AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟ್ವಿಟರ್​ ಇಂಡಿಯಾ ಎಂಡಿ ಮನೀಶ್​ ಮಹೇಶ್ವರಿಗೆ ನೀಡಿದ ಮಧ್ಯಂತರ ರಕ್ಷಣೆ ವಿರುದ್ಧ ಸುಪ್ರೀಂಕೋರ್ಟ್​ ಮೆಟ್ಟಿಲೇರಿದ ಉತ್ತರ ಪ್ರದೇಶ ಪೊಲೀಸ್​

Manish Maheshwari: ಉತ್ತರ ಪ್ರದೇಶ ಪೊಲೀಸರ ಸಮನ್ಸ್​​ಗೆ ಉತ್ತರಿಸಲು ಮನೀಶ್ ಮಹೇಶ್ವರಿ ತಮ್ಮ ವಿರುದ್ಧ ಪ್ರಕರಣ ದಾಖಲಾದ ಲೋನಿ ಠಾಣೆಗೆ ಹೋಗಿರಲಿಲ್ಲ. ಬದಲಿಗೆ ವಿಡಿಯೋ ಕಾನ್ಫರೆನ್ಸ್​ ಮೂಲಕವೇ ವಿಚಾರಣೆಗೆ ಎದುರಿಸುವುದಾಗಿ ತಿಳಿಸಿದ್ದರು. ಅಷ್ಟರಲ್ಲಿ ಕರ್ನಾಟಕ ಹೈಕೋರ್ಟ್​​ನಿಂದ ಮಧ್ಯಂತರ ರಕ್ಷಣೆಯೂ ಸಿಕ್ಕಿತ್ತು.

ಟ್ವಿಟರ್​ ಇಂಡಿಯಾ ಎಂಡಿ ಮನೀಶ್​ ಮಹೇಶ್ವರಿಗೆ ನೀಡಿದ ಮಧ್ಯಂತರ ರಕ್ಷಣೆ ವಿರುದ್ಧ ಸುಪ್ರೀಂಕೋರ್ಟ್​ ಮೆಟ್ಟಿಲೇರಿದ ಉತ್ತರ ಪ್ರದೇಶ ಪೊಲೀಸ್​
ಮನೀಶ್ ಮಹೇಶ್ವರಿ
TV9 Web
| Updated By: Lakshmi Hegde|

Updated on:Jun 29, 2021 | 12:22 PM

Share

ಟ್ವಿಟರ್​ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕ ಮನೀಶ್ ಮಹೇಶ್ವರಿ ವಿರುದ್ಧ ಉತ್ತರ ಪ್ರದೇಶ ಪೊಲೀಸರು ಸುಪ್ರೀಂಕೋರ್ಟ್​ ಮೆಟ್ಟಿಲೇರಿದ್ದಾರೆ. ಅಂದರೆ ಮನೀಶ್​ ಮಹೇಶ್ವರಿ ಬಂಧನಕ್ಕೆ ಕರ್ನಾಟಕ ಹೈಕೋರ್ಟ್​ ನೀಡಿರುವ ತಾತ್ಕಾಲಿಕ ತಡೆ ಆದೇಶವನ್ನು ಪ್ರಶ್ನಿಸಿ, ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದಾರೆ. ಉತ್ತರ ಪ್ರದೇಶ ಘಾಜಿಯಾಬಾದ್​​ನಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬರ ಮೇಲೆ ನಡೆದ ಹಲ್ಲೆ ಸಂಬಂಧ ಪ್ರಚೋದನಕಾರಿ ಟ್ವೀಟ್​ಗಳು ಟ್ವಿಟರ್​​ನಲ್ಲಿ ವೈರಲ್​ ಆದ ಬೆನ್ನಲ್ಲೇ, ಟ್ವಿಟರ್​ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕ ಮನೀಶ್​ ಮಹೇಶ್ವರಿ ಸೇರಿ ಐದಾರು ಜನರ ವಿರುದ್ಧ ಉತ್ತರಪ್ರದೇಶದಲ್ಲಿ ಎಫ್​ಐಆರ್​ ದಾಖಲಾಗಿತ್ತು. ಹಾಗೇ, ಉತ್ತರಪ್ರದೇಶ ಪೊಲೀಸರು ಸಮನ್ಸ್​ ಜಾರಿ ಮಾಡಿದ್ದರು. ಆದರೆ ಬೆಂಗಳೂರು ನಿವಾಸಿಯಾಗಿರುವ ಮನೀಶ್​ ಮಹೇಶ್ವರಿ, ನಿರೀಕ್ಷಣಾ ಜಾಮೀನು ಕೋರಿ ಕರ್ನಾಟಕ ಹೈಕೋರ್ಟ್​ಗೆ ಮನವಿ ಮಾಡಿದ್ದರು. ಅದರಂತೆ ಅವರಿಗೆ ಬಂಧನದಿಂದ ತಾತ್ಕಾಲಿಕ ರಕ್ಷಣೆಯೂ ಸಿಕ್ಕಿತ್ತು.

ಉತ್ತರ ಪ್ರದೇಶ ಪೊಲೀಸರ ಸಮನ್ಸ್​​ಗೆ ಉತ್ತರಿಸಲು ಮನೀಶ್ ಮಹೇಶ್ವರಿ ತಮ್ಮ ವಿರುದ್ಧ ಪ್ರಕರಣ ದಾಖಲಾದ ಲೋನಿ ಠಾಣೆಗೆ ಹೋಗಿರಲಿಲ್ಲ. ಬದಲಿಗೆ ವಿಡಿಯೋ ಕಾನ್ಫರೆನ್ಸ್​ ಮೂಲಕವೇ ವಿಚಾರಣೆಗೆ ಎದುರಿಸುವುದಾಗಿ ತಿಳಿಸಿದ್ದರು. ಅಷ್ಟರಲ್ಲಿ ಕರ್ನಾಟಕ ಹೈಕೋರ್ಟ್​​ನಿಂದ ಮಧ್ಯಂತರ ರಕ್ಷಣೆಯೂ ಸಿಕ್ಕಿತ್ತು. ಆದರೀಗ ಅವರಿಗೆ ಮಧ್ಯಂತರ ರಕ್ಷಣೆ ನೀಡಿದ ಹೈಕೋರ್ಟ್ ಆದೇಶಕ್ಕೆ ಪ್ರತಿಯಾಗಿ ಉತ್ತರ ಪ್ರದೇಶ ಪೊಲೀಸರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ.

ಮನೀಶ್ ಮಹೇಶ್ವರಿ ಅರ್ಜಿಯನ್ನು ಹೈಕೋರ್ಟ್​ ನ್ಯಾಯಮೂರ್ತಿ ಜಿ.ನರೇಂದರ್ ವಿಚಾರಣೆ ಮಾಡಿದ್ದರು. ಪ್ರಸಕ್ತ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅರ್ಜಿಯನ್ನು ಇನ್ನಷ್ಟು ಪರಿಶೀಲಿಸಿ, ವಿಚಾರಣೆ ನಡೆಸಬೇಕಿದೆ. ಜೂ.29ಕ್ಕೆ ಅಂತಿಮ ತೀರ್ಪು ನೀಡಲಾಗುವುದು. ಅಲ್ಲಿಯವರೆಗೆ ಮನೀಶ್ ಮಹೇಶ್ವರಿ ವಿರುದ್ಧ ಉತ್ತರ ಪ್ರದೇಶ ಪೊಲೀಸರು ಕಠಿಣ ಕ್ರಮ ಕೈಗೊಳ್ಳುವಂತಿಲ್ಲ. ಮನೀಶ್​ ಬೆಂಗಳೂರು ನಿವಾಸಿಯಾಗಿದ್ದು, ಸಮನ್ಸ್​ಗೆ ಉತ್ತರಿಸಲು ಉತ್ತರ ಪ್ರದೇಶಕ್ಕೆ ಪ್ರಯಾಣಿಸುವ ಅಗತ್ಯವಿಲ್ಲ ಎಂದು ನ್ಯಾ.ಜಿ.ನರೇಂದರ್​ ಹೇಳಿದ್ದರು. ಅಲ್ಲದೆ, ಪೊಲೀಸರು ವರ್ಚ್ಯುವಲ್​ ಆಗಿಯೇ ಮನೀಶ್​ ಮಹೇಶ್ವರಿ ವಿಚಾರಣೆ ನಡೆಸಬಹುದು ಎಂದೂ ಕೋರ್ಟ್​ ಹೇಳಿತ್ತು.

ಇದೀನ ಮನೀಶ್ ಮಹೇಶ್ವರಿ ವಿರುದ್ಧ ಇನ್ನೊಂದು ಪ್ರಕರಣದಡಿ ಉತ್ತರ ಪ್ರದೇಶದಲ್ಲೇ ಎಫ್​ಐಆರ್​ ದಾಖಲಾಗಿದೆ. ಭಾರತ ಭೂಪಟವನ್ನು ತಪ್ಪಾಗಿ ತೋರಿಸಿದ ಟ್ವಿಟರ್​ ಇಂಡಿಯಾದ್ದು ದೇಶದ್ರೋಹದ ಮನೋಭಾವ ಎಂದು, ಉತ್ತರ ಪ್ರದೇಶದ ಭಜರಂಗ ದಳದ ಮುಖಂಡ ಪ್ರವೀಣ್​ ಭಾಟಿ ದೂರು ನೀಡಿದ್ದಾರೆ.

ಇದನ್ನೂ ಓದಿ: ಜಮ್ಮು ಕಾಶ್ಮೀರದಲ್ಲಿ ‘ಬಲವಂತದ ಮತಾಂತರ ಮತ್ತು ವಿವಾಹ’ದ ವಿರುದ್ಧ ಸಿಖ್ ಸಮುದಾಯದ ಪ್ರತಿಭಟನೆ

(Uttar Pradesh Police Approach Supreme Court against Court Relief To Twitter India Chief Manish Maheshwari)

Published On - 12:21 pm, Tue, 29 June 21

ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ