AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Petrol Price Today: ಜೂನ್​ ತಿಂಗಳ ಆರಂಭದಿಂದಲೇ ಪೆಟ್ರೋಲ್​, ಡೀಸೆಲ್​ ದರ ಹೆಚ್ಚಳ; ಮುಂಬೈ ನಗರದಲ್ಲಿ ಶತಕದ ಗಡಿ ದಾಟಿ ಮುನ್ನುಗ್ಗಿದ​ ಪೆಟ್ರೋಲ್​ ಬೆಲೆ

Petrol diesel Price Today: ಕಳೆದ ಮೇ ತಿಂಗಳ 4ನೇ ತಾರೀಕಿನಿಂದ ತಿಂಗಳ ಕೊನೆಯವರೆಗೆ ಒಟ್ಟು 16 ಬಾರಿ ಇಂಧನ ದರವನ್ನು ಏರಿಕೆ ಮಾಡಲಾಗಿತ್ತು. ಇದೀಗ ಜೂನ್​ ತಿಂಗಳ ಆರಂಭದಿಂದಲೇ ಪೆಟ್ರೋಲ್​ ಮತ್ತು ಡೀಸೆಲ್​ ದರ ಏರಿಕೆ ಕಾಣಲು ಪ್ರಾರಂಭಿಸಿದೆ.

Petrol Price Today: ಜೂನ್​ ತಿಂಗಳ ಆರಂಭದಿಂದಲೇ ಪೆಟ್ರೋಲ್​, ಡೀಸೆಲ್​ ದರ ಹೆಚ್ಚಳ; ಮುಂಬೈ ನಗರದಲ್ಲಿ ಶತಕದ ಗಡಿ ದಾಟಿ ಮುನ್ನುಗ್ಗಿದ​ ಪೆಟ್ರೋಲ್​ ಬೆಲೆ
ಸಾಂದರ್ಭಿಕ ಚಿತ್ರ
Follow us
shruti hegde
|

Updated on: Jun 01, 2021 | 9:16 AM

ದೆಹಲಿ: ಇಂದು ಮಂಗಳವಾರದಂದು (ಜೂನ್ 1) ಸರ್ಕಾರಿ ತೈಲ ಕಂಪನಿಗಳು ಮತ್ತೆ ಪೆಟ್ರೋಲ್​ ಮತ್ತು ಡೀಸೆಲ್​ ಬೆಲೆಯನ್ನು ಹೆಚ್ಚಳ ಮಾಡಿವೆ. ಲೀಟರ್​ ಪೆಟ್ರೊಲ್​ ದರದಲ್ಲಿ 26 ಪೈಸೆ ಹಾಗೂ ಲೀಟರ್​ ಡೀಸೆಲ್​ ದರದಲ್ಲಿ 23 ಪೈಸೆ ಏರಿಕೆಯಾಗಿದೆ. ಆ ಬಳಿಕ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಲೀಟರ್​ ಪೆಟ್ರೋಲ್​ ಬೆಲೆ 94.49 ರೂ. ಆಗಿದ್ದರೆ, ಲೀಟರ್​ ಡೀಸೆಲ್​ ದರ 85.38 ರೂಪಾಯಿಗೆ ಏರಿಕೆಯಾಗಿದೆ.

ಕಳೆದ ಮೇ ತಿಂಗಳ 4ನೇ ತಾರೀಕಿನಿಂದ ತಿಂಗಳ ಕೊನೆಯವರೆಗೆ ಒಟ್ಟು 16 ಬಾರಿ ಇಂಧನ ದರವನ್ನು ಏರಿಕೆ ಮಾಡಲಾಗಿತ್ತು. ಇದೀಗ ಜೂನ್​ ತಿಂಗಳ ಆರಂಭದಿಂದಲೇ ಪೆಟ್ರೋಲ್​ ಮತ್ತು ಡೀಸೆಲ್​ ದರ ಏರಿಕೆ ಕಾಣಲು ಪ್ರಾರಂಭಿಸಿದೆ. ಪಂಚರಾಜ್ಯಗಳ ಚುನಾವಣೆಯ ಸಂದರ್ಭದಲ್ಲಿ ಸತತವಾಗಿ 18 ದಿನಗಳ ಕಾಲ ತೈಲ ದರ ಬದಲಾವಣೆ ಹೊಂದಿರಲಿಲ್ಲ. ಅದಾದ ಬಳಿಕ ಮೇ ತಿಂಗಳ ಆರಂಭದ ಮೊದಲ ವಾರದಲ್ಲಿ ಏರಿಕೆ ಕಾಣಲು ಪ್ರಾರಂಭಿಸಿದ ತೈಲ ದರ ಇಂದಿನವರೆಗೂ ಹೆಚ್ಚಳವಾಗುತ್ತಲೇ ಇದೆ.

ವಿವಿಧ ನಗರಗಳಲ್ಲಿ ಪೆಟ್ರೋಲ್ ದರ ಇಂದು ದರ ಹೆಚ್ಚಳದ ಬಳಿಕ ದೆಹಲಿಯಲ್ಲಿ ಪ್ರತಿ ಲೀಟರ್​ ಪೆಟ್ರೋಲ್​ ದರ 94.49 ರೂಪಾಯಿಗೆ ಏರಿಕೆಯಾಗಿದೆ. ವಾಣಿಜ್ಯ ನಗರಿ ಮುಂಬೈನಲ್ಲಿ ಈಗಾಗಲೇ ಶತಕ ಬಾರಿಸಿ, ಶತಕದ ಗಡಿ ದಾಟಿ ಮುನ್ನುಗ್ಗಿದೆ. ಲೀಟರ್​ ಪೆಟ್ರೊಲ್​ ದರ 100.72 ರೂಪಾಯಿಗೆ ಹೆಚ್ಚಳವಾಗಿದೆ. ಚೆನ್ನೈನಲ್ಲಿ ಲೀಟರ್​ ಪೆಟ್ರೋಲ್​ಗೆ 95.99 ರೂ. ನಿಗದಿ ಮಾಡಲಾಗಿದೆ. ಹಾಗೆಯೇ ಕೋಲ್ಕತ್ತಾದಲ್ಲಿ ಲೀಟರ್​ ಪೆಟ್ರೋಲ್​ ದರ 94.50 ರೂ. ದಾಖಲಾಗಿದೆ. ಇನ್ನು, ಬೆಂಗಳೂರು ನಗರದಲ್ಲಿ ಲೀಟರ್​ ಪೆಟ್ರೋಲ್​ ದರವನ್ನು ರೂಪಾಯಿಗೆ ಏರಿಕೆ ಮಾಡಲಾಗಿದೆ.

ವಿವಿಧ ನಗರಗಳಲ್ಲಿ ಡೀಸೆಲ್​ ದರ ದೆಹಲಿಯಲ್ಲಿ ಲೀಟರ್​ ಡೀಸೆಲ್​ ಬೆಲೆ 85.38 ರೂ. ಆಗಿದೆ. ಅದೇರೀತಿ ಮುಂಬೈ ನಗರದಲ್ಲಿ 92.69 ರೂ. ನಿಗದಿ ಮಾಡಲಾಗಿದೆ. ಚೆನ್ನೈನಲ್ಲಿ 95.99 ರೂಪಾಯಿ ಇದ್ದರೆ, ಕೋಲ್ಕತ್ತಾದಲ್ಲಿ 88.23 ರೂ. ದಾಖಲಿಸಲಾಗಿದೆ. ಇನ್ನು ಬೆಂಗಳೂರು ನಗರದಲ್ಲಿ ಲೀಟರ್ ಡೀಸೆಲ್​ ದರ ರೂಪಾಯಿಗೆ ಏರಿಕೆಯಾಗಿದೆ.

ಪ್ರತಿದಿನ ಬೆಳಿಗ್ಗೆ 6 ಗಂಟೆಗೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಪರಿಷ್ಕರಣೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗೆ ಅಬಕಾರಿ ಸುಂಕಗಳನ್ನು ಸೇರಿಸಿದ ನಂತರ, ಅದರ ಬೆಲೆ ದ್ವಿಗುಣಗೊಳ್ಳುತ್ತದೆ. ಈ ಮಾನದಂಡಗಳ ಆಧಾರದ ಮೇಲೆ, ತೈಲ ಕಂಪನಿಗಳು ಪ್ರತಿದಿನ ಪೆಟ್ರೋಲ್ ದರ ಮತ್ತು ಡೀಸೆಲ್ ದರವನ್ನು ನಿಗದಿಪಡಿಸುವ ಕೆಲಸವನ್ನು ಮಾಡುತ್ತವೆ. ಪ್ರತಿನಿತ್ಯ  ಹೊಸ ದರಗಳು ಬೆಳಿಗ್ಗೆ 6 ಗಂಟೆಗೆ ನಿಗದಿಯಾಗುತ್ತವೆ.

ಭಾರತ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್ (ಬಿಪಿಸಿಎಲ್), ಇಂಡಿಯನ್ ಆಯಿಲ್ ಕಾರ್ಪೊರೇಶನ್ ಲಿಮಿಟೆಡ್ (ಐಒಸಿಎಲ್) ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್ (ಎಚ್‌ಪಿಸಿಎಲ್) ಇಂಧನ ಬೆಲೆಗಳನ್ನು ಪ್ರತಿದಿನ ಅಂತರರಾಷ್ಟ್ರೀಯ ಮಾನದಂಡಗಳು ಮತ್ತು ವಿದೇಶಿ ವಿನಿಮಯ ದರಗಳೊಂದಿಗೆ ಪರಿಷ್ಕರಿಸುತ್ತವೆ. ಆ ಮೂಲಕ ವಿದೇಶಿ ವಿನಿಮಯ ದರಗಳ ಜತೆಗೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ಬೆಲೆಗಳು ಏನೆಂಬುದನ್ನು ಅವಲಂಬಿಸಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಬದಲಾಗುತ್ತವೆ.

ಇದನ್ನೂ ಓದಿ: ವಿವಿಧ ನಗರದಲ್ಲಿ ಪೆಟ್ರೋಲ್​ ದರ ಎಷ್ಟಿದೆ ಎಂಬುದನ್ನು ತಿಳಿಯಲು ಈ ಕೆಳಗಿನ ಲಿಂಕ್​ಅನ್ನು ಕ್ಲಿಕ್ ಮಾಡಿ: https://tv9kannada.com/business/petrol-price-today.html

ವಿವಿಧ ನಗರದ ಡೀಸೆಲ್ ದರ ತಿಳಿಯಲು ಈ ಕೆಳಗಿನ ಲಿಂಕ್​ಅನ್ನು ಕ್ಲಿಕ್ ಮಾಡಿ: https://tv9kannada.com/business/diesel-price-today.html

ಸ್ವಚ್ಛ ಬೆಂಗಳೂರು ಕಾರ್ಯಕ್ರಮ ಶೀಘ್ರದಲ್ಲಿ ಜಾರಿಗೊಳ್ಳಲಿದೆ: ಶಿವಕುಮಾರ್
ಸ್ವಚ್ಛ ಬೆಂಗಳೂರು ಕಾರ್ಯಕ್ರಮ ಶೀಘ್ರದಲ್ಲಿ ಜಾರಿಗೊಳ್ಳಲಿದೆ: ಶಿವಕುಮಾರ್
ನೈಟ್ ರೈಡರ್ಸ್ ವಿರುದ್ಧ 11 ರನ್​ಗಳಿಂದ ಗೆದ್ದ ಗ್ಲೆನ್ ಮ್ಯಾಕ್ಸ್​ವೆಲ್..!
ನೈಟ್ ರೈಡರ್ಸ್ ವಿರುದ್ಧ 11 ರನ್​ಗಳಿಂದ ಗೆದ್ದ ಗ್ಲೆನ್ ಮ್ಯಾಕ್ಸ್​ವೆಲ್..!
ಉಡುಪಿ: ಶರವೇಗದ ನದಿಯಲ್ಲಿ ದೋಣಿ ನಡೆಸುವ ಧೀರ ಮಹಿಳೆ, ವಿಡಿಯೋ ನೋಡಿ
ಉಡುಪಿ: ಶರವೇಗದ ನದಿಯಲ್ಲಿ ದೋಣಿ ನಡೆಸುವ ಧೀರ ಮಹಿಳೆ, ವಿಡಿಯೋ ನೋಡಿ
ಯುವಮುಖಂಡರನ್ನು ಸೆಳೆಯುವಲ್ಲಿ ಈಶ್ವರಪ್ಪ ವಿಫಲರಾದಂತೆ ಕಾಣಿಸುತ್ತದೆ
ಯುವಮುಖಂಡರನ್ನು ಸೆಳೆಯುವಲ್ಲಿ ಈಶ್ವರಪ್ಪ ವಿಫಲರಾದಂತೆ ಕಾಣಿಸುತ್ತದೆ
ನಮ್ಮಿಂದ ಆದ ಅಗೌರವವನ್ನು ರಚಿತಾ ರಾಮ್ ಸ್ಪಷ್ಟಪಡಿಸಬೇಕು; ನಾಗಶೇಖರ್
ನಮ್ಮಿಂದ ಆದ ಅಗೌರವವನ್ನು ರಚಿತಾ ರಾಮ್ ಸ್ಪಷ್ಟಪಡಿಸಬೇಕು; ನಾಗಶೇಖರ್
ಅರಬ್ಬೀ ಸಮುದ್ರದಲ್ಲಿ ಭಾರೀ ಅಲೆಗಳು: ಮಂಗಳೂರಿನ ಎಲ್ಲಾ ಬೀಚ್​ಗಳಿಗೆ ನಿರ್ಬಂಧ
ಅರಬ್ಬೀ ಸಮುದ್ರದಲ್ಲಿ ಭಾರೀ ಅಲೆಗಳು: ಮಂಗಳೂರಿನ ಎಲ್ಲಾ ಬೀಚ್​ಗಳಿಗೆ ನಿರ್ಬಂಧ
‘ಥಗ್ ಲೈಫ್’ ಬಿಡುಗಡೆ ಆದರೆ, ಪರೋಕ್ಷ ಎಚ್ಚರಿಕೆ ಕೊಟ್ಟ ಪ್ರವೀಣ್ ಶೆಟ್ಟಿ
‘ಥಗ್ ಲೈಫ್’ ಬಿಡುಗಡೆ ಆದರೆ, ಪರೋಕ್ಷ ಎಚ್ಚರಿಕೆ ಕೊಟ್ಟ ಪ್ರವೀಣ್ ಶೆಟ್ಟಿ
ಗೋಲ್ಡ್ ಸುರೇಶ್ ವಿರುದ್ಧ ಲಕ್ಷ ಲಕ್ಷ ವಂಚನೆ ಮಾಡಿದ ಆರೋಪ
ಗೋಲ್ಡ್ ಸುರೇಶ್ ವಿರುದ್ಧ ಲಕ್ಷ ಲಕ್ಷ ವಂಚನೆ ಮಾಡಿದ ಆರೋಪ
ರಾಮೋಜಿ ಫಿಲ್ಮ್​ಸಿಟಿಯಲ್ಲಿ 16 ಮಹಾನಟಿಯರ ಭರ್ಜರಿ ಫೋಟೋಶೂಟ್
ರಾಮೋಜಿ ಫಿಲ್ಮ್​ಸಿಟಿಯಲ್ಲಿ 16 ಮಹಾನಟಿಯರ ಭರ್ಜರಿ ಫೋಟೋಶೂಟ್
ಸಕಲೇಶಪುರ: ರಸ್ತೆಯಲ್ಲೇ ಕಾಡಾನೆಗಳ ಪರೇಡ್! ಬೆಚ್ಚಿಬಿದ್ದ ಗ್ರಾಮಸ್ಥರು
ಸಕಲೇಶಪುರ: ರಸ್ತೆಯಲ್ಲೇ ಕಾಡಾನೆಗಳ ಪರೇಡ್! ಬೆಚ್ಚಿಬಿದ್ದ ಗ್ರಾಮಸ್ಥರು