AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಂಚನೆ ಆರೋಪ: ಮಹಾತ್ಮ ಗಾಂಧೀಜಿ ಮರಿಮೊಮ್ಮಗಳಿಗೆ ಏಳು ವರ್ಷ ಜೈಲು ಶಿಕ್ಷೆ ವಿಧಿಸಿದ ದಕ್ಷಿಣ ಆಫ್ರಿಕಾ ನ್ಯಾಯಾಲಯ

ಆಶೀಶ್​ ಲತಾ ಅವರ ಕೌಟುಂಬಿಕ ಹಿನ್ನೆಲೆ ಹಾಗೂ ನೆಟ್​ಕೇರ್​ ದಾಖಲೆಗಳನ್ನು ಗಮನಿಸಿದ ಉದ್ಯಮಿ ಎಸ್​ ಆರ್ ಮಹಾರಾಜ್​ ಸಹಾಯಕ್ಕೆ ಒಪ್ಪಿ, ಲಿಖಿತ ಒಪ್ಪಿಗೆ ಪತ್ರಕ್ಕೆ ಸಹಿ ಹಾಕಿಸಿ ಸಾಲ ನೀಡಿದ್ದರು. ಆದರೆ, ನಂತರದಲ್ಲಿ ಆಶೀಶ್​ ಲತಾ ಅವರಿಗೂ ನೆಟ್​ಕೇರ್ ಸಂಸ್ಥೆಗೂ ಯಾವುದೇ ವ್ಯವಹಾರಗಳಿಲ್ಲ. ಅವರು ತೋರಿಸಿದ ದಾಖಲೆಗಳು ನಕಲಿ ಎನ್ನುವ ವಿಚಾರ ಬಹಿರಂಗವಾಗಿತ್ತು.

ವಂಚನೆ ಆರೋಪ: ಮಹಾತ್ಮ ಗಾಂಧೀಜಿ ಮರಿಮೊಮ್ಮಗಳಿಗೆ ಏಳು ವರ್ಷ ಜೈಲು ಶಿಕ್ಷೆ ವಿಧಿಸಿದ ದಕ್ಷಿಣ ಆಫ್ರಿಕಾ ನ್ಯಾಯಾಲಯ
ಮಹಾತ್ಮಾ ಗಾಂಧಿ, ಮರಿಮೊಮ್ಮಗಳು ಆಶೀಶ್​ ಲತಾ
TV9 Web
| Edited By: |

Updated on:Jun 08, 2021 | 8:14 AM

Share

ದಕ್ಷಿಣ ಆಫ್ರಿಕಾ: ವಂಚನೆ ಆರೋಪದ ಸುಳಿಗೆ ಸಿಲುಕಿರುವ ಮಹಾತ್ಮ ಗಾಂಧೀಜಿಯವರ ಮರಿಮೊಮ್ಮಗಳಿಗೆ ದಕ್ಷಿಣ ಆಫ್ರಿಕಾದ ಡರ್ಬನ್​ ನ್ಯಾಯಾಲಯ 7 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಉದ್ಯಮಿಯೊಬ್ಬರಿಗೆ 6.2 ಮಿಲಿಯನ್ ರಾಂಡ್ (ದಕ್ಷಿಣ ಆಫ್ರಿಕಾ ಕರೆನ್ಸಿ; 1 ರಾಂಡ್ = 5.38 ರೂಪಾಯಿ) ವಂಚಿಸಿರುವ ಆರೋಪ ಮಹಾತ್ಮ ಗಾಂಧೀಜಿಯವರ ಮರಿಮೊಮ್ಮಗಳು ಆಶೀಶ್ ಲತಾ ರಾಮ್​ಗೋಬಿನ್ ಅವರ ಮೇಲಿದ್ದು, ಸೋಮವಾರ ಈ ಬಗ್ಗೆ ತೀರ್ಪು ಪ್ರಕಟಿಸಿರುವ ನ್ಯಾಯಾಲಯ ಕಾರಾಗೃಹ ಶಿಕ್ಷೆಗೆ ಅವರನ್ನು ಗುರಿಯಾಗಿಸಿದೆ.

ಇಳಾ ಗಾಂಧಿ ಹಾಗೂ ಮೆವಾ ರಾಮ್​ಗೋವಿಂದ್ ಅವರ ಮಗಳಾದ ಆಶೀಶ್ ಲತಾ ವಿರುದ್ಧ ವಂಚನೆ ಪ್ರಕರಣ 2015ರಲ್ಲಿ ದಾಖಲಾಗಿದ್ದು, ಉದ್ಯಮಿ ಎಸ್​ ಆರ್ ಮಹಾರಾಜ್​ ಎನ್ನುವವರಿಂದ 6.2 ಮಿಲಿಯನ್ ರಾಂಡ್ ಪಡೆದಿದ್ದು ನಂತರ ಮೋಸ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಅಲ್ಲದೇ, ಅವರು ಹಣ ಯಾವ ಕಾರಣಕ್ಕೆ ಅವಶ್ಯಕವಿದೆ ಎಂದು ಹೇಳಿದ್ದರೋ ಅದು ಕೂಡಾ ಸುಳ್ಳು ಎಂದು ಸಾಬೀತಾಗಿದ್ದು ಆಶೀಶ್​ ಲತಾ ತೋರಿಸಿದ್ದ ದಾಖಲೆಗಳೆಲ್ಲವೂ ನಕಲಿ ಎನ್ನುವುದು ತಿಳಿದುಬಂದಿದೆ.

ದಕ್ಷಿಣ ಆಫ್ರಿಕಾದ ನೆಟ್​ಕೇರ್​ ಎಂಬ ಸಂಸ್ಥೆಯೊಂದಿಗೆ ಕೆಲ ವ್ಯವಹಾರಗಳಿವೆ. ಆ ಸಂಸ್ಥೆಗಾಗಿ 3 ಕಂಟೈನರ್​ ಲೆನಿನ್ ತರಿಸಿದ್ದೇನೆ. ಆದರೆ, ಆರ್ಥಿಕವಾಗಿ ಕೆಲ ಕಷ್ಟಗಳು ಎದುರಾಗಿರುವುದರಿಂದ ವಸ್ತುಗಳನ್ನು ಇಳಿಸಿಕೊಳ್ಳಲು ಹಣದ ಸಹಾಯ ಬೇಕು. ತುರ್ತಾಗಿ 6.2ಮಿಲಿಯನ್​ ರಾಂಡ್ ಬೇಕಿದ್ದು, ನಿಮಗೆ ಸೂಕ್ತ ಮೊತ್ತದೊಂದಿಗೆ ಅದನ್ನು ಹಿಂತಿರುಗಿಸಲಾಗುವುದು ಎಂದು ಉದ್ಯಮಿ ಎಸ್​ ಆರ್ ಮಹಾರಾಜ್​ ಬಳಿ ಭರವಸೆ ವ್ಯಕ್ತಪಡಿಸಿ ನೆಟ್​ಕೇರ್ ಸಂಸ್ಥೆಯ ದಾಖಲೆಗಳನ್ನು ತೋರಿಸಿದ್ದರು.

ಆಶೀಶ್​ ಲತಾ ಅವರ ಕೌಟುಂಬಿಕ ಹಿನ್ನೆಲೆ ಹಾಗೂ ನೆಟ್​ಕೇರ್​ ದಾಖಲೆಗಳನ್ನು ಗಮನಿಸಿದ ಉದ್ಯಮಿ ಎಸ್​ ಆರ್ ಮಹಾರಾಜ್​ ಸಹಾಯಕ್ಕೆ ಒಪ್ಪಿ, ಲಿಖಿತ ಒಪ್ಪಿಗೆ ಪತ್ರಕ್ಕೆ ಸಹಿ ಹಾಕಿಸಿ ಸಾಲ ನೀಡಿದ್ದರು. ಆದರೆ, ನಂತರದಲ್ಲಿ ಆಶೀಶ್​ ಲತಾ ಅವರಿಗೂ ನೆಟ್​ಕೇರ್ ಸಂಸ್ಥೆಗೂ ಯಾವುದೇ ವ್ಯವಹಾರಗಳಿಲ್ಲ. ಅವರು ತೋರಿಸಿದ ದಾಖಲೆಗಳು ನಕಲಿ ಎನ್ನುವ ವಿಚಾರ ಬಹಿರಂಗವಾಗಿತ್ತು. ಅದಾದ ಬೆನ್ನಲ್ಲೇ ಎಸ್​ ಆರ್​ ಮಹಾರಾಜ್​ ಕಾನೂನಿನ ಮೊರೆ ಹೋಗಿ ಆಶೀಶ್ ಲತಾ ವಿರುದ್ಧ ದೂರು ದಾಖಲಿಸಿದ್ದರು.

ವಿಚಾರಣೆ ವೇಳೆ ಮಹಾತ್ಮಾ ಗಾಂಧೀಜಿ ಅವರ ಮರಿಮೊಮ್ಮಗಳು ತಪ್ಪಿತಸ್ಥೆ ಎನ್ನುವುದು ಕಂಡು ಬಂದ ಕಾರಣ ಇದೀಗ ದಕ್ಷಿಣ ಆಫ್ರಿಕಾದ ಡರ್ಬನ್​ ನ್ಯಾಯಾಲಯ ಏಳು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಕುಟುಂಬದ ಹಿರಿತನ, ನಂಬಿಕೆಗಳನ್ನೇ ಬಂಡವಾಳವಾಗಿಸಿಕೊಂಡು ಮೋಸವೆಸಗಿದ ಆಶೀಶ್​ ಲತಾ ಅವರು ಕಾನೂನಿನ ಅಡಿಯಲ್ಲಿ ಅಪರಾಧಿ ಎನ್ನುವುದು ಸಾಬೀತಾದಂತಾಗಿದೆ.

ಇದನ್ನೂ ಓದಿ: ಮಹಾತ್ಮಾ ಗಾಂಧೀಜಿ ಮರಿ ಮೊಮ್ಮಗ ಕೊರೊನಾಕ್ಕೆ ಬಲಿ 

Jawaharlal Nehru Death Anniversary 2021: ಜವಾಹರ ಲಾಲ್ ನೆಹರೂ ಕುರಿತಾದ 10 ಆಸಕ್ತಿಕರ ಸಂಗತಿಗಳು

Published On - 8:12 am, Tue, 8 June 21

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ