AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

How to Link Aadhaar Card with EPF Account: ಆಧಾರ್ ಜತೆಗೆ ಪಿಎಫ್​ ಖಾತೆ ಜೋಡಣೆ ಮಾಡುವುದು ಹೇಗೆ?

ಜೂನ್ 1ರಿಂದ ಪಿಎಫ್ ಜತೆಗೆ ಆಧಾರ್ ಕಾರ್ಡ್ ಜೋಡಣೆ ಕಡ್ಡಾಯ ಮಾಡಲಾಗಿದೆ. ಹೀಗೆ ಜೋಡಣೆ ಆಗಿದೆ ಅನ್ನೋದನ್ನು ಉದ್ಯೋಗದಾತರೇ ಖಾತ್ರಿ ಪಡಿಸಬೇಕು. ಇಲ್ಲದಿದ್ದರೆ ಏನಾಗುತ್ತದೆ ಎಂಬ ಬಗ್ಗೆ ವಿವರ ಇಲ್ಲಿದೆ.

How to Link Aadhaar Card with EPF Account: ಆಧಾರ್ ಜತೆಗೆ ಪಿಎಫ್​ ಖಾತೆ ಜೋಡಣೆ ಮಾಡುವುದು ಹೇಗೆ?
ಆಧಾರ್ ಕಾರ್ಡ್
Follow us
Srinivas Mata
|

Updated on: Jun 01, 2021 | 12:49 PM

ನವದೆಹಲಿ: ಕಾರ್ಮಿಕರ ಭವಿಷ್ಯ ನಿಧಿ ಒಕ್ಕೂಟದ ಹೊಸ ನಿಯಮವಾದ ಆಧಾರ್ ಮತ್ತು ಪ್ರಾವಿಡೆಂಟ್ ಫಂಡ್ ಜೋಡಣೆಯು ಜೂನ್ 1, 2021ರಿಂದ ಕಡ್ಡಾಯ ಆಗಿದೆ. ಒಂದು ವೇಳೆ ಪಿಎಫ್ ಖಾತೆದಾರರು ಈ ನಿಯಮಕ್ಕೆ ಬದ್ಧರಾಗದಿದ್ದಲ್ಲಿ ಅದರ ಪರಿಣಾಮವು ಖಾತೆದಾರರ ಇಪಿಎಫ್ ಕೊಡುಗೆ ಮೇಲೆ ಆಗುತ್ತದೆ. ಇಪಿಎಫ್​ಒ ಹೊಸ ನಿಯಮದ ಪ್ರಕಾರ, ಪ್ರತಿ ಖಾತೆದಾರರು ತಮ್ಮ ಪಿಎಫ್​ ಖಾತೆಯನ್ನು ಆಧಾರ್​ ಕಾರ್ಡ್ ಜತೆಗೆ ಜೋಡಣೆ ಆಗಬೇಕು. ಉದ್ಯೋಗಿಗಳು ಪಿಎಫ್​ ಖಾತೆಯನ್ನು ದೃಢೀಕರಿಸುವಂತೆ ಸೂಚಿಸಬೇಕಾದದ್ದು ಉದ್ಯೋಗದಾತರದೇ ಜವಾಬ್ದಾರಿ. ಜೂನ್ 1ಕ್ಕೆ ಉದ್ಯೋಗಿಗಳು ಪಿಎಫ್​ ಜತೆಗೆ ಆಧಾರ್ ಜೋಡಣೆ ಮಾಡಲು ವಿಫಲವಾದಲ್ಲಿ ಹಲವು ಬಗೆಯ ನಷ್ಟವನ್ನು ಅನುಭವಿಸಬೇಕಾಗುತ್ತದೆ. ಅದರಲ್ಲಿ ಮುಖ್ಯವಾದದ್ದು ಏನೆಂದರೆ, ಉದ್ಯೋಗದಾತರು ಪಿಎಫ್​ ಖಾತೆಗೆ ನೀಡುವ ಕೊಡುಗೆ ನಿಲ್ಲುತ್ತದೆ. ಈ ಬಗ್ಗೆ ಇಪಿಎಫ್​ಒದಿಂದ ಅಧಿಸೂಚನೆಯನ್ನು ಹೊರಡಿಸಲಾಗಿದೆ.

ಏನಿದು ಹೊಸ ನಿಯಮ? ಸಾಮಾಜಿಕ ಭದ್ರತೆ ಸಂಹಿತೆ 2020, ಸೆಕ್ಷನ್ 142 ಅಡಿಯಲ್ಲಿ ಇಪಿಎಫ್​ಒದಿಂದ ಹೊಸ ನಿಯಮವನ್ನು ಜಾರಿಗೆ ತರಲಾಗಿದೆ. ನಿಯಂತ್ರಕ ಸಂಸ್ಥೆಯಿಂದ ಉದ್ಯೋಗದಾತರಿಗೆ ಸ್ಪಷ್ಟವಾದ ಸೂಚನೆ ನೀಡಲಾಗಿದ್ದು, ಜೂನ್ 1ರಿಂದ ಪಿಎಫ್ ಖಾತೆಯು ಆಧಾರ್ ಅಥವಾ ಯುಎಎನ್ ಜತೆಗೆ ಜೋಡಣೆ ಆಗದಿದ್ದಲ್ಲಿ ಆಧಾರ್ ದೃಢೀಕರಣ ಆಗಿಲ್ಲ ಎಂದಾಗುತ್ತದೆ. ಆ ನಂತರ ಇಸಿಆರ್- ಎಲೆಕ್ಟ್ರಾನಿಕ್ ಚಲನ್ ಕಮ್ ರಿಟರ್ನ್ ಭರ್ತಿ ಆಗುವುದಿಲ್ಲ.

ಇದರರ್ಥ ಏನೆಂದರೆ, ಉದ್ಯೋಗಿಗಳು ಪಿಎಫ್​ಗೆ ತಮ್ಮ ಕೊಡುಗೆಯನ್ನು ನೋಡಬಹುದು. ಆದರೆ ಉದ್ಯೋಗದಾತರ ಪಾಲನ್ನು ಪಡೆಯುವುದು ಸಾಧ್ಯವಿಲ್ಲ.

ಇಪಿಎಫ್​ ಖಾತೆಯನ್ನು ಆಧಾರ್ ಜತೆಗೆ ಲಿಂಕ್ ಮಾಡುವುದು ಹೇಗೆ? * ಯೂನಿಫೈಡ್ ಮೆಂಬರ್ ಪೋರ್ಟಲ್​ನಲ್ಲಿ ಇಪಿಎಫ್​ ಖಾತೆ * ‘ಮ್ಯಾನೇಜ್’ ವಿಭಾಗದಲ್ಲಿ ‘ಕೆವೈಸಿ’ ಆಯ್ಕೆ ಮೇಲೆ ಕ್ಲಿಕ್ ಮಾಡಿ * ಯಾವುದನ್ನು ಯುಎಎನ್​ ಜತೆಗೆ ಜೋಡಣೆ ಮಾಡಲು ಬಯಸುತ್ತೀರೋ ನೀವು ಆ ಮಾಹಿತಿಯನ್ನು ಆಯ್ಕೆ ಮಾಡಿಕೊಳ್ಳಬಹುದು (ಪ್ಯಾನ್, ಬ್ಯಾಂಕ್ ಅಕೌಂಟ್, ಆಧಾರ್ ಮುಂತಾದವು). * ಅಗತ್ಯ ಇರುವ ಮಾಹಿತಿಯನ್ನು ಭರ್ತಿ ಮಾಡಿ * Save ಆಯ್ಕೆಯ ಮೇಲೆ ಕ್ಲಿಕ್ ಮಾಡಿ

ಇದರೊಂದಿಗೆ ಪಿಎಫ್ ಖಾತೆ ಜತೆಗೆ ಆಧಾರ್ ಜೋಡಣೆ ಆಗುತ್ತದೆ.

ಇದನ್ನೂ ಓದಿ: Covid- 19 PF Withdrawal: ಕೋವಿಡ್-19 ಕಾರಣಕ್ಕೆ ಎರಡನೇ ಬಾರಿಗೆ ಪಿಎಫ್​ ವಿಥ್​ಡ್ರಾ ಅವಕಾಶ; ಎಷ್ಟು, ಹೇಗೆ ಮಾಹಿತಿ ಇಲ್ಲಿದೆ

ಇದನ್ನೂ ಓದಿ: PF Withdrawal Rules: ಪಿಎಫ್ ವಿಥ್​ಡ್ರಾ, ವರ್ಗಾವಣೆ ಮಾಡುವುದಕ್ಕೆ ಅನುಸರಿಸಬೇಕಾದ ನಿಯಮಗಳೇನು?

( EPF and Aadhaar link become mandatory from June 1, 2021. How to link Aadhaar card with EPF account? Here is the step by step details)

ತಂಗಿ ಮದುವೆ ಮಾಡಿಸುತ್ತೇವೆ: ರಾಕೇಶ್ ಪೂಜಾರಿ ಕುಟುಂಬಕ್ಕೆ ಸ್ನೇಹಿತರ ಬೆಂಬಲ
ತಂಗಿ ಮದುವೆ ಮಾಡಿಸುತ್ತೇವೆ: ರಾಕೇಶ್ ಪೂಜಾರಿ ಕುಟುಂಬಕ್ಕೆ ಸ್ನೇಹಿತರ ಬೆಂಬಲ
ರಾಕೇಶ್ ಪೂಜಾರಿ ಪ್ರತಿಭೆ ಕಂಡು ದರ್ಶನ್ ಕೂಡ ಫೋಟೋ ತೆಗೆಸಿಕೊಂಡಿದ್ರು: ರಘು
ರಾಕೇಶ್ ಪೂಜಾರಿ ಪ್ರತಿಭೆ ಕಂಡು ದರ್ಶನ್ ಕೂಡ ಫೋಟೋ ತೆಗೆಸಿಕೊಂಡಿದ್ರು: ರಘು
ಗಂಗಾವತಿಯಲ್ಲಿ ಬೆಂಬಲಿಗರ ಸಭೆ ನಡೆಸಿದ ಜನಾರ್ಧನ ರೆಡ್ಡಿ ಪತ್ನಿ ಅರುಣಾ
ಗಂಗಾವತಿಯಲ್ಲಿ ಬೆಂಬಲಿಗರ ಸಭೆ ನಡೆಸಿದ ಜನಾರ್ಧನ ರೆಡ್ಡಿ ಪತ್ನಿ ಅರುಣಾ
ಲಿಫ್ಟ್​ನಲ್ಲಿದ್ದ9 ಜನರನ್ನ ಗೋಡೆ ಕೊರೆದು ರಕ್ಷಿಸಿದ ರೋಚಕ ವಿಡಿಯೋ!
ಲಿಫ್ಟ್​ನಲ್ಲಿದ್ದ9 ಜನರನ್ನ ಗೋಡೆ ಕೊರೆದು ರಕ್ಷಿಸಿದ ರೋಚಕ ವಿಡಿಯೋ!
ಪುರುಷರು ವಾಹನ ಓಡಿಸಲು ಪರದಾಡಿದ ರಸ್ತೇಲಿ ಸಲೀಸಾಗಿ ಸ್ಕೂಟರ್ ಓಡಿಸಿದ ಯುವತಿ
ಪುರುಷರು ವಾಹನ ಓಡಿಸಲು ಪರದಾಡಿದ ರಸ್ತೇಲಿ ಸಲೀಸಾಗಿ ಸ್ಕೂಟರ್ ಓಡಿಸಿದ ಯುವತಿ
ರಾಕೇಶ್ ಪೂಜಾರಿಗೆ ಆರೋಗ್ಯ ಸಮಸ್ಯೆ ಇತ್ತ: ಗೆಳೆಯ ಕೊಟ್ಟ ಉತ್ತರ
ರಾಕೇಶ್ ಪೂಜಾರಿಗೆ ಆರೋಗ್ಯ ಸಮಸ್ಯೆ ಇತ್ತ: ಗೆಳೆಯ ಕೊಟ್ಟ ಉತ್ತರ
ಪಾಕಿಸ್ತಾನ ಎಸೆದ ಜೀವಂತ ಶೆಲ್​ಗಳನ್ನು ನಿಷ್ಕ್ರಿಯಗೊಳಿಸಿದ ಭಾರತೀಯ ಸೇನೆ
ಪಾಕಿಸ್ತಾನ ಎಸೆದ ಜೀವಂತ ಶೆಲ್​ಗಳನ್ನು ನಿಷ್ಕ್ರಿಯಗೊಳಿಸಿದ ಭಾರತೀಯ ಸೇನೆ
ಮಳೆಗಾಲ ಸಮೀಪದಲ್ಲಿದೆ, ನಗರದಲ್ಲಿ ಮರ ಗಣತಿ ಶುರುಮಾಡಲು ಇದು ಸಕಾಲ
ಮಳೆಗಾಲ ಸಮೀಪದಲ್ಲಿದೆ, ನಗರದಲ್ಲಿ ಮರ ಗಣತಿ ಶುರುಮಾಡಲು ಇದು ಸಕಾಲ
ಮನೆಯೊಳಗೆ ನುಗ್ಗಿ ಕೊಲ್ಲುತ್ತೇವೆ; ಪಾಕಿಸ್ತಾನಕ್ಕೆ ಮೋದಿ ಖಡಕ್ ಎಚ್ಚರಿಕೆ
ಮನೆಯೊಳಗೆ ನುಗ್ಗಿ ಕೊಲ್ಲುತ್ತೇವೆ; ಪಾಕಿಸ್ತಾನಕ್ಕೆ ಮೋದಿ ಖಡಕ್ ಎಚ್ಚರಿಕೆ
ಹೊತ್ತಿ ಉರಿದ ಗೋದಾಮು, 60ಕ್ಕೂ ಹೆಚ್ಚು ಗಾಡಿ ನೀರು ಹಾಕಿದ್ರೂ ಆರದ ಬೆಂಕಿ
ಹೊತ್ತಿ ಉರಿದ ಗೋದಾಮು, 60ಕ್ಕೂ ಹೆಚ್ಚು ಗಾಡಿ ನೀರು ಹಾಕಿದ್ರೂ ಆರದ ಬೆಂಕಿ