IBPS RRB 2021: 10 ಸಾವಿರಕ್ಕೂ ಹೆಚ್ಚು ಕಚೇರಿ ಸಹಾಯಕ ಹಾಗೂ ಬ್ಯಾಂಕ್ ಅಧಿಕಾರಿ ಹುದ್ದೆಗೆ ಅರ್ಜಿ ಆಹ್ವಾನ; ಇಲ್ಲಿದೆ ವಿವರ
IBPS RRB Recruitment Notification 2021: ವರದಿಯ ಪ್ರಕಾರ ಭಾರತದಾದ್ಯಂತ ಸುಮಾರು 43 ವಿವಿಧ ಗ್ರಾಮೀಣ ಬ್ಯಾಂಕ್ಗಳಲ್ಲಿ 10,493 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.
IBPS RRB 2021 PO/Clerk Job: ಇನ್ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್ (IBPS), ರೀಜನಲ್ ರೂರಲ್ ಬ್ಯಾಂಕ್ (RRB) ಅಧಿಕಾರಿ ದರ್ಜೆ- 1 (PO), ಕಚೇರಿ ಸಹಾಯಕ (Clerk) ಹಾಗೂ ಅಧಿಕಾರಿ ದರ್ಜೆ- 2 ಮತ್ತು 3 (CRP RRB X) ಹುದ್ದೆಗೆ ಪರೀಕ್ಷಾ ನೋಟಿಫಿಕೇಷನ್ ಬಿಡುಗಡೆಗೊಳಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಐಬಿಪಿಎಸ್ ಆರ್ಆರ್ಬಿ ನೇಮಕಾತಿಗೆ ಮಂಗಳವಾರದಿಂದ (ಜೂನ್ 8) ಅರ್ಜಿ ಸಲ್ಲಿಸಬಹುದು ಎಂದು ತಿಳಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜೂನ್ 28, 2021 ಆಗಿದೆ.
ಐಬಿಪಿಎಸ್ ಕ್ಲರ್ಕ್/ ಪಿಒ ನೇಮಕಾತಿಯು ಸಾಮಾನ್ಯ ನೇಮಕಾತಿ ಮೂಲಕ ನಡೆಯಲಿದೆ. ವರದಿಯ ಪ್ರಕಾರ ಭಾರತದಾದ್ಯಂತ ಸುಮಾರು 43 ವಿವಿಧ ಗ್ರಾಮೀಣ ಬ್ಯಾಂಕ್ಗಳಲ್ಲಿ 10,493 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಆಂಧ್ರ ಪ್ರದೇಶ ಗ್ರಾಮೀಣ ವಿಕಾಸ್ ಬ್ಯಾಂಕ್, ಉತ್ತರ ಬಿಹಾರ ಗ್ರಾಮೀಣ ಬ್ಯಾಂಕ್ ಇಂತಹ ಇತ್ಯಾದಿ ಬ್ಯಾಂಕ್ಗಳಿಗೆ ನೇಮಕಾತಿ ನಡೆಯಲಿದೆ.
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೇವಲ ಆನ್ಲೈನ್ ವಿಧಾನ ಮಾತ್ರ ಸೂಚಿಸಲಾಗಿದೆ. ಆಸಕ್ತರು ಆನ್ಲೈನ್ ಮುಖಾಂತರವೇ ಅರ್ಜಿ ಸಲ್ಲಿಸಬಹುದು. ಪ್ರಿಲಿಮಿನರಿ ಮತ್ತು ಮುಖ್ಯ ಪರೀಕ್ಷೆಗಳು ಅನ್ವಯಿಸುವುದಾದರೆ ಅವೆರಡಕ್ಕೂ ಒಂದೇ ರಿಜಿಸ್ಟ್ರೇಷನ್ ಬಳಕೆಯಾಗಲಿದೆ.
ಐಬಿಪಿಎಸ್ ಕ್ಯಾಲೆಂಡರ್ ಅನುಸಾರ, PO ಮತ್ತು ಗುಮಾಸ್ತ (Clerk) ಹುದ್ದೆಗಳಿಗೆ IBPS RRB Prelims Exam 2021 ಈ ಕೆಳಗೆ ಸೂಚಿಸಿದ ದಿನಾಂಕದಂದು ಆನ್ಲೈನ್ ವಿಧಾನದಲ್ಲಿ ನಡೆಯಲಿದೆ: ಆಗಸ್ಟ್ 1, ಆಗಸ್ಟ್ 7, ಆಗಸ್ಟ್ 8, ಆಗಸ್ಟ್ 14, ಆಗಸ್ಟ್ 21
ಪ್ರಿಲಿಮ್ಸ್ನಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳನ್ನು ಮೈನ್ಸ್ಗೆ ಕರೆಯಲಾಗುತ್ತದೆ. ಪಿಒ ಹುದ್ದೆಗೆ ಮೈನ್ಸ್ ಪರೀಕ್ಷೆಯು ಸಪ್ಟೆಂಬರ್ 25ರಂದು ಮತ್ತು ಕ್ಲರ್ಕ್ ಹುದ್ದೆಗೆ ಮೈನ್ಸ್ ಪರೀಕ್ಷೆಯು ಅಕ್ಟೋಬರ್ 3ರಂದು ನಡೆಯಲಿದೆ.
ದರ್ಜೆ 2 ಮತ್ತು 3 ಅಧಿಕಾರಿ ಹುದ್ದೆಗೆ ನೇಮಕಾತಿ ಪ್ರಕ್ರಿಯೆಯು ಒಂದೇ ಪರೀಕ್ಷೆಯ ಮೂಲಕ ನಡೆಯಲಿದೆ. ಅದು ಸಪ್ಟೆಂಬರ್ 25ರಂದು ನಡೆಯಲಿದೆ. ದರ್ಜೆ 1, 2 ಮತ್ತು 3ರ ಗ್ರೂಪ್ ಎ ಅಧಿಕಾರಿ ಹುದ್ದೆಗೆ ಸಂದರ್ಶನ (Interview) ಪ್ರಕ್ರಿಯೆಯು ಸ್ಥಳೀಯ ಗ್ರಾಮೀಣ ಬ್ಯಾಂಕ್ಗಳಲ್ಲಿ ನಿಗದಿತ ಅಧಿಕಾರಿಗಳ ಸೂಚನೆಯಂತೆ ನವೆಂಬರ್ 2021ರಲ್ಲಿ ನಡೆಯಲಿದೆ.
ನೇಮಕಾತಿ ಪ್ರಕ್ರಿಯೆಯಲ್ಲಿ ಭಾಗವಹಿಸಲು ಇಚ್ಛಿಸುವವರು ಸರ್ಕಾರದಿಂದ ಮಾನ್ಯತೆ ಹೊಂದಿರುವ ವಿಶ್ವವಿದ್ಯಾಲಯದಿಂದ ಪದವಿ ಪಡೆದಿರಬೇಕಿದೆ. ಉಳಿದಂತೆ, ಹುದ್ದೆಗೆ ಅರ್ಜಿ ಸಲ್ಲಿಸಲು ಬೇಕಿರುವ ವಯೋಮಿತಿ, ವಿದ್ಯಾರ್ಹತೆ, ಅನುಭವ, ಪರೀಕ್ಷಾ ವಿಧಾನ ಇತ್ಯಾದಿಗಳನ್ನು ಅಧಿಕೃತ ವೆಬ್ಸೈಟ್ ಮೂಲಕ ಪಡೆಯಬಹುದಾಗಿದೆ. ಸಂಬಂಧಪಟ್ಟ ಕೊಂಡಿಗಳನ್ನು ಇಲ್ಲಿ ನೀಡಲಾಗಿದೆ.
IBPS RRB Recruitment Notification 2021 ನೋಟಿಫಿಕೇಷನ್ ಡೌನ್ಲೋಡ್
ಇದನ್ನೂ ಓದಿ:
ಅರ್ಜಿ ಸಲ್ಲಿಸೋ ಬದಲು 3ಡಿ ವಿಡಿಯೋ ಮಾಡಿ ಕೆಲಸ ಗಿಟ್ಟಿಸಿಕೊಂಡ ಹುಡುಗ; ಸಾಮಾಜಿಕ ಜಾಲತಾಣದಲ್ಲಿ ಭಾರೀ ಮೆಚ್ಚುಗೆ