AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Explainer: ಕೊರೊನಾ ರೋಗಿಗಳ ಚಿಕಿತ್ಸೆಗೆ ಹೊಸ ಮಾರ್ಗಸೂಚಿ: ಐವರ್​ಮೆಕ್ಟಿನ್, ಡೊಕ್ಸಿಸೈಕ್ಲಿನ್, ಪ್ಲಾಸ್ಮಾ ಥೆರಪಿ ಬಳಕೆಗೆ ಬ್ರೇಕ್

ಭಾರತದಲ್ಲಿ ಇದುವರೆಗೂ ನೀಡಿದ್ದ ಕೆಲ ಔಷಧಿಗಳನ್ನ ಈಗ ಚಿಕಿತ್ಸಾ ಮಾರ್ಗಸೂಚಿಯಿಂದ ಕೈ ಬಿಡಲಾಗಿದೆ. ರೋಗಿಗಳ ಚಿಕಿತ್ಸೆಗೆ ಬಳಸಬೇಕಾದ ಔಷಧಿಗಳ ಬಗ್ಗೆ ಹೊಸ ಮಾರ್ಗಸೂಚಿಯನ್ನು ಕೇಂದ್ರದ ಆರೋಗ್ಯ ಇಲಾಖೆ ಹೊರಡಿಸಿದೆ.

Explainer: ಕೊರೊನಾ ರೋಗಿಗಳ ಚಿಕಿತ್ಸೆಗೆ ಹೊಸ ಮಾರ್ಗಸೂಚಿ: ಐವರ್​ಮೆಕ್ಟಿನ್, ಡೊಕ್ಸಿಸೈಕ್ಲಿನ್, ಪ್ಲಾಸ್ಮಾ ಥೆರಪಿ ಬಳಕೆಗೆ ಬ್ರೇಕ್
ಪ್ರಾತಿನಿಧಿಕ ಚಿತ್ರ
TV9 Web
| Edited By: |

Updated on:Jun 07, 2021 | 9:14 PM

Share

ಭಾರತ ಹಾಗೂ ಜಗತ್ತಿನ ಇತರ ದೇಶಗಳಲ್ಲಿ ಕೊರೊನಾ ವೈರಸ್ ವಿರುದ್ಧ ರೋಗಿಗಳಿಗೆ ಚಿಕಿತ್ಸೆ ನೀಡಲು ನಿರ್ದಿಷ್ಟ ಔಷಧ ಎನ್ನುವುದೇ ಇದುವರೆಗೂ ಇಲ್ಲ. ಆದರೆ, ಎಲ್ಲ ದೇಶಗಳು ತಮ್ಮದೇ ಆದ ಔಷಧಿಗಳನ್ನು ಕೊರೊನಾದ ಲಕ್ಷಣಗಳಿಗೆ ಅನುಗುಣವಾಗಿ ನೀಡುತ್ತಿವೆ. ಭಾರತದಲ್ಲಿ ಇದುವರೆಗೂ ನೀಡಿದ್ದ ಕೆಲ ಔಷಧಿಗಳನ್ನ ಈಗ ಚಿಕಿತ್ಸಾ ಮಾರ್ಗಸೂಚಿಯಿಂದ ಕೈ ಬಿಡಲಾಗಿದೆ. ರೋಗಿಗಳ ಚಿಕಿತ್ಸೆಗೆ ಬಳಸಬೇಕಾದ ಔಷಧಿಗಳ ಬಗ್ಗೆ ಹೊಸ ಮಾರ್ಗಸೂಚಿಯನ್ನು ಕೇಂದ್ರದ ಆರೋಗ್ಯ ಇಲಾಖೆ ಹೊರಡಿಸಿದೆ.

ನಮ್ಮ ದೇಶದಲ್ಲಿ ಕಳೆದ ಒಂದೂವರೆ ವರ್ಷದಿಂದ ಕೊರೊನಾ ವೈರಸ್ ವಿರುದ್ಧ ರೋಗಿಗಳಿಗಿರುವ ಲಕ್ಷಣದ ಆಧಾರದ ಮೇಲೆಯೇ ಚಿಕಿತ್ಸೆ ನೀಡಲಾಗುತ್ತಿದೆ. ಇದುವರೆಗೂ ನೀಡಿದ ಕೆಲ ಔಷಧಿಗಳು ವೈದ್ಯಕೀಯವಾಗಿ ಪರಿಣಾಮಕಾರಿ ಅಲ್ಲ ಎನ್ನುವುದು ಈಗ ಸಾಬೀತಾಗಿದೆ. ಇದುವರೆಗೂ ಕೆಲ ಔಷಧಿಗಳನ್ನು ಸರ್ಕಾರದ ವೈದ್ಯಕೀಯ ನಿರ್ವಹಣಾ ಪಟ್ಟಿಯಲ್ಲೇ ಸೇರಿಸಲಾಗಿತ್ತು. ಆದರೇ, ಈಗ ಪರಿಣಾಮಕಾರಿಯಲ್ಲದ ಕೆಲವೊಂದು ಔಷಧಿ, ಥೆರಪಿಗಳನ್ನು ಕೈ ಬಿಟ್ಟು ಕೊರೊನಾ ರೋಗಿಗಳ ಚಿಕಿತ್ಸೆಗೆ ಬಳಸಬೇಕಾದ ಔಷಧಿ, ವಿಧಾನ, ಥೆರಪಿ ಬಗ್ಗೆ ಹೊಸ ಪರಿಷ್ಕೃತ ಮಾರ್ಗಸೂಚಿಯನ್ನು ಕೇಂದ್ರ ಸರ್ಕಾರ ಹೊರಡಿಸಿದೆ. ನಾಲ್ಕು ರೀತಿಯ ಕೊರೊನಾ ಪಾಸಿಟಿವ್ ರೋಗಿಗಳಿದ್ದಾರೆ. ಲಕ್ಷಣ ರಹಿತ ಕೊರೊನಾ ರೋಗಿಗಳು, ಸ್ಪಲ್ಪ ಲಕ್ಷಣ ಇರುವ ಕೊರೊನಾ ರೋಗಿಗಳು, ಸಾಧಾರಣ ಲಕ್ಷಣ ಇರುವ ಕೊರೊನಾ ರೋಗಿಗಳು, ಗಂಭೀರ ಸ್ಥಿತಿಯಲ್ಲಿರುವ ಕೊರೊನಾ ರೋಗಿಗಳು. ಈ ನಾಲ್ಕು ವರ್ಗದ ರೋಗಿಗಳಿಗೆ ಹೇಗೆ ಚಿಕಿತ್ಸೆ ನೀಡಬೇಕೆಂದು ಕೇಂದ್ರದ ಆರೋಗ್ಯ ಇಲಾಖೆಯು ಪರಿಷ್ಕೃತ ಮಾರ್ಗಸೂಚಿ ಹೊರಡಿಸಿದೆ.

ಲಕ್ಷಣ ರಹಿತ ಕೊರೊನಾ ರೋಗಿಗಳು ಆರು ನಿಮಿಷಗಳ ಕಾಲ ವಾಕಿಂಗ್ ಟೆಸ್ಟ್ ಮಾಡಿಕೊಳ್ಳಬೇಕು. ಹೋಮ್ ಐಸೋಲೇಷನ್​ನಲ್ಲಿರಬೇಕು. ವೈದ್ಯರ ಜೊತೆಗೆ ಟೆಲಿ ಕನ್ಸಲ್ಟೇಷನ್ ಮಾಡಬೇಕು. ಲಕ್ಷಣ ರಹಿತ ಕೊರೊನಾ ರೋಗಿಗಳಿಗೆ ಯಾವುದೇ ಔಷಧಿಯ ಅಗತ್ಯವಿಲ್ಲ. ಬೇರೆ ಯಾವುದಾದರೂ ರೋಗಗಳಿದ್ದರೇ, ಅವುಗಳ ಔಷಧಿ ತೆಗೆದುಕೊಳ್ಳುವುದನ್ನು ಮುಂದುವರಿಸಬೇಕು. ಆರೋಗ್ಯಯುತವಾದ ಆಹಾರ ಸೇವಿಸಬೇಕು. ಮನೆಯವರು ರೋಗಿಗಳ ಜೊತೆಗೆ ಸಕಾರಾತ್ಮಕವಾಗಿ ಪೋನ್ ಅಥವಾ ವಿಡಿಯೋ ಕಾಲ್ ಮೂಲಕ ಮಾತನಾಡಬೇಕು.

ಅಲ್ಪ ಪ್ರಮಾಣದ ಕೊರೊನಾ ಲಕ್ಷಣ ಇರುವವರು, ಹೋಮ್ ಐಸೋಲೇಷನ್ ಅಥವಾ ಕೋವಿಡ್ ಕೇರ್ ಸೆಂಟರ್​ನಲ್ಲಿದ್ದು ಚಿಕಿತ್ಸೆ ಪಡೆಯಬೇಕು. ರಕ್ತದಲ್ಲಿ ಆಕ್ಸಿಜನ್ ಮಟ್ಟ, ಉಸಿರಾಟದ ಸಮಸ್ಯೆ, ಜ್ವರದ ಬಗ್ಗೆ ರೋಗಿಗಳು ತಾವೇ ಪರೀಕ್ಷೆ ಮಾಡಿಕೊಳ್ಳಬೇಕು. ಆಕ್ಸಿಮೀಟರ್ ಇಟ್ಟುಕೊಂಡು ದೇಹದ ರಕ್ತದಲ್ಲಿನ ಆಕ್ಸಿಜನ್ ಮಟ್ಟವನ್ನು ರೋಗಿಗಳೇ ಸ್ವತಃ ಪರೀಕ್ಷೆ ಮಾಡಿಕೊಳ್ಳುವುದನ್ನು ಶಿಫಾರಸ್ಸು ಮಾಡಲಾಗಿದೆ. ಪ್ಯಾರಾಸೆಟಮಲ್, ಕಾಫ್ ಸಿರಪ್, ಬಡೈಸೋನೈಡ್ ಮಾತ್ರ ಪಡೆಯಬೇಕು. ಬಳಿಕವೂ ಕೊರೊನಾ ಲಕ್ಷಣ ಇದ್ದರೇ, ಆರೋಗ್ಯ ಸ್ಥಿತಿ ಸುಧಾರಿಸದೇ ಇದ್ದರೇ, ಹೆಚ್ಚಿನ ಚಿಕಿತ್ಸೆ ಪಡೆಯಬೇಕು. ಆದರೇ, ಅಲ್ಪ ಪ್ರಮಾಣದ ಕೊರೊನಾ ಲಕ್ಷಣ ಇರುವ ರೋಗಿಗಳಿಗೆ ಎಚ್‌ಸಿಕ್ಯೂ, ಫವಿಪಿರವಿರ್, ಐವರ್ ಮೆಕ್ಟಿನ್, ಅಜಿತರೋಮೈಸಿನ್, ಡೋಕ್ಸಿಸೈಕ್ಲೀನಿ, ಜಿಂಕ್, ಪ್ಲಾಸ್ಮಾ ಥೆರಪಿ ನೀಡುವ ಅಗತ್ಯವಿಲ್ಲ. ಇದುವರೆಗೂ ಈ ಎಲ್ಲ ಔಷಧಿಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಕೆ ಮಾಡಲಾಗುತ್ತಿತ್ತು. ಈಗ ಇವುಗಳ ಅನಗತ್ಯ ಬಳಕೆಗೆ ಬ್ರೇಕ್ ಬಿದ್ದಿದೆ. ಕೇಂದ್ರದ ಆರೋಗ್ಯ ಇಲಾಖೆಯೇ ಈ ಔಷಧಿಗಳ ಬಳಕೆಗೆ ಬ್ರೇಕ್ ಹಾಕಿದೆ. ಈ ಔಷಧಿಗಳು ಪರಿಣಾಮಕಾರಿಯಲ್ಲ. ಇವುಗಳು ಕೊರೊನಾ ವೈರಸ್ ವಿರುದ್ಧ ಚಿಕಿತ್ಸೆಗೆ ಬಳಸಲು ವೈದ್ಯಕೀಯವಾಗಿ ಸಾಬೀತಾಗಿಲ್ಲ.

ಇನ್ನು ಸಾಧಾರಣ ಕೊರೊನಾ ಲಕ್ಷಣ ಇರುವ ರೋಗಿಗಳಿಗೆ ರಕ್ತದಲ್ಲಿ ಆಕ್ಸಿಜನ್ ಮಟ್ಟ ಶೇ 92 ರಿಂದ ಶೇ 95 ಇರುವಂತೆ ಕಾಪಾಡಲು ಆಕ್ಸಿಜನ್ ನೀಡಬೇಕು. ಹೈಪೋಕ್ಸಿಯ ಇರುವ ರೋಗಿಗಳಿಗೆ ಆಕ್ಸಿಜನ್ ನೀಡಬೇಕು. ಡಯಾಬಿಟಿಸ್ ಸೇರಿದಂತೆ ಕೋಮಾರ್ಬಿಟಿಯನ್ನು ನಿಯಂತ್ರಿಸಬೇಕು. ರಕ್ತದಲ್ಲಿ ಆಕ್ಸಿಜನ್ ಮಟ್ಟ ಶೇ 92ಕ್ಕಿಂತ ಕಡಿಮೆಗೆ ಕುಸಿದಾಗ, ಸ್ಟಿರಾಯ್ಡ್ ನೀಡಬೇಕು. ಆದರೆ, ಸ್ಟಿರಾಯ್ಡ್ ಗಳನ್ನು ಅತಿ ಹೆಚ್ಚು ಎಚ್ಚರಿಕೆಯಿಂದ ಬಳಸಬೇಕು.

ಗಂಭೀರ ಸ್ಥಿತಿಯಲ್ಲಿರುವವರಿಗೆ ಆಕ್ಸಿಜನ್, ಸ್ಟಿರಾಯ್ಡ್ ನೀಡಬೇಕು. ಗಂಭೀರ ಸ್ಥಿತಿಯಲ್ಲಿರುವ ರೋಗಿಗಳಿಗೆ ಟೋಸಿಲಿಜುಮಬ್ ನೀಡಬೇಕು. ಆಸ್ಪತ್ರೆಯಲ್ಲಿ ಫಂಗಲ್ ಇನ್ಪೆಕ್ಷನ್ ಆಗದಂತೆ ಮುನ್ನೆಚ್ಚರಿಕೆ ಕೈಗೊಳ್ಳಲು ಆಸ್ಪತ್ರೆಯಲ್ಲಿ ಸೋಂಕು ನಿಯಂತ್ರಣ ಸಮಿತಿಯನ್ನ ರೂಪಿಸಿಕೊಳ್ಳಬೇಕು. ಎಚ್‌ಆರ್‌ಸಿಟಿಯನ್ನು ಅನಗತ್ಯವಾಗಿ, ತರ್ಕರಹಿತವಾಗಿ ಮಾಡಬಾರದು. ಬಾರಿ ಎಚ್ಚರಿಕೆಯಿಂದ ಎಚ್ಆರ್‌ಸಿಟಿ ಮಾಡಿಸಬೇಕು. ಇನ್ನೂ ರೆಮಿಡಿಸಿವಿರ್ ಪ್ರಯೋಗಾತ್ಮಕ ಡ್ರಗ್ಸ್ ಮಾತ್ರ. ಹೀಗಾಗಿ ರೆಮಿಡಿಸಿವಿರ್​ಗೆ ಆರ್ಡರ್ ಮಾಡುವಾಗ ಬಾರಿ ಎಚ್ಚರಿಕೆ ವಹಿಸಬೇಕು. ರೆಮಿಡಿಸಿವಿರ್ ಬಳಕೆಯಿಂದ ಹಾನಿ ಸಂಭವಿಸಬಹುದು ಎಂದು ಎಚ್ಚರಿಸಲಾಗಿದೆ.

ಹೈಪೋಕ್ಸಿಯ ರೋಗಿಗಳಿಗೆ ಡೆಕ್ಸಾ ಮಾತ್ರೆಯನ್ನು ದಿನಕ್ಕೆ 6 ಎಂಜಿಯಂತೆ ಹತ್ತು ದಿನ ನೀಡಬೇಕು. ವೈದ್ಯರು ಮನಸ್ಸಿಗೆ ಬಂದಂತೆ, ರೋಗಿಗಳ ಸಿಟಿ ಸ್ಕ್ಯಾನ್ ಎಚ್‌ಆರ್‌ಸಿಟಿ ಮಾಡಿಸಬಾರದು. ಸ್ಟಿರಾಯ್ಡ್, ರೆಮಿಡಿಸಿವಿರ್ ಅನ್ನು ತರ್ಕರಹಿತವಾಗಿ ಬಳಸುವಂತಿಲ್ಲ ಎಂದು ಹೊಸ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ. ಸ್ಟಿರಾಯ್ಡ್ ಅನ್ನು ಸರಿಯಾದ ಸಮಯದಲ್ಲಿ, ಸರಿಯಾದ ಡೋಸ್ ಹಾಗೂ ಸರಿಯಾದ ಅಂತರದಲ್ಲಿ ನೀಡಬೇಕು. ರೋಗಿಗಳೇ ಸ್ವತಃ ಸ್ಟಿರಾಯ್ಡ್ ತೆಗೆದುಕೊಳ್ಳಬಾರದು. ಈ ಹೊಸ ಮಾರ್ಗಸೂಚಿಗೆ ವೈದ್ಯಕೀಯ ಕ್ಷೇತ್ರದ ಗಣ್ಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಉಪಯೋಗಕ್ಕೆ ಬಾರದ, ವೈದ್ಯಕೀಯವಾಗಿ ಸಾಬೀತಾಗದ ಔಷಧಗಳನ್ನು ಅನಗತ್ಯವಾಗಿ ಬಳಸುವುದು ಈಗ ತಪ್ಪಿದೆ. ಆದರೇ, ಆರೋಗ್ಯ ಇಲಾಖೆಯ ಹೊಸ ಮಾರ್ಗಸೂಚಿಯನ್ನು ಇನ್ನೂ ಐಸಿಎಂಆರ್ ಅನುಮೋದಿಸಿಲ್ಲ.

ಬರಹ: ಎಸ್.ಚಂದ್ರಮೋಹನ್

(New Drug policy for Covid Treatment Centre Health Department releases new Guidelines for Coronavirus Treatment)

ಇದನ್ನೂ ಓದಿ: ಫ್ಲೈಯಿಂಗ್ ಸಿಖ್ ಖ್ಯಾತಿಯ ಮಿಲ್ಖಾ ಸಿಂಗ್ ಆರೋಗ್ಯದಲ್ಲಿ ಚೇತರಿಕೆ; ಪತ್ನಿ ನಿರ್ಮಲ್ ಕೌರ್​ಗೆ ಐಸಿಯೂನಲ್ಲಿ ಚಿಕಿತ್ಸೆ

ಇದನ್ನೂ ಓದಿ: ತಾಯಿ ಪ್ರಾಣ ಉಳಿಸಿಕೊಳ್ಳಲು ಕಲಬುರಗಿಯಲ್ಲಿ ಬಾಲಕನ ಪರದಾಟ; ಚಿಕಿತ್ಸೆ ಕೊಡಿಸಲು ಹಣ ಸಹಾಯಕ್ಕೆ ಮನವಿ

Published On - 9:13 pm, Mon, 7 June 21

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ