Jasprit Bumrah Profile: ಯಾರ್ಕರ್ ಕಿಂಗ್ ಜಸ್ಪ್ರಿತ್ ಬುಮ್ರಾ ಆಂಗ್ಲರ ನೆಲದಲ್ಲಿ ಭಾರತವನ್ನು ಚಾಂಪಿಯನ್ ಮಾಡ್ತಾರಾ?
ICC World Test Championship 2021: ವಿಶ್ವಕಪ್ ವಿಜೇತ ಮಾಜಿ ನಾಯಕ ಕಪಿಲ್ ದೇವ್ ದಾಖಲೆಯನ್ನು ಮುರಿಯಲು ಸನಿಹದಲ್ಲಿದ್ದಾರೆ ಜಸ್ಪ್ರೀತ್ ಬುಮ್ರಾ.
ಭಾರತದ ವೇಗದ ಬೌಲರ್ ಜಸ್ಪ್ರಿತ್ ಬುಮ್ರಾ ಅವರ ಟೆಸ್ಟ್ ವೃತ್ತಿಜೀವನಕ್ಕೆ ಈ ಪ್ರವಾಸ ಉತ್ತಮ ಬುನಾದಿ ಹಾಕಿಕೊಡಲಿದೆ. ಬುಮ್ರಾ ಅವರು ತಮ್ಮ ವೇಗ ಮತ್ತು ವಿಚಿತ್ರ ಕ್ರಮದಿಂದ ಎದುರಾಳಿ ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿ ಹಾಕುತ್ತಾರೆ ಎನ್ನುವ ನಿರೀಕ್ಷೆ ಇದೆ. ಬುಮ್ರಾ 19 ಟೆಸ್ಟ್ ಪಂದ್ಯಗಳಲ್ಲಿ 83 ವಿಕೆಟ್ಗಳನ್ನು 22.11 ರ ಸರಾಸರಿಯಲ್ಲಿ ಗಳಿಸಿದ್ದಾರೆ. ಬಲಗೈ ವೇಗದ ಬೌಲರ್ ಟೆಸ್ಟ್ ಸ್ವರೂಪದಲ್ಲಿ ಐದು ಬಾರಿ ಐದು ವಿಕೆಟ್ ಗಳಿಸಿದ್ದಾರೆ. ಬುಮ್ರಾ ಅವರ ಪ್ರತಿಭೆಯನ್ನು ಗುರುತಿಸಿದ ಕೀರ್ತಿ ಜಾನ್ ರೈಟ್‌ಗೆ ಸಲ್ಲುತ್ತದೆ. ಜಾನ್ ರೈಟ್ ಅವರು ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಬುಮ್ರಾ ಅವರನ್ನು ಗುರುತಿಸಿದರು ಮತ್ತು ತಂಡದಲ್ಲಿ ಡ್ರಾಫ್ಟ್ ಆಗಿ ಸೇರಿಸಿಕೊಂಡರು. ಈ ಅವಧಿಯಲ್ಲಿ ಶ್ರೀಲಂಕಾದ ಬೌಲರ್ ಲಸಿತ್ ಮಾಲಿಂಗ ಅವರೊಂದಿಗೆ ಬುಮ್ರಾ ತಮ್ಮ ಬೌಲಿಂಗ್‌ನಲ್ಲಿ ಕೆಲಸ ಮಾಡಿದರು.
2013 ರಲ್ಲಿ ಕೇವಲ ಎರಡು ಪಂದ್ಯ ಆಡಿದ ಬುಮ್ರಾ ಮೊದಲ ಬಾರಿಗೆ ಮುಂಬೈ ಇಂಡಿಯನ್ಸ್ ಪರ 2013 ರಲ್ಲಿ ಆಡಿದ ಬುಮ್ರಾ ಆ ಆವೃತ್ತಿಯಲ್ಲಿ ಕೇವಲ ಎರಡು ಪಂದ್ಯಗಳನ್ನು ಆಡಿದ್ದರು. ಇದರಲ್ಲಿ ಮೂರು ವಿಕೆಟ್ ಸಹ ಪಡೆದಿದ್ದರು. ಇದರ ನಂತರ, ಮುಂದಿನ ಆವೃತ್ತಿಯಲ್ಲಿ, ತಂಡವು ಅವರಿಗೆ ಅವಕಾಶ ನೀಡಿತು ಆದರೆ 11 ಪಂದ್ಯಗಳಲ್ಲಿ ಅವರು ಕೇವಲ ಐದು ವಿಕೆಟ್‌ಗಳನ್ನು ಪಡೆದರು. ಅಂದಹಾಗೆ, ಬುಮ್ರಾ ವೃತ್ತಿಜೀವನದ ಹೊಸ ಆಯಾಮ 2016 ರಲ್ಲಿ ಪ್ರಾರಂಭವಾಯಿತು. ಆ ವರ್ಷ ಅವರು 14 ಪಂದ್ಯಗಳಲ್ಲಿ 15 ವಿಕೆಟ್ ಪಡೆದರು. ಜತೆಗೆ ಅದೇ ವರ್ಷ ಟೀಮ್ ಇಂಡಿಯಾದಲ್ಲೂ ಪದಾರ್ಪಣೆ ಮಾಡಿದರು.
ಕಪಿಲ್ ದೇವ್ 100 ವಿಕೆಟ್ ವಿಶ್ವಕಪ್ ವಿಜೇತ ಮಾಜಿ ನಾಯಕ ಕಪಿಲ್ ದೇವ್ ದಾಖಲೆಯನ್ನು ಮುರಿಯಲು ಜಸ್ಪ್ರೀತ್ ಬುಮ್ರಾ ಸನಿಹದಲ್ಲಿದ್ದಾರೆ. 100 ವಿಕೆಟ್ ಪಡೆದ ಭಾರತದ ವೇಗದ ಬೌಲರ್ ಎಂಬ ದಾಖಲೆಯನ್ನು ಬುಮ್ರಾ ಬಲುಬೇಗನೇ ಮುರಿಯುವ ನಿರೀಕ್ಷೆಯಿದೆ. ದೇವ್ 25 ಟೆಸ್ಟ್ ಪಂದ್ಯಗಳಲ್ಲಿ ಈ ಮೈಲಿಗಲ್ಲು ಸಾಧಿಸಿದ್ದಾರೆ. ಹೀಗಾಗಿ ಮುಂಬರುವ ಇಂಗ್ಲೆಂಡ್ ಪ್ರವಾಸದಲ್ಲಿ ಬುಮ್ರಾ ಅವರು ಮಾಜಿ ಆಲ್‌ರೌಂಡರ್ ದಾಖಲೆಯನ್ನು ಮುರಿಯುವ ಅವಕಾಶವನ್ನು ಹೊಂದಿದ್ದಾರೆ. ಐಪಿಎಲ್ 2021 ರ ಏಳು ಪಂದ್ಯಗಳಲ್ಲಿ ಬುಮ್ರಾ ಆರು ವಿಕೆಟ್ ಕಬಳಿಸಿದರು, ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಪರವಾಗಿ 7.11 ರ ಉತ್ತಮ ಆರ್ಥಿಕ ದರದಲ್ಲಿ ಬುಮ್ರಾ ತನ್ನ ಫಾರ್ಮ್ ಅನ್ನು ಹಾಗೆಯೇ ಉಳಿಸಿಕೊಂಡಿದ್ದಾರೆ.
ಭಾರತವು ಮೊದಲು ನ್ಯೂಜಿಲೆಂಡ್ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಆಡಲಿದೆ, ಇದು ಜೂನ್ 18 ರಿಂದ ಸೌತಾಂಪ್ಟನ್‌ನ ಏಗಾಸ್ ಬೌಲ್‌ನಲ್ಲಿ ನಡೆಯಲಿದೆ. ತರುವಾಯ, ವಿರಾಟ್ ಕೊಹ್ಲಿ ಅವರ ತಂಡವು ಇಂಗ್ಲೆಂಡ್ ವಿರುದ್ಧ ಐದು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದೆ. 2018 ರಲ್ಲಿ ಭಾರತ ಇಂಗ್ಲೆಂಡ್ ಪ್ರವಾಸ ಕೈಗೊಂಡಾಗ ಬುಮ್ರಾ ಮೂರು ಟೆಸ್ಟ್ ಪಂದ್ಯಗಳಲ್ಲಿ 14 ವಿಕೆಟ್ ಗಳಿಸಿದ್ದರು. ಹೀಗಾಗಿ, ಬುಮ್ರಾ ಭಾರತದ ತಂಡದ ಎಲ್ಲಾ ಪರಿಸ್ಥಿತಿಗಳಲ್ಲೂ ಸ್ಥಿರ ಪ್ರದರ್ಶನ ನೀಡಿದ್ದಾರೆ.
ಭಾರತಕ್ಕೆ ಕೆಲವು ಉತ್ತಮ ವೇಗದ ಬೌಲರ್‌ಗಳು ಸಿಕ್ಕಿದ್ದಾರೆ. ನಾನು ಜಸ್ಪ್ರಿತ್ ಬುಮ್ರಾ ಅವರ ದೊಡ್ಡ ಅಭಿಮಾನಿ. ನಾನು ನೋಡಿದ ಯಾವುದೇ ಬೌಲರ್‌ಗಿಂತ ಅವರು ತುಂಬಾ ಭಿನ್ನ. ಅವರು ತುಂಬಾ ಪರಿಣಾಮಕಾರಿ ಮತ್ತು ಉತ್ತಮವಾಗಿ ಕಾರ್ಯನಿರ್ವಹಿಸುವುದನ್ನು ನಾನು ಎದುರು ನೋಡುತ್ತಿದ್ದೇನೆ ಎಂದು ಆಂಬ್ರೋಸ್ ಹೇಳಿಕೊಂಡಿದ್ದಾರೆ.
ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಬುಮ್ರಾ ಬೌಲಿಂಗ್
ಆವೃತ್ತಿ | ಪಂದ್ಯ | ಎಸೆತ | ನೀಡಿರುವ ರನ್ | ವಿಕೆಟ್ | ಬೆಸ್ಟ್ ಬೌಲಿಂಗ್ | ಸರಾಸರಿ | 5 ವಿಕೆಟ್ |
ಟೆಸ್ಟ್ | 19 | 4075 | 1835 | 83 | 6/27 | 22.11 | 5 |
ಏಕದಿನ | 67 | 3523 | 2736 | 108 | 5/27 | 25.33 | 1 |
T20 | 49 | 1075 | 1195 | 59 | 3/11 | 20.25 | 0 |
ಇದನ್ನೂ ಓದಿ: Mohammed Shami Profile: ಟೆಸ್ಟ್ ಕ್ರಿಕೆಟ್ನಲ್ಲಿ 200 ವಿಕೆಟ್ ಗಡಿ ಮುಟ್ಟುವ ತವಕದಲ್ಲಿರುವ ಶಮಿಗೆ ಇದೊಂದು ಸುವರ್ಣಾವಕಾಶ
ಐಪಿಎಲ್ಗಿಂತ ಪಾಕಿಸ್ತಾನ ಕ್ರಿಕೆಟ್ ಲೀಗ್ನಲ್ಲಿ ವೇಗದ ಬೌಲರ್‌ಗಳ ಗುಣಮಟ್ಟ ಹೆಚ್ಚಿರುತ್ತದೆ; ಫಾಫ್ ಡು ಪ್ಲೆಸಿಸ್