AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Mahatma Gandhi: ಮಹಾತ್ಮ ಗಾಂಧಿಗೆ ಅಮೆರಿಕದ ಅತ್ಯುನ್ನತ ನಾಗರಿಕ ಪ್ರಶಸ್ತಿ ನೀಡಲು ನಿರ್ಣಯ ಮಂಡನೆ

ಗಾಂಧೀಜಿ ಅವರಿಗೆ ಅಮೆರಿಕದ ಅತ್ಯುನ್ನತ ಗೌರವವಾದ ಚಿನ್ನದ ಪದಕ ಪ್ರದಾನ ಮಾಡುವುದಾಗಿ ಘೋಷಿಸಿದರೆ ಅಮೆರಿಕದ ಅತ್ಯುನ್ನತ ನಾಗರಿಕ ಪ್ರಶಸ್ತಿಗೆ ಭಾಜನರಾದ ಮೊದಲ ಭಾರತೀಯ ಎಂಬ ಕೀರ್ತಿಗೆ ಮಹಾತ್ಮ ಗಾಂಧಿ ಪಾತ್ರರಾಗಲಿದ್ದಾರೆ.

Mahatma Gandhi: ಮಹಾತ್ಮ ಗಾಂಧಿಗೆ ಅಮೆರಿಕದ ಅತ್ಯುನ್ನತ ನಾಗರಿಕ ಪ್ರಶಸ್ತಿ ನೀಡಲು ನಿರ್ಣಯ ಮಂಡನೆ
ಮಹಾತ್ಮ ಗಾಂಧಿ
TV9 Web
| Updated By: ಸುಷ್ಮಾ ಚಕ್ರೆ|

Updated on:Aug 14, 2021 | 12:56 PM

Share

ನವದೆಹಲಿ: ಶಾಂತಿ, ಅಹಿಂಸೆಯ ಪ್ರತಿಪಾದಕರಾದ ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರಿಗೆ ಮರಣೋತ್ತರವಾಗಿ ಅಮೆರಿಕದ ಅತ್ಯುನ್ನತ ನಾಗರಿಕ ಪ್ರಶಸ್ತಿಯನ್ನು ನೀಡಿ ಗೌರವಿಸಬೇಕು ಎಂಬ ನಿರ್ಣಯವನ್ನು ನ್ಯೂಯಾರ್ಕ್​ನ ಸಂಸದ ಅಮೆರಿಕದ ಸದನದಲ್ಲಿ (US House of Representatives) ಮರು ಮಂಡನೆ ಮಾಡಿದ್ದಾರೆ. ಒಂದುವೇಳೆ ಗಾಂಧೀಜಿ ಅವರಿಗೆ ಅಮೆರಿಕದ ಅತ್ಯುನ್ನತ ಗೌರವವಾದ ಚಿನ್ನದ ಪದಕ ಪ್ರದಾನ ಮಾಡುವುದಾಗಿ ಘೋಷಿಸಿದರೆ ಅಮೆರಿಕದ ಅತ್ಯುನ್ನತ ನಾಗರಿಕ ಪ್ರಶಸ್ತಿಗೆ ಭಾಜನರಾದ ಮೊದಲ ಭಾರತೀಯ ಎಂಬ ಕೀರ್ತಿಗೆ ಮಹಾತ್ಮ ಗಾಂಧಿ ಪಾತ್ರರಾಗಲಿದ್ದಾರೆ.

ಇದುವರೆಗೂ ಜಾರ್ಜ್ ವಾಷಿಂಗ್ಟನ್, ನೆಲ್ಸನ್ ಮಂಡೇಲಾ, ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್, ಮದರ್ ತೆರೆಸಾ, ರೋಸಾ ಪಾರ್ಕ್ಸ್​ ಅವರಿಗೆ ಮರಣೋತ್ತರವಾಗಿ ಅಮೆರಿಕದ ಅತ್ಯುನ್ನತ ಗೌರವವಾದ ಈ ಚಿನ್ನದ ಪದಕ ನೀಡಿ ಗೌರವಿಸಲಾಗಿದೆ. ಸತ್ಯಾಗ್ರಹ, ಅಹಿಂಸಾವಾದದ ಮೂಲಕ ಇಡೀ ಪ್ರಪಂಚದಾದ್ಯಂತ ಪ್ರಭಾವ ಬೀರಿರುವ ಮಹಾತ್ಮ ಗಾಂಧಿ ಅವರಿಗೂ ಅಮೆರಿಕದ ಅತ್ಯುನ್ನತ ಗೌರವವಾದ ಚಿನ್ನದ ಪದಕ ಘೋಷಿಸಬೇಕು ಎಂದು ಅಮೆರಿಕದ ಸದನದಲ್ಲಿ ಚರ್ಚಿಸಲಾಗಿದೆ.

ಅಮೆರಿಕದ ಕಾಂಗ್ರೆಸ್ ಪ್ರತಿನಿಧಿಯಾಗಿರುವ ಕ್ಯಾರೊಲಿನ್ ಬಿ ಈ ಕುರಿತು ಮರುಮಂಡನೆ ಮಾಡಿದ್ದಾರೆ. ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ ಅವರ ಜನಾಂಗೀಯ ಸಮಾನತೆಗಾಗಿ, ನೆಲ್ಸನ್ ಮಂಡೇಲಾ ಅವರ ವರ್ಣಭೇದ ನೀತಿಯ ವಿರುದ್ಧದ ಹೋರಾಟದಿಂದ ಅವರ ಪರಂಪರೆ ವಿಶ್ವದಾದ್ಯಂತ ನಾಗರಿಕ ಹಕ್ಕುಗಳ ಚಳುವಳಿಗಳಿಗೆ ಸ್ಫೂರ್ತಿ ನೀಡಿತು. ಒಬ್ಬ ಸಾರ್ವಜನಿಕ ಸೇವಕನಾಗಿ, ನಾನು ಅವರ ಧೈರ್ಯ ಮತ್ತು ಉದಾಹರಣೆಯಿಂದ ಪ್ರತಿದಿನ ಸ್ಫೂರ್ತಿ ಪಡೆಯುತ್ತೇನೆ ಎಂದಿದ್ದಾರೆ.

ಮಹಾತ್ಮ ಗಾಂಧೀಜಿ ವರ್ಣಭೇದ ನೀತಿ ವಿರುದ್ಧ ಹೋರಾಡಿ, ಸತ್ಯಾಗ್ರಹದ ಮೂಲಕ ಬ್ರಿಟಿಷರನ್ನು ಮಣಿಸಿ, ಅಹಿಂಸೆಯ ಬೋಧನೆ ಮಾಡಿ ಇಡೀ ವಿಶ್ವಾದ್ಯಂತ ಪ್ರಭಾವ ಬೀರಿದ್ದಾರೆ. ಈ ಜಗತ್ತಿನಲ್ಲಿ ಏನಾದರೂ ಬದಲಾವಣೆಯಾಗಬೇಕೆಂದರೆ ಅದು ನಿಮ್ಮಿಂದಲೇ ಪ್ರಾರಂಭವಾಗಲಿ ಎಂಬ ಗಾಂಧೀಜಿಯವರ ಮಾತನ್ನು ನಾವೆಲ್ಲರೂ ಪಾಲಿಸೋಣ ಎಂದು ಮೆಲೊನಿ ಹೇಳಿದ್ದಾರೆ.

ಇದನ್ನೂ ಓದಿ: ವಂಚನೆ ಆರೋಪ: ಮಹಾತ್ಮ ಗಾಂಧೀಜಿ ಮರಿಮೊಮ್ಮಗಳಿಗೆ ಏಳು ವರ್ಷ ಜೈಲು ಶಿಕ್ಷೆ ವಿಧಿಸಿದ ದಕ್ಷಿಣ ಆಫ್ರಿಕಾ ನ್ಯಾಯಾಲಯ

ಮಹಾತ್ಮಾ ಗಾಂಧೀಜಿ ಮರಿ ಮೊಮ್ಮಗ ಕೊರೊನಾಕ್ಕೆ ಬಲಿ

(Resolution reintroduced In US Congress To Award Highest Civilian Award To Mahatma Gandhi)

Published On - 12:54 pm, Sat, 14 August 21

ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!