ಪಾಕಿಸ್ತಾನದಲ್ಲಿ ಇಂದು ಸ್ವಾತಂತ್ರ್ಯ ದಿನಾಚರಣೆ; ಇತ್ತ ಪ್ರಧಾನಿ ಮೋದಿಯವರಿಂದ ಕುತೂಹಲಕಾರಿ ಟ್ವೀಟ್​.

Partition Horrors Remembrance Day: ಅಂದಿನ ಹೋರಾಟದ ಕಹಿ ನೆನಪು ಮತ್ತು ನಮ್ಮವರ ತ್ಯಾಗಕ್ಕೆ ಗೌರವ ಕೊಡುವ ಹಿನ್ನೆಲೆಯಲ್ಲಿ ಇನ್ನು ಮುಂದೆ ಪ್ರತಿವರ್ಷವೂ ಆಗಸ್ಟ್​ 14ರಂದು ದೇಶ ವಿಭಜನೆಯ ದುರಂತ ನೆನಪಿನ ದಿನವನ್ನಾಗಿ ಆಚರಿಸಲಾಗುವುದು ಎಂದು ಪಿಎಂ ಮೋದಿ ತಿಳಿಸಿದ್ದಾರೆ.

ಪಾಕಿಸ್ತಾನದಲ್ಲಿ ಇಂದು ಸ್ವಾತಂತ್ರ್ಯ ದಿನಾಚರಣೆ; ಇತ್ತ ಪ್ರಧಾನಿ ಮೋದಿಯವರಿಂದ ಕುತೂಹಲಕಾರಿ ಟ್ವೀಟ್​.
ಪ್ರಧಾನಿ ನರೇಂದ್ರ ಮೋದಿ (ಸಂಗ್ರಹ ಚಿತ್ರ)
Follow us
TV9 Web
| Updated By: Lakshmi Hegde

Updated on:Aug 14, 2021 | 12:06 PM

ಇನ್ನು ಮುಂದೆ ಆಗಸ್ಟ್​ 14ನ್ನು ದೇಶ ವಿಭಜನೆಯ ಭಯಾನಕ ನೆನಪಿನ ದಿನ (Partition Horrors Remembrance Day) ವನ್ನಾಗಿ ಆಚರಿಸಲಾಗುತ್ತದೆ ಎಂದು ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿ (Prime Minister Narendra Modi) ಹೇಳಿದ್ದಾರೆ. ನೆರೆ ರಾಷ್ಟ್ರ ಪಾಕಿಸ್ತಾನ ಇವತ್ತು ಸ್ವಾತಂತ್ರ್ಯ ದಿನ ಆಚರಿಸುತ್ತಿರುವ ಸಂದರ್ಭದಲ್ಲೇ ಟ್ವೀಟ್ ಮಾಡಿರುವ ನರೇಂದ್ರ ಮೋದಿ, ಅಂದಿನ ವಿಭಜನೆಯ ನೋವ (Partition Pain)ನ್ನೆಂದೂ ಮರೆಯಲು ಸಾಧ್ಯವಿಲ್ಲ ಎಂದಿದ್ದಾರೆ. ತಿಳಿಗೇಡಿಗಳ ದ್ವೇಷ, ಹಿಂಸಾಚಾರದ ಪರಿಣಾಮವಾಗಿ ನಮ್ಮ ಲಕ್ಷಾಂತರ ಸಹೋದರ, ಸೋದರಿಯರು ಸ್ಥಳಾಂತರಗೊಳ್ಳುವಂತಾಯ್ತು. ಅನೇಕರ ಜೀವ ಹೋಯ್ತು. ಅಂದಿನ ಹೋರಾಟದ ಕಹಿ ನೆನಪು ಮತ್ತು ನಮ್ಮವರ ತ್ಯಾಗಕ್ಕೆ ಗೌರವ ಕೊಡುವ ಹಿನ್ನೆಲೆಯಲ್ಲಿ ಇನ್ನು ಮುಂದೆ ಪ್ರತಿವರ್ಷವೂ ಆಗಸ್ಟ್​ 14ರಂದು ದೇಶ ವಿಭಜನೆಯ ದುರಂತ ನೆನಪಿನ ದಿನ(Partition Horrors Remembrance Day)ವಾಗಿ ಆಚರಿಸಲಾಗುವುದು ಎಂದು ಟ್ವೀಟ್​​ನಲ್ಲಿ ತಿಳಿಸಿದ್ದಾರೆ.

ಸಮಾಜ, ದೇಶಗಳ ವಿಭಜನೆಯಿಂದ, ಸಾಮರಸ್ಯವಿಲ್ಲದಿದ್ದರೆ ಆಗುವ ಅಪಾಯಗಳನ್ನು ಸದಾ ನೆನಪಿನಲ್ಲಿಟ್ಟುಕೊಳ್ಳಬೇಕು. ಒಗ್ಗಟ್ಟು, ಸಾಮಾಜಿಕ ಸಾಮರಸ್ಯ, ಮಾನವ ಸಬಲೀಕರಣದ ಬಗ್ಗೆ ನಮ್ಮಲ್ಲಿ ಅರಿವು ಮೂಡಬೇಕು. ಇವೆಲ್ಲಕ್ಕೆ ಈ ದೇಶ ವಿಭಜನೆಯ ದುರಂತ ನೆನಪಿನ ದಿನ ಸಾಕ್ಷಿಯಾಗಲಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ತಿಳಿಸಿದ್ದಾರೆ.

ಇದನ್ನೂ ಓದಿ: ಒಂದೆಡೆ ಸಾವಿನಲ್ಲೂ ಒಂದಾದ ಹಿರಿಯ ದಂಪತಿ; ಮತ್ತೊಂದೆಡೆ ಮದುವೆಗೆ ನಿರಾಕರಣೆ -ಕಾರಿನಲ್ಲಿ ಪ್ರೇಮಿಗಳ ಸಜೀವ ದಹನ

ಮೂರನೇ ಡೋಸ್​ ಕೊರೊನಾ ಲಸಿಕೆ ನೀಡುವುದಕ್ಕೆ ಒಪ್ಪಿಗೆ ಸೂಚಿಸಿದ ಸಿಡಿಸಿ; ಆದ್ಯತೆ ಮೇರೆಗೆ ವಿತರಿಸಲು ಸೂಚನೆ

Published On - 11:54 am, Sat, 14 August 21