Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಧ್ಯಪ್ರದೇಶದಲ್ಲಿ ಜೂ.21ರಂದು ಕೊವಿಡ್​ 19 ಲಸಿಕೆ ಪಡೆದ 13 ವರ್ಷದ, ಅಂಗವಿಕಲ ಬಾಲಕ..!; ಇದೊಂದು ಮಹಾ ಎಡವಟ್ಟು

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ರಜತ್​, ನನ್ನ ಮಗನಿಗೆ ಕೇವಲ 13ವರ್ಷ. ಆತನಿಗೆ ಕೊವಿಡ್​ 19 ಲಸಿಕೆಯನ್ನೂ ನೀಡಲಾಗಿಲ್ಲ. ಆದರೆ ಈ ಮೆಸೇಜ್​ ನೋಡಿ ನಾನೂ ಕಂಗಾಲಾದೆ. ಹಾಗೇ, ಸರ್ಟಿಫಿಕೇಟ್​ ಕೂಡ ಡೌನ್​​ಲೋಡ್ ಮಾಡಿದೆ. ಅದನ್ನೂ ನೋಡಿ ಮತ್ತೂ ದಿಗಿಲಾಯಿತು ಎಂದು ಹೇಳಿದ್ದಾರೆ.

ಮಧ್ಯಪ್ರದೇಶದಲ್ಲಿ ಜೂ.21ರಂದು ಕೊವಿಡ್​ 19 ಲಸಿಕೆ ಪಡೆದ 13 ವರ್ಷದ, ಅಂಗವಿಕಲ ಬಾಲಕ..!; ಇದೊಂದು ಮಹಾ ಎಡವಟ್ಟು
ಮೊಬೈಲ್​ಗೆ ಬಂದ ಮೆಸೇಜ್​
Follow us
Lakshmi Hegde
|

Updated on: Jun 29, 2021 | 11:35 AM

ಭೋಪಾಲ್​: ಭಾರತದಲ್ಲಿ ಸದ್ಯ 18 ವರ್ಷ ಮೇಲ್ಪಟ್ಟವರಿಗೆ ಮಾತ್ರ ಕೊರೊನಾ ಲಸಿಕೆ ನೀಡಲಾಗುತ್ತಿದೆ. ಮಕ್ಕಳಿಗೆ ಇನ್ನೂ ಲಸಿಕೆ ಅಭಿಯಾನ ಶುರುವಾಗಿಲ್ಲ. ಆದರೆ ಮಧ್ಯಪ್ರದೇಶದಲ್ಲಿ 13 ವರ್ಷದ ಬಾಲಕನೊಬ್ಬನಿಗೆ ಕೊರೊನಾ ಲಸಿಕೆ ನೀಡಲಾಗಿದೆ..ಹಾಗೂ ಆತನ ವಯಸ್ಸು 56 ಎಂದು ತೋರಿಸಲಾಗಿದೆ..!. ಆದರೆ ಇಲ್ಲೊಂದು ಎಡವಟ್ಟು ನಡೆದಿದೆ. ಅದೆಂಥಾ ಪ್ರಮಾದ ಎಂದು ತಿಳಿಯಲು ಈ ಸುದ್ದಿಯನ್ನು ಓದಿ..

ಜೂ.21ರಿಂದ ಕೊವಿಡ್​ 19 ಲಸಿಕೆಗೆ ಸಂಬಂಧಪಟ್ಟ ಹೊಸ ನೀತಿಯನ್ನು ಕೇಂದ್ರ ಸರ್ಕಾರ ಜಾರಿಗೊಳಿಸಿದೆ. ಹಾಗೇ ಅಂದು ಒಟ್ಟಾರೆ 88 ಲಕ್ಷ ಜನರಿಗೆ ಕೊರೊನಾ ಲಸಿಕೆ ನೀಡಿದ್ದು ದಾಖಲೆಯೇ ಸರಿ. ಆದರೆ ಮಧ್ಯಪ್ರದೇಶದಲ್ಲಿ ಅಂದು ಎರಡ್ಮೂರು ವಿಚಿತ್ರ ಸನ್ನಿವೇಶಗಳು ನಡೆದಿವೆ. ಜೂ.21ರಂದು ಸಂಜೆ 7.27ರ ಹೊತ್ತಿಗೆ ರಜತ್​ ಡಾಂಗ್ರೆ ಎಂಬುವರ ಮೊಬೈಲ್​ಗೆ ಒಂದು ಮೆಸೇಜ್​ ಬಂತು. ಅದರಲ್ಲಿ, ಡಿಯರ್​ ವೇದಾಂತ್​ ಡಾಂಗ್ರೆ, ನೀವು ಕೊವಿಶೀಲ್ಡ್​ ಲಸಿಕೆಯ ಮೊದಲ ಡೋಸ್​​ನ್ನು ಯಶಸ್ವಿಯಾಗಿ ಪಡೆದಿದ್ದೀರಿ. ನೀವು ನಿಮ್ಮ ಕೊವಿಡ್​ 19 ಲಸಿಕೆ ಪ್ರಮಾಣ ಪತ್ರವನ್ನು ಕೊವಿನ್​ ಆ್ಯಪ್​​​ನಲ್ಲಿಯೇ ಡೌನ್​ಲೋಡ್​ ಮಾಡಿಕೊಳ್ಳಬಹುದು ಎಂಬುದು ಆ ಸಂದೇಶ. ಇಲ್ಲಿ ವೇದಾಂತ್​ ಎಂದರೆ ರಜತ್​ ಡಾಂಗ್ರೆಯವರ ಪುತ್ರ. 13ವರ್ಷದ ಈ ಬಾಲಕ ಅಂಗವಿಕಲ. ಆದರೆ ಕೊವಿನ್​ ಆ್ಯಪ್​​ನಲ್ಲಿ ಬಂದ ಮೆಸೇಜ್​ನಲ್ಲಿ ವೇದಾಂತ್​ಗೆ 56 ವರ್ಷ ಎಂದು ಉಲ್ಲೇಖಿಸಲಾಗಿತ್ತು.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ರಜತ್​, ನನ್ನ ಮಗನಿಗೆ ಕೇವಲ 13ವರ್ಷ. ಆತನಿಗೆ ಕೊವಿಡ್​ 19 ಲಸಿಕೆಯನ್ನೂ ನೀಡಲಾಗಿಲ್ಲ. ಆದರೆ ಈ ಮೆಸೇಜ್​ ನೋಡಿ ನಾನೂ ಕಂಗಾಲಾದೆ. ಹಾಗೇ, ಸರ್ಟಿಫಿಕೇಟ್​ ಕೂಡ ಡೌನ್​​ಲೋಡ್ ಮಾಡಿದೆ. ಅದನ್ನೂ ನೋಡಿ ಮತ್ತೂ ದಿಗಿಲಾಯಿತು. ನನ್ನ ಮಗ ಅಂಗವಿಕಲ ಆಗಿದ್ದರಿಂದ ಅವನಿಗೆ ಪಿಂಚಣಿ ಬರುತ್ತದೆ. ಅದನ್ನು ಪಡೆಯುವುದಕ್ಕೋಸ್ಕರ ಕೊಡಬೇಕಾದ ದಾಖಲೆಗಳನ್ನು ಕೆಲವೇ ದಿನಗಳ ಹಿಂದೆ ಸ್ಥಳೀಯ ಆಡಳಿತಕ್ಕೆ ಕೊಟ್ಟಿದ್ದೆ. ಅದನ್ನೇ ಬಳಸಿ ಸರ್ಟಿಫಿಕೇಟ್​ ಮಾಡಿದ್ದಾರೆ ಎಂದು ಗೊತ್ತಾಯಿತು. ಈ ಬಗ್ಗೆ ನಾನು ದೂರು ನೀಡಲು ಪ್ರಯತ್ನಿಸಿದೆ. ಆದರೆ ಸಾಧ್ಯವೇ ಆಗಲಿಲ್ಲ ಎಂದು ರಜತ್​ ಡಾಂಗ್ರೆ ಎನ್​ಡಿಟಿವಿಗೆ ತಿಳಿಸಿದ್ದಾರೆ.

ಜೂ.21ರಂದು ಇಡೀ ದೇಶದ್ದು ಒಂದು ದಾಖಲೆಯಾದರೆ, ಅಂದು ಮಧ್ಯಪ್ರದೇಶ 17.42 ಲಕ್ಷ ಜನರಿಗೆ ಕೊವಿಡ್​ 19 ಲಸಿಕೆ ಕೊಡುವ ಮೂಲಕ ದೇಶದಲ್ಲೇ ಅತ್ಯಂತ ಹೆಚ್ಚು ಜನರಿಗೆ ಲಸಿಕೆ ಕೊಟ್ಟ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು. ಆದರ ಈಗ ಕೆಲವು ಆರೋಪಗಳು ಕೇಳಿಬರುತ್ತಿವೆ. ಲಸಿಕೆಯನ್ನೇ ಪಡೆಯದವರಿಗೂ ಸಹ, ನೀವು ಲಸಿಕೆ ಪಡೆದಿದ್ದೀರಿ ಎಂದು ಸಂದೇಶ ಕಳಿಸಲಾಗಿದೆ ಎಂದು ಹೇಳಲಾಗುತ್ತಿದೆ. ವೇದಾಂತ್ ಮಾತ್ರವಲ್ಲ, ಸತ್ನಾದ ಚೈನೇಂದ್ರ ಪಾಂಡೆ ಎಂಬುವರು ಕೂಡ ತಮಗೂ ಇಂಥದ್ದೇ ಅನುಭವ ಆಯಿತು ಎಂದು ಹೇಳಿಕೊಂಡಿದ್ದಾರೆ. ಅವರ ಮೊಬೈಲ್​​ಗೆ ಕೇವಲ ಐದೇ ನಿಮಿಷದಲ್ಲಿ ಮೂವರ ಹೆಸರು ಬಂತು. ಕಟಿಕ್ರಮ್​, ಕೈಲಿಂದ್ರಿ ಮತ್ತು ಚಂದನ್​ ಅವರಿಗೆ ಲಸಿಕೆ ಕೊಡಲಾಗಿದೆ ಎಂದು ಸಂದೇಶ ಬಂತು. ಆದರೆ ಇವರ್ಯಾರೂ ನನಗೆ ಪರಿಚಯದವರೇ ಅಲ್ಲ ಎಂದು ಅವರು ಹೇಳಿದ್ದಾರೆ.

ಹಾಗೇ ಇನ್ನೊಬ್ಬರು ನುಝಾತ್​ ಸಲೀಮ್​ ಎಂಬ 46 ವರ್ಷದ ಮಹಿಳೆಯೂ ಇದೇ ಆರೋಪ ಮಾಡಿದ್ದಾರೆ. ಜೂ.21ರಂದು ನನಗೂ ಮೆಸೇಜ್​ ಬಂತು. ನೀವು ಲಸಿಕೆ ಪಡೆದಿದ್ದೀರಿ ಎಂದು ಹೇಳಿದರು. ಆದರೆ ನಾನು ಇದುವರೆಗೂ ಲಸಿಕೆ ಪಡೆದಿಲ್ಲ ಎಂದಿದ್ದಾರೆ ಎಂದು ಎನ್​ಡಿಟಿವಿ ವರದಿ ಮಾಡಿದೆ. ಈ ಬಗ್ಗೆ ಸ್ಪಷ್ಟನೆ ಕೇಳಲು, ಸರ್ಕಾರಿ ಅಧಿಕಾರಿಗಳನ್ನು ಸಂಪರ್ಕಿಸಿದಾಗ, ಹಾಗೆಲ್ಲ ಯಾವುದೇ ಸಮಸ್ಯೆಯಾಗಿಲ್ಲ. ನಿಮಗೆ ಎಲ್ಲಿಂದ ಮಾಹಿತಿ ಸಿಕ್ಕಿತೋ ಗೊತ್ತಿಲ್ಲ ಎಂದು ಹೇಳಿದ್ದಾರೆಂದು ಎನ್​ಡಿವಿ ವರದಿಯಲ್ಲಿ ಉಲ್ಲೇಖಿಸಿದೆ.

ಇದನ್ನೂ ಓದಿ:  WhatsApp Pay: ಫೇಸ್​ಬುಕ್ ಮಾಲೀಕತ್ವದ ವಾಟ್ಸಾಪ್​ನಿಂದ ಮನೇಶ್ ಮಹಾತ್ಮೆ ಭಾರತದಲ್ಲಿ ಹೆಡ್ ಆಫ್ ಪೇಮೆಂಟ್ಸ್ ಆಗಿ ನೇಮಕ

13 year old Boy with disabilities had received his COVID 19 shot In Madhya Pradesh message confused his Father