WhatsApp Pay: ಫೇಸ್​ಬುಕ್ ಮಾಲೀಕತ್ವದ ವಾಟ್ಸಾಪ್​ನಿಂದ ಮನೇಶ್ ಮಹಾತ್ಮೆ ಭಾರತದಲ್ಲಿ ಹೆಡ್ ಆಫ್ ಪೇಮೆಂಟ್ಸ್ ಆಗಿ ನೇಮಕ

ಫೇಸ್​ಬುಕ್ ಮಾಲೀಕತ್ವದ ವಾಟ್ಸಾಪ್​ನಿಂದ ಅದರ ವಾಟ್ಸಾಪ್ ಪೇ ಇಂಡಿಯಾ ವಿಭಾಗದ ಮುಖ್ಯಸ್ಥರಾಗಿ ಮನೇಶ್ ಮಹಾತ್ಮೆ ಅವರನ್ನು ನೇಮಕ ಮಾಡಲಾಗಿದೆ. ಈ ಹಿಂದೆ ಅವರು ಅಮೆಜಾನ್ ಪೇನಲ್ಲಿ ಇದ್ದರು.

WhatsApp Pay: ಫೇಸ್​ಬುಕ್ ಮಾಲೀಕತ್ವದ ವಾಟ್ಸಾಪ್​ನಿಂದ ಮನೇಶ್ ಮಹಾತ್ಮೆ ಭಾರತದಲ್ಲಿ ಹೆಡ್ ಆಫ್ ಪೇಮೆಂಟ್ಸ್ ಆಗಿ ನೇಮಕ
ಮಹೇಶ್ ಮಹಾತ್ಮೆ (ಸಂಗ್ರಹ ಚಿತ್ರ)
Follow us
| Updated By: Srinivas Mata

Updated on:Jun 29, 2021 | 11:24 AM

ಫೇಸ್​ಬುಕ್ ಮಾಲೀಕತ್ವದ ವಾಟ್ಸಾಪ್​ನಿಂದ ಅಮೆಜಾನ್​ ಪೇ ಅಧಿಕಾರಿ ಮನೇಶ್ ಮಹಾತ್ಮೆ ಅವರನ್ನು ಭಾರತದಲ್ಲಿ ಹೆಡ್ ಆಫ್ ಪೇಮೆಂಟ್ಸ್ (ಪಾವತಿ ವಿಭಾಗದ ಮುಖ್ಯಸ್ಥ) ಆಗಿ ನೇಮಿಸಲಾಗಿದೆ. ಬಳಕೆದಾರರಿಗೆ ಪಾವತಿ ಅನುಭವದ ವಿಸ್ತರಣೆಗಾಗಿ ಮಹಾತ್ಮೆ ಗಮನ ಹರಿಸಲಿದ್ದಾರೆ. ಜತೆಗೆ ದೇಶದಲ್ಲಿ ಒದಗಿಸುತ್ತಿರುವ ಸೇವೆಯ ವ್ಯಾಪ್ತಿ ಜಾಸ್ತಿ ಮಾಡುವತ್ತಲೂ ಶ್ರಮಿಸುತ್ತಾರೆ ಎಂದು ಜೂನ್​ 28ರಂದು ಕಂಪೆನಿಯಿಂದ ನೀಡಿರುವ ಹೇಳಿಕೆಯಲ್ಲಿ ತಿಳಿಸಲಾಗಿದೆ. ಇದಕ್ಕೂ ಮೊದಲು ಮಹಾತ್ಮೆ ಅವರು ಏಳು ವರ್ಷಗಳ ಕಾಲ ಅಮೆಜಾನ್​ ಪೇನಲ್ಲಿ ಕಾರ್ಯ ನಿರ್ವಹಿಸಿದ್ದರು. ಅಮೆಜಾನ್ ಪೇ ಇಂಡಿಯಾ ನಿರ್ದೇಶಕ ಮತ್ತು ಮಂಡಳಿ ಸದಸ್ಯರಾಗಿದ್ದರು. ಹಾಗೂ ಪ್ರಾಡಕ್ಟ್, ಎಂಜಿನಿಯರಿಂಗ್ ಮತ್ತು ಬೆಳವಣಿಗೆ ತಂಡವನ್ನು ಮುನ್ನಡೆಸಿದ್ದರು. ಅಮೆಜಾನ್​ ಇಂಡಿಯಾದ ಮಾರ್ಕೆಟ್​ಪ್ಲೇಸ್ ಉದ್ಯಮದ ಪ್ಲಾಟ್​ಫಾರ್ಮ್ ಮತ್ತು ಪಾವತಿ ಅನುಭವ ರೂಪಿಸುವ ಹಾಗೂ ವಿಸ್ತರಿಸುವಲ್ಲಿ ಪ್ರಮುಖವಾಗಿ ಕಾರ್ಯ ನಿರ್ವಹಿಸಿದವರು.

ಸಿಟಿಬ್ಯಾಂಕ್, ಏರ್​ಟೆಲ್ ಮನಿ ಹಾಗೂ ಅಮೆಜಾನ್​ ಒಳಗೊಂಡಂತೆ ಡಿಜಿಟಲ್​ ಫೈನಾನ್ಷಿಯಲ್ ಸರ್ವೀಸ್ ಮತ್ತು ಪೇಮೆಂಟ್ಸ್​ನಲ್ಲಿ 17 ವರ್ಷದ ಕಾರ್ಯಾನುಭವ ಹೊಂದಿದ್ದಾರೆ ಮಹಾತ್ಮೆ. BITS, ಪಿಳಾನಿ (ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್) ಪದವೀಧರರು ಹಾಗೂ ಮುಂಬೈನ ಎಸ್​ಪಿ ಜೈನ್​ನಲ್ಲಿ ಮ್ಯಾನೇಜ್​ಮೆಂಟ್ ಕೋರ್ಸ್ ಮುಗಿಸಿದ್ದಾರೆ. “ಕಳೆದ ಒಂದು ದಶಕದಲ್ಲಿ ಭಾರತದಲ್ಲಿ ಡಿಜಿಟಲ್ ಪಾವತಿಗಳ ಬೆಳವಣಿಗೆಯಲ್ಲಿ ಮನೇಶ್ ಅವರು ಪ್ರಮುಖ ಅನ್ವೇಷಕರಲ್ಲಿ ಒಬ್ಬರು. ಅವರ ಅನುಭವದ ಮೂಲಕ ವಾಟ್ಸಾಪ್​ನ ಪಾವತಿಯಲ್ಲಿ ಗರಿಷ್ಠ ಪರಿಣಾಮ ಬೀರಲು ಹಾಗೂ ವ್ಯಾಪ್ತಿ ವಿಸ್ತರಣೆಗೆ ನೆರವಾಗುತ್ತದೆ. ಎಲ್ಲ ಸೆಗ್ಮೆಂಟ್​ಗಳ ಜನರನ್ನು ಡಿಜಿಟಲ್​ ಆಗಿ ಸಶಕ್ತಗೊಳಿಸಲು ವಾಟ್ಸಾಪ್​ಗೆ ಅಪಾರ ಸಾಮರ್ಥ್ಯ ಇದೆ ಮತ್ತು ಸರ್ಕಾರವು ಯುಪಿಐ ಹಾಗೂ ಡಿಜಿಟಲ್​ ಪಾವತಿ ಮೂಲಕ ಎಲ್ಲರನ್ನೂ ಹಣಕಾಸು ಒಳಗೊಳ್ಳುವಿಕೆಗೆ ಶ್ರಮಿಸುತ್ತಿರುವುದಕ್ಕೆ ವೇಗ ದೊರಕಿಸಲು ಸಹಾಯ ಮಾಡುತ್ತದೆ,” ಎಂದು ವಾಟ್ಸಾಪ್ ಇಂಡಿಯಾದ ಮುಖ್ಯಸ್ಥ ಅಭಿಜಿತ್ ಬೋಸ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ವಾಟ್ಸಾಪ್​ನಲ್ಲಿ ಪಾವತಿಯು ವಿಶಿಷ್ಟ ಸಹಭಾಗಿ ಆಗಲಿದೆ. ದೇಶದ ಬೆಳವಣಿಗೆ ಕಾರ್ಯಸೂಚಿಯನ್ನು ಗಮನದಲ್ಲಿ ಇರಿಸಿಕೊಂಡು ಭಾರತದ ಉದ್ದಗಲಕ್ಕೂ ಜನರಿಗೆ ಡಿಜಿಟಲ್ ಪೇಮೆಂಟ್ಸ್ ದೊರೆಯುವಂತೆ ಮಾಡಲು ಮಹತ್ವದ ಸಹಭಾಗಿ ಆಗಿದೆ. ಈ ಬೆಳವಣಿಗೆ ಗಾಥೆಯಲ್ಲಿ ನಾನೂ ಕೂಡ ಭಾಗಿ ಆಗಿರುವುದು ವಿಪರೀತ ಸಂತೋಷ ತಂದಿದೆ ಎಂದು ಮಹಾತ್ಮೆ ಹೇಳಿದ್ದಾರೆ.

ಇದನ್ನೂ ಓದಿ: How to book gas cylinder: ವಾಟ್ಸಾಪ್ ಮೂಲಕ ಇಂಡೇನ್, ಎಚ್​ಪಿ, ಭಾರತ್ ಗ್ಯಾಸ್ ಸಿಲಿಂಡರ್ ಬುಕ್ಕಿಂಗ್ ಹೇಗೆ?

(Manesh Mahatme appointed as Chief to Facebook owned WhatsApp pay India. He was with Amazon pay as executive)

Published On - 11:24 am, Tue, 29 June 21

PM Modi in US: ಭಾರತದ 5G ಮಾರುಕಟ್ಟೆ ಅಮೆರಿಕಕ್ಕಿಂತ ದೊಡ್ಡದು ಎಂದ ಮೋದಿ
PM Modi in US: ಭಾರತದ 5G ಮಾರುಕಟ್ಟೆ ಅಮೆರಿಕಕ್ಕಿಂತ ದೊಡ್ಡದು ಎಂದ ಮೋದಿ
‘ಅನ್ನ’ ಸಿನಿಮಾ ವೀಕ್ಷಿಸಿ ಭಾವುಕರಾದ ಸಿದ್ದರಾಮಯ್ಯ; ಕಾಡಿತು ಬಾಲ್ಯದ ನೆನಪು
‘ಅನ್ನ’ ಸಿನಿಮಾ ವೀಕ್ಷಿಸಿ ಭಾವುಕರಾದ ಸಿದ್ದರಾಮಯ್ಯ; ಕಾಡಿತು ಬಾಲ್ಯದ ನೆನಪು
ಗೇಟ್​ ಬಿದ್ದು ಮಗು ಸಾವು ಕೇಸ್:​ ಈ ಬಗ್ಗೆ ತನಿಖೆ ಮಾಡ್ತೇವೆ ಎಂದ ದಿನೇಶ್
ಗೇಟ್​ ಬಿದ್ದು ಮಗು ಸಾವು ಕೇಸ್:​ ಈ ಬಗ್ಗೆ ತನಿಖೆ ಮಾಡ್ತೇವೆ ಎಂದ ದಿನೇಶ್
ಈದ್ ಮಿಲಾದ್ ಮೆರವಣಿಗೆಯಲ್ಲಿ ಎದುರಾದ ಕೂಡಲಸಂಗಮ ಸ್ವಾಮೀಜಿ; ಪರಸ್ಪರ ಘೋಷಣೆ
ಈದ್ ಮಿಲಾದ್ ಮೆರವಣಿಗೆಯಲ್ಲಿ ಎದುರಾದ ಕೂಡಲಸಂಗಮ ಸ್ವಾಮೀಜಿ; ಪರಸ್ಪರ ಘೋಷಣೆ
ನಾವು ಇಲ್ಲದಿದ್ರೆ ಬೆಂಗಳೂರು ಖಾಲಿ ಎಂದ ಮಹಿಳೆಗೆ ಕರವೇ ನಾರಾಯಣಗೌಡ ಎಚ್ಚರಿಕೆ
ನಾವು ಇಲ್ಲದಿದ್ರೆ ಬೆಂಗಳೂರು ಖಾಲಿ ಎಂದ ಮಹಿಳೆಗೆ ಕರವೇ ನಾರಾಯಣಗೌಡ ಎಚ್ಚರಿಕೆ
ಸಾವಿನ ನಂತರದ ಕಥೆ; ಸ್ಮಶಾನದಲ್ಲಿ ಭೈರಾದೇವಿ ಶೂಟಿಂಗ್; ರಮೇಶ್ ಹೇಳಿದ್ದಿಷ್ಟು
ಸಾವಿನ ನಂತರದ ಕಥೆ; ಸ್ಮಶಾನದಲ್ಲಿ ಭೈರಾದೇವಿ ಶೂಟಿಂಗ್; ರಮೇಶ್ ಹೇಳಿದ್ದಿಷ್ಟು
ಮಹಿಷಾ ದಸರಾ ಆಚರಣೆ ಬಗ್ಗೆ ಸಂಸದ ಯದುವೀರ್ ಏನಂದ್ರು ಗೊತ್ತಾ?
ಮಹಿಷಾ ದಸರಾ ಆಚರಣೆ ಬಗ್ಗೆ ಸಂಸದ ಯದುವೀರ್ ಏನಂದ್ರು ಗೊತ್ತಾ?
ಕಿಯೋನಿಕ್ಸ್ 400 ಕೋಟಿ ರೂ. ಅಕ್ರಮ ಪ್ರಕರಣ; ಅಶ್ವತ್ಥನಾರಾಯಣ ಹೇಳಿದ್ದಿಷ್ಟು
ಕಿಯೋನಿಕ್ಸ್ 400 ಕೋಟಿ ರೂ. ಅಕ್ರಮ ಪ್ರಕರಣ; ಅಶ್ವತ್ಥನಾರಾಯಣ ಹೇಳಿದ್ದಿಷ್ಟು
ಹಿಂದೂ ಮೆರವಣಿಗೆಯಲ್ಲಿ ರಕ್ಷಣೆಗೆ ಶಸ್ತ್ರ ಸಮೇತ ನಾವು ಸಜ್ಜು: ಶ್ರೀರಾಮ ಸೇನೆ
ಹಿಂದೂ ಮೆರವಣಿಗೆಯಲ್ಲಿ ರಕ್ಷಣೆಗೆ ಶಸ್ತ್ರ ಸಮೇತ ನಾವು ಸಜ್ಜು: ಶ್ರೀರಾಮ ಸೇನೆ
ಕಾಳಿ ವೇಷ ಧರಿಸುತ್ತಿದ್ದಂತೆ ಏನಾಗುತ್ತಿತ್ತು, ವಿವರಿಸಿದ ನಟಿ ರಾಧಿಕಾ
ಕಾಳಿ ವೇಷ ಧರಿಸುತ್ತಿದ್ದಂತೆ ಏನಾಗುತ್ತಿತ್ತು, ವಿವರಿಸಿದ ನಟಿ ರಾಧಿಕಾ