AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಗನ ಕ್ರಿಕೆಟ್ ತರಬೇತಿಗಾಗಿ 5 ಎಕರೆ ದ್ರಾಕ್ಷಿ ತೋಟವನ್ನೇ ಕ್ರಿಕೆಟ್ ಕ್ರೀಡಾಂಗಣವನ್ನಾಗಿಸಿದ ಅಪ್ಪ! ಯಾವುರಲ್ಲಿ?

ಕ್ರೀಡಾಂಗಣದಲ್ಲಿ ಒಟ್ಟು ಐದು ಪಿಚ್‌ಗಳು ಇರಲಿವೆ. ಈ ಪಿಚ್‌ಗಳನ್ನು ಸಿಮೆಂಟ್ ಬಳಸಿ ನಿರ್ಮಿಸಲಾಗಿದೆ. ಆದ್ದರಿಂದ ಮಗ ಕಠಿಣ ಅಭ್ಯಾಸ ಮಾಡಬಹುದು.

ಮಗನ ಕ್ರಿಕೆಟ್ ತರಬೇತಿಗಾಗಿ 5 ಎಕರೆ ದ್ರಾಕ್ಷಿ ತೋಟವನ್ನೇ ಕ್ರಿಕೆಟ್ ಕ್ರೀಡಾಂಗಣವನ್ನಾಗಿಸಿದ ಅಪ್ಪ! ಯಾವುರಲ್ಲಿ?
ಮಗನ ಕ್ರಿಕೆಟ್ ತರಬೇತಿಗಾಗಿ 5 ಎಕರೆ ದ್ರಾಕ್ಷಿ ತೋಟವನ್ನೇ ಕ್ರಿಕೆಟ್ ಕ್ರೀಡಾಂಗಣವನ್ನಾಗಿಸಿದ ಅಪ್ಪ
ಪೃಥ್ವಿಶಂಕರ
|

Updated on: Jun 06, 2021 | 7:25 PM

Share

ಕೊರೊನಾದ ಎರಡನೇ ಅಲೆಯಿಂದಾಗಿ, ಕಳೆದ ಒಂದೂವರೆ ತಿಂಗಳಿನಿಂದ ರಾಜ್ಯದಲ್ಲಿ ಕರ್ಫ್ಯೂ ಇದೆ. ಆದ್ದರಿಂದ, ನಾಗರಿಕರು ಮನೆಯಲ್ಲಿ ಕುಳಿತು ಕಾಲ ಕಳೆಯುತ್ತಿದ್ದಾರೆ. ಆದರೆ ಪಂದರಪುರದ ತಂದೆಯೊಬ್ಬರು ತಮ್ಮ ಮಗನ ಕ್ರಿಕೆಟಿಂಗ್ ಉತ್ಸಾಹವನ್ನು ಪೂರೈಸಲು ಐದು ಎಕರೆ ಭೂಮಿಯಲ್ಲಿ ಕ್ರಿಕೆಟ್ ಕ್ರೀಡಾಂಗಣವನ್ನು ನಿರ್ಮಿಸಿದ್ದಾರೆ. ಉತ್ತಮ ಶಿಕ್ಷಣ ಮಾತ್ರವಲ್ಲದೆ ಮಗನಿಗೆ ಇರುವ ಆಸಕ್ತದಾಯಕ ವಿಚಾರಗಳಿಗೂ ಪ್ರೋತ್ಸಾಹ ನೀಡುವುದು ಉತ್ತಮ ಎಂಬುದು ಅವರ ವಾದವಾಗಿದೆ. ಪಂದರಪುರ ತಾಲ್ಲೂಕಿನ ಅನ್ವಾಲಿಯ ಬಾಲಾಸಾಹೇಬ್ ಸೂರ್ಯವಂಶಿ ತನ್ನ ಮಗನ ಕ್ರಿಕೆಟ್ ಅಭ್ಯಾಸಕ್ಕಾಗಿ ಐದು ಎಕರೆ ದ್ರಾಕ್ಷಿತೋಟಗಳನ್ನು ನಾಶಗೊಳಿಸಿ, ಕ್ರಿಕೆಟ್ ಕ್ರೀಡಾಂಗಣವನ್ನು ನಿರ್ಮಿಸುವ ಕೆಲಸ ಪ್ರಾರಂಭಿಸಿದ್ದಾರೆ.

ಭಾರತೀಯರ ಕ್ರಿಕೆಟ್ ವ್ಯಾಮೋಹ ಜಗತ್ತಿಗೆ ತಿಳಿದಿದೆ. ಇದಲ್ಲದೆ, ಗ್ರಾಮೀಣ ಪ್ರದೇಶದ ಯುವಕರು ಪ್ರತಿಭೆಯನ್ನು ಹೊಂದಿದ್ದರೂ ಭಾರತೀಯ ಕ್ರಿಕೆಟ್ ತಂಡದಲ್ಲಿ ಆಡಲು ಅವಕಾಶ ಸಿಗುತ್ತಿಲ್ಲ. ಆದರೆ ರಾಜೇಂದ್ರಸಿಂಹ ಸೂರ್ಯವಂಶಿ ಎಂಬುವವರು ತಮ್ಮ ಮಗ ಕ್ರಿಕೆಟ್ ಆಡಲು ಮತ್ತು ಅಭ್ಯಾಸ ಮಾಡಲು ಐದು ಎಕರೆ ಪ್ರದೇಶದಲ್ಲಿ ಕ್ರೀಡಾಂಗಣ ನಿರ್ಮಿಸಲು ಮುಂದಾಗಿದ್ದಾರೆ. ಈ ಕ್ರಿಕೆಟ್ ಕ್ರೀಡಾಂಗಣವು ಅತ್ಯಾಧುನಿಕವಾಗಿರುತ್ತದೆ ಎಂದು ಅವರು ಹೇಳಿದರು.

ಒಟ್ಟು ಐದು ಪಿಚ್‌ಗಳು ಇರಲಿವೆ ಕ್ರೀಡಾಂಗಣದಲ್ಲಿ ಒಟ್ಟು ಐದು ಪಿಚ್‌ಗಳು ಇರಲಿವೆ. ಈ ಪಿಚ್‌ಗಳನ್ನು ಸಿಮೆಂಟ್ ಬಳಸಿ ನಿರ್ಮಿಸಲಾಗಿದೆ. ಆದ್ದರಿಂದ ಮಗ ಕಠಿಣ ಅಭ್ಯಾಸ ಮಾಡಬಹುದು. ಇದಕ್ಕಾಗಿ ಮುಂಬೈನ ಹಿರಿಯ ಪಿಚ್ ಕ್ಯೂರೇಟರ್ ಮಹಮುಂಕರ್ ಅವರನ್ನು ಕರೆಸಲಾಯಿತು. ಅವರು ಪಿಚ್‌ ಪರಿಶೀಲನೆ ನಡೆಸಿದ್ದಾರೆ. ಪಿಚ್ ಕ್ಯೂರೇಟರ್ ಅವರ ಸಲಹೆಯ ಮೇರೆಗೆ ಕ್ರೀಡಾಂಗಣದ ನಿರ್ಮಾಣವು ಭರದಿಂದ ಸಾಗಿದೆ. ಪ್ರತಿದಿನ 50 ಉದ್ಯೋಗಿಗಳ ತಂಡದಿಂದ ಕ್ರೀಡಾಂಗಣವನ್ನು ನಿರ್ಮಿಸಲಾಗುತ್ತಿದೆ.

ಸೂರ್ಯವಂಶಿ ಅವರ ಮಗ ಅಭಿಯಾಶ್ ಪ್ರಸ್ತುತ ಕೊಲ್ಹಾಪುರದ ಇಬ್ರಾಹಿಂ ಪಟೇಲ್ ಅವರೊಂದಿಗೆ ತರಬೇತಿ ಪಡೆಯುತ್ತಿದ್ದಾರೆ. ಅಭಿಯಾಶ್ ಅವರನ್ನು ಈಗಾಗಲೇ ನಂದೂರ್ಬಾರ್ ಜಿಲ್ಲಾ ಮಟ್ಟದ ಕ್ರಿಕೆಟ್ ಪಂದ್ಯಾವಳಿಗೆ ಆಯ್ಕೆ ಮಾಡಲಾಗಿದೆ. ಪುಣೆಯಲ್ಲಿ ನಡೆದ ಕೆಲವು ಸ್ಪರ್ಧೆಗಳಲ್ಲಿ ಅವರು ತಂಡವನ್ನು ಮುನ್ನಡೆಸಿದ್ದಾರೆ. ಕ್ರಿಕೆಟ್‌ನಲ್ಲಿ ವೃತ್ತಿಜೀವನ ಆರಂಭಿಸಲು ಬಯಸುತ್ತೇನೆ ಎಂದು ಅಭಿಯಾಶ್ ಹೇಳಿದರು.

ಮುಂಬೈ-ಪುಣೆ ಕ್ರಿಕೆಟ್ ಕ್ರೀಡಾಂಗಣದಂತೆಯೇ, ಐದು ಎಕರೆ ಪ್ರದೇಶದಲ್ಲಿ ಕ್ರೀಡಾಂಗಣ ಸಿದ್ಧಪಡಿಸಲಾಗಿದೆ. ಗ್ರಾಮೀಣ ಪ್ರದೇಶದ ಪ್ರತಿಭಾವಂತ ಕ್ರಿಕೆಟಿಗರನ್ನು ತಮ್ಮ ಮಕ್ಕಳೊಂದಿಗೆ ದೇಶಕ್ಕೆ ನೀಡಬಹುದು ಎಂಬ ಭಾವನೆಯೊಂದಿಗೆ, ಕ್ರೀಡಾಂಗಣದ ನಿರ್ಮಾಣವು ಯಾವುದೇ ವಿರಾಮವಿಲ್ಲದೆ ಪ್ರಾರಂಭವಾಗಿದೆ.

ಸೋಲಾಪುರದ ಮೊದಲ ಕ್ರೀಡಾಂಗಣ ತನ್ನ ಮಗನಿಗೆ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅವಕಾಶ ನೀಡಲು ಅಪ್ಪ ಕ್ರೀಡಾಂಗಣ ನಿರ್ಮಿಸಲು ನಿರ್ಧರಿಸಿದ್ದಾರೆ. ಜೊತೆಗೆ ಇದು ತಮ್ಮ ಮಗನಿಗೆ ಮಾತ್ರ ನೆರವಾಗುವುದಿಲ್ಲ. ಬದಲಿಗೆ ಇದು ಗ್ರಾಮೀಣ ಪ್ರದೇಶದ ಕ್ರಿಕೆಟ್ ಅಭಿಮಾನಿಗಳಿಗೂ ಪ್ರಯೋಜನವನ್ನು ನೀಡುತ್ತದೆ. ಸೋಲಾಪುರ ಜಿಲ್ಲೆಯಲ್ಲಿ ಅಂತಹ ಕ್ರಿಕೆಟ್ ಕ್ರೀಡಾಂಗಣ ಇಲ್ಲ, ಆದ್ದರಿಂದ ಗ್ರಾಮೀಣ ಪ್ರದೇಶದ ಮಕ್ಕಳು ಅಭ್ಯಾಸ ಮಾಡಲು ಪುಣೆ, ಮುಂಬೈ, ಕೊಲ್ಹಾಪುರದಂತಹ ದೊಡ್ಡ ನಗರಗಳಿಗೆ ಹೋಗಬೇಕಾಯಿತು. ಆದರೆ, ತನ್ನ ಮಗನ ಮೇಲಿನ ಪ್ರೀತಿಯಿಂದ ಸೂರ್ಯವಂಠಿ ನಿರ್ಮಿಸಿದ ಕ್ರೀಡಾಂಗಣವು ಗ್ರಾಮೀಣ ಪ್ರದೇಶದ ಕ್ರಿಕೆಟ್ ಪ್ರಿಯರಿಗೆ ಖಂಡಿತವಾಗಿಯೂ ಪ್ರಯೋಜನವನ್ನು ನೀಡುತ್ತದೆ ಎಂದು ಕ್ರಿಕೆಟ್ ತರಬೇತುದಾರ ಬದ್ವೆ ಹೇಳಿದ್ದಾರೆ.

Follow Us
pruthvi Shankar
pruthvi Shankar

ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ, ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ನೆಲೆ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ನಾನು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ನನ್ನ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ನನ್ನ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
ಸುದೀಪ್ ರೀತಿಯೇ ಸಂಜಿತ್ ಇದ್ದಾರೆ; ಕಾರಣ ಕೊಟ್ಟ ಪ್ರಿಯಾ
ಸುದೀಪ್ ರೀತಿಯೇ ಸಂಜಿತ್ ಇದ್ದಾರೆ; ಕಾರಣ ಕೊಟ್ಟ ಪ್ರಿಯಾ
ಕಬಿನಿ ಹಿನ್ನೀರಿನಲ್ಲಿ ಆಹಾರ ಸಿಗದೆ ಆನೆಗಳ ಪರದಾಟ: ಮಳೆ ಕೊರತೆಯಿಂದ ಸಮಸ್ಯೆ
ಕಬಿನಿ ಹಿನ್ನೀರಿನಲ್ಲಿ ಆಹಾರ ಸಿಗದೆ ಆನೆಗಳ ಪರದಾಟ: ಮಳೆ ಕೊರತೆಯಿಂದ ಸಮಸ್ಯೆ
ಹೊಸಕೋಟೆ: ಕಣ್ಣೂರಹಳ್ಳಿ ರಸ್ತೆಯಲ್ಲಿ 23 ನಾಗರಹಾವು ಮರಿಗಳ ಪತ್ತೆ!
ಹೊಸಕೋಟೆ: ಕಣ್ಣೂರಹಳ್ಳಿ ರಸ್ತೆಯಲ್ಲಿ 23 ನಾಗರಹಾವು ಮರಿಗಳ ಪತ್ತೆ!
ಕರ್ಕಾಟಕ ರಾಶಿಗೆ ಗುರು ಪ್ರವೇಶ; 12ರಾಶಿಗಳ ಮೇಲೆ ಇದರ ಪ್ರಭಾವ ಹೇಗಿರಲಿದೆ?
ಕರ್ಕಾಟಕ ರಾಶಿಗೆ ಗುರು ಪ್ರವೇಶ; 12ರಾಶಿಗಳ ಮೇಲೆ ಇದರ ಪ್ರಭಾವ ಹೇಗಿರಲಿದೆ?
ವಿಶ್ವ ದಾಖಲೆ... ಒಂದೇ ಓವರ್‌ನಲ್ಲಿ ೬ ಸಿಕ್ಸ್ ಸಿಡಿಸಿದ ಕುಶಾಲ್!
ವಿಶ್ವ ದಾಖಲೆ... ಒಂದೇ ಓವರ್‌ನಲ್ಲಿ ೬ ಸಿಕ್ಸ್ ಸಿಡಿಸಿದ ಕುಶಾಲ್!
ಕೈಯಿಂದ ಪದೇ ಪದೇ ಎಣ್ಣೆ, ಹಾಲು ಜಾರಿಬಿದ್ರೆ ಏನರ್ಥ?
ಕೈಯಿಂದ ಪದೇ ಪದೇ ಎಣ್ಣೆ, ಹಾಲು ಜಾರಿಬಿದ್ರೆ ಏನರ್ಥ?
ಇಂದು ಈ ರಾಶಿಯವರು ಆರ್ಥಿಕ ವಿಷಯಗಳಲ್ಲಿ ಎಚ್ಚರಿಕೆ ವಹಿಸಬೇಕು
ಇಂದು ಈ ರಾಶಿಯವರು ಆರ್ಥಿಕ ವಿಷಯಗಳಲ್ಲಿ ಎಚ್ಚರಿಕೆ ವಹಿಸಬೇಕು
ಡಿಕೆ ಶಿವಕುಮಾರ್ ಜತೆ ಸಂಪುಟ ಸೇರೋ ಸಂಭಾವ್ಯ ಸಚಿವರ ಪಟ್ಟಿ ಇಲ್ಲಿದೆ
ಡಿಕೆ ಶಿವಕುಮಾರ್ ಜತೆ ಸಂಪುಟ ಸೇರೋ ಸಂಭಾವ್ಯ ಸಚಿವರ ಪಟ್ಟಿ ಇಲ್ಲಿದೆ
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ