ಪಾಕಿಸ್ತಾನ ಸೂಪರ್ ಲೀಗ್: ಅಭ್ಯಾಸದ ವೇಳೆ ಅವಘಡ.. ಆಸೀಸ್ ಆಟಗಾರನಿಗೆ ಇಂಜುರಿ! ತುಟಿಗೆ ಬಿದ್ದವು 7 ಹೊಲಿಗೆ

Pakistan Super League: ಪಾಕಿಸ್ತಾನ ಸೂಪರ್ ಲೀಗ್ ಆರಂಭಕ್ಕೂ ಮೊದಲು ಅಭ್ಯಾಸದ ಸಮಯದಲ್ಲಿ ಚೆಂಡು ಅವರಮುಖಕ್ಕೆ ಬಡಿಯಿತು. ಇದರಿಂದಾಗಿ ಬೆನ್ ಡಂಕ್‌ನ ತುಟಿಗಳಿಗೆ ಏಳು ಹೊಲಿಗೆಗಳು ಬದ್ದಿವೆ.

ಪಾಕಿಸ್ತಾನ ಸೂಪರ್ ಲೀಗ್: ಅಭ್ಯಾಸದ ವೇಳೆ ಅವಘಡ.. ಆಸೀಸ್ ಆಟಗಾರನಿಗೆ ಇಂಜುರಿ! ತುಟಿಗೆ ಬಿದ್ದವು 7 ಹೊಲಿಗೆ
ಬೆನ್ ಡಂಕ್‌
Follow us
ಪೃಥ್ವಿಶಂಕರ
| Updated By: Digi Tech Desk

Updated on:Jun 07, 2021 | 3:05 PM

ಆಸ್ಟ್ರೇಲಿಯಾದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಬೆನ್ ಡಂಕ್ ತೀವ್ರವಾಗಿ ಗಾಯಗೊಂಡಿದ್ದಾರೆ. ಪಾಕಿಸ್ತಾನ ಸೂಪರ್ ಲೀಗ್ ಆರಂಭಕ್ಕೂ ಮೊದಲು ಅಭ್ಯಾಸದ ಸಮಯದಲ್ಲಿ ಚೆಂಡು ಅವರಮುಖಕ್ಕೆ ಬಡಿಯಿತು. ಇದರಿಂದಾಗಿ ಬೆನ್ ಡಂಕ್‌ನ ತುಟಿಗಳಿಗೆ ಏಳು ಹೊಲಿಗೆಗಳು ಬದ್ದಿವೆ. ಅವರು ಪಿಎಸ್‌ಎಲ್‌ನಲ್ಲಿ ಲಾಹೋರ್ ಖಲಂದರ್ಸ್ ತಂಡದ ಭಾಗವಾಗಿದ್ದಾರೆ. ಅಬುಧಾಬಿಯಲ್ಲಿ ಕ್ಯಾಚ್ ತೆಗೆದುಕೊಳ್ಳುವ ಅಭ್ಯಾಸ ನಡೆಸುವ ಸಮಯದಲ್ಲಿ ಅವರು ಗಾಯಗೊಂಡರು. ಹೀಗಾಗಿ ಅವರು ಸ್ವಲ್ಪ ಸಮಯದವರೆಗೆ ಕ್ರಿಕೆಟ್ ಆಡುವುದು ಅನುಮಾನವಾಗಿದೆ. ಗಾಯದ ನಂತರ 34 ವರ್ಷದ ಡಂಕನ್ ತುಟಿಗಳನ್ನು ಮರುಜೋಡಿಸಲು ಶಸ್ತ್ರಚಿಕಿತ್ಸೆಗೆ ಒಳಪಡಿಸಲಾಯಿತು.

ನಾಲ್ಕು ಪಂದ್ಯಗಳಲ್ಲಿ ಮೂರರಲ್ಲಿ ಜಯ ಪಿಎಸ್ಎಲ್ ಜೂನ್ 9 ರಿಂದ ಪ್ರಾರಂಭವಾಗಲಿದೆ. ಅಂತಹ ಪರಿಸ್ಥಿತಿಯಲ್ಲಿ, ಬೆನ್ ಡಂಕ್ ಅವರ ಗಾಯವು ಲಾಹೋರ್ ಖಲಂದರ್ ತಂಡಕ್ಕೆ ದೊಡ್ಡ ಹೊಡೆತವಾಗಿದೆ. ಇದೀಗ ಈ ತಂಡವು ನಾಲ್ಕು ಪಂದ್ಯಗಳಲ್ಲಿ ಮೂರರಲ್ಲಿ ಜಯಗಳಿಸಿ, ಪಾಯಿಂಟ್ಸ್ ಟೇಬಲ್‌ನಲ್ಲಿ ಮೂರನೇ ಸ್ಥಾನದಲ್ಲಿದೆ. ಪಿಎಸ್‌ಎಲ್‌ ಅನ್ನು ಮಾರ್ಚ್‌ನಲ್ಲಿಯೇ ಪ್ರಾರಂಭಿಸಲಾಯಿತು. ಆದರೆ ಹೆಚ್ಚಿದ ಕೊರೊನಾ ಪ್ರಕರಣದಿಂದಾಗಿ ಪಂದ್ಯಾವಳಿಯನ್ನು ನಿಲ್ಲಿಸಬೇಕಾಯಿತು. ಈಗ ಅದರ ಉಳಿದ ಭಾಗವನ್ನು ಯುಎಇಯಲ್ಲಿ ಆಡಲಾಗುತ್ತಿದೆ.

ಖಲಂದರ್ಸ್ ತಂಡದ ಸಿಇಒ ಸಮೀನ್ ರಾಣಾ ಮಾತನಾಡಿ, ಬೆನ್ ಡಂಕ್ ಅವರ ಗಾಯದ ಬಗ್ಗೆ ವಿವರಿಸಿದ್ದಾರೆ. ಡಂಕ್ ಚೇತರಿಸಿಕೊಳ್ಳುತ್ತಿದ್ದಾರೆ ಮತ್ತು ಜೂನ್ 9 ರಂದು ಇಸ್ಲಾಮಾಬಾದ್ ಯುನೈಟೆಡ್ ವಿರುದ್ಧದ ಪಂದ್ಯದ ಮೊದಲು ಅವರು ಸಂಪೂರ್ಣವಾಗಿ ಚೇತರಿಸಿಕೊಂಡು ಪಂದ್ಯಕ್ಕೆ ಮರಳಲಿದ್ದಾರೆ ಎಂಬುದನ್ನು ನಾವು ನಿರೀಕ್ಷಿಸಿದ್ದೇವೆ. ಈ ಋತುವಿನಲ್ಲಿ ಖಲಂದರ್ಸ್ ತಂಡದ ಉತ್ತಮ ಪ್ರದರ್ಶನದಲ್ಲಿ ಬೆನ್ ಡಂಕ್ ಪ್ರಮುಖ ಪಾತ್ರ ವಹಿಸಿದ್ದರು. ಅವರು ಮೊದಲಾರ್ಧದಲ್ಲಿ 40 ರ ಸರಾಸರಿಯಲ್ಲಿ 80 ರನ್ ಗಳಿಸಿದರು. ಈ ಸಮಯದಲ್ಲಿ, ಡಂಕ್ ಕರಾಚಿ ಕಿಂಗ್ಸ್ ವಿರುದ್ಧ ಔಟಾಗದೆ 57 ರನ್ ಗಳಿಸಿದರು.

ಹಿಂದಿನ ಋತುವಿನಲ್ಲಿ, ಲಾಹೋರ್ ಖಲಂದರ್ ತಂಡದ ಪ್ರದರ್ಶನ ಹೇಳಿಕೊಳ್ಳುವ ಹಾಗಿರಲಿಲ್ಲ. ಆದರೆ ಈ ಬಾರಿ ತಂಡದ ಆಟ ಉತ್ತಮವಾಗಿದೆ. ಈ ತಂಡದಲ್ಲಿ ಪಾಕಿಸ್ತಾನದ ಆಟಗಾರರಾದ ಶಹೀನ್ ಅಫ್ರಿದಿ, ಫಖರ್ ಜಮಾನ್, ಮೊಹಮ್ಮದ್ ಹಫೀಜ್ ಮತ್ತು ಹರಿಸ್ ರವೂಫ್ ಜೊತೆಗೆ ವಿದೇಶಿ ಆಟಗಾರರಾದ ರಶೀದ್ ಖಾನ್, ಡೇವಿಡ್ ವೈಜ್ ಮತ್ತು ಸಮಿತ್ ಪಟೇಲ್ ಇದ್ದಾರೆ.

ಯಾರು ಬೆನ್ ಡಂಕ್ ಬೆನ್ ಡಂಕ್ ಆಸ್ಟ್ರೇಲಿಯಾ ಪರ ಐದು ಟಿ 20 ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ ಅವರು 99 ರನ್ ಗಳಿಸಿದ್ದಾರೆ. ಅವರು 2014 ರ ನವೆಂಬರ್‌ನಲ್ಲಿ ಮೊದಲ ಬಾರಿಗೆ ಆಸ್ಟ್ರೇಲಿಯಾ ಪರ ಪಾದಾರ್ಪಣೆ ಮಾಡಿದರು. ನಂತರ ಫೆಬ್ರವರಿ 2017 ರಲ್ಲಿ ಅವರು ಕೊನೆಯ ಬಾರಿಗೆ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆಡಿದರು. ಎಡಗೈ ಬ್ಯಾಟ್ಸ್‌ಮನ್ ಡಂಕ್ ಇದುವರೆಗೆ 157 ಟಿ 20 ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ ಅವರು 24.99 ಸರಾಸರಿಯಲ್ಲಿ 3374 ರನ್ ಗಳಿಸಿದ್ದಾರೆ. ಔಟಾಗದೆ ಅವರ 99ರನ್​ಗಳಿಸಿರುವುದು ಅವರ ಅತ್ಯಧಿಕ ಸ್ಕೋರ್ ಆಗಿದೆ. ಈ ಸ್ವರೂಪದಲ್ಲಿ ಅವರ ಹೆಸರಲ್ಲಿ 18 ಅರ್ಧಶತಕಗಳಿವೆ.

Published On - 2:54 pm, Mon, 7 June 21