ಫ್ಲೈಯಿಂಗ್ ಸಿಖ್ ಖ್ಯಾತಿಯ ಮಿಲ್ಖಾ ಸಿಂಗ್ ಆರೋಗ್ಯದಲ್ಲಿ ಚೇತರಿಕೆ; ಪತ್ನಿ ನಿರ್ಮಲ್ ಕೌರ್​ಗೆ ಐಸಿಯೂನಲ್ಲಿ ಚಿಕಿತ್ಸೆ

ಮಿಲ್ಕಾ ಅವರ ಸ್ಥಿತಿ ಸುಧಾರಿಸುತ್ತಿದೆ ಎಂದು ಹೇಳಿದ್ದಾರೆ. ಆದರೆ, ಅವರ ಪತ್ನಿ ನಿರ್ಮಲ್ ಕೌರ್ ಇನ್ನೂ ಈ ಕಾಯಿಲೆಯೊಂದಿಗೆ ಹೋರಾಡುತ್ತಿದ್ದಾರೆ.

ಫ್ಲೈಯಿಂಗ್ ಸಿಖ್ ಖ್ಯಾತಿಯ ಮಿಲ್ಖಾ ಸಿಂಗ್ ಆರೋಗ್ಯದಲ್ಲಿ ಚೇತರಿಕೆ; ಪತ್ನಿ ನಿರ್ಮಲ್ ಕೌರ್​ಗೆ ಐಸಿಯೂನಲ್ಲಿ ಚಿಕಿತ್ಸೆ
ಮಿಲ್ಖಾ ಸಿಂಗ್

ಭಾರತೀಯ ಕ್ರೀಡಾ ಪ್ರಿಯರಿಗೆ ಒಂದು ನೆಮ್ಮದಿಯ ಸುದ್ದಿ ಬಂದಿದೆ. ಶ್ರೇಷ್ಠ ಭಾರತೀಯ ಕ್ರೀಡಾಪಟು ಮತ್ತು ಫ್ಲೈಯಿಂಗ್ ಸಿಖ್ ಎಂದು ಜನಪ್ರಿಯವಾಗಿರುವ ಮಿಲ್ಖಾ ಸಿಂಗ್ ಅವರ ಆರೋಗ್ಯವು ದಿನದಿಂದ ದಿನಕ್ಕೆ ಸುಧಾರಿಸುತ್ತಿದೆ ಎಂದು ವರದಿಯಾಗಿದೆ. ಕೊರೊನಾ ವೈರಸ್ ವಿರುದ್ಧ ಹೋರಾಡುತ್ತಿದ್ದ ಮಿಲ್ಖಾ ಸಿಂಗ್ ಅವರನ್ನು ಇತ್ತೀಚೆಗೆ ಮತ್ತೆ ಆಸ್ಪತ್ರೆಗೆ ದಾಖಲಿಸಲಾಗಿದ್ದು, ನಂತರ ಅವರ ಆರೋಗ್ಯ ಪರಿಸ್ಥಿತಿಯನ್ನು ಪರಿಶೀಲಿಸಲಾಗುತ್ತಿದೆ. ಆದಾಗ್ಯೂ, ಅನುಭವಿ ಕ್ರೀಡಾಪಟುವಿನ 82 ವರ್ಷದ ಪತ್ನಿ ನಿರ್ಮಲ್ ಕೌರ್ ಅವರ ಸ್ಥಿತಿ ಇನ್ನೂ ಗಂಭೀರವಾಗಿದೆ ಎಂದು ವರದಿಯಾಗಿದೆ. ವೈದ್ಯರ ಪ್ರಕಾರ, ಅವರು ಕೊರೊನಾ ಕಾಯಿಲೆಯೊಂದಿಗೆ ಹೋರಾಡುತ್ತಿದ್ದಾರೆ ಎಂದು ತಿಳಿದುಬಂದಿದೆ.

ಕೊರೊನಾ ಸೋಂಕು ತಗುಲಿದ ನಂತರ ವಿಶ್ವದ ಅತಿದೊಡ್ಡ ಭಾರತೀಯ ಮಾಸ್ಟರ್ ಆಫ್ ಟ್ರ್ಯಾಕ್ ಅನ್ನು ಮೊಹಾಲಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಲ್ಲಿಂದ ಚಿಕಿತ್ಸೆ ಪಡೆದ ನಂತರ, ಅವರನ್ನು ಮೇ 30 ರಂದು ಮನೆಗೆ ಕಳುಹಿಸಲಾಯಿತು. ಆದರೆ, 4 ದಿನಗಳ ನಂತರ, ಅವರ ಆರೋಗ್ಯ ಮತ್ತೆ ಹದಗೆಟ್ಟಿತು ಮತ್ತು ಆಮ್ಲಜನಕದ ಮಟ್ಟ ಕುಸಿದ ನಂತರ ಅವರನ್ನು ಚಂಡೀಗರ್​ ಪಿಜಿಐನ ಐಸಿಯುಗೆ ದಾಖಲಿಸಲಾಯಿತು. ಅಂದಿನಿಂದ, ವೈದ್ಯರು ಅವರ ಸ್ಥಿತಿಯ ಮೇಲೆ ನಿಗಾ ಇಡುತ್ತಿದ್ದಾರೆ.

ಆರೋಗ್ಯದಲ್ಲಿ ಚೇತರಿಕೆ
ಅನುಭವಿ ಒಲಿಂಪಿಯನ್ ಆರೋಗ್ಯದ ಸುಧಾರಣೆಯ ಬಗ್ಗೆ ಭಾನುವಾರ ಮಾಹಿತಿ ನೀಡಿದ ಆಸ್ಪತ್ರೆಯ ವಕ್ತಾರ ಪ್ರೊಫೆಸರ್ ಅಶೋಕ್ ಕುಮಾರ್, ಶ್ರೇಷ್ಠ ಓಟಗಾರ ಮಿಲ್ಖಾ ಸಿಂಗ್ ಅವರ ಸ್ಥಿತಿ ಸ್ಥಿರವಾದ ಸುಧಾರಣೆಯನ್ನು ತೋರಿಸುತ್ತಿದೆ, ಅವರು ಜೂನ್ 3 ರಿಂದ ಐಸಿಯುನಲ್ಲಿದ್ದಾರೆ ಕೋವಿಡ್ -19ಗೆ ಚಿಕಿತ್ಸೆ ನೀಡಲಾಗುತ್ತಿದೆ. ಅವರ ಎಲ್ಲಾ ವೈದ್ಯಕೀಯ ಮಾನದಂಡಗಳ ಪ್ರಕಾರ, ಜೂನ್ 6 ರಂದು ಅವರ ಸ್ಥಿತಿ ಹಿಂದಿನ ದಿನಗಳಿಗಿಂತ ಉತ್ತಮವಾಗಿದೆ ಎಂದಿದ್ದಾರೆ.

ಹೆಂಡತಿಯ ಸ್ಥಿತಿ ಗಂಬೀರ
ಅದೇ ಸಮಯದಲ್ಲಿ, ಮಿಲ್ಖಾ ಅವರ ಕುಟುಂಬದ ವಕ್ತಾರರ ಹೇಳಿಕೆ ಪ್ರಕಾರ, ಮಿಲ್ಕಾ ಅವರ ಸ್ಥಿತಿ ಸುಧಾರಿಸುತ್ತಿದೆ ಎಂದು ಹೇಳಿದ್ದಾರೆ. ಆದರೆ, ಅವರ ಪತ್ನಿ ನಿರ್ಮಲ್ ಕೌರ್ ಇನ್ನೂ ಈ ಕಾಯಿಲೆಯೊಂದಿಗೆ ಹೋರಾಡುತ್ತಿದ್ದಾರೆ. ಮಿಲ್ಖಾ ಸಿಂಗ್ ನಂತರ ನಿರ್ಮಲ್ ಕೌರ್ ಅವರನ್ನು ಕಳೆದ ತಿಂಗಳು ಅದೇ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಆದರೆ ಅಂದಿನಿಂದ ಅವರ ಸ್ಥಿತಿ ಹೆಚ್ಚು ಸುಧಾರಿಸಿಲ್ಲ. ಕುಟುಂಬದ ವಕ್ತಾರರ ಪ್ರಕಾರ, 82 ವರ್ಷದ ಕೌರ್ ಈ ರೋಗವನ್ನು ದೃಢವಾಗಿ ಎದುರಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.