ಹೊನ್ನಾಳಿ ಶಾಸಕ ರೇಣುಕಾಚಾರ್ಯ ದಂಪತಿಯಿಂದ ಧನ್ವಂತರಿ ಹೋಮದ ಬಳಿಕ, ಕ್ಷೇತ್ರದ ಜನರಿಗೆ ಹೋಳಿಗೆ ಊಟ

Dhanvantari Homa: ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಅರಬಗಟ್ಟೆ ಕೋವಿಡ್ ಕೇರ್ ಸೆಂಟರ್ ನಲ್ಲಿ ರೇಣುಕಾಚಾರ್ಯ ದಂಪತಿ ಸ್ವತಃ ತಾವೇ ಕುಳಿತು ಹೋಮ ಮಾಡಿ ದೇವರಲ್ಲಿ ಪ್ರಾರ್ಥನೆ ಮಾಡಿದ್ದಾರೆ. ಕೊರೊನಾ ಸಂಪೂರ್ಣ ನಿರ್ಮೂಲನೆ ಮಾಡಲೆಂದು ಇಂದು ಬೆಳಗ್ಗೆಯಿಂದ ಪ್ರಾರ್ಥನೆಯಲ್ಲಿ ತೊಡಗಿದ್ದಾರೆ.

ಹೊನ್ನಾಳಿ ಶಾಸಕ ರೇಣುಕಾಚಾರ್ಯ ದಂಪತಿಯಿಂದ ಧನ್ವಂತರಿ ಹೋಮದ ಬಳಿಕ, ಕ್ಷೇತ್ರದ ಜನರಿಗೆ ಹೋಳಿಗೆ ಊಟ
ಕೊರೊನಾ ಕಂಟಕ ನಿವಾರಣೆ ನಿಮಿತ್ತ... ಹೊನ್ನಾಳಿ ಶಾಸಕ ರೇಣುಕಾಚಾರ್ಯ ದಂಪತಿಯಿಂದ ಧನ್ವಂತರಿ ಹೋಮ
Follow us
ಸಾಧು ಶ್ರೀನಾಥ್​
|

Updated on:Jun 11, 2021 | 12:08 PM

ಹೊನ್ನಾಳಿ ಶಾಸಕ, ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎಂಪಿ ರೇಣುಕಾಚಾರ್ಯ ಅವರು ಇಂದೂ ತಮ್ಮ ತನ ಸೇವೆಯನ್ನು ಮುಂದುವರಿಸಿದ್ದಾರೆ. ಕೊರೊನಾ ಮಹಾಮಾರಿಯಿಂದ ಕ್ಷೇತ್ರದ ಜನ ಸಂಕಷ್ಟಕ್ಕೆ ಸಿಲುಕಿರುವಾಗ ಶಾಸಕ ರೇಣುಕಾಚಾರ್ಯ ಅವರು ಒಂದಿಲ್ಲೊಂದು ರೂಪದಲ್ಲಿ ಅಹರ್ನಿಷಿಯಾಗಿ ಕ್ಷೇತ್ರದ ಜನತೆಯ ಸೇವೆಯಲ್ಲಿ ತೊಡಗಿದ್ದಾರೆ. ಇಂದು ಶುಕ್ರವಾರ, ಮನುಕುಲಕ್ಕೆ ಮಾರಕವಾಗಿ ಕಾಡುತ್ತಿರುವ ಕೊರೊನಾ ಸೋಂಕು ನಿವಾರಣೆಗಾಗಿ ಧನ್ವಂತರಿ ಹೋಮ ಹಾಗೂ ತಮ್ಮ ಜನತೆಯ ಆರೋಗ್ಯ ವೃದ್ಧಿಗಾಗಿ ಮೃತ್ಯುಂಜಯ ಹೋಮವನ್ನು ಅರಬಗಟ್ಟೆ ಕೋವಿಡ್ ಕೇರ್ ಸೆಂಟರ್ ನಲ್ಲಿ ನಡೆಸುತ್ತಿದ್ದಾರೆ.

ರೇಣುಕಾಚಾರ್ಯ ದಂಪತಿಯಿಂದ ಹೋಮದ ಬಳಿಕ ಹೋಳಿಗೆ ಊಟ: ಮನುಕುಲಕ್ಕೆ ಮಾರಕವಾಗಿ ಕಾಡುತ್ತಿರುವ ಕೊರೊನಾ ಸೋಂಕು ನಿವಾರಣೆಗಾಗಿ ಧನ್ವಂತರಿ ಹೋಮ ಹಾಗು ನನ್ನ ಜನತೆಯ ಆರೋಗ್ಯ ವೃದ್ಧಿಗಾಗಿ ಮೃತ್ಯುಂಜಯ ಹೋಮವನ್ನು ಅರಬಗಟ್ಟೆ ಕೋವಿಡ್ ಕೇರ್ ಸೆಂಟರ್ ನಲ್ಲಿ ನೆಡೆಸಲಾಗುತ್ತಿದ್ದು ನಂತರ ಮದ್ಯಾಹ್ನ ಎಲ್ಲಾ ಕೋವಿಡ್ ಸೋಂಕಿತ ಬಂಧುಗಳಿಗೆ ಹಾಗು ಸಿಬ್ಬಂದಿಗಳಿಗೆ ಹೋಳಿಗೆ ಊಟದ ವ್ಯವಸ್ಥೆ ಮಾಡಿದ್ದೇನೆ ಎಂದು ಶಾಸಕ ರೇಣುಕಾಚಾರ್ಯ ಹೇಳಿದ್ದಾರೆ.

ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಅರಬಗಟ್ಟೆ ಕೋವಿಡ್ ಕೇರ್ ಸೆಂಟರ್ ನಲ್ಲಿ ರೇಣುಕಾಚಾರ್ಯ ದಂಪತಿ ಸ್ವತಃ ತಾವೇ ಕುಳಿತು ಹೋಮ ಮಾಡಿ ದೇವರಲ್ಲಿ ಪ್ರಾರ್ಥನೆ ಮಾಡಿದ್ದಾರೆ. ಕೊರೊನಾ ಸಂಪೂರ್ಣ ನಿರ್ಮೂಲನೆ ಮಾಡಲೆಂದು ಇಂದು ಬೆಳಗ್ಗೆಯಿಂದ ಪ್ರಾರ್ಥನೆಯಲ್ಲಿ ತೊಡಗಿದ್ದಾರೆ.

ಕೊರೋನಾಗೆ ಕ್ರಿಶ್ಚಿಯನ್ ವ್ಯಕ್ತಿ ಬಲಿ; ದೇಹವನ್ನು ಆಂಬುಲೆನ್ಸ್ ನಲ್ಲಿ ಸ್ವತಃ ತೆಗೆದುಕೊಂಡು ಹೋದ ರೇಣುಕಾಚಾರ್ಯ ಆಲ್ವಿನ್‌ ಸೆರೋರಾ ಎಂಬ ವ್ಯಕ್ತಿ ಶಿವಮೊಗ್ಗದ ಸೆಕ್ರಡ್​ಹಾರ್ಟ್ ಚರ್ಚ್ ಫಾದರ್, ತಾಯಿಯ ಯೋಗ ಕ್ಷೇಮ ವಿಚಾರಿಸಲು ಹೊನ್ನಾಳಿಗೆ ಬಂದಿದ್ದು‌ ಮೂರು ದಿನಗಳ ಹಿಂದೆ ಕೊರೊನಾ ಸೋಂಕಿನಿಂದ ಹೊನ್ನಾಳಿ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿದ್ದರು.

ಅವರು ನಿನ್ನೆ ಬೆಳಗ್ಗೆ ಮೃತಪಟ್ಟಿದ್ದು, ಅವರ ಸಂಬಂಧಿಕರು ಪತ್ತೆಯಾಗದ ಹಿನ್ನೆಲೆಯಲ್ಲಿ ರೇಣುಕಾಚಾರ್ಯ ಅವರ ಅಂತ್ಯಸಂಸ್ಕಾರ ಮಾಡಲು ನಿಶ್ಚಯಿಸಿದ್ದರು. ಈ ಸಂದರ್ಭದಲ್ಲಿ ಹರಿಹರದ ಮಾಜಿ ಶಾಸಕರಾದ ಬಿಪಿ ಹರೀಶ್ ಅವರ ಮೂಲಕ ಹರಿಹರದ ಆರೋಗ್ಯ ಮತ್ತು ದಾರ್ಶನಿಕ ಮುಖ್ಯ ಗುರು ಆಂಟನಿ ಪೀಟರ್ ಸಾಗರ್ ಅವರು ನೆರವಿಗೆ ಬಂದಿದ್ದಾರೆ.

ಮೃತ ಆಲ್ವಿನ್‌ ಸೆರೋರಾ ಅವರ ದೇಹವನ್ನು ಕ್ರಿಶ್ಚಿನ್ ಪದ್ಧತಿಯ ಮೂಲಕ ಅಂತ್ಯಸಂಸ್ಕಾರ ಮಾಡುವುದಾಗಿ ಕೇಳಿಕೊಂಡ ಹಿನ್ನೆಲೆಯಲ್ಲಿ ಮೃತದೇಹವನ್ನು ರೇಣುಕಾಚಾರ್ಯ ಅವರ ತಂದೆ-ತಾಯಿ ಸ್ಮರಣಾರ್ಥ ಕೋವಿಡ್ ಸಂದರ್ಭದಲ್ಲಿ ಜನಸೇವೆಗೆಂದು ನೀಡಿರುವ ಆಂಬುಲೆನ್ಸ್ ನಲ್ಲಿ ನಿನ್ನೆ ತಡರಾತ್ರಿ ಕಳುಹಿಸಿಕೊಟ್ಟಿದ್ದಾರೆ.

(Honnali bjp mla MP Renukacharya couple perform dhanvantari homa to eradicate coronavirus)

MP Renukacharya: ಶಾಸಕ ರೇಣುಕಾಚಾರ್ಯರಿಂದ ಮತ್ತೊಂದು ಸತ್ಕಾರ್ಯ; ಕೊವಿಡ್ ಕೇರ್ ಸೆಂಟರ್​ನಲ್ಲಿ ಮೂರು ದಿನಗಳ ವಾಸ್ತವ್ಯ

Published On - 12:07 pm, Fri, 11 June 21

ಕೊಟ್ಟ ಮಾತು ಉಳಿಸಿಕೊಂಡ ಸುರೇಶ್, ಧನರಾಜ್ ಮಗಳಿಗೆ ಉಡುಗೊರೆ
ಕೊಟ್ಟ ಮಾತು ಉಳಿಸಿಕೊಂಡ ಸುರೇಶ್, ಧನರಾಜ್ ಮಗಳಿಗೆ ಉಡುಗೊರೆ
ಬಿಗ್​ಬಾಸ್: ಫ್ಯಾಮಿಲಿ ವಿಸಿಟ್ ಬಳಿಕ ಗೆಳೆತನಗಳೆಲ್ಲ ಪೀಸ್-ಪೀಸ್
ಬಿಗ್​ಬಾಸ್: ಫ್ಯಾಮಿಲಿ ವಿಸಿಟ್ ಬಳಿಕ ಗೆಳೆತನಗಳೆಲ್ಲ ಪೀಸ್-ಪೀಸ್
ಕುಟುಂಬದ ಅರಣ್ಯರೋದನೆ; ಗೋಗರೆದರೂ ಕಿವಿಗೆ ಹಾಕಿಕೊಳ್ಳದ ಪೊಲೀಸರು
ಕುಟುಂಬದ ಅರಣ್ಯರೋದನೆ; ಗೋಗರೆದರೂ ಕಿವಿಗೆ ಹಾಕಿಕೊಳ್ಳದ ಪೊಲೀಸರು
ಹಿರಿಯ ನಾಯಕರನ್ನು ಪೊಲೀಸ್ ವಶಕ್ಕೆ ಪಡೆದರೂ ಎದೆಗುಂದದ ಕಾರ್ಯಕರ್ತರು
ಹಿರಿಯ ನಾಯಕರನ್ನು ಪೊಲೀಸ್ ವಶಕ್ಕೆ ಪಡೆದರೂ ಎದೆಗುಂದದ ಕಾರ್ಯಕರ್ತರು
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ