Sign In

By signing in or creating an account, you agree with Associated Broadcasting Company's Terms & Conditions and Privacy Policy.

Explainer: 2 ನೇ ಜಾಗತಿಕ ಯುದ್ಧದಲ್ಲಿ ಮಡಿದ ತನ್ನ ಯೋಧರ ಅವಶೇಷಗಳನ್ನು ಪತ್ತೆಮಾಡಲು ಅಮೇರಿಕಾದ ಡಿಒಡಿಗೆ ಎನ್​ಎಫ್ಎಸ್​ಯು ನೆರವು

ಅತಿಥೇಯ ದೇಶಗಳೊಂದಿಗೆ ಟೈ ಅಪ್ ಮಾಡಿಕೊಳ್ಳುವ ಡಿಪಿಎಎ, ಅಲ್ಲಿನ ಭೌಗೋಳಿಕ ಅಂಶಗಳು, ಪ್ರದೇಶದಲ್ಲಿ ಎದುರಾಗಬಹುದಾದ ಸವಾಲುಗಳು, ಮತ್ತು ಹವಾಮಾನದ ಆಧಾರದ ಮೇಲೆ ಕಾರ್ಯಾಚರಣೆಗೆ ಒಂದು ಕಾಲಮಿತಿಯನ್ನು ರೂಪಿಸುತ್ತದೆ.

Explainer: 2 ನೇ ಜಾಗತಿಕ ಯುದ್ಧದಲ್ಲಿ ಮಡಿದ ತನ್ನ ಯೋಧರ ಅವಶೇಷಗಳನ್ನು ಪತ್ತೆಮಾಡಲು ಅಮೇರಿಕಾದ ಡಿಒಡಿಗೆ ಎನ್​ಎಫ್ಎಸ್​ಯು ನೆರವು
ಎರಡನೇ ಜಾಗತಿಕ ಯುದ್ಧ ನಂತರದ ಒಂದು ದೃಶ್ಯ
Follow us
TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jun 08, 2021 | 1:49 AM

ಗುಜರಾತಿನ ಗಾಂಧಿನಗರದಲ್ಲಿರುವ ರಾಷ್ಟ್ರೀಯ ವಿಧಿವಿಧಾನ ವಿಶ್ವವಿದ್ಯಾಲಯವು (ಎನ್​ಎಫ್ಎಸ್​ಯು) ಅಮೇರಿಕಾದ ಡಿಪಾರ್ಟ್​ಮೆಂಟ್ ಆಫ್ ಡಿಫೆನ್ಸ್ (ಡಿಒಡಿ) ಜೊತೆ ಕೈಜೋಡಿಸಿದ್ದು ಎರಡನೇ ಮಹಾಯುದ್ಧದಲ್ಲಿ ಕಾಣೆಯಾದ 400 ಕ್ಕೂ ಹೆಚ್ಚು ಅಮೇರಿಕನ್ ಸೈನಿಕರ ಅವಶೇಷಗಳನ್ನು ಶೋಧಿಸಲು ಮತ್ತು ಗುರುತಿಸಲು ನೆರವಾಗಲಿದೆ. ಮೇ 27ರಂದು ನಡೆದ ವಿಡಿಯೋ ಕಾನ್ಪರೆನ್ಸ್​ನಲ್ಲಿ ಡಿಒಡಿ ಅಡಿಯಲ್ಲಿ ಬರುವ ಡಿಫೆನ್ಸ್ ಪ್ರಿಸನರ್ ಆಫ್ ವಾರ್ ಇನ್ ಌಕ್ಷನ್ ಅಕೌಂಟಿಂಗ್ ಏಜೆನ್ಸಿಯು (ಡಿಪಿಎಎ) ಎನ್​ಎಫ್ಎಸ್​ಯು ಮತ್ತು ಯೂನಿವರ್ಸಿಟಿ ಆಫ್ ನೆಬ್ರಾಸ್ಕಾ ಲಿಂಕನ್ (ಯುಎನ್ಎಲ್) ಜೊತೆ ಮೆಮೊರಾಂಡಮ್ ಆಫ್ ಅಂಡರ್​ಸ್ಟ್ಯಾಂಡಿಗ್ (ಎಮ್​ಒಯು) ಒಂದಕ್ಕೆ ಸಹಿ ಹಾಕಿದ್ದು ಅದರ ಪ್ರಕಾರ ಡಿಪಿಎಎ ಭಾರತಕ್ಕೆ ಭೇಟಿ ನೀಡಿ, ಎರಡನೇ ಜಾಗತಿಕ ಯುದ್ಧದ ಅಂತಿಮ ವರ್ಷಗಳಲ್ಲಿ ಮಿಸ್ಸಿಂಗ್ ಇನ್ ಌಕ್ಷನ್ (ಎಮ್​ಐಎ) ಆದ ಅಮೇರಿಕ ವಾಯುದಳದ ಸುಮಾರು 400 ಕ್ಕೂ ಹೆಚ್ಚು ಯೋಧರ ಅವಶೇಷಗಳನ್ನು ಪತ್ತೆ ಮಾಡಿ ಗುರುತಿಸಲಿದೆ.

ಡಿಪಿಎಎ ಅಮೇರಿಕಾದ ಡಿಒಡಿ ಅಡಿಯಲ್ಲಿ ಕೆಲಸ ಮಾಡುವ ಸಂಸ್ಥೆಯಾಗಿದ್ದು 2015ರಲ್ಲಿ ಅಸ್ತಿತ್ವಕ್ಕೆ ಬಂದಿದೆ. ಇದರ ಬ್ಯಾನರ್​ ಅಡಿಯಲ್ಲಿ ಬೇರೆ ಹಲವಾರಿ ಏಜೆನ್ಸಿಗಳು ಬರುತ್ತವೆ. ಇದರ ಮೂಲ ಕೆಲಸವೆಂದರೆ, 2ನೇ ಮಹಾಯುದ್ಧ, ಕೊರಿಯನ್ ಯುದ್ಧ, ವಿಯೆಟ್ನಾಂ ವಾರ್ ಮತ್ತು ಇರಾಕ್​ ಸಂಘರ್ಷಗಳಲ್ಲಿ ಎಮ್​ಐ​ಎ ಆಗಿರುವ ಅಥವಾ ಯುದ್ಧ ಸಮಯದ ಅಮೇರಿಕನ್ ಕೈದಿಗಳ ಅವಶೇಷಗಳನ್ನು ಪತ್ತೆ ಮಾಡುವುದಾಗಿದೆ. ಕಾಣೆಯಾದ ಯೋಧರ ಕುಟುಂಬಗಳೊಂದಿಗೆ ಡಿಪಿಎಎ ನಿರಂತರವಾಗಿ ಸಂಪರ್ಕದಲ್ಲಿದೆ. ಮೂಲಗಳ ಪ್ರಕಾರ ಈ ಸಂಸ್ಥೆಯು 81,000 ಕ್ಕೂ ಕಾಣೆಯಾದ ಯೋಧರನ್ನು ಹುಡುಕುತ್ತಿದೆ.

ಭಾರತದ ಸಹಯೋಗ

ಡಿಒಡಿ ಅಧೀನದಲ್ಲಿರುವ ಡಿಪಿಎಎ ಮತ್ತು ಅಥವಾ ಅದರಂಥ ಏಜೆನ್ಸಿಗಳು ಬಾರತದ ಈಶಾನ್ಯ ರಾಜ್ಯಗಳಿಗೆ ಸೀಮಿತಗೊಂಡಿರುವ ಪ್ರದೇಶಗಳಲ್ಲಿ ಅವಶೇಷಗಳನನ್ನು ಪತ್ತೆ ಮಾಡಲು 8 ಕಾರ್ಯಗಳನ್ನು ನಡೆಸಲಿದೆ. ಪತ್ತೆ ಕಾರ್ಯಗಳು ಭಾರತದ ಅರುಣಾಚಲ ಪ್ರದೇಶ, ಅಸ್ಸಾಂ, ನಾಗಾಲ್ಯಾಂಡ್ ಮತ್ತು ತ್ರಿಪುರದಲ್ಲಿ 2008 ರಿಂದ ನಡೆಯುತ್ತಿದೆ. 2016ರಲ್ಲಿ ಡಿಪಿಎಎದ ಒಂದು ತಂಡ ಮತ್ತು ಭಾರತದ ಮಾನವ ವಿಜ್ಞಾನ ಸಂಸ್ಥೆಗಳು ಯುಎಸ್​ ಸೇನೆ ಯೋಧರ ಅವಶೇಷಗಳು ಇರುವ ಬಗ್ಗೆ ಸ್ವಲ್ಪ ಪ್ರಮಾಣದ ಸಾಕ್ಷ್ಯವನ್ನು ಕಲೆಹಾಕಿದ್ದವು.

ಡಿಪಿಎಎ ನೀಡಿರುವ ಹೇಳಿಕೆಯ ಪ್ರಕಾರ,ಅಮೇರಿಕಾದ 6 ಯೋಧರ ಅವಶೇಷಗಳನ್ನು ಗುರುತಿಲಾಗಿದ್ದು ಮಿಕ್ಕಿದ 306 ಯೋಧರ ಅವಶೇಷಗಳು ಇನ್ನೂ ಪತ್ತೆಯಾಗಬೇಕಿದೆ. ಆದರೆ. ಭಾರತದಲ್ಲಿ ಮಡಿದ ಯೋಧರ ಸಂಖ್ಯೆ 400ಕ್ಕಿಂತ ಜಾಸ್ತಿಯಿದೆ ಎಂದು ಅದು ಹೇಳುತ್ತದೆ.

ದಶಕಗಳ ಹಿಂದೆ ಮಡಿದವರ ಅವಶೇಷಗಳನ್ನು ಡಿಪಿಎಎ ಹೇಗೆ ಪತ್ತೆ ಮಾಡುತ್ತದೆ?

ಅತಿಥೇಯ ದೇಶಗಳೊಂದಿಗೆ ಟೈ ಅಪ್ ಮಾಡಿಕೊಳ್ಳುವ ಡಿಪಿಎಎ, ಅಲ್ಲಿನ ಭೌಗೋಳಿಕ ಅಂಶಗಳು, ಪ್ರದೇಶದಲ್ಲಿ ಎದುರಾಗಬಹುದಾದ ಸವಾಲುಗಳು, ಮತ್ತು ಹವಾಮಾನದ ಆಧಾರದ ಮೇಲೆ ಕಾರ್ಯಾಚರಣೆಗೆ ಒಂದು ಕಾಲಮಿತಿಯನ್ನು ರೂಪಿಸುತ್ತದೆ. ಅತಿಥೇಯ ದೇಶದಲ್ಲಿ ಲಭ್ಯವಾಗಬಹುದಾದ ದಾಖಲೆ ಮತ್ತು ಪತ್ರಾಗಾರಗಳನ್ನು ಪರಿಶೀಲಿಸಲು ಏಜೆನ್ಸಿಯು ಅಲ್ಲಿಗೆ ತನ್ನ ಸಂಶೋಧನೆ ಮತ್ತು ತನಿಖಾ ತಂಡವನ್ನು (ಆರ್​​ಐಟಿ) ಕಳಿಸಿ ಅವುಗಳಿಂದ ಸುಳಿವುಗಳನ್ನು ನಿರೀಕ್ಷಿಸುತ್ತದೆ. ಗುರುತಿಸಲ್ಪಟ್ಟ ಪ್ರದೇಶಗಳಲ್ಲಿರಬಹುದಾದ ಸೇನಾ ಸಿಬ್ಬಂದಿ ಮತ್ತು ಸ್ಥಳೀಯರಿಂದ ಹಿಂದೆ ನಡೆದ ಯುದ್ಧಗಳ ಬಗ್ಗೆ ಮೌಖಿಕ ಇತಿಹಾಸವನ್ನು ಸಂಗ್ರಹಿಸಿ ಸಂಶೋಧನೆ ನಡೆಸುತ್ತದೆ.

ಆರ್​ಐಟಿ ಪತ್ತೆಮಾಡಿದ ಅಂಶಗಳ ಮೇಲೆ ಸಮಾಜ ವಿಜ್ಞಾನದ ಒಂದು ತಂಡ ಮತ್ತು ಪೋರೆನ್ಸಿಕ್ ತಜ್ಞರು ವಿಮಾನದ ಅವಶೇಷಗಳಿಗಾಗಿ ಆ ಸ್ಥಳಗಳ ಮೇಲೆ ಕಾರ್ಯಾಚರಣೆ ನಡೆಸುತ್ತದೆ ಮತ್ತು ಸ್ಥಳೀಯ ಸಿಮೆಟ್ರಿಗಳಿಂದ ದಾಖಲೆಗಳನ್ನು ಪರಿಶೀಲಿಸುತ್ತದೆ. ತಮಗೆ ಸಿಕ್ಕ ಸುಳಿವು ದೃಢವಾದರೆ ಭೂಮಿಯನ್ನ ಅಗೆದು ಮಾನವ ನ ದೇಹದ ಅವಶೇಷಗಳೇಣಾದರೂ ಸಿಕ್ಕಾವೆಯೇ ಎಂದು ಪರೀಕ್ಷಿಸುತ್ತದೆ. ಒಂದು ಪಕ್ಷ ಸಿಕ್ಕರೆ ಅವುಗಳನ್ನು ಹೆಚ್ಚಿನ ಪರೀಕ್ಷೆಗಳಿಗಾಗಿ ಯುಎಸ್​ನಲ್ಲಿರುವ ಲ್ಯಾಬ್​ಗಳಿಗೆ ಕಳಿಸುತ್ತದೆ

ಈ ಸಹಭಾಗಿತ್ವದಲ್ಲಿ ಎನ್​ಎಫ್​ಎಸ್​ಯು ಪಾತ್ರವೇನು? 

ಹೊಸದಾಗಿ ಸಹಿ ಮಾಡಿರುವ ಎಮ್​ಒಯು ಪ್ರಕಾರ ಎನ್​ಎಫ್​ಎಸ್​ಯು ವಿದ್ಯಾರ್ಥಿಗಳೂ ಸೇರಿದಂತೆ ಫೋರನ್ಸಿಕ್ ತಜ್ಞರು, ಡಿಪಿಎಎ ಟೀಮು, ಭಾರತದ ಮಾನವ ವಿಜ್ಞಾನ ತಂಡ ಮತ್ತು ಸ್ಥಳೀಯ ತಂಡಗಳೊಂದಿಗೆ ಈಶಾನ್ಯ ರಾಜ್ಯಗಳಿಗೆ ಭೇಟಿ ನೀಡುತ್ತವೆ. ಮಾನವ ವಿಜ್ಞಾನದ 70 ವರ್ಷಗಳ ಇತಿಹಾಸದಲ್ಲಿ ಅದು ಮತ್ತು ಎನ್​ಎಫ್​ಎಸ್​ಯು ಮೊದಲಬಾರಿಗೆ ಜೊತೆಗೂಡಿ ಕೆಲಸ ಮಾಡಲಿವೆ. ಫೋರೆನ್ಸಿಕ್ ಹಲ್ಲು ಪರೀಕ್ಷೆ ಮತ್ತು ಫೋರೆನ್ಸಿಕ್ ಮಾನವ ವಿಜ್ಞಾನದ ಮೂಲಕ ಅಸ್ಥಿ ಪಂಜರದ ಪರೀಕ್ಷೆ ನಡೆಯುತ್ತದೆ

ಈ ಕೆಲಸಕ್ಕಾಗಿ ಎನ್​ಎಫ್​ಎಸ್​ಯು ಅನ್ನು ಯಾಕೆ ಆರಿಸಿಕೊಳ್ಳಲಾಗಿದೆ?

ಗಾಂಧಿನಗರದಲ್ಲಿರುವ ಎನ್​ಎಫ್​ಎಸ್​ಯು ಭಾರತದ ಪ್ರಿಮೀಯರ್ ಫೋರೆನ್ಸಿಕ್ ಸಂಸ್ಥೆಯಾಗಿದ್ದು ಇಲ್ಲಿ ಫೋರೆನ್ಸಿಕ್ ಮಾನವ ವಿಜ್ಞಾನ ಮತ್ತು ಫೋರೆನ್ಸಿಕ್ ದಂತವಿಜ್ಞಾನಗಳನ್ನು ಜೊತೆಗೂಡಿಸಲಾಗಿದೆ. ಈ ಸಂಸ್ಥೆಯಲ್ಲಿ ಫೋರೆನ್ಸಿಕ್ ದಂತವಿಜ್ಞಾನ ಲ್ಯಾಬ್ ಮತ್ತು 3ಡಿ ಸ್ಕ್ಯಾನರ್ ಹಾಗೂ ಪ್ರಿಂಟರ್​ಗಳಂಥ ಉಪಕರಣಗಳಿವೆ.

ಗುಜರಾತ ಸರ್ಕಾರದ ಫೋರೆನ್ಸಿಕ್ ವಿಜ್ಞಾನಗಳ ನಿರ್ದೇಶನಾಲಯದ ಅಡಿಯಲ್ಲಿ ಬರುವ ಎನ್​ಎಫ್​ಎಸ್​ಯು ಮತ್ತು ಫೋರೆನ್ಸಿಕ್ ವಿಜ್ಞಾನ ಲ್ಯಾಬ್ ಪ್ರಸ್ತುತವಾಗಿ 1,100 ಸಿಬ್ಬಂದಿ ವರ್ಗವನ್ನು ಹೊಂದಿದೆ.

ಇದನ್ನೂ ಓದಿ: ಮಂಗಳ ಗ್ರಹ ನಂತರ ಶುಕ್ರಗ್ರಹದ ಮೇಲೆ ದೃಷ್ಟಿ ಕೇಂದ್ರೀಕರಿಸಿರುವ ನಾಸಾ, ಎರಡು ಮಿಷನ್​ಗಳ ಸಿದ್ಧತೆಗೆ ಬಿಲಿಯನ್ ಡಾಲರ್​ಗಳನ್ನು ವ್ಯಯ!

ಕಂದಾಯ ಮತ್ತು ಸರ್ವೇ ಇಲಾಖೆ ಅಧಿಕಾರಿಗಳಿಂದ ಮಾರ್ಕಿಂಗ್ ಕೆಲಸ ಶುರುವಾಗಿದೆ
ಕಂದಾಯ ಮತ್ತು ಸರ್ವೇ ಇಲಾಖೆ ಅಧಿಕಾರಿಗಳಿಂದ ಮಾರ್ಕಿಂಗ್ ಕೆಲಸ ಶುರುವಾಗಿದೆ
ತೆರವು ಕಾರ್ಯಾಚರಣೆ ಆರಂಭಿಸುವ ಮೊದಲು ನೋಟೀಸ್ ನೀಡಿಲ್ಲ: ಕುಮಾರಸ್ವಾಮಿ
ತೆರವು ಕಾರ್ಯಾಚರಣೆ ಆರಂಭಿಸುವ ಮೊದಲು ನೋಟೀಸ್ ನೀಡಿಲ್ಲ: ಕುಮಾರಸ್ವಾಮಿ
ನಮಗಾದರೋ ಕುಮಾರಸ್ವಾಮಿ ಎಲ್ಲದಕ್ಕೂ ರಾಜೀನಾಮೆ ಕೇಳುತ್ತಿದ್ದರಲ್ಲ? ಸಚಿವ
ನಮಗಾದರೋ ಕುಮಾರಸ್ವಾಮಿ ಎಲ್ಲದಕ್ಕೂ ರಾಜೀನಾಮೆ ಕೇಳುತ್ತಿದ್ದರಲ್ಲ? ಸಚಿವ
ತೋಟದ ಮನೆ ಸುತ್ತ ಸರ್ಕಾರಿ ಒತ್ತುವರಿ ಭೂಮಿ ತೆರವು: ಎಚ್​ಡಿಕೆ ಹೇಳಿದ್ದಿಷ್ಟು
ತೋಟದ ಮನೆ ಸುತ್ತ ಸರ್ಕಾರಿ ಒತ್ತುವರಿ ಭೂಮಿ ತೆರವು: ಎಚ್​ಡಿಕೆ ಹೇಳಿದ್ದಿಷ್ಟು
RCB ಅನ್​ಬಾಕ್ಸ್ ಕಾರ್ಯಕ್ರಮ ಮಿಸ್ ಮಾಡಿಕೊಂಡಿದ್ದೀರಾ? ಇಲ್ಲಿದೆ ವಿಡಿಯೋ
RCB ಅನ್​ಬಾಕ್ಸ್ ಕಾರ್ಯಕ್ರಮ ಮಿಸ್ ಮಾಡಿಕೊಂಡಿದ್ದೀರಾ? ಇಲ್ಲಿದೆ ವಿಡಿಯೋ
ಎಚ್​ಡಿಕೆ ತೋಟದ ಮನೆ ಸುತ್ತ ಎಷ್ಟು ಎಕರೆ ಒತ್ತುವರಿ?ಸ್ಫೋಟಕ ಮಾಹಿತಿ ಇಲ್ಲಿದೆ
ಎಚ್​ಡಿಕೆ ತೋಟದ ಮನೆ ಸುತ್ತ ಎಷ್ಟು ಎಕರೆ ಒತ್ತುವರಿ?ಸ್ಫೋಟಕ ಮಾಹಿತಿ ಇಲ್ಲಿದೆ
ಕೇಂದ್ರ ಸಚಿವರೊಬ್ಬರ ವಿರುದ್ಧ ಒತ್ತುವರಿ ಕಾರ್ಯಾಚರಣೆ ನಡೆದ ಪ್ರಕರಣಗಳು ವಿರಳ
ಕೇಂದ್ರ ಸಚಿವರೊಬ್ಬರ ವಿರುದ್ಧ ಒತ್ತುವರಿ ಕಾರ್ಯಾಚರಣೆ ನಡೆದ ಪ್ರಕರಣಗಳು ವಿರಳ
ಮುಸ್ಲಿಮರಿಗೆ ಶೇ 4 ಮೀಸಲಾತಿ ಸುಪ್ರೀಂ​ನಲ್ಲಿ ಪ್ರಶ್ನಿಸಲಾಗ್ತಿದೆ: ಬೊಮ್ಮಾಯಿ
ಮುಸ್ಲಿಮರಿಗೆ ಶೇ 4 ಮೀಸಲಾತಿ ಸುಪ್ರೀಂ​ನಲ್ಲಿ ಪ್ರಶ್ನಿಸಲಾಗ್ತಿದೆ: ಬೊಮ್ಮಾಯಿ
ತುಮಕೂರು: ಓರ್ವ ವಿದ್ಯಾರ್ಥಿನಿಗಾಗಿ ಒಂದು ಸರ್ಕಾರಿ ಶಾಲೆ, ಓರ್ವ ಶಿಕ್ಷಕಿ
ತುಮಕೂರು: ಓರ್ವ ವಿದ್ಯಾರ್ಥಿನಿಗಾಗಿ ಒಂದು ಸರ್ಕಾರಿ ಶಾಲೆ, ಓರ್ವ ಶಿಕ್ಷಕಿ
ಅಧಿಕಾರಿಗಳು ಜನಪ್ರತಿನಿಧಿಗಳಿಗೆ ಗೌರವ ನೀಡದಿದ್ದರೆ ಹೇಗೆ? ಯುಟಿ ಖಾದರ್
ಅಧಿಕಾರಿಗಳು ಜನಪ್ರತಿನಿಧಿಗಳಿಗೆ ಗೌರವ ನೀಡದಿದ್ದರೆ ಹೇಗೆ? ಯುಟಿ ಖಾದರ್