವಿಟರ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ (twitter india) ಮನೀಶ್ ಮಹೇಶ್ವರಿ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ (karnataka high court) ವಿಚಾರಣೆಗೆ ಅಂಗೀಕರಿಸಿ, ವಿಚಾರಣೆಯನ್ನು ಮುಂದೂಡಿತ್ತು.
ವಿಚಾರಣೆ ಮುಗಿಯುವವರೆಗೆ ಮನೀಶ್ ಮಹೇಶ್ವರಿ ಅವರನ್ನು ಬಂಧಿಸುವಂತಿಲ್ಲ ಎಂದು ಹೇಳಿದ್ದ ನ್ಯಾಯಮೂರ್ತಿ ಜಿ.ನಾಗೇಂದ್ರ ಅವರ ಏಕಸದಸ್ಯ ನ್ಯಾಯಪೀಠ, ಪೊಲೀಸರು ವರ್ಚುವಲ್ ಮಾದರಿಯಲ್ಲಿ ವಿಚಾರಣೆ ನಡೆಸಬಹುದು. ಯಾವುದೇ ಬಲವಂತದ ಕ್ರಮ ಕೈಗೊಳ್ಳಬಾರದು ಎಂದು ಹೈಕೋರ್ಟ್ ಉತ್ತರ ಪ್ರದೇಶದ ಲೋನಿ ಬಾರ್ಡರ್ ಪೊಲೀಸರಿಗೆ ಸೂಚನೆ ನೀಡಿತ್ತು.
ಉತ್ತರ ಪ್ರದೇಶ ಪೊಲೀಸರು ಭಾರತೀಯ ಅಪರಾಧ ದಂಡ ಸಂಹಿತೆಯ (ಸಿಆರ್‌ಪಿಸಿ) ಸೆಕ್ಷನ್ 41ಎ ಅಡಿಯಲ್ಲಿ ನೀಡಿರುವ ನೋಟಿಸ್ ಅನ್ನು ಮನೀಶ್ ಮಹೇಶ್ವರಿ ಹೈಕೋರ್ಟ್ನಲ್ಲಿ ಪ್ರಶ್ನಿಸಿದ್ದರು. ‘ಕೇವಲ ಎರಡು ದಿನಗಳ ಹಿಂದೆ ನಾನು ಸಾಕ್ಷಿಯಾಗಿದ್ದೆ. ಆದರೆ ಈಗ ನನ್ನನ್ನು ಆರೋಪಿ ಎಂದು ಪೊಲೀಸರು ಹೇಳುತ್ತಿದ್ದಾರೆ’ ಎಂದು ವಿವರಿಸಿದ್ದರು.
ಗಾಜಿಯಾಬಾದ್ ಪೊಲೀಸರು ಜೂನ್ 17ರಂದು ಕ್ರಿಮಿನಲ್ ಪ್ರೊಸೀಜರ್ ಕೋಡ್ ಅನ್ವಯ ನನ್ನನ್ನು ಸಾಕ್ಷಿ ಎಂದು ಉಲ್ಲೇಖಿಸಿ ನೊಟೀಸ್ ಕಳಿಸಿದ್ದರು. ಆದರೆ ಎರಡು ದಿನಗಳ ನಂತರ ಸಿಆರ್‌ಪಿಸಿ ಸೆಕ್ಷನ್ 41ರ ಪ್ರಕಾರ ಮತ್ತೊಂದು ನೊಟೀಸ್ ಜಾರಿ ಮಾಡಿದರು. ಈ ಸೆಕ್ಷನ್ ಅನ್ವಯ ನೊಟೀಸ್ ಜಾರಿಯಾದರೆ ಸಮನ್ಸ್ ಜಾರಿ ದಾಖಲೆಯಲ್ಲಿರುವ ಹೆಸರಿನವರನ್ನು ಬಂಧಿಸಲು ಅವಕಾಶ ಇರುತ್ತದೆ.
ಬೆಂಗಳೂರು ನಿವಾಸಿ ಮಹೇಶ್ವರಿ (Manish Maheshwari) ಬುಧವಾರ ಉತ್ತರ ಪ್ರದೇಶ ಪೊಲೀಸರು ಜಾರಿ ಮಾಡಿರುವ ಸಮನ್ಸ್ ಪ್ರಶ್ನಿಸಿ ಕರ್ನಾಟಕ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಈ ಆರೋಪಗಳಿಗೂ ನನಗೂ ಯಾವುದೇ ಸಂಬಂಧವಿಲ್ಲ. ಯಾರೋ ಆರೋಪಿಗಳು ವಿಡಿಯೊ ಅಪ್ಲೋಡ್ ಮಾಡಿದ್ದರೆ, ಅವರು ನನ್ನ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ ಎಂದು ಮಹೇಶ್ವರಿ ಹೇಳಿದ್ದರು.
Karnataka HC quashes UP Police's notice sent to Twitter India MD Manish Maheshwari under Section 41A of CrPC in connection with a video related to assault on an elderly man in Ghaziabad
Court allows police to record his statement via virtual mode or by visiting his office/home pic.twitter.com/jfyXVGHEET
— ANI (@ANI) July 23, 2021
Also Read:
ಕರ್ನಾಟಕ ಹೈಕೋರ್ಟ್ನಲ್ಲಿ ಟ್ವಿಟರ್ ಎಂಡಿಗೆ ತಾತ್ಕಾಲಿಕ ರಿಲೀಫ್: ಜೂನ್ 28ಕ್ಕೆ ವಿಚಾರಣೆ ಮುಂದೂಡಿಕೆ
(twitter india md Manish Maheshwari gets relief from arrest by karnataka high court)
Published On - 3:43 pm, Fri, 23 July 21