MP Renukacharya: ಅರಬಗಟ್ಟೆ ಕೋವಿಡ್ ಕೇಂದ್ರದಲ್ಲಿ ದಾವಣಗೆರೆ ಬೆಣ್ಣೆ ದೋಸೆ ಹಾಕಿದ ರೇಣುಕಾಚಾರ್ಯ ದಂಪತಿ!
Davanagere Benne Dosa: ತಮ್ಮ ವಿಧಾನಸಭಾ ಕ್ಷೇತ್ರದಲ್ಲಿರುವ ಜಿಲ್ಲೆಯ ಹೊನ್ನಾಳಿ ತಾಲೂಕಿನ ಅರಬಗಟ್ಟೆಯ ಕೋವಿಡ್ ಕೇರ್ ಸೆಂಟರ್ ನಲ್ಲಿ ರೇಣುಕಾಚಾರ್ಯ ದಂಪತಿಯೊಬ್ಬರೂ ದೋಸೆ ಮಾಡಿದ್ದಾರೆ. ವೃತ್ತಿಪರ ಬಾಣಸಿಗರನ್ನೂ ನಾಚಿಸುವಂತೆ ರೇಣುಕಾಚಾರ್ಯ ದಂಪತಿ ದೋಸೆ ಮಾಡಿದ್ದಾರೆ. ಕೋವಿಡ್ ಸೋಂಕಿತರು ದೋಸೆ ಉಪಹಾರ ಸವಿದಿದ್ದಾರೆ.
ದಾವಣಗೆರೆ: ಕೊರೊನಾ ಮಹಾಮಾರಿಯಿಂದ ಎದುರಾಗಿರುವ ಸಂಕಷ್ಟ ಕಾಲದಲ್ಲಿ ಹೊನ್ನಾಳಿ ಬಿಜೆಪಿ ಶಾಸಕ, ಮುಖ್ಯಮಂತ್ರಿ ಯಡಿಯೂರಪ್ಪ ರಾಜಕೀಯ ಕಾರ್ಯದರ್ಶಿ ಎಂಪಿ ರೇಣುಕಾಚಾರ್ಯ ತನ್ನ ಜನ ಸೇವೆ ಕಾರ್ಯವನ್ನು ಮುಂದುವರಿಸಿದ್ದಾರೆ. ಕೋವಿಡ್ ಕೇರ್ ಸೆಂಟರ್ ನಲ್ಲಿರುವ ಸೋಂಕಿತರಿಗಾಗಿ ರೇಣುಕಾಚಾರ್ಯ ದೋಸೆ ಹಾಕಿಕೊಟ್ಟಿದ್ದಾರೆ.
ತಮ್ಮ ವಿಧಾನಸಭಾ ಕ್ಷೇತ್ರದಲ್ಲಿರುವ ಜಿಲ್ಲೆಯ ಹೊನ್ನಾಳಿ ತಾಲೂಕಿನ ಅರಬಗಟ್ಟೆಯ ಕೋವಿಡ್ ಕೇರ್ ಸೆಂಟರ್ ನಲ್ಲಿ ರೇಣುಕಾಚಾರ್ಯ ದಂಪತಿಯೊಬ್ಬರೂ ದೋಸೆ ಮಾಡಿದ್ದಾರೆ. ವೃತ್ತಿಪರ ಬಾಣಸಿಗರನ್ನೂ ನಾಚಿಸುವಂತೆ ರೇಣುಕಾಚಾರ್ಯ ದಂಪತಿ ದೋಸೆ ಮಾಡಿದ್ದಾರೆ. ಕೋವಿಡ್ ಸೋಂಕಿತರು ದೋಸೆ ಉಪಹಾರ ಸವಿದಿದ್ದಾರೆ.
ಜನಸೇವೆಯೆ ಜನಾರ್ಧನನ ಸೇವೆ… ಎಂದ ರೇಣುಕಾಚಾರ್ಯ ಅರಬಗಟ್ಟೆಯ ಕೋವಿಡ್ ಕೇರ್ ಸೆಂಟರ್ ನಲ್ಲಿರುವ ನನ್ನ ಬಂಧುಗಳಿಗಾಗಿ ಕರ್ನಾಟಕ ರಾಜ್ಯ ಅಡುಗೆ ಕೆಲಸ ಮಾಡುವವರು ಮತ್ತು ಸಹಾಯಕರ ಅಸಂಘಟಿತ ಕಾರ್ಮಿಕ ಸಂಘದ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಬಿ ಜಿ ಶಂಕರ್‌ರಾವ್ ಹಾಗೂ ತಂಡದವರು ಬೆಣ್ಣೆ ದೋಸೆ ಉಪಹಾರದ ವ್ಯವಸ್ಥೆ ಮಾಡಿಸಿದ್ದು, ಖುದ್ದು ದೋಸೆ ಹಾಕುವ ಮೂಲಕ, ಸೋಂಕಿತ ಬಂದುಗಳಿಗೆ ಬೆಳಗಿನ ಉಪಹಾರ ಬಡಿಸಿದೆನು ಎಂದು ಸಾಮಾಜಿಕ ಜಾಲತಾಣದಲ್ಲಿ ರೇಣುಕಾಚಾರ್ಯ ಪೋಸ್ಟ್ ಮಾಡಿದ್ದಾರೆ.
(BJP MLA MP Renukacharya couple make dosa at arabagatte covid care center for patients)
ಹೊನ್ನಾಳಿ ಶಾಸಕ ರೇಣುಕಾಚಾರ್ಯ ದಂಪತಿಯಿಂದ ಧನ್ವಂತರಿ ಹೋಮದ ಬಳಿಕ, ಕ್ಷೇತ್ರದ ಜನರಿಗೆ ಹೋಳಿಗೆ ಊಟ
Published On - 11:10 am, Tue, 29 June 21