AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Covid- 19 PF Withdrawal: ಕೋವಿಡ್-19 ಕಾರಣಕ್ಕೆ ಎರಡನೇ ಬಾರಿಗೆ ಪಿಎಫ್​ ವಿಥ್​ಡ್ರಾ ಅವಕಾಶ; ಎಷ್ಟು, ಹೇಗೆ ಮಾಹಿತಿ ಇಲ್ಲಿದೆ

ಕೋವಿಡ್- 19 ಮುಂಗಡವಾಗಿ ಹಣವನ್ನು ವಿಥ್​ಡ್ರಾ ಮಾಡುವುದಕ್ಕೆ ಪಿಎಫ್ ಸದಸ್ಯರಿಗೆ ಇಪಿಎಫ್​ಒ ಅವಕಾಶ ಒದಗಿಸಿದೆ. ಈ ಬಗ್ಗೆ ವಿವರಗಳು ಈ ಲೇಖನದಲ್ಲಿವೆ.

Covid- 19 PF Withdrawal: ಕೋವಿಡ್-19 ಕಾರಣಕ್ಕೆ ಎರಡನೇ ಬಾರಿಗೆ ಪಿಎಫ್​ ವಿಥ್​ಡ್ರಾ ಅವಕಾಶ; ಎಷ್ಟು, ಹೇಗೆ ಮಾಹಿತಿ ಇಲ್ಲಿದೆ
ಸಾಂದರ್ಭಿಕ ಚಿತ್ರ
Srinivas Mata
|

Updated on:Jun 01, 2021 | 11:34 AM

Share

ಮರುಪಾವತಿಸುವ ಅಗತ್ಯ ಇಲ್ಲದ ಕೋವಿಡ್- 19 ಮುಂಗಡವನ್ನು ಎರಡನೇ ಬಾರಿಗೆ ತೆಗೆದುಕೊಳ್ಳುವುದಕ್ಕೆ ಕಾರ್ಮಿಕರ ಭವಿಷ್ಯ ನಿಧಿ ಒಕ್ಕೂಟ (EPFO)ದಿಂದ ಸದಸ್ಯರಿಗೆ ಅವಕಾಶ ನೀಡಿದೆ. ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಯೋಜನಾ (PMGKY) ಅಡಿಯಲ್ಲಿ 2020ರ ಮಾರ್ಚ್​ನಲ್ಲಿ ಸದಸ್ಯರ ಹಣಕಾಸು ಅಗತ್ಯಕ್ಕೆ ತಕ್ಕಂತೆ ಪಿಎಫ್ ವಿಥ್​ಡ್ರಾ ಮಾಡುವುದಕ್ಕೆ ಅವಕಾಶ ನೀಡಲಾಗಿತ್ತು. ಈ ತೀರ್ಮಾನಕ್ಕೆ ತಕ್ಕಂತೆ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ಪ್ರಾವಿಡೆಂಟ್ ಫಂಡ್ಸ್ ಯೋಜನೆ, 1952ಗೆ ತಿದ್ದುಪಡಿ ತಂದಿತು.

ಎಷ್ಟು ಹಣ ವಿಥ್​ಡ್ರಾ ಮಾಡಬಹುದು? ಮೂಲ ವೇತನ (ಬೇಸಿಕ್ ಪೇ) ಮತ್ತು ತುಟ್ಟಿ ಭತ್ಯೆ (ಡಿಯರ್​ನೆಸ್ ಅಲೋವೆನ್ಸ್) ಇವೆರಡೂ ಒಟ್ಟು ಸೇರಿ ಮೂರು ತಿಂಗಳ ಮೊತ್ತ ಅಥವಾ ಇಪಿಎಫ್​ನಲ್ಲಿ ಬಾಕಿ ಇರುವ ಸದಸ್ಯರ ಮೊತ್ತದಲ್ಲಿ ಶೇ 75ರಷ್ಟು ಈ ಎರಡರಲ್ಲಿ ಯಾವುದು ಕಡಿಮೆಯೋ ಆ ಮೊತ್ತ ವಿಥ್​ಡ್ರಾ ಮಾಡಲು ಅರ್ಜಿ ಹಾಕಬಹುದು. ಕೊರೊನಾ ಸಂದರ್ಭದಲ್ಲಿ ಕೋವಿಡ್- 19 ಮುಂಗಡದಿಂದ ಇಪಿಎಫ್​ ಸದಸ್ಯರಿಗೆ, ಅದರಲ್ಲೂ ತಿಂಗಳಿಗೆ 15,000 ರೂಪಾಯಿಗಿಂತ ಕಡಿಮೆ ಸಂಬಳ ಇರುವವರಿಗೆ ಅನುಕೂಲ ಆಗುತ್ತದೆ ಎಂದು ಸಚಿವಾಲಯ ಹೇಳಿದೆ. ಈ ತನಕ ಇಪಿಎಫ್​ಒದಿಂದ 76.31 ಲಕ್ಷ ಕೋವಿಡ್- 19 ಕ್ಲೇಮ್​ಗಳು ವಿಲೇವಾರಿ ಆಗಿ, 18,698.15 ಕೋಟಿ ರೂಪಾಯಿ ವಿತರಣೆ ಮಾಡಲಾಗಿದೆ.

ಎರಡನೇ ಸಲಕ್ಕೆ ಮುಂಗಡ ದೊರೆಯುತ್ತದೆಯೇ? ಈಗಾಗಲೇ ಕೋವಿಡ್- 19 ಮುಂಗಡವನ್ನು ಪಿಎಫ್​ ಸದಸ್ಯರು ಇಪಿಎಫ್​ಒದಿಂದ ತೆಗೆದುಕೊಂಡಿದ್ದಲ್ಲಿ ಎರಡನೇ ಬಾರಿಗೂ ಮುಂಗಡ ತೆಗೆದುಕೊಳ್ಳಬಹುದು. ಎರಡನೇ ಬಾರಿಗೆ ಕೋವಿಡ್- 19 ಮುಂಗಡಕ್ಕೆ ಅರ್ಜಿ ಹಾಕುವಾಗಲೂ ಮೊದಲ ಬಾರಿಗೆ ವಿಥ್​ಡ್ರಾ ಮಾಡುವಾಗ ಏನು ನಿಯಮ ಹಾಗೂ ಹಂತಗಳು ಇದ್ದವೋ ಅವೇ ಈಗಲೂ ಇವೆ.

3 ದಿನದೊಳಗೆ ಕ್ಲೇಮ್​ಗಳು ವಿಲೇವಾರಿ ಕೋವಿಡ್- 19 ಮುಂಗಡಕ್ಕೆ ಅರ್ಜಿ ಪಡೆದುಕೊಂಡ 3 ದಿನದೊಳಗೆ ಕ್ಲೇಮ್​ಗಳನ್ನು ವಿಲೇವಾರಿ ಮಾಡುವುದಕ್ಕೆ ಇಪಿಎಫ್​ಒ ಬದ್ಧವಾಗಿದೆ ಎಂದು ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ತಿಳಿಸಿದೆ. ಇಪಿಎಫ್​ಒದಿಂದ ಆಟೋ- ಕ್ಲೇಮ್ ವಿಲೇವಾರಿಯನ್ನು ತರಲಾಗಿದೆ. ಎಲ್ಲ ಬಗ್ಗೆಯಲ್ಲೂ ಕೆವೈಸಿ (ನೋ ಯುವರ್ ಕಸ್ಟಮರ್) ಪೂರ್ಣಗೊಳಿಸಿದ ಸದಸ್ಯರಿಗೆ ಇದು ಅನ್ವಯ ಆಗುತ್ತದೆ. ಕಾನೂನು ಪ್ರಕಾರವಾಗಿ 20 ದಿನದೊಳಗೆ ಕ್ಲೇಮ್ ವಿಲೇವಾರಿ ಆಗುತ್ತಿದ್ದದ್ದು ಈಗ ಕೇವಲ 3 ದಿನಕ್ಕೆ ಇಳಿಕೆ ಆಗಿದೆ ಎಂದು ಸಚಿವಾಲಯ ತಿಳಿಸಿದೆ.

ಇದನ್ನೂ ಓದಿ: PF Withdrawal Rules: ಪಿಎಫ್ ವಿಥ್​ಡ್ರಾ, ವರ್ಗಾವಣೆ ಮಾಡುವುದಕ್ಕೆ ಅನುಸರಿಸಬೇಕಾದ ನಿಯಮಗಳೇನು?

(How to apply for Covid- 19 advance from EPFO by PF members? Here is an explainer)

Published On - 11:33 am, Tue, 1 June 21

ಹೈವೇಯಲ್ಲೇ ಅಡುಗೆ ಮಾಡಿ ಧಿಮಾಕು ತೋರಿದ ಮಹಿಳೆ!
ಹೈವೇಯಲ್ಲೇ ಅಡುಗೆ ಮಾಡಿ ಧಿಮಾಕು ತೋರಿದ ಮಹಿಳೆ!
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ