ವಾದವಿವಾದ ಮುಗಿದಿದೆ, ತೀರ್ಪು ನಿರೀಕ್ಷೆಯಲ್ಲಿದ್ದೇವೆ; ಸಿ.ಪಿ.ಯೋಗೇಶ್ವರ್
ಜಾರಕಿಹೊಳಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಯೋಗೇಶ್ವರ್, ನಮ್ಮ ಪಕ್ಷದಲ್ಲಿ ಯಾವ ರೀತಿ ಗೊಂದಲಗಳಿಲ್ಲ. ಏನಾದರೂ ಸಮಸ್ಯೆಗಳಿದ್ದರೆ ನಾವೆಲ್ಲ ಸರಿಪಡಿಸಿಕೊಂಡು ಹೋಗುತ್ತೇವೆ ಎಂದಿದ್ದಾರೆ.
ಕಲಬುರಗಿ: ನಮ್ಮಲ್ಲಿ ವಾದವಿವಾದ ಮುಗಿದಿದೆ. ತೀರ್ಪು ನಿರೀಕ್ಷೆಯಲ್ಲಿದ್ದೇವೆ ಎಂದು ಕಲಬುರಗಿ ವಿಮಾನ ನಿಲ್ದಾಣದಲ್ಲಿ ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೇಶ್ವರ್ ಹೇಳಿದರು. ಕೊರೊನಾ ಸೋಂಕಿಗೆ ಮಾರ್ಗಸೂಚಿ ಬಿಡುಗಡೆ ಮಾಡಿದಂತೆ, ನಮ್ಮ ವರಿಷ್ಠರು ಮಾರ್ಗಸೂಚಿ ಕೊಡುವ ಆಶಾಭಾವನೆ ಇದೆ. ನನ್ನ ಭಾವನೆಗಳನ್ನು ಹೈಕಮಾಂಡ್ ಮುಂದೆ ಹೇಳಿದ್ದೇನೆ. ತೀರ್ಪು ಏನು ಬರುತ್ತದೆ ಎಂದು ಕಾಯೋಣವೆಂದು ಯೋಗೇಶ್ವರ್ ಅಭಿಪ್ರಾಯಪಟ್ಟಿದ್ದಾರೆ.
ಜಾರಕಿಹೊಳಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಯೋಗೇಶ್ವರ್, ನಮ್ಮ ಪಕ್ಷದಲ್ಲಿ ಯಾವ ರೀತಿ ಗೊಂದಲಗಳಿಲ್ಲ. ಏನಾದರೂ ಸಮಸ್ಯೆಗಳಿದ್ದರೆ ನಾವೆಲ್ಲ ಸರಿಪಡಿಸಿಕೊಂಡು ಹೋಗುತ್ತೇವೆ ಎಂದಿದ್ದಾರೆ.
ನಂತರ ಮಾತನಾಡಿದ ಅವರು ಸಿದ್ದರಾಮಯ್ಯ, ಡಿಕೆಶಿಗೆ ಸಿಎಂ ಆಗುವ ಅವಕಾಶ ಕೊಡಲ್ಲ. ಡಿ.ಕೆ.ಶಿವಕುಮಾರ್ ಬಹಳಷ್ಟು ಕನಸು ಕಾಣುತ್ತಿದ್ದಾರೆ. ಡಿ.ಕೆ.ಶಿವಕುಮಾರ್ಗೆ ಶಾಸಕರ ಬೆಂಬಲ ಇದ್ದಂಗೆ ಕಾಣಲ್ಲ. ಕಾಂಗ್ರೆಸ್ನಲ್ಲಿ ದಲಿತ ಸಿಎಂ ಆಗಬೇಕೆಂದು ಪ್ರಯತ್ನ ನಡೆಯುತ್ತಿದೆ. ಕಳೆದ ಸರ್ಕಾರದಲ್ಲೂ ಇಂತಹದೊಂದು ಪ್ರಯತ್ನ ನಡೆದಿತ್ತು. 70 ವರ್ಷಗಳಿಂದ ದಲಿತ ಸಮುದಾಯ ಕಾಂಗ್ರೆಸ್ ಪರ ಇತ್ತು. ಅವರಿಗೆ ಅನ್ಯಾಯ ಆಗಿದೆ ಎಂಬ ಧ್ವನಿ ಪ್ರಾರಂಭವಾಗಿದೆ. ಇನ್ನೆರಡು ವರ್ಷದ ಬಳಿಕ ಏನಾಗುತ್ತೋ ಕಾದು ನೋಡೋಣ ಎಂದು ಸಚಿವರು ಹೇಳಿದರು.
ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕ್ಷೇತ್ರಕ್ಕೆ ಸಚಿವ ಯೋಗೇಶ್ವರ್ ಆಗಮಿಸುತ್ತಿದ್ದಾರೆ. ನಗರದ ಹೊರ ಭಾಗದ ಭೂತನಾಳ ಕೆರೆಯ ಬಳಿ ಪ್ರವಾಸೋಧ್ಯಮ ಇಲಾಖೆಯ ತ್ರೀ ಸ್ಟಾರ್ ಹೊಟೇಲ್ ನಿರ್ಮಾಣ ಕಾಮಗಾರಿ ಭೂಮಿ ಪೂಜೆ ಹಾಗೂ ನಗರದ ಗಗನ್ ಮಹಲ್ನಲ್ಲಿ ಪಾರಂಪರಿಕ ಕಟ್ಟಡಗಳ ಸಂರಕ್ಷಣಾ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಲಿದ್ದಾರೆ.
ಇದನ್ನೂ ಓದಿ
ಯಡಿಯೂರಪ್ಪ ಸಿಎಂ ಆಗಲು ನನ್ನ ಕೊಡುಗೆಯೂ ಇದೆ: ಸಚಿವ ಸಿ.ಪಿ.ಯೋಗೇಶ್ವರ್
ದೆಹಲಿಯಲ್ಲಿ ಇಂದು ರಾಹುಲ್ ಗಾಂಧಿ, ಪ್ರಿಯಾಂಕಾರನ್ನು ಭೇಟಿಯಾಗಲಿದ್ದಾರೆ ನವಜೋತ್ ಸಿಂಗ್ ಸಿಧು
(CP Yogeshwar says argument is over but Awaiting judgment in Kalaburagi)
Published On - 11:40 am, Tue, 29 June 21