ಕಾಸರಗೋಡಿನಲ್ಲಿ ಮಲಯಾಳೀಕರಣ ನಡೆದಿಲ್ಲ: ಕನ್ನಡದಲ್ಲಿ ಪ್ರಮಾಣವಚನ ಸ್ವೀಕರಿಸಿದ್ದ ಅಶ್ರಫ್​ಗೆ ಅಭಿನಂದನೆ ತಿಳಿಸಿದ ಹೆಚ್​ಡಿಕೆ

HD Kumaraswamy: ಇತ್ತೀಚೆಗೆ ಗಡಿ ಭಾಗದ ಕಾಸರಗೋಡಿನಲ್ಲಿ ಐತಿಹಾಸಿಕ/ ಧಾರ್ಮಿಕ ಸ್ಥಳಗಳ ಹೆಸರು ಬದಲಾವಣೆ ವಿವಾದ ಎದ್ದಿದ್ದು, ಸದ್ಯಕ್ಕೆ ಅದಕ್ಕೆ ತೆರೆಬಿದ್ದಿದೆ. ವಾಸ್ತವವಾಗಿ, ಸಾಮಾಜಿಕ ಜಾಲತಾಣದಲ್ಲಿ ಹರಿದಾಡುವ ಕಾಸರಗೋಡಿನ ಸ್ಥಳನಾಮ ಬದಲಾವಣೆ ವಿವಾದದ ವಾಸ್ತವತೆಯನ್ನು ಮಂಜೇಶ್ವರದ ಶಾಸಕ ಅಶ್ರಫ್ ಟ್ವೀಟ್​ ಮಾಡಿದ್ದು, ಅಂತಹ ಯಾವುದೇ ಪ್ರಸ್ತಾವನೆ ಕೇರಳ ಸರ್ಕಾರದ ಮುಂದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಕಾಸರಗೋಡಿನಲ್ಲಿ ಮಲಯಾಳೀಕರಣ ನಡೆದಿಲ್ಲ: ಕನ್ನಡದಲ್ಲಿ ಪ್ರಮಾಣವಚನ ಸ್ವೀಕರಿಸಿದ್ದ ಅಶ್ರಫ್​ಗೆ ಅಭಿನಂದನೆ ತಿಳಿಸಿದ ಹೆಚ್​ಡಿಕೆ
ಕಾಸರಗೋಡಿನಲ್ಲಿ ಮಲಯಾಳೀಕರಣ ನಡೆದಿಲ್ಲ: ಕನ್ನಡದಲ್ಲಿ ಪ್ರಮಾಣವಚನ ಸ್ವೀಕರಿಸಿದ್ದ ಅಶ್ರಫ್​ಗೆ ಅಭಿನಂದನೆ ತಿಳಿಸಿದ ಹೆಚ್​ಡಿ ಕುಮಾರಸ್ವಾಮಿ
Follow us
| Updated By: ಸಾಧು ಶ್ರೀನಾಥ್​

Updated on:Jun 29, 2021 | 12:10 PM

ಬೆಂಗಳೂರು: ಇತ್ತೀಚೆಗೆ ಗಡಿ ಭಾಗದ ಕಾಸರಗೋಡಿನಲ್ಲಿ ಐತಿಹಾಸಿಕ/ ಧಾರ್ಮಿಕ ಸ್ಥಳಗಳ ಹೆಸರು ಬದಲಾವಣೆ ವಿವಾದ ಎದ್ದಿದ್ದು, ಸದ್ಯಕ್ಕೆ ಅದಕ್ಕೆ ತೆರೆಬಿದ್ದಿದೆ. ವಾಸ್ತವವಾಗಿ, ಸಾಮಾಜಿಕ ಜಾಲತಾಣದಲ್ಲಿ ಹರಿದಾಡುವ ಕಾಸರಗೋಡಿನ ಸ್ಥಳನಾಮ ಬದಲಾವಣೆ ವಿವಾದದ ವಾಸ್ತವತೆಯನ್ನು ಮಂಜೇಶ್ವರದ ಶಾಸಕ ಅಶ್ರಫ್ ಟ್ವೀಟ್​ ಮಾಡಿದ್ದು, ಅಂತಹ ಯಾವುದೇ ಪ್ರಸ್ತಾವನೆ ಕೇರಳ ಸರ್ಕಾರದ ಮುಂದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಈ ಸಂಬಂಧ ಮುಖ್ಯಮಂತ್ರಿ ಬಿ ಎಸ್​ ಯಡಿಯೂರಪ್ಪ ಸಹ ಕೇರಳದ ಮುಖ್ಯಮಂತ್ರೊಗೆಪತ್ರ ಬರೆದು ಅಂತಹ ಯಾವುದೇ ನಿರ್ಧಾರ ತೆಗೆದುಕೊಳ್ಳಬಾರದು ಎಂದು ಆಗ್ರಹಿಸಿದ್ದರು. ಅದಕ್ಕೆ ಉತ್ತರವೆಂಬಂತೆ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್​ ಅವರೂ ಸಹ ಅಂಥ ಪ್ರಸ್ತಾವನೆಯೇ ತಮ್ಮ ಮುಂದೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಈ ಮಧ್ಯೆ ರಾಜ್ಯದ ಮಾಜಿ ಮುಖ್ಯಮಂತ್ರಿ ಹೆಚ್​ಡಿ ಕುಮಾರಸ್ವಾಮಿ ಅವರೂ ಸಹ ಕೇರಳಕ್ಕೆ ಪತ್ರ ಬರೆದಿದ್ದರು. ಈ ಮಧ್ಯೆ, ಈ ವಿವಾದಕ್ಕೆ ಬ್ರೇಕ್ ಹಾಕಿರುವ, ಕನ್ನಡದಲ್ಲಿ ಪ್ರಮಾಣವಚನ ಸ್ವೀಕರಿಸಿದ್ದ ಮಂಜೇಶ್ವರದ ಶಾಸಕ ಅಶ್ರಫ್​ ಅವರನ್ನು ಅಭಿನಂದಿಸಿದ್ದಾರೆ.

ವಿವಾದದ ಕುರಿತು ಮಂಜೇಶ್ವರದ ಶಾಸಕ ಅಶ್ರಫ್​ (A K M Ashraf) ಅವರ ಟ್ವೀಟ್​ ಹೀಗಿದೆ:

ಅಶ್ರಫ್​ಗೆ ಅಭಿನಂದನೆ ತಿಳಿಸಿ ಹೆಚ್​ಡಿ ಕುಮಾರಸ್ವಾಮಿ ಮಾಡಿರುವ ಟ್ವೀಟ್​ ಸಾರಾಂಶ ಇಲ್ಲಿದೆ:

ಕಾಸರಗೋಡಿನ ಗ್ರಾಮಗಳ ಕನ್ನಡ ಹೆಸರಿನ ಮಲಯಾಳೀಕರಣ ವಿಚಾರ ಮುನ್ನೆಲೆಗೆ ಬರುವುದರ ಹಿಂದೆ ಯಾವ ತಂತ್ರವಿತ್ತೋ ತಿಳಿಯದು. ಆದರೆ, ‘ಕನ್ನಡ, ಕನ್ನಡಿಗ, ಕರ್ನಾಟಕ‘ಕ್ಕೆ ಏನೋ ಅಪಚಾರವಾಗುತ್ತಿದೆ ಎಂದು ಭಾವಿಸಿ ಕೇರಳ ಸಿಎಂ @vijayanpinarayiರಿಗೆ ಪತ್ರ ಬರೆಯಲಾಯಿತು. ಆದರೆ, ಅಂಥ ಪ್ರಸ್ತಾವ ಇಲ್ಲ ಎಂಬ ಕೇರಳದ ಸ್ಪಷ್ಟನೆಯು ಸಮಾಧಾನ ಮೂಡಿಸಿದೆ.

ಕಾಸರಗೋಡಿನಲ್ಲಿ ಕನ್ನಡಕ್ಕೆ ದಕ್ಕೆಯಾದರೆ ಹೋರಾಟ ನಡೆಸುವುದಾಗಿಯೂ, ಅದರ ನೇತೃತ್ವ ತಾವೇ ವಹಿಸುವುದಾಗಿಯೂ ಮಂಜೇಶ್ವರದ ಶಾಸಕ @ashru_akmಹೇಳಿದ್ದಾರೆ. ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸಿ ಅಭಿಮಾನ ಮೆರೆದಿದ್ದ ಅಶ್ರಫ್‌ ಹೇಳಿಕೆಯು ಮತ್ತಷ್ಟು ಸಮಾಧಾನ ತಂದಿದೆ. ಕನ್ನಡಪರವಾದ ನಿಲುವು ಪ್ರಕಟಿಸಿರುವ ಅಶ್ರಫ್‌ ಅವರನ್ನು ಅಭಿನಂದಿಸುತ್ತೇನೆ.

ಭಾಷಾ ಸಾಮರಸ್ಯದ ವಿಚಾರದಲ್ಲಿ ಕರ್ನಾಟಕ ಕೇರಳ ರಾಜ್ಯಗಳು ಪರಸ್ಪರ ಪೂರಕವಾಗಿ ನಡೆದುಕೊಂಡು ಬಂದಿವೆ. ಆದರೂ ಹೆಸರು ಬದಲಾವಣೆಯ ಚರ್ಚೆ ಮುನ್ನೆಲೆಗೆ ಬಂದಿದ್ದು ಹೇಗೆ, ಇದಕ್ಕೆ ಕಾರಣಗಳೇನು ಎಂಬುದನ್ನು ಪತ್ತೆ ಹಚ್ಚಬೇಕು. ಈ ಪ್ರಯತ್ನವು ಸಾಮರಸ್ಯವನ್ನು ಕೆಡಿಸುವ ಉದ್ದೇಶವನ್ನೇ ಹೊಂದಿದ್ದರೆ ಎರಡೂ ರಾಜ್ಯಗಳು ಜಾಗೃತರಾಗಬೇಕಾದ ಅಗತ್ಯವಿದೆ.

ಕಾಸರಗೋಡು ಗ್ರಾಮಗಳ ಹೆಸರುಗಳ ಮಲಯಾಳೀಕರಣವನ್ನು ವಿರೋಧಿಸುವ ಮೂಲಕ ಕನ್ನಡಿಗರು ಕನ್ನಡದ ವಿಚಾರದಲ್ಲಿ ಮತ್ತೊಮ್ಮೆ ಒಗ್ಗಟ್ಟು ಪ್ರದರ್ಶಿಸಿದ್ದಾರೆ. ಈ ಬಗ್ಗೆ ಅತಿ ಶೀಘ್ರದಲ್ಲೇ ಕೇರಳ ಸರ್ಕಾರದಿಂದ ಸ್ಪಷ್ಟೆನೆ ಬರುವಂತೆ ಮಾಡಿದ್ದಾರೆ. ಈ ಸಾತ್ವಿಕ ಹೋರಾಟದಲ್ಲಿ ಭಾಗಿಯಾದ ಕನ್ನಡ ಮನಸ್ಸುಗಳನ್ನೂ ನಾನು ಈ ಸಂದರ್ಭದಲ್ಲಿ ಅಭಿನಂದಿಸುತ್ತೇನೆ.

(HD Kumaraswamy thanks manjeshwar mla A K M Ashraf for intervening on imposing malayalam names in kasargod)

Published On - 12:02 pm, Tue, 29 June 21