ಪ್ರಕ್ಷುಬ್ಧ ಹವಾಮಾನ: ಮುಂಬೈ-ಕೊಲ್ಕತ್ತಾ ವಿಮಾನದಲ್ಲಿದ್ದ 8 ಮಂದಿಗೆ ಗಾಯ
ಮುಂಬೈನಿಂದ ಕೊಲ್ಕತ್ತಾಗೆ ಬರುತ್ತಿದ್ದ ವಿಸ್ತಾರಾ ಕಂಪನಿಯು ಕೊಲ್ಕತ್ತಾದಲ್ಲಿ ಇಳಿಯುವ ಮೊದಲು ಪ್ರಕ್ಷುಬ್ಧ ಹವಾಮಾನದಿಂದ (ಟರ್ಬಲೆನ್ಸ್) ಜೋಲಿ ಹೊಡೆದಿದೆ. ಇದರಿಂದಾಗಿ ವಿಮಾನದಲ್ಲಿದ್ದ 8 ಮಂದಿಗೆ ಗಾಯಗಳಾಗಿವೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ಹೇಳಿದ್ದಾರೆ.
ಕೊಲ್ಕತ್ತಾ: ಮುಂಬೈನಿಂದ ಕೊಲ್ಕತ್ತಾಗೆ ಬರುತ್ತಿದ್ದ ವಿಸ್ತಾರಾ ಕಂಪನಿಯು ಕೊಲ್ಕತ್ತಾದಲ್ಲಿ ಇಳಿಯುವ ಮೊದಲು ಪ್ರಕ್ಷುಬ್ಧ ಹವಾಮಾನದಿಂದ (ಟರ್ಬಲೆನ್ಸ್) ಜೋಲಿ ಹೊಡೆದಿದೆ. ಇದರಿಂದಾಗಿ ವಿಮಾನದಲ್ಲಿದ್ದ 8 ಮಂದಿಗೆ ಗಾಯಗಳಾಗಿವೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ಹೇಳಿದ್ದಾರೆ. ಕೊಲ್ಕತ್ತಾ ವಿಮಾನ ನಿಲ್ದಾಣದಲ್ಲಿ ಯುಕೆ 775 ವಿಮಾನವು ಸುರಕ್ಷಿತವಾಗಿ ಇಳಿದಿದೆ ಎಂದು ವಿಮಾನ ನಿಲ್ದಾಣದ ನಿರ್ದೇಶಕ ಸಿ.ಪಟ್ಟಾಭಿ ಹೇಳಿದರು.
ವಿಮಾನವು ಇಳಿಯವಾಗ ಕಾಣಿಸಿಕೊಂಡ ಪ್ರಕ್ಷುಬ್ಧ ಹವಾಮಾನದಿಂದಾಗಿ ವಿಮಾನ ತೀವ್ರವಾಗಿ ಅಲುಗಾಡಿತು. ಈ ಸಂದರ್ಭ ಮೂವರು ಪ್ರಯಾಣಿಕರಿಗೆ ಗಂಭೀರ ಗಾಯಗಳಾದವು ಎಂದು ಅವರು ಮಾಹಿತಿ ನೀಡಿದರು. ತೀವ್ರವಾಗಿ ಗಾಯಗೊಂಡ ಪ್ರಯಾಣಿಕರನ್ನು ಚಾರ್ನೋಕ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ವಲ್ಪ ಪ್ರಮಾಣದಲ್ಲಿ ಗಾಯಗೊಂಡ ಐವರಿಗೆ ಪ್ರಥಮ ಚಿಕಿತ್ಸೆಯ ಬಳಿಕ ಅವರ ಮನೆಗಳಿಗೆ ಕಳಿಸಲಾಯಿತು ಎಂದು ತಿಳಿಸಿದರು.
ವಿಮಾನದಲ್ಲಿ 123 ಪ್ರಯಾಣಿಕರಿದ್ದರು. ವಿಮಾನವು ಕೊಲ್ಕತ್ತಾದಿಂದ 25 ನಾಟಿಕಲ್ ಮೈಲಿ ದೂರದಲ್ಲಿದ್ದಾಗ ಸಂಜೆ 4 ಗಂಟೆಯ ವೇಳೆ ಈ ಘಟನೆ ಸಂಭವಿಸಿದೆ. ಈ ಕುರತು ಪ್ರತಿಕ್ರಿಯಿಸಿರುವ ವಿಸ್ತಾರಾ ಕಂಪನಿಯ ವಕ್ತಾರರು, ಪ್ರಯಾಣಿಕರಿಗೆ ಆದ ಈ ಕೆಟ್ಟ ಅನುಭವದಿಂದ ನಮಗೆ ನೋವಾಗಿದೆ. ಗಾಯಾಳುಗಳ ಆರೋಗ್ಯ ಸ್ಥಿತಿಯನ್ನು ನಾವೂ ಗಮನಿಸುತ್ತಿದ್ದೇವೆ. ಇಂಥ ಘಟನೆ ಏಕೆ ನಡೆಯಿತು ಎಂಬ ಬಗ್ಗೆ ಆದ್ಯತೆಯ ಮೇಲೆ ತನಿಖೆ ನಡೆಸುತ್ತಿದ್ದೇವೆ. ಹೆಚ್ಚಿನ ಮಾಹಿತಿಯನ್ನು ಶೀಘ್ರ ನೀಡುತ್ತೇವೆ ಎಂದಿದ್ದಾರೆ.
(Vistara Mumbai Kolkata flight hits severe turbulence 8 injured)
ಇದನ್ನೂ ಓದಿ: ಬೆಂಗಳೂರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಸ್ಪೋಟ; 6 ಮಂದಿಗೆ ಗಾಯ
ಇದನ್ನೂ ಓದಿ: ವಿಮಾನ ಅಪಘಾತದಲ್ಲಿ ಪ್ರಾಣ ಕಳೆದುಕೊಂಡ ಈ ಬೌಲರ್ ನನ್ನನ್ನು ಇನ್ನಿಲ್ಲದಂತೆ ಕಾಡಿದ್ದ: ಸಚಿನ್ ತೆಂಡೂಲ್ಕರ್
Published On - 9:44 pm, Mon, 7 June 21