Indian Railways Recruitment 2021: ರೈಲ್ವೇ ಇಲಾಖೆಯ 3591 ಹುದ್ದೆಗಳಿಗೆ ಅರ್ಜಿ ಆಹ್ವಾನ; ಪರೀಕ್ಷೆ ಇಲ್ಲದೆ ನೇರ ನೇಮಕಾತಿ

ನೇಮಕಾತಿ ಪ್ರಕ್ರಿಯೆ ಮೆರಿಟ್ ಲಿಸ್ಟ್ ಆಧಾರದಲ್ಲಿ ನಡೆಯಲಿದೆ. ಮೆರಿಟ್ ಲಿಸ್ಟ್​ನ್ನು 10ನೇ ತರಗತಿ ಮತ್ತು ಐಟಿಐ ಪರೀಕ್ಷೆಯ ಅಂಕದ ಆಧಾರದ ಮೇಲೆ ತಯಾರಿಸಲಾಗುತ್ತದೆ.

Indian Railways Recruitment 2021: ರೈಲ್ವೇ ಇಲಾಖೆಯ 3591 ಹುದ್ದೆಗಳಿಗೆ ಅರ್ಜಿ ಆಹ್ವಾನ; ಪರೀಕ್ಷೆ ಇಲ್ಲದೆ ನೇರ ನೇಮಕಾತಿ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ganapathi bhat

Updated on:Aug 14, 2021 | 1:04 PM

ಪಶ್ಚಿಮ ರೈಲು ವಿಭಾಗದ ರೈಲ್ವೇ ನೇಮಕಾತಿ ವಿಭಾಗ 3,591 ಖಾಲಿ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಕರೆದಿದೆ. ಆಸಕ್ತ ಅಭ್ಯರ್ಥಿಗಳಿಗೆ ನೇಮಕಾತಿ ಆರಂಭವಾಗಿದ್ದು, ಜೂನ್ 24ರ ವರೆಗೆ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಆಸಕ್ತರು ಅರ್ಜಿಯನ್ನು www.rrc-wr.com ಮೂಲಕ ದಾಖಲಿಸಬಹುದು. ಇದು ನೇರ ನೇಮಕಾತಿ ಪ್ರಕ್ರಿಯೆಯಾಗಿದ್ದು ಸಂಬಂಧಪಟ್ಟ ಹುದ್ದೆಗೆ ಅಭ್ಯರ್ಥಿಗಳ ಆಯ್ಕೆಯಲ್ಲಿ ಯಾವುದೇ ಪರೀಕ್ಷೆ ಇರುವುದಿಲ್ಲ.

ನೇಮಕಾತಿ ಪ್ರಕ್ರಿಯೆ ಮೆರಿಟ್ ಲಿಸ್ಟ್ ಆಧಾರದಲ್ಲಿ ನಡೆಯಲಿದೆ. ಮೆರಿಟ್ ಲಿಸ್ಟ್​ನ್ನು 10ನೇ ತರಗತಿ ಮತ್ತು ಐಟಿಐ ಪರೀಕ್ಷೆಯ ಅಂಕದ ಆಧಾರದ ಮೇಲೆ ತಯಾರಿಸಲಾಗುತ್ತದೆ. ಒಂದು ವೇಳೆ ಇಬ್ಬರು ವಿದ್ಯಾರ್ಥಿಗಳ ಸರಾಸರಿ ಅಂಕವು ಒಂದೇ ರೀತಿ ಕಂಡುಬಂದರೆ ಅಂತಹ ವಿದ್ಯಾರ್ಥಿಗಳಲ್ಲಿ ಯಾರು ವಯಸ್ಸಿನಲ್ಲಿ ಹಿರಿಯರೋ ಅವರನ್ನು ಕೆಲಸಕ್ಕೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ.

ರೈಲ್ವೇ ನೇಮಕಾತಿ 2021ರ (Indian Railways Recruitment 2021) ಶುಲ್ಕ ಯಾರು ಮೀಸಲಾತಿ ವರ್ಗಕ್ಕೆ ಸೇರುವುದಿಲ್ಲವೋ ಅಂತಹ ಅಭ್ಯರ್ಥಿಗಳು ಆಯ್ಕೆ ಪ್ರಕ್ರಿಯೆಯಲ್ಲಿ ತೊಡಗಿಕೊಳ್ಳಲು 100 ರೂಪಾಯಿ ಶುಲ್ಕ ಪಾವತಿಸಬೇಕು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಅಥವಾ ಅಂಗವೈಕಲ್ಯ ಹೊಂದಿದ ಅಭ್ಯರ್ಥಿಗಳು ಯಾವುದೇ ಶುಲ್ಕ ಪಾವತಿಸುವ ಅಗತ್ಯ ಇರುವುದಿಲ್ಲ. ಮಹಿಳಾ ಅಭ್ಯರ್ಥಿಗಳು ಕೂಡ ಯಾವುದೇ ಶುಲ್ಕ ಪಾವತಿಸಬೇಕು ಎಂದಿಲ್ಲ.

ರೈಲ್ವೇ ನೇಮಕಾತಿ 2021ರ (Indian Railways Recruitment 2021) ವಯೋಮಿತಿ ಮೀಸಲಾತಿ ವರ್ಗಕ್ಕೆ ಸೇರದ ಅಭ್ಯರ್ಥಿಗಳು 15 ವರ್ಷ ಮೇಲ್ಪಟ್ಟವರಾಗಿ ಇರಬೇಕು. ಮತ್ತು 24 ವರ್ಷಕ್ಕಿಂತ ಒಳಗಿನ ಅಭ್ಯರ್ಥಿಗಳಾಗಿರಬೇಕು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಕ್ಕೆ ಸೇರುವ ಅಭ್ಯರ್ಥಿಗಳ ಗರಿಷ್ಠ ವಯೋಮಾನ ಮಿತಿ 5 ವರ್ಷ ಹೆಚ್ಚಾಗಿದ್ದರೂ ಭಾಗವಹಿಸಬಹುದು. ಉಳಿದ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಾನ ಮಿತಿಯಲ್ಲಿ 3 ವರ್ಷಗಳ ವಿನಾಯಿತಿ ನೀಡಲಾಗಿದೆ.

ರೈಲ್ವೇ ನೇಮಕಾತಿ ವಿವರ ಮುಂಬೈ ವಿಭಾಗ (ಎಮ್​ಎಮ್​ಸಿಟಿ) – 738 ವಡೋದರಾ ವಿಭಾಗ (ಬಿಆರ್​ಸಿ) – 489 ಅಹಮದಾಬಾದ್ ವಿಭಾಗ (ಎಡಿಐ) – 611 ರತ್​ಲಮ್ ವಿಭಾಗ (ಆರ್​ಟಿಎಮ್) – 434 ರಾಜ್​ಕೋಟ್ ವಿಭಾಗ (ಆರ್​ಜೆಟಿ) – 176 ಭಾವ್​ನಗರ್ ವರ್ಕ್​ಶಾಪ್ (ಬಿವಿಪಿ) – 210 ಲೋವರ್ ಪರೇಲ್ ವರ್ಕ್​ಶಾಪ್ (ಪಿಎಲ್) – 396 ಮಹಾಲಕ್ಷ್ಮೀ ವರ್ಕ್​ಶಾಪ್ (ಎಮ್​ಎಕ್ಸ್) – 64 ದಾಹೊದ್ ವರ್ಕ್​ಶಾಪ್ (ಡಿಹೆಚ್​ಡಿ) – 187 ಪ್ರತಾಪ್ ನಗರ್ ವರ್ಕ್​ಶಾಪ್ (ಪಿಆರ್​ಟಿಎನ್) – 45 ಸಾಬರ್​ಮತಿ ವರ್ಕ್​ಶಾಪ್ (ಎಸ್​ಬಿಐ) – 60 ಸಾಬರ್​ಮತಿ ಸಿಗ್ನಲ್ ವರ್ಕ್​ಶಾಪ್ (ಎಸ್​ಬಿಐ) – 25 ಪ್ರಧಾನ ಕಚೇರಿ – 34

ನೇಮಕಾತಿಗೆ ಅರ್ಜಿ ಸಲ್ಲಿಸುವುದು ಹೇಗೆ? ನಿಮಗೆ ಈ ಹುದ್ದೆಗೆ ಅರ್ಜಿ ಸಲ್ಲಿಸಲು ಆಸಕ್ತಿ ಇದ್ದು ಹಾಗೂ ನೀವು ಈ ಹುದ್ದೆಗೆ ಅರ್ಹ ಅಭ್ಯರ್ಥಿಯಾಗಿದ್ದರೆ ಹೀಗೆ ಮಾಡಿ – www.rrc-wr.com ಗೆ ಭೇಟಿ ನೀಡಿ – ಅಪ್ಲಿಕೇಷನ್​ಗೆ ಸಂಬಂಧಿಸಿದ ಲಿಂಕ್ ಕ್ಲಿಕ್ ಮಾಡಿ – ಹೊಸ ಪುಟದಲ್ಲಿ ಅರ್ಜಿ ತುಂಬುವ ಫಾರ್ಮ್ ತೆರೆದುಕೊಳ್ಳುತ್ತದೆ – ಅರ್ಜಿ ತುಂಬಿದ ನಂತರ, ನಿಮ್ಮ ಫೀಸ್ ತುಂಬಿರಿ – ಅರ್ಜಿ ಸಲ್ಲಿಸಿದ ದಾಖಲೆಗಳನ್ನು, ಇತರ ಅಗತ್ಯ ಮಾಹಿತಿಗಳನ್ನು ತೆಗೆದಿಟ್ಟುಕೊಳ್ಳಿ

ಇದನ್ನೂ ಓದಿ: ಗ್ರಾಮೀಣ ಜನರ ನೆರವಿಗೆ ನಿಂತ ಉದ್ಯೋಗ ಖಾತ್ರಿ ಯೋಜನೆ: ಬೀದರ್​ನ ಕಾರ್ಮಿಕರಿಗೆ ಎಂಜಿಎನ್​ಆರ್​ಇಜಿಎಯಿಂದ ಆಸರೆ

KSP Recruitment 2021: ಉದ್ಯೋಗಾಕಾಂಕ್ಷಿಗಳಿಗೆ ಸಿಹಿ ಸುದ್ದಿ; ಕರ್ನಾಟಕ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನ

Published On - 3:06 pm, Mon, 31 May 21

ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ